ನವದೆಹಲಿ: ಕೇಂದ್ರ ಸರ್ಕಾರ 2021ರಲ್ಲಿ ಪ್ರಸ್ತಾಪಿಸಿದ್ದ ಟೆಲಿಕಾಂ ವಲಯದ ಸುಧಾರಣಾ ಕ್ರಮಗಳು ಈ ವರ್ಷದೊಳಗೆ ಜಾರಿಯಾಗುವ ಸಾಧ್ಯತೆ ಇದೆ. ಮೊನ್ನೆಯಷ್ಟೇ ಕೇಂದ್ರ ಟೆಲಿಕಾಂ ಸಚಿವ ಎ ವೈಷ್ಣವ್ (Union Minister Ashwini Vaishnaw) ಅವರು ಈ ಬಗ್ಗೆ ಮಾತನಾಡಿ ಮುಂದಿನ ಕೆಲ ತಿಂಗಳಲ್ಲಿ ಟೆಲಕಾಂ ಸುಧಾರಣೆಗಳನ್ನು ಅಳವಡಿಸಲಾಗುವುದು ಎಂದಿದ್ದ್ದಾರೆ. ಬಳಕೆದಾರರ ರಕ್ಷಣೆಗೆ ಆದ್ಯತೆ ಕೊಟ್ಟು ಸುಧಾರಣಾ ಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿರುವ ಅಶ್ವಿನಿ ವೈಷ್ಣವ್, ಒಂದು ಗುರುತಿನ ಚೀಟಿಗೆ ನೀಡಲಾಗುವ ಸಿಮ್ ಕಾರ್ಡ್ಗಳ ಸಂಖ್ಯೆಯ ಮಿತಿ ಇಳಿಸುವುದೂ ಈ ಸುಧಾರಣಾ ಕ್ರಮಗಳಲ್ಲಿ ಒಂದೆಂದು ಹೇಳಿದ್ದಾರೆ.
ಇದೀಗ ಒಬ್ಬ ವ್ಯಕ್ತಿಯ ಆಧಾರ್ ಕಾರ್ಡ್ ಹೆಸರಿನಲ್ಲಿ 9 ಸಿಮ್ ಕಾರ್ಡ್ಗಳನ್ನು ಪಡೆಯಲು ಅವಕಾಶ ಇದೆ. ಮುಂದೆ ಜಾರಿಗೆ ಬರಲಿರುವ ಸುಧಾರಣಾ ಕ್ರಮದಲ್ಲಿ ಈ ಅವಕಾಶದಲ್ಲಿ ಬದಲಾವಣೆ ಮಾಡಲಾಗಲಿದೆ. ಒಂದು ಆಧಾರ್ ಗುರುತಿನ ಚೀಟಿಗೆ ನೀಡಲಾಗುವ ಸಿಮ್ ಕಾರ್ಡ್ಗಳ ಸಂಖ್ಯೆಯನ್ನು 9ಕ್ಕಿಂತ ಕಡಿಮೆಗೆ ಇಳಿಸುವ ಪ್ರಸ್ತಾಪ ಇದೆ. ಆದರೆ, ಎಷ್ಟು ಸಿಮ್ ಕಾರ್ಡ್ಗಳನ್ನು ನೀಡಲಾಗುವುದು ಎಂಬುದನ್ನು ತಿಳಿಸಿಲ್ಲ. ಆದರೆ ಭದ್ರತೆ ದೃಷ್ಟಿಯಿಂದ ಸಿಮ್ ಕಾರ್ಡ್ ಸಂಖ್ಯೆ ಕಡಿಮೆಗೊಳಿಸುವ ಆಲೋಚನೆ ಸರ್ಕಾರದ್ದಾಗಿದೆ.
ಇದನ್ನೂ ಓದಿ: Vishnaw: ಒಂದೆರಡು ತಿಂಗಳಲ್ಲಿ ಟೆಲಿಕಾಂ ಸುಧಾರಣೆಗಳು ಜಾರಿ; ಬಳಕೆದಾರ ರಕ್ಷಣೆಗೆ ಆದ್ಯತೆ- ಸಚಿವ ವೈಷ್ಣವ್
ಎರಡು ತಿಂಗಳ ಹಿಂದೆ (ಮೇ 2023) ಕೇಂದ್ರದ ದೂರಸಂಪರ್ಕ ಇಲಾಖೆ ಸಂಚಾರ್ ಸಾಥಿ (Sanchar Sathi Portal) ಹೆಸರಿನ ಪೋರ್ಟಲ್ವೊಂದನ್ನು ಬಿಡುಗಡೆ ಮಾಡಿತ್ತು. ಆಧಾರ್ ಗುರುತಿನ ಚೀಟಿ ಜೊತೆ ಮೊಬೈಲ್ ನಂಬರ್ಗಳು ಜೋಡಿತವಾಗಿವೆಯಾ ಎಂಬುದನ್ನು ಈ ಪೋರ್ಟಲ್ ಮೂಲಕ ಪರಿಶೀಲಿಸಬಹುದು. ಹಾಗೆಯೇ, ಮೊಬೈಲ್ ಫೋನ್ ಕಳೆದುಹೋದರೆ ಈ ಪೋರ್ಟಲ್ ಮೂಲಕ ಟ್ರ್ಯಾಕ್ ಮಾಡಲು ಸಾಧ್ಯ. ಇಂಥ ಕೆಲ ವಿಧಾನಾತ್ಮಕ ಹಾಗೂ ರಚನಾತ್ಮಕ ಸುಧಾರಣೆಗಳನ್ನು ಇಲಾಖೆ ಕೈಗೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ