Gold Rate: ಗ್ರಾಹಕರಿಗೆ ಸಿಹಿ ಸುದ್ದಿ; ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಸ್ಪಲ್ಪ ಇಳಿಕೆ!

Gold Silver Price: ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಹೊರಟಿದ್ದರೆ ನಿನ್ನೆಗಿಂತ ಇಂದು ಸ್ವಲ್ಪ ದರ ಇಳಿಕೆಯಾಗಿದೆ. ಹಾಗಿದ್ದಲ್ಲಿ ದರ ಎಷ್ಟಿರಬಹುದು ಎಂಬುದರ ಮಾಹಿತಿ ಇಲ್ಲಿದೆ.

  • TV9 Web Team
  • Published On - 8:47 AM, 12 Feb 2021
Gold Rate: ಗ್ರಾಹಕರಿಗೆ ಸಿಹಿ ಸುದ್ದಿ; ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಸ್ಪಲ್ಪ ಇಳಿಕೆ!
ಸಾಂದರ್ಭಿಕ ಚಿತ್ರ

ಬೆಂಗಳೂರು: ಚಿನ್ನದ ಬೆಲೆ ನಿನ್ನೆಗಿಂತ ಇಂದು ಸ್ವಲ್ಪ ಮಟ್ಟದ ಇಳಿಕೆ ಕಂಡಿದೆ. ಚಿನ್ನಕ್ಕೆ ನಗರದಲ್ಲಿ ಹೆಚ್ಚಿನ ಬೇಡಿಕೆ ಇದೆ. 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ ₹44,550 , ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ₹48,600. ಹಾಗೂ ನಿನ್ನೆ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ ₹4,475 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ  ₹ ₹4,881 ಇದ್ದುದರಿಂದ ದರದಲ್ಲಿ ಸ್ವಲ್ಪ ಮಟ್ಟಿಗಿನ ಇಳಿಕೆಯ ವ್ಯತ್ಯಾಸ ಕಂಡಿದೆ. ಭಾರತದಲ್ಲಿ ಚಿನ್ನ ಬಹಳ ಜನಪ್ರಿಯ ಸರಕು. ಚಿನ್ನದರ ಏರಿಕೆ ಅಥವಾ ಇಳಿಕೆಯತ್ತ ಮುಖಮಾಡುತ್ತವೆ. ಇದಕ್ಕೆ ಕಾರಣವೇನಿರಬಹುದು ಎಂಬುದನ್ನು ಹುಡುಕುತ್ತಾ ಸಾಗಿದರೆ, ಅನೇಕ ವಿಚಾರಗಳಿಂದ ಚಿನ್ನದ ಬೆಲೆ ನಿರ್ಧಾರವಾಗುತ್ತದೆ. ಹಣ ದುಬ್ಬರ, ಅಂತರಾಷ್ಟ್ರೀಯ ಮಾರುಕಟ್ಟೆ ಬೆಲೆ, ಜ್ಯುವೆಲರಿ ಮಾರುಕಟ್ಟೆ, ಬಡ್ಡಿ ದರ ಹೀಗೆ ಅನೇಕ ವಿಷಯಗಳು ಚಿನ್ನದ ಬೆಲೆಯ ಏರಿಳಿತಕ್ಕೆ ನೇರವಾಗಿ ಕಾರಣವಾಗಿರುತ್ತದೆ.

ಇನ್ನು, ಹೂಡಿಕೆಯ ದೃಷ್ಟಿಯಿಂದ ಗಮನಿಸಿದಾಗ, ಕೊರೊನಾ ಸಾಂಕ್ರಾಮಿಕದಿಂದಾಗಿ ಜನರು ಬೇರೆಲ್ಲೂ ಹೂಡಿಕೆಗೆ ಮುಂದಾಗಲಿಲ್ಲ.  ಈ ನಿಟ್ಟಿನಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಪ್ರಾರಂಭಿಸಿದ್ದರು. ಹೀಗಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಚಿನ್ನ ಎಂಬ ಹೆಸರು ಕೇಳಿದ ತಕ್ಷಣ ಕಿವಿ ನೆಟ್ಟಗಾಗುತ್ತೆ. ಚಿನ್ನದ ಮೌಲ್ಯದಲ್ಲಿ ಹೆಚ್ಚಳವಾದರೂ ಚಿನ್ನದ ಮೇಲಿನ ಆಸೆ ಎಂದಿಗೂ ಕಡಿಮೆಯಾಗಲ್ಲ. ಚಿನ್ನಕ್ಕೆಂದೇ ಹಲವು ವರ್ಷಗಳಿಂದ ಹಣವನ್ನು ಕೂಡಿಡುತ್ತಾ ಬರುತ್ತಾರೆ ಜನ. ಕೂಡಿಟ್ಟ ಹಣದಲ್ಲಿ ಇಂದಿನ ಚಿನ್ನದ ದರಕ್ಕೆ ಸರಿ ಹೊಂದಬಹುದೇ ಎಂದು ತಿಳಿಯಲು ಒಮ್ಮೆ ಚಿನ್ನದ ಬೆಲೆಯನ್ನು ಕಣ್ಣುಹಾಯಿಸಿ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್:
ಗ್ರಾಂ       22 ಕ್ರಾರೆಟ್ ಚಿನ್ನ (ಇಂದು)        22 ಕ್ಯಾರೆಟ್ ಚಿನ್ನ (ನಿನ್ನೆ)    ದೈನಂದಿನ ಬದಲಾವಣೆ

1 ಗ್ರಾಂ            ₹4,455                                         ₹4,475                                            ₹ -20
8ಗ್ರಾಂ            ₹35,640                                       ₹35,800                                         ₹ -160
10 ಗ್ರಾಂ         ₹44,550                                        ₹44,750                                         ₹ -200
100ಗ್ರಾಂ        ₹4,45,500                                   ₹4,47,500                                      ₹ -2,000

24 ಕ್ಯಾರೆಟ್ ಚಿನ್ನದ ಬೆಲೆ:
ಗ್ರಾಂ         ಇಂದು                   ನಿನ್ನೆ                  ದೈನಂದಿನ ಬದಲಾವಣೆ

1ಗ್ರಾಂ         ₹4,860                    ₹4,881                   ₹ – 21
8ಗ್ರಾಂ        ₹38,880                  ₹39,048                ₹ -168
10ಗ್ರಾಂ      ₹48,600                  ₹48,810                ₹ -210
100ಗ್ರಾಂ    ₹4,86,100              ₹4,88,100             ₹ – 2,100

ಬೆಳ್ಳಿ ದರ: 

ಬೆಳ್ಳಿಯ ದರದಲ್ಲೂ ಕೂಡಾ ನಿನ್ನೆಗಿಂತ ಸ್ವಲ್ಪ ಮಟ್ಟಿಗಿನ ಇಳಿಕೆ ಕಂಡಿದೆ. ಮನೆಯಲ್ಲಿನ ವಿಶೇಷ ಪೂಜೆಗೆ, ಅಲಂಕಾರಗಳಿಗೆ ಬೆಳ್ಳಿಯನ್ನು ಖರೀದಿಸಲು ಇಂದಿನ ಬೆಳ್ಳಿಯ ದರದ ಮಾಹಿತಿ ಈ ಕೆಳಗಿನಂತಿದೆ. ನಿನ್ನೆ 1ಕೆಜಿ ಬೆಳ್ಳಿ ದರ ₹6,920 ಇದ್ದು, ಇಂದು ₹68,800 ಆಗಿದೆ.

ಗ್ರಾಂ      ಬೆಳ್ಳಿ ದರ (ಇಂದು)                   ಬೆಳ್ಳಿ ದರ(ನಿನ್ನೆ)

1ಗ್ರಾಂ        ₹68.80                                     ₹69.20
8ಗ್ರಾಂ        ₹550.40                                  ₹553.60
10ಗ್ರಾಂ      ₹688                                        ₹692
100 ಗ್ರಾಂ   ₹6,,880                                  ₹6,920
1 ಕೆ.ಜಿ         ₹68,800                                 ₹69,200

ಇದನ್ನೂ ಓದಿ:  Gold Rate: ಬೆಂಗಳೂರಿನಲ್ಲಿ ಚಿನ್ನದ ದರ ಎಷ್ಟಿದೆ? ಇಲ್ಲಿದೆ ಮಾಹಿತಿ