Bank deposit insurance: ಬ್ಯಾಂಕ್​ ಠೇವಣಿ ಮೇಲೆ ಗರಿಷ್ಠ ಇನ್ಷೂರೆನ್ಸ್ 5 ಲಕ್ಷ ರೂ.; ಅದಕ್ಕೂ ಹೆಚ್ಚು ಮೊತ್ತಕ್ಕೆ ಕವರೇಜ್ ಹೇಗೆ?

ಬ್ಯಾಂಕ್​ಗಳಲ್ಲಿ ಹಣವನ್ನು ಇಡುವ ಉದ್ದೇಶವೇ ಸುರಕ್ಷಿತವಾಗಿರುತ್ತದೆ ಎಂಬ ಕಾರಣಕ್ಕೆ. ಬ್ಯಾಂಕ್​ನಲ್ಲಿ ಇರುವ ಠೇವಣಿಗೆ 5 ಲಕ್ಷ ರೂಪಾಯಿ ಇನ್ಷೂರೆನ್ಸ್ ಇದೆ. ಅದಕ್ಕೂ ಮೀರಿದ ಮೊತ್ತಕ್ಕೆ ಕವರ್ ಆಗಬೇಕೆಂದರೆ ಹೇಗೆ ಎಂಬ ವಿವರ ಇಲ್ಲಿದೆ.

Bank deposit insurance: ಬ್ಯಾಂಕ್​ ಠೇವಣಿ ಮೇಲೆ ಗರಿಷ್ಠ ಇನ್ಷೂರೆನ್ಸ್ 5 ಲಕ್ಷ ರೂ.; ಅದಕ್ಕೂ ಹೆಚ್ಚು ಮೊತ್ತಕ್ಕೆ ಕವರೇಜ್ ಹೇಗೆ?
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:May 31, 2021 | 7:04 PM

ತಮ್ಮ ಹಣಕ್ಕೆ ಭದ್ರತೆ ಇರುತ್ತದೆ, ಬಡ್ಡಿ ಬರುತ್ತದೆ ಮತ್ತು ಯಾವುದೇ ಸ್ಥಳದಿಂದಾದರೂ ಹಣ ಡ್ರಾ ಮಾಡಬಹುದು ಎಂಬ ಕಾರಣಕ್ಕಾಗಿ ಜನರು ಬ್ಯಾಂಕ್​ನಲ್ಲಿ ಇಡುತ್ತಾರೆ. ಜೀವಮಾನದ ದುಡಿಮೆಯನ್ನು ಇನ್ನೊಬ್ಬರ ಕೈಗೆ ನೀಡುವುದಕ್ಕೆ ಅಪರಿಮಿತವಾದ ನಂಬಿಕೆ ಬೇಕು. ಈ ವಿಚಾರದಲ್ಲಿ ಬ್ಯಾಂಕ್​ಗಳನ್ನು ನಂಬುವುದು ಏಕೆಂದರೆ, ನಿಯಂತ್ರಕ ಸಂಸ್ಥೆಗಳ ಕಣ್ಗಾವಲು ಇರುತ್ತದೆ ಎಂಬ ಕಾರಣಕ್ಕೆ. ಆದರೆ ಈ ನಂಬಿಕೆ ಕೂಡ ಪದೇಪದೇ ಪರೀಕ್ಷೆಗೆ ಒಳಪಡುತ್ತಿದೆ. ಈಚಿನ ವರ್ಷಗಳಲ್ಲಿ ಲಕ್ಷ್ಮೀ ವಿಲಾಸ್ ಬ್ಯಾಂಕ್, ಐಎಲ್​ಅಂಡ್​ಎಫ್​ಎಸ್, ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ (ಡಿಎಚ್​ಎಫ್​ಎಲ್), ಪಂಜಾಬ್ ಅಂಡ್ ಮಹಾರಾಷ್ಟ್ರ ಕೋಆಪರೇಟಿವ್ (ಪಿಎಂಸಿ) ಬ್ಯಾಂಕ್ ಮತ್ತು ಯೆಸ್​ ಬ್ಯಾಂಕ್​ನಿಂದ ಇಲ್ಲೆಲ್ಲ ನಡೆದ ಹಗರಣಗಳು ಆ ನಂಬಿಕೆಯನ್ನು ಅಲುಗಾಡಿಸಿವೆ. ಆದ್ದರಿಂದಲೇ ಜನರು ತಮ್ಮ ಉಳಿತಾಯವನ್ನು ದೊಡ್ಡ ಬ್ಯಾಂಕ್​ಗಳಲ್ಲಿ ಇಡುತ್ತಾರೆ. ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಅಡಿಯಲ್ಲಿ ಠೇವಣಿಗೆ ಇನ್ಷೂರೆನ್ಸ್ ಕವರ್ ದೊರೆಯುತ್ತದೆ. ಡಿಸೆಂಬರ್ 4, 2020ಕ್ಕೆ ಆ ಇನ್ಷೂರೆನ್ಸ್ ಮೊತ್ತವನ್ನು 1 ಲಕ್ಷ ರೂಪಾಯಿಯಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಭಾರತದಲ್ಲಿನ ಒಟ್ಟು 252.6 ಕೋಟಿ ಖಾತೆಗಳ ಪೈಕಿ 247.8 ಕೋಟಿ ಅಥವಾ ಶೇ 98.1ರಷ್ಟು ಖಾತೆಗಳು ಡಿಐಸಿಜಿಸಿ ಅಡಿಯಲ್ಲಿ ಇನ್ಷೂರ್ಡ್ ಆಗಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ವಾರ್ಷಿಕ ವರದಿಯ ಮಾಹಿತಿಯಂತೆ ಇದು 2021ರ ಮಾರ್ಚ್ ಕೊನೆ ಹೊತ್ತಿಗಿನ ಲೆಕ್ಕಾಚಾರ. ಈ ಖಾತೆಗಳಲ್ಲಿ ಇನ್ಷೂರೆನ್ಸ್ ಅಡಿಯಲ್ಲಿ ಕವರ್ ಆದ ಮೊತ್ತವು ಮತ್ತೊಂದು ಸಂಗತಿ. ಮಾರ್ಚ್ ಕೊನೆ ಹೊತ್ತಿಗೆ ಒಟ್ಟು 1,49,64,776 ಕೋಟಿ ರೂಪಾಯಿಗಳ ಪೈಕಿ 76,26,258 ಕೋಟಿಗೆ ಮಾತ್ರ ಡಿಐಸಿಜಿಸಿ ಅಡಿಯಲ್ಲಿ ಇನ್ಷೂರೆನ್ಸ್ ಇದೆ. ಇದರರ್ಥ ಒಟ್ಟು ಠೇವಣಿಯ ಶೇ 50.9ರಷ್ಟಕ್ಕೆ ಇನ್ಷೂರೆನ್ಸ್ ಇದ್ದು, ಬಾಕಿ ಶೇ 40.1ರಷ್ಟು ಠೇವಣಿಗೆ ಇಲ್ಲ.

ಇನ್ಷೂರೆನ್ಸ್​ಗೆ ಮಿತಿ ಇದೆ ಕೇಂದ್ರಬ್ಯಾಂಕ್​ ಮಾಹಿತಿ ಅನ್ವಯ, ಬ್ಯಾಂಕ್​ಗಳು ಠೇವಣಿಯು ಡೆಪಾಸಿಟ್ ಇನ್ಷೂರೆನ್ಸ್ ಅಡಿ ನೋಂದಣಿ ಆಗಿಲ್ಲ ಅಂದರೆ ಅದಕ್ಕೆ ಕಾರಣ ಏನೆಂದರೆ, ಕವರ್​ ಆಗಬೇಕು ಎಂದಾದಲ್ಲಿ ಡಿಐಸಿಜಿಸಿಗೆ ಪ್ರೀಮಿಯಂ ಪಾವತಿಸಬೇಕು. ಒಂದು ವೇಳೆ ಮೊತ್ತವು 5 ಲಕ್ಷ ರೂಪಾಯಿಗಿಂತ ಹೆಚ್ಚಾದಲ್ಲಿ ಕೂಡ ಇನ್ಷೂರೆನ್ಸ್ ಕವರ್ ಆಗುವುದು 5 ಲಕ್ಷಕ್ಕೆ ಮಾತ್ರ. ಉದಾಹರಣೆಗೆ, ಗ್ರಾಹಕರು 10 ಲಕ್ಷ ರೂಪಾಯಿ ಠೇವಣಿ ಮಾಡಿದ್ದರೂ ಇನ್ಷೂರೆನ್ಸ್ ಆಗುವುದು ನಿಗದಿಯಾದ ಮಿತಿಗೆ ಅಷ್ಟೇ.

ಗ್ರಾಹಕರು ಒಂದೇ ಬ್ಯಾಂಕ್​ನ ಬೇರೆ ಬೇರೆ ಶಾಖೆಯಲ್ಲಿ ಠೇವಣಿ ಮಾಡಿದರೆ ಹೇಗೆ ಅನ್ನೋ ಪ್ರಶ್ನೆ ಬರುತ್ತದೆ. ಒಂದು ಉದಾಹರಣೆ ನೋಡುವುದಾದರೆ, ಮಹೇಶ್ ಎಂಬುವವರು ಉಳಿತಾಯ ಅಥವಾ ಚಾಲ್ತಿ ಖಾತೆ ಅಥವಾ ನಿಶ್ಚಿತ ಠೇವಣಿ ಹೀಗೆ ಯಾವುದಾದರೂ ಡೆಪಾಸಿಟ್ ಅಕೌಂಟ್​ಗೆ ಹಣ ಇಟ್ಟರೂ ಗರಿಷ್ಠ ದೊರೆಯುವುದು 5 ಲಕ್ಷ ರೂಪಾಯಿ ಮಾತ್ರ. ಅದೇ ಮಹೇಶ್, ಜಂಟಿ ಖಾತೆಯನ್ನು ತೆರೆದು, ತಮ್ಮ ಪತಿ ಅಥವಾ ಮಕ್ಕಳ ಹೆಸರಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆದಿದ್ದರೆ ಅದನ್ನು ವಿವಿಧ ಸಾಮರ್ಥ್ಯ ಹಾಗೂ ವಿವಿಧ ಹಕ್ಕು ಎಂದು ಪರಿಗಣಿಸಲಾಗುತ್ತದೆ. ಪ್ರತಿ ಖಾತೆಗೆ ಪ್ರತ್ಯೇಕವಾಗಿ 5 ಲಕ್ಷ ರೂಪಾಯಿ ತನಕ ಇನ್ಷೂರೆನ್ಸ್ ಕವರ್ ಆಗುತ್ತದೆ.

5 ಲಕ್ಷ ರೂಪಾಯಿ ಆಚೆಗೆ ಇನ್ಷೂರೆನ್ಸ್ ಕವರ್ ಆಗುವುದು ಹೇಗೆ? ಒಂದೇ ಬ್ಯಾಂಕ್​ನಲ್ಲಿ ಇರುವ ಎಲ್ಲ ಹಣವನ್ನು ಒಗ್ಗೂಡಿಸಿಯೇ ಡೆಪಾಸಿಟ್ ಇನ್ಷೂರೆನ್ಸ್ ಲೆಕ್ಕ ಹಾಕಲಾಗುತ್ತದೆ. ಒಂದು ವೇಳೆ ಠೇವಣಿಯನ್ನು ಪ್ರತ್ಯೇಕವಾದ ಬ್ಯಾಂಕ್​ಗಳಲ್ಲಿ ಇಟ್ಟಲ್ಲಿ ಪ್ರತ್ಯೇಕವಾಗಿ ಇನ್ಷೂರೆನ್ಸ್ ದೊರೆಯುತ್ತದೆ. ಬೇರೆ ಬ್ಯಾಂಕ್​ಗಳಲ್ಲಿ ಹಣವನ್ನು ಇಟ್ಟಿದ್ದಲ್ಲಿ ಡೆಪಾಸಿಟ್ ಇನ್ಷೂರೆನ್ಸ್ ಕವರೇಜ್ ಪ್ರತಿ ಬ್ಯಾಂಕ್​ನಲ್ಲೂ ಪ್ರತ್ಯೇಕವಾಗಿ ದೊರೆಯುತ್ತದೆ. ಅಂದರೆ 5 ಲಕ್ಷ ರೂಪಾಯಿ ಇನ್ಷೂರೆನ್ಸ್ ಕವರೇಜ್ ಎಲ್ಲ ಬ್ಯಾಂಕ್​ಗಳಲ್ಲೂ ಸಿಗುತ್ತದೆ.

ಇದನ್ನೂ ಓದಿ: LPG cylinder accident insurance: ಅಡುಗೆ ಅನಿಲ ಸಿಲಿಂಡರ್ ಅಪಘಾತಕ್ಕೆ ಡೀಲರ್ ಮೂಲಕವೇ ಸಿಗುತ್ತೆ ಇನ್ಷೂರೆನ್ಸ್

ಇದನ್ನೂ ಓದಿ: EDLI ಸ್ಕೀಮ್ ಅಡಿಯಲ್ಲಿ ಉದ್ಯೋಗಿಗಳಿಗೆ ಇನ್ಷೂರೆನ್ಸ್ ಮೊತ್ತ 7 ಲಕ್ಷ ರೂಪಾಯಿಗೆ ವಿಸ್ತರಣೆ

(How to get bank deposit insurance coverage for more than Rs 5 lakh? Here is the details)

Published On - 12:48 pm, Mon, 31 May 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್