ಅಪಾರ್ಟ್ಮೆಂಟ್ ಮೈಂಟೆನ್ಸ್ ಹಣ ತಿಂಗಳಿಗೆ 7,500 ರೂ ಮೀರಿದರೆ ಶೇ. 18 ಜಿಎಸ್ಟಿ; ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯವೂ ಲಭ್ಯ
18% GST on Apartment maintenance fees: ಪ್ರತೀ ಅಪಾರ್ಟ್ಮೆಂಟ್ನ್ಲಲಿ ನಿವಾಸಿಗಳು ಮಾಸಿಕವಾಗಿ ಮೈಂಟೆನೆನ್ಸ್ ಶುಲ್ಕ ಪಾವತಿಸಬೇಕು. ಈ ಶುಲ್ಕ 7,500 ರೂಗಿಂತ ಹೆಚ್ಚಾಗಿದ್ದರೆ ಶೇ. 15ರಷ್ಟು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಹೆಚ್ಚುವರಿ ಹಣಕ್ಕೆ ಮಾತ್ರವೇ ಅಲ್ಲ, ಇಡೀ ಹಣಕ್ಕೆ ಜಿಎಸ್ಟಿ ಅನ್ವಯ ಆಗುತ್ತದೆ. ಇಡೀ ಅಪಾರ್ಟ್ಮೆಂಟ್ನ (ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ) ವಾರ್ಷಿಕ ಟರ್ನೋವರ್ 20 ಲಕ್ಷ ರೂಗಿಂತ ಒಳಗಿದ್ದರೆ ಜಿಎಸ್ಟಿ ಅನ್ವಯ ಆಗುವುದಿಲ್ಲ.

ನವದೆಹಲಿ, ಏಪ್ರಿಲ್ 13: ಅಪಾರ್ಟ್ಮೆಂಟ್ಗಳ ನಿವಾಸಿಗಳು ಗಮನಿಸಬೇಕಾದ ಸುದ್ದಿ ಇದು. ತಿಂಗಳಿಗೆ 7,500 ರೂಗಿಂತ ಹೆಚ್ಚು ಮೈಂಟೆನೆನ್ಸ್ ಶುಲ್ಕ (Monthly Apartment maintenance fees) ಪಾವತಿಸುತ್ತಿದ್ದರೆ ಇನ್ಮುಂದೆ ಸಂಪೂರ್ಣ ಶುಲ್ಕಕ್ಕೆ ಶೇ. 18 ಜಿಎಸ್ಟಿ ತೆರಿಗೆ ಪಾವತಿಸಬೇಕಾಗುತ್ತದೆ. ಈ ಮುಂಚೆ 7,500 ರೂಗಿಂತ ಹೆಚ್ಚು ಶುಲ್ಕ ಇದ್ದರೆ, ಹೆಚ್ಚುವರಿ ಶುಲ್ಕಕ್ಕೆ ಮಾತ್ರವೇ ಜಿಎಸ್ಟಿ ಕಟ್ಟಬೇಕಾಗುತ್ತಿತ್ತು. ಇನ್ಮುಂದೆ ಪೂರ್ಣ ಮೊತ್ತಕ್ಕೆ ತೆರಿಗೆ ಅನ್ವಯ ಆಗುತ್ತದೆ. ಇದು ಇಡೀ ಹೌಸಿಂಗ್ ಸೊಸೈಟಿ ಅಥವಾ ಅಪಾರ್ಟ್ಮೆಂಟ್ ವೆಲ್ಫೇರ್ ಅಸೋಸಿಯೇಶನ್ನ (RWAs) ವಾರ್ಷಿಕ ವಹಿವಾಟು 20 ಲಕ್ಷ ರೂ ಮೀರಿದ್ದರೆ ಮಾತ್ರವೇ ವ್ಯಕ್ತಿಗತ ಮನೆಗಳಿಗೆ ಜಿಎಸ್ಟಿ ಅನ್ವಯ ಆಗುತ್ತದೆ.
2018ರ ಜನವರಿಯಲ್ಲಿ ನಡೆದ 25ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ತಿಂಗಳಿಗೆ 7,500 ರೂವರೆಗೆ ಮೈಂಟೆನೆನ್ಸ್ ಶುಲ್ಕ ಪಾವತಿಸುವ ಮನೆಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿತ್ತು. ಅದಕ್ಕೂ ಮುನ್ನ, ಈ ವಿನಾಯಿತಿ ಮಿತಿ 5,000 ರೂಗೆ ನಿಗದಿಯಾಗಿತ್ತು. ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ, ಈಗ ಮಾಸಿಕ ಮೈಂಟೆನೆನ್ಸ್ ಶುಲ್ಕ 7,500 ರೂ ಮೀರಿದರೆ, ಅಷ್ಟೂ ಮೊತ್ತಕ್ಕೆ ಶೇ. 18 ಜಿಎಸ್ಟಿ ವಿಧಿಸಲಾಗುತ್ತದೆ.
ಇದನ್ನೂ ಓದಿ: ನಿನ್ನಂಥ ಅಪ್ಪ ಇಲ್ಲ… ಮಕ್ಕಳಿಗೆ ನೂರಕ್ಕೆ ಒಂದು ರುಪಾಯಿಯೂ ಕೊಡದ ಬಿಲ್ ಗೇಟ್ಸ್; ಮಕ್ಕಳು ಏನಂತಾರೆ ನೋಡಿ…
ಜಿಎಸ್ಟಿ ಹೇಗೆ ಅನ್ವಯ ಆಗುತ್ತದೆ, ಇಲ್ಲಿದೆ ಉದಾಹರಣೆ
ಉದಾಹರಣೆಗೆ, ನೀವು ಒಂದು ಅಪಾರ್ಟ್ಮೆಂಟ್ನಲ್ಲಿ ಮನೆ ಹೊಂದಿರುತ್ತೀರಿ. ಅದರಲ್ಲಿ ಅಪಾರ್ಟ್ಮೆಂಟ್ ವೆಲ್ಫೇರ್ ಸಂಸ್ಥೆಯು ಮೈಂಟೆನೆನ್ಸ್ ಶುಲ್ಕವಾಗಿ ನಿಮ್ಮಿಂದ ತಿಂಗಳಿಗೆ 7,500 ರೂ ಶುಲ್ಕ ಪಡೆಯುತ್ತದೆ ಎಂದಿಟ್ಟುಕೊಳ್ಳಿ. ಆಗ ನೀವು ಆ ಹಣಕ್ಕೆ ಜಿಎಸ್ಟಿ ಕಟ್ಟುವಂತಿಲ್ಲ. ಒಂದು ವೇಳೆ ಈ ಶುಲ್ಕವು 10,000 ರೂ ಆಗಿದ್ದರೆ, ಆಗ 7,500ಕ್ಕೆ ಹೆಚ್ಚುವರಿಯಾದ 2,500 ರೂಗೆ ಮಾತ್ರ ಜಿಎಸ್ಟಿ ಕಟ್ಟಿದರೆ ಸಾಕು ಎನ್ನುವಂತಿಲ್ಲ. ಎಲ್ಲಾ 10,000 ರೂಗೂ ಜಿಎಸ್ಟಿ ಅನ್ವಯ ಆಗುತ್ತದೆ. ಅಂದರೆ, 10,000 ರೂ + 1,800 ರೂ ಆಗುತ್ತದೆ. 11,800 ರೂ ಶುಲ್ಕ ಪಾವತಿಸಬೇಕು.
ಆರ್ಡಬ್ಲ್ಯುಎಗಳಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅವಕಾಶ
ಇಲ್ಲಿ ಆರ್ಡಬ್ಲ್ಯುಎ ಅಥವಾ ಅಪಾರ್ಟ್ಮೆಂಟ್ ವೆಲ್ಫೇರ್ ಅಸೋಸಿಯೇಶನ್ನ ವಾರ್ಷಿಕ ಮೈಂಟೆನೆನ್ಸ್ ಟರ್ನೋವರ್ 20 ಲಕ್ಷ ರೂಗಿಂತ ಕಡಿಮೆ ಇದ್ದಲ್ಲಿ ಜಿಎಸ್ಟಿ ಅನ್ವಯ ಆಗೊಲ್ಲ ಎಂಬುದನ್ನು ಗಮನಿಸಬೇಕು.
ಒಂದು ವೇಳೆ, 20 ಲಕ್ಷ ರೂಗಿಂತ ಮೇಲ್ಪಟ್ಟ ವಹಿವಾಟು ಇದ್ದಲ್ಲಿ ಅದು ಜಿಎಸ್ಟಿಗೆ ನೊಂದಾಯಿಸಿಕೊಳ್ಳಬೇಕು. ಮೈಂಟೆನ್ಸ್ ಶುಲ್ಕಕ್ಕೆ ಕಟ್ಟಲಾದ ಜಿಎಸ್ಟಿಯನ್ನು ಆರ್ಡಬ್ಲ್ಯುಎಗಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಆಗಿ ಬಳಸಿಕೊಳ್ಳಬಹುದು.
ಇದನ್ನೂ ಓದಿ: 2024-25ರಲ್ಲಿ ಭಾರತದ ರಫ್ತು ದಾಖಲೆ; 820 ಬಿಲಿಯನ್ ಡಾಲರ್ ದಾಟಿದ ಸರಕು ಮತ್ತು ಸೇವಾ ರಫ್ತು
ಉದಾಹರಣೆಗೆ, ಅಪಾರ್ಟ್ಮೆಂಟ್ನ ಮೈಂಟೆನೆನ್ಸ್ಗಾಗಿ ಜನರೇಟರ್, ವಾಟರ್ ಪಂಪ್, ಗಾರ್ಡನ್, ಪೀಠೋಪಕರಣ, ಕೊಳವೆ, ಸ್ಯಾನಿಟರಿ ಇತ್ಯಾದಿ ಸರಕು ಮತ್ತು ಸೇವೆಗಳಿಗೆ ಕಟ್ಟುವ ಜಿಎಸ್ಟಿಗೆ ಇದನ್ನು ವಜಾಗೊಳಿಸಬಹುದು.
ಒಂದೇ ಸಂಕೀರ್ಣದಲ್ಲಿ ಒಬ್ಬರಿಗೆ ಒಂದಕ್ಕಿಂತ ಹೆಚ್ಚು ಮನೆಗಳಿದ್ದರೆ?
ಈಗ ಒಂದು ಅಪಾರ್ಟ್ಮೆಂಟ್ನಲ್ಲಿ ಒಬ್ಬ ವ್ಯಕ್ತಿ ಎರಡು ಮನೆಗಳನ್ನು ಹೊಂದಿದ್ದು, ಪ್ರತೀ ಮನೆಗೆ ಮಾಸಿಕ ಮೈಂಟೆನೆನ್ಸ್ ಶುಲ್ಕವಾಗಿ 7,500 ರೂ ಪಾವತಿಸುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಎರಡು ಮನೆಗಳಿಂದ 15,000 ರೂ ಶುಲ್ಕವಾಗುತ್ತದೆ. ಇಲ್ಲಿ 15,000 ರೂಗೆ ಜಿಎಸ್ಟಿ ಕಟ್ಟಬೇಕಿಲ್ಲ. ಪ್ರತೀ ಮನೆಯ ಮೈಂಟೆನೆನ್ಸ್ ಶುಲ್ಕ 7,500 ರೂ ಮೀರಿದರೆ ಮಾತ್ರವೇ ಜಿಎಸ್ಟಿ ಅನ್ವಯ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ