ಎಟಿಎಂ ನಗದು ಡ್ರಾ ಮಿತಿ ಎಷ್ಟು? ಮಿತಿ ಮೀರಿದರೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬುದು ಇಲ್ಲಿದೆ

ನೀವು ಎಟಿಎಂನಿಂದ ಮಾಸಿಕವಾಗಿ ಇಂತಿಷ್ಟು ಹಣವನ್ನಷ್ಟೇ ಹಿಂಪಡೆಯಬಹುದು ಎಂಬ ಮಿತಿ ಇದೆ. ಈ ಮಿತಿ ಮೀರಿದರೆ ತೆರಿಗೆ ವಿಧಿಸಲಾಗುತ್ತದೆ.

ಎಟಿಎಂ ನಗದು ಡ್ರಾ ಮಿತಿ ಎಷ್ಟು? ಮಿತಿ ಮೀರಿದರೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬುದು ಇಲ್ಲಿದೆ
ಎಟಿಎಂ ನಗದು ಡ್ರಾ ಮಿತಿ ಮೀರಿದರೆ ವಿಧಿಸುವ ಶುಲ್ಕದ ವಿವರ
Follow us
| Updated By: Rakesh Nayak Manchi

Updated on: Oct 13, 2022 | 3:51 PM

ಸಾರ್ವಜನಿಕ ಮತ್ತು ಖಾಸಗಿ ವಲಯದ ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಪ್ರತಿ ತಿಂಗಳು ಎಟಿಎಂಗಳಲ್ಲಿ ಸೀಮಿತ ಸಂಖ್ಯೆಯ ಉಚಿತ ವಹಿವಾಟುಗಳನ್ನು ಅನುಮತಿಸುತ್ತವೆ. ಹಣಕಾಸು ಮತ್ತು ಹಣಕಾಸು ಅಲ್ಲದ ಸೇವೆಗಳನ್ನು ಒಳಗೊಂಡಿರುವ ಉಚಿತ ವಹಿವಾಟುಗಳ ಆಚೆಗೆ ಅದಕ್ಕೆ ಅನ್ವಯವಾಗುವ ತೆರಿಗೆಗಳೊಂದಿಗೆ ಶುಲ್ಕವನ್ನು ವಿಧಿಸುತ್ತಾರೆ. ಎಟಿಎಂಗಳಲ್ಲಿ ಉಚಿತ ವಹಿವಾಟುಗಳ ಸಂಖ್ಯೆಯು ಖಾತೆಯ ಪ್ರಕಾರ ಮತ್ತು ನೀವು ಹೊಂದಿರುವ ಡೆಬಿಟ್ ಕಾರ್ಡ್‌ನಲ್ಲಿ ಭಿನ್ನವಾಗಿರಬಹುದು. ಉಚಿತ ಮಾಸಿಕ ವಹಿವಾಟಿನ ಅನುಮತಿಸುವ ಮಿತಿಯನ್ನು ಮೀರಿ ಎಟಿಎಂಗಳನ್ನು ಬಳಸಿದರೆ ಶುಲ್ಕ ವಿಧಿಸಲಾಗುತ್ತದೆ. ಕಳೆದ ವರ್ಷ ಜೂನ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಮಾಸಿಕ ಉಚಿತ ವಹಿವಾಟು ಮಿತಿಗಿಂತ ಹೆಚ್ಚಿನ ಎಟಿಎಂನಲ್ಲಿ ಪ್ರತಿ ವಹಿವಾಟಿಗೆ 21 ರೂ. ಶುಲ್ಕ ವಿಧಿಸಲು ಬ್ಯಾಂಕ್‌ಗಳಿಗೆ ಅನುಮತಿಸಲಾಗಿದೆ. ಇದು 2022ರ ಜನವರಿ 1ರಿಂದ ಜಾರಿಗೆ ಬರುತ್ತದೆ. ಈ ಮೊದಲು ಅಂತಹ ಪ್ರತಿಯೊಂದು ವಹಿವಾಟಿಗೆ 20 ರೂ. ಶುಲ್ಕ ವಿಧಿಸಲು ಬ್ಯಾಂಕ್‌ಗಳಿಗೆ ಅವಕಾಶವಿತ್ತು.

ಗ್ರಾಹಕರು ತಮ್ಮ ಬ್ಯಾಂಕ್ ಎಟಿಎಂಗಳಲ್ಲಿ ಪ್ರತಿ ತಿಂಗಳು ಐದು ಉಚಿತ ವಹಿವಾಟುಗಳನ್ನು ಅನುಮತಿಸುತ್ತಾರೆ ಮತ್ತು ಇತರ ಬ್ಯಾಂಕ್ ಎಟಿಎಂಗಳಿಗೆ ಮೂರು ಉಚಿತ ವಹಿವಾಟುಗಳ ಮಿತಿ ಇದೆ. ಮೆಟ್ರೋ ಅಲ್ಲದ ಕೇಂದ್ರಗಳಲ್ಲಿನ ಗ್ರಾಹಕರು ಇತರ ಬ್ಯಾಂಕ್ ಎಟಿಎಂಗಳಲ್ಲಿ ಐದು ಉಚಿತ ವಹಿವಾಟುಗಳನ್ನು ಪಡೆಯಬಹುದು. 2022ರ ಆಗಸ್ಟ್ 1 ರಿಂದ ಎಲ್ಲಾ ಕೇಂದ್ರಗಳಲ್ಲಿ ಪ್ರತಿ ಹಣಕಾಸು ವಹಿವಾಟಿಗೆ 17 ರೂ. ಮತ್ತು ಪ್ರತಿ ಹಣಕಾಸೇತರ ವಹಿವಾಟಿಗೆ 6 ರೂ. ಇಂಟರ್‌ಚೇಂಜ್ ಶುಲ್ಕ ವಿಧಿಸಲು ಆರ್‌ಬಿಐ ಬ್ಯಾಂಕ್‌ಗಳಿಗೆ ಅನುಮತಿಸುತ್ತದೆ.

ಹೆಚ್ಚುತ್ತಿರುವ ಎಟಿಎಂ ಸ್ಥಾಪನೆ ಮತ್ತು ನಿರ್ವಹಣೆ ವೆಚ್ಚಗಳನ್ನು ಪೂರೈಸಲು ಬ್ಯಾಂಕ್‌ಗಳು ಎಟಿಎಂ ಸೇವಾ ಶುಲ್ಕಗಳನ್ನು ಸಂಗ್ರಹಿಸುತ್ತವೆ. ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಡೆಬಿಟ್ ಕಾರ್ಡ್‌ಗಳು ಅಥವಾ ಎಟಿಎಂ ಕಾರ್ಡ್‌ಗಳ ಮೇಲೆ ವಾರ್ಷಿಕ ಶುಲ್ಕವನ್ನು ವಿಧಿಸುತ್ತವೆ. ಇದು ಗ್ರಾಹಕರು ಹೊಂದಿರುವ ಕಾರ್ಡ್‌ನ ಪ್ರಕಾರವನ್ನು ಅವಲಂಬಿಸಿರುತ್ತದೆ. ಯಾವೆಲ್ಲ ಬ್ಯಾಂಕ್​ಗಳಲ್ಲಿ ಎಷ್ಟೆಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬೂದು ಈ ಕೆಳಗಿನಂತಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಧಿಸುವ ಎಟಿಎಂ ಶುಲ್ಕ ಇಲ್ಲಿದೆ

ಅಫ್ಡೆಕ್ಕೊ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಧಿಸುವ ಶುಲ್ಕ ಇಲ್ಲಿದೆ

3rbb91so

ಎಚ್​ಡಿಎಫ್​ಸಿ ಬ್ಯಾಂಕ್ ವಿಧಿಸುವ ಶುಲ್ಕ ಹೀಗಿದೆ

3h63ka8

ಐಸಿಐಸಿಐ ಬ್ಯಾಂಕ್ ವಿಧಿಸುವ ಶುಲ್ಕ ಹೀಗಿದೆ

6o57ufq

ಆ್ಯಕ್ಸಿಸ್ ಬ್ಯಾಂಕ್ ವಿಧಿಸುವ ಶುಲ್ಕ ಇಲ್ಲಿದೆ

j8jorl1

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ