Amazon Apple Days sale: ಅಮೆಜಾನ್ ಆಪಲ್ ಡೇಸ್​ ಸೇಲ್​ನಲ್ಲಿ ಐಫೋನ್ 11- 12, ಐಪ್ಯಾಡ್​ಗಳಿಗೆ ಡಿಸ್ಕೌಂಟ್, ಆಫರ್

Amazon apple days sale: ಅಮೆಜಾನ್​ನಿಂದ ಆಪಲ್ ಡೇಸ್ ಸೇಲ್ ಮಾರ್ಚ್ 17, 2021ರ ತನಕ ನಡೆಯಲಿದೆ. ಐಫೋನ್ 11, ಐಫೋನ್ 12, ಐಪ್ಯಾಡ್ ಸೇರಿದಂತೆ ಆಪಲ್ ಉತ್ಪನ್ನಗಳ ಮೇಲೆ ವಿಶೇಷ ಆಫರ್, ರಿಯಾಯಿತಿ ಈ ಸಂದರ್ಭದಲ್ಲಿ ದೊರೆಯುತ್ತದೆ.

  • Publish Date - 6:50 am, Sat, 13 March 21 Edited By: Skanda
Amazon Apple Days sale: ಅಮೆಜಾನ್ ಆಪಲ್ ಡೇಸ್​ ಸೇಲ್​ನಲ್ಲಿ ಐಫೋನ್ 11- 12, ಐಪ್ಯಾಡ್​ಗಳಿಗೆ ಡಿಸ್ಕೌಂಟ್, ಆಫರ್
ಸಾಂದರ್ಭಿಕ ಚಿತ್ರ


ಅಮೆಜಾನ್ ಹೊಸ ಸುತ್ತಿನಲ್ಲಿ ಆಪಲ್ ಡೇಸ್ ಮಾರಾಟವನ್ನು ಘೋಷಣೆ ಮಾಡಿದೆ. ಇ-ಕಾಮರ್ಸ್ ಉದ್ಯಮದಲ್ಲಿ ದೊಡ್ಡ ಹೆಸರಾದ ಅಮೆಜಾನ್​​ನಿಂದ ಈಚಿನ ಐಫೋನ್ 12ರ ಸರಣಿ, ಐಫೋನ್ 11 ಸರಣಿ ಮತ್ತು ಇನ್ನಷ್ಟು ಆಫರ್​ಗಳನ್ನು ಘೋಷಣೆ ಮಾಡಲಾಗಿದೆ. ಆಪಲ್ ಡೇಸ್ ಮಾರ್ಚ್ 17, 2021ರ ತನಕ ಇರುತ್ತದೆ. ಗ್ರಾಹಕರಿಗೆ ಐಫೋನ್ 12 ಮಿನಿ 2800 ರೂಪಾಯಿ ರಿಯಾಯಿತಿಯೊಂದಿಗೆ ರೂ. 67,100ಕ್ಕೆ ದೊರೆಯುತ್ತದೆ.

ಇನ್ನೂ ಮುಂದುವರಿದು ಎಚ್​ಡಿಎಫ್​ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇರುವವರಿಗೆ ಹೆಚ್ಚುವರಿಯಾಗಿ 6000 ರೂಪಾಯಿ ರಿಯಾಯಿತಿ ಸಿಕ್ಕು, ಒಟ್ಟಾರೆ ರಿಯಾಯಿತಿ 8800 ರೂಪಾಯಿ ಪಡೆಯಬಹುದಾಗಿದೆ.. ಐಫೋನ್ 12ರ 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯದ್ದು ರೂ. 71,900ಕ್ಕೆ ಮಾರಾಟ ಆಗುತ್ತಿದೆ. ಐಫೋನ್ 12ರ 64 ಜಿಬಿ ಸಾಮರ್ಥ್ಯದ್ದು ರೂ. 79,399ಕ್ಕೆ ಮಾರಲಾಗುತ್ತಿದೆ. ಐಫೋನ್ 11 ಪ್ರೋ 79,900 ರೂಪಾಯಿಗೆ ಲಭ್ಯವಿದೆ. ಐಫೋನ್ 11 ಪ್ರೋ 256 ಜಿಬಿ ಸಾಮರ್ಥ್ಯದ್ದು ರೂ. 85,900.

ಈ ಆಪಲ್ ಡೇಸ್ ಅವಧಿಯಲ್ಲಿ ಗ್ರಾಹಕರಿಗೆ ಹೊಸ ಆಪಲ್ ಉತ್ಪನ್ನಗಳ ಮೇಲೆ ಕೂಡ ಆಫರ್ ಗಳು ಇವೆ. ಎಚ್​​ಡಿಎಫ್​ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗೆ ದೊರೆಯುವ ತಕ್ಷಣದ 3000 ರೂಪಾಯಿ ರಿಯಾಯಿತಿಯನ್ನೂ ಒಳಗೊಂಡಂತೆ ಐಪ್ಯಾಡ್​ಗಳ ಮೇಲೆ 9000 ರೂಪಾಯಿ ತನಕ ಉಳಿತಾಯ ಮಾಡುವುದಕ್ಕೆ ಅವಕಾಶ ಇದೆ. ಒಂದು ವೇಳೆ ಆಪಲ್ ಐಫೋನ್ 12, 11ರ ಸರಣಿ ಫೋನ್ ಅಥವಾ ಬೇರಾವುದೇ ಆಪಲ್ ಉತ್ಪನ್ನಗಳನ್ನು ಖರೀದಿ ಮಾಡಬೇಕು ಎಂದಿದ್ದಲ್ಲಿ ಅಮೆಜಾನ್ ಆಪಲ್ ಡೇಯಲ್ಲಿ ಪ್ರಯತ್ನಿಸಬಹುದು.

ಇದನ್ನೂ ಓದಿ: Apple Spring Event: ಆಪಲ್ ಕಂಪೆನಿಯಿಂದ ಮಾರ್ಚ್ 23ಕ್ಕೆ ಹೊಸ ಉತ್ಪನ್ನಗಳ ಬಿಡುಗಡೆ ನಿರೀಕ್ಷೆ