ಮಾಸಿಕ ಸಂಬಳ ಕೊಡುವ ಕೆಲಸ ಸಾಕು, ನಮ್ಮದೇ ಸ್ವಂತ ಬಿಸಿನೆಸ್ (Business Idea) ಆರಂಭಿಸಬೇಕು ಎಂದು ಮನಸ್ಸಿನಲ್ಲಿ ನಿಶ್ಚಯ ಮಾಡಿಕೊಂಡವರು ಬಹಳ ಮಂದಿ ಇದ್ದಾರೆ. ಆದರೆ, ಏನು ಮಾಡಬೇಕು ಎಂದು ತೋಚದೇ ವಿವಿಧ ಹಂತಗಳಲ್ಲಿ ಕೈಚೆಲ್ಲಿ ಕೂತವರೇ ಹೆಚ್ಚು. ದೇಶಕ್ಕೀಗ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ಸ್ಟಾರ್ಟಪ್ಗಳು ಬಹಳ ಬೇಕು. ಆಂಟ್ರಪ್ರನ್ಯೂರ್ಗಳು ಬೇಕಾಗಿದ್ದಾರೆ. ಹೀಗಾಗಿ, ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಬಿಸಿನೆಸ್ ಮಾಡಬೇಕೆಂಬ ಸಂಕಲ್ಪ ಇದ್ದರೆ ಖಂಡಿತ ಪ್ರಯತ್ನಿಸಬಹುದು. ಆದರೆ, ಮೊದಲಿಗೆ ಒಂದು ವಿಚಾರ ತಿಳಿದಿರಲಿ, ಸಂಬಳ ತರುವ ಉದ್ಯೋಗಸ್ಥಳದಲ್ಲಿ ಹೆಚ್ಚು ಒತ್ತಡ ಎಂದು ನೀವು ಭಾವಿಸಿ ಸ್ವಂತ ವ್ಯವಹಾರ ಮಾಡುತ್ತೇನೆಂದರೆ, ಬಿಸಿನೆಸ್ನಲ್ಲಿ ತಲೆಬೇನೆ ಮತ್ತು ಒತ್ತಡ ಇನ್ನೂ ಹೆಚ್ಚಾಗಿರುತ್ತದೆ ಎಂಬುದು ಗೊತ್ತಿರಲಿ.
ನಿಮ್ಮ ತಲೆಯಲ್ಲಿ ಒಂದೊಳ್ಳೆಯ ಬಿಸಿನೆಸ್ ಐಡಿಯಾ ಬಂದಿದ್ದರೆ ಒಳ್ಳೆಯದು. ಅದು ಬಹಳ ಮುಖ್ಯ. ಒಂದು ವೇಳೆ ಏನು ಬಿಸಿನೆಸ್ ಮಾಡಬೇಕೆಂಬುದು ಗೊತ್ತಾಗದಿದ್ದರೆ ಮಾರುಕಟ್ಟೆ ಶೋಧನೆ ಮಾಡಬೇಕಾಗುತ್ತದೆ. ನಿಮ್ಮ ಸುತ್ತಮುತ್ತಲು ಯಶಸ್ವಿಯಾಗಿರುವ ಉದ್ದಿಮೆಗಳ್ಯಾವುವು? ಯಾವ ಕ್ಷೇತ್ರದ ಉದ್ದಿಮೆಗಳು ಯಶಸ್ವಿಯಾಗಿವೆ? ಭವಿಷ್ಯದ ದಿನಗಳಲ್ಲಿ ಯಾವ ಉದ್ದಿಮೆ ಬೆಳಗಬಹುದು?
ಒಟ್ಟಾರೆ ಬಿಸಿನೆಸ್ ಐಡಿಯಾ ನಿಮ್ಮ ತಲೆಗೆ ಬಂದಿದ್ದರೆ ಎರಡನೇ ಹಂತಕ್ಕೆ ಹೋಗಲು ಸಿದ್ದರಾಗಿರುತ್ತೀರಿ.
ಇದನ್ನೂ ಓದಿ: ಜನೌಷಧಿ ಕೇಂದ್ರಗಳ ಉತ್ತೇಜನಕ್ಕಾಗಿ SIDBI ಕ್ರೆಡಿಟ್ ಸ್ಕೀಮ್; ಅಡಮಾನರಹಿತ ಸಾಲಗಳ ವಿತರಣೆಗೆ ಯೋಜನೆ
ನೀವು ಮಾಡಬೆಕೆಂದಿರುವ ಬಿಸಿನೆಸ್ನಲ್ಲಿ ಸಂಪನ್ಮೂಲ ಹೇಗೆ ಬರುತ್ತೆ, ಗ್ರಾಹಕರು ಯಾರು, ಅವರ ಅವಶ್ಯಕತೆಗಳೇನು, ಅವರ ಬೇಡಿಕೆಗೆ ತಕ್ಕಂತಹ ಉತ್ಪನ್ನಗಳನ್ನು ಒದಗಿಸಲು ಸಾಧ್ಯವಾ ಎಂದು ಅವಲೋಕಿಸಬೇಕಾಗುತ್ತದೆ. ಆ ಬಿಸಿನೆಸ್ನಲ್ಲಿ ಎಷ್ಟು ಪ್ರತಿಸ್ಪರ್ಧೆ ಇದೆ, ಅವರಲ್ಲಿ ಯಶಸ್ವಿಯಾದವರು ಎಷ್ಟು? ಸೋಲಪ್ಪಿ ಹಿಂದಕ್ಕೆ ಸರಿದವರಿದ್ದಾರಾ? ರಿಸ್ಕ್ ಎಷ್ಟಿದೆ ಇವೆಲ್ಲವನ್ನೂ ಗಮನಿಸಬೇಕು.
ಯಾವುದಾದರೂ ಬಿಸಿನೆಸ್ ಫ್ರಾಂಚೈಸಿ ಪಡೆಯುವುದಾದರೆ ಈಗಾಗಲೇ ಅಸ್ತಿತ್ವದಲ್ಲಿರುವ ಫ್ರಾಂಚೈಸಿ ಔಟ್ಲೆಟ್ಗಳಿಗೆ ಹೋಗಿ ಅಲ್ಲಿ ಯಾವ ರೀತಿ ಬಿಸಿನೆಸ್ ನಡೆಯುತ್ತಿದೆ, ಎಷ್ಟು ಲಾಭ ಆಗುತ್ತಿದೆ ಎಂದು ಅರ್ಥೈಸಿಕೊಳ್ಳಲು ಯತ್ನಿಸಬಹುದು.
ನಿಮ್ಮ ಬಿಸಿನೆಸ್ಗೆ ಗ್ರಾಹಕರನ್ನು ಹಿಡಿಯಬಹುದು ಎಂಬ ವಿಶ್ವಾಸ ನಿಮಗೆ ಬಂದಿದ್ದರೆ, ಪೂರ್ಣ ಬಿಸಿನೆಸ್ ಪ್ಲಾನ್ ರೂಪಿಸಿ. ನಿಮ್ಮ ಉತ್ಪನ್ನ, ನಿಮ್ಮ ಗ್ರಾಹಕರು, ಮಾರುಕಟ್ಟೆ ವಿಶ್ಲೇಷಣೆ, ಪ್ರತಿಸ್ಪರ್ಧಿಗಳ ಬಲಾಬಲ, ಹಣಕಾಸು ವ್ಯವಸ್ಥೆ ಎಲ್ಲವನ್ನೂ ದಾಖಲಿಸಿ.
ಇದನ್ನೂ ಓದಿ: 2024ರ ಫೆಬ್ರುವರಿಯಲ್ಲಿ ಭಾರತದ ಹಣದುಬ್ಬರ ಶೇ. 5.09; ಜನವರಿಯಲ್ಲಿ ಔದ್ಯಮಿಕ ಉತ್ಪಾದನೆ ಶೇ. 3.8 ಹೆಚ್ಚಳ
ನೀವು ಬಿಸಿನೆಸ್ ಆರಂಭಿಸಬೇಕಿದ್ದರೆ ಅದನ್ನು ಸ್ಥಳೀಯ ಪ್ರಾಧಿಕಾರದಲ್ಲಿ ನೊಂದಾಯಿಸಬೇಕು. ಸೂಕ್ತ ಪರವಾನಿಗೆ ಪಡೆಯಬೇಕು. ಜಿಎಸ್ಟಿ ನೊಂದಣಿ ಮಾಡಬೇಕು.
ಇವೆಲ್ಲವೂ ಆದ ಬಳಿಕ ಕಚೇರಿ ಸ್ಥಾಪಿಸಬಹುದು. ಪ್ರತ್ಯೇಕ ಇಮೇಲ್ ಐಡಿ, ಸೋಷಿಯಲ್ ಮೀಡಿಯಾ ಅಕೌಂಟ್ಗಳನ್ನು ತೆರೆಯಬಹುದು. ಅಗತ್ಯ ಬಿದ್ದರೆ ವೆಬ್ಸೈಟ್ ಆರಂಭಿಸಬಹುದು.
ಕೊನೆಯದಾಗಿ ಒಂದು ಪ್ರಮುಖ ವಿಚಾರ ಎಂದರೆ, ನೀವು ಬಿಸಿನೆಸ್ ಆರಂಭಿಸಿದ ಕೂಡಲೇ ಆದಾಯ ನಿರೀಕ್ಷಿಸುವುದು ದೊಡ್ಡ ಪ್ರಮಾದವಾಗುತ್ತದೆ. ಬ್ಯಾಕಪ್ ಆಗಿ ಒಂದಷ್ಟು ಹಣಕಾಸು ವ್ಯವಸ್ಥೆ ಸಿದ್ಧಪಡಿಸಿಕೊಂಡಿರಬೇಕು. ನಿಮ್ಮದು ಪಕ್ಕಾ ಬಿಸಿನೆಸ್ ಪ್ಲಾನ್ ಇದ್ದರೆ ಒಂದಷ್ಟು ಅವಧಿ ಬಳಿಕ ನಿರೀಕ್ಷಿತ ಆದಾಯ ಬರತೊಡಗುತ್ತದೆ. ಅಲ್ಲಿಯವರೆಗೆ ಲಾಭದ ಅಪೇಕ್ಷೆ ಇಟ್ಟುಕೊಳ್ಳದಿರುವುದು ಸರಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ