ನವದೆಹಲಿ, ಸೆಪ್ಟೆಂಬರ್ 19: ಮುಂದಿನ 15-16 ವರ್ಷದಲ್ಲಿ ಏಷ್ಯನ್ ಪ್ರದೇಶಗಳಲ್ಲಿ ಕುಬೇರರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. ಇಲ್ಲಿಯ ಬಹಳಷ್ಟು ನಗರಗಳಲ್ಲಿ ಸೆಂಟಿ-ಮಿಲಿಯನೇರ್ಸ್ ಅಥವಾ ಶತ ಮಿಲಿಯನೇರ್ಗಳ ಸಂಖ್ಯೆ ಶೇ. 150ಕ್ಕೂ ಹೆಚ್ಚಬಹುದು ಎಂದು ಹೆನ್ಲೀ ಅಂಡ್ ಪಾರ್ಟ್ನರ್ಸ್ ಸೆಂಟಿ-ಮಿಲಿಯನೇರ್ ರಿಪೋರ್ಟ್ 2024ನಲ್ಲಿ ಅಂದಾಜು ಮಾಡಲಾಗಿದೆ. ಈ ವರದಿಯಲ್ಲಿ ಬೆಂಗಳೂರು ಮತ್ತು ರಿಯಾಧ್ ನಗರಗಳನ್ನು ಹೈಲೈಟ್ ಮಾಡಲಾಗಿದೆ. ಚೀನಾದ ಹಾಂಗ್ಝೋ, ಶೆನ್ಝೆನ್, ಟೈಪೇ, ದುಬೈ, ಅಬುಧಾಬಿ ನಗರಗಳಲ್ಲಿ ಈ ಸೆಂಟಿ-ಮಿಲಿಯನೇರ್ ಶ್ರೀಮಂತರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. ಹಾಗೆಯೇ, ಭಾರತದಂತಹ ಎಮರ್ಜಿಂಗ್ ಮಾರ್ಕೆಟ್ಗಳ ದೇಶಗಳನ್ನು ಪರಿಗಣಿಸಿದರೆ ಬೆಂಗಳೂರು ಮತ್ತು ರಿಯಾಧ್ ನಗರಗಳಲ್ಲೂ (ಸೌದಿ ಅರೇಬಿಯಾದ್ದು) ಈ ಶ್ರೀಮಂತರ ಬಳಗ ಹೆಚ್ಚಲಿದೆ. ಇದು 2040ಕ್ಕೆ ಮಾಡಲಾಗಿರುವ ಅಂದಾಜು.
ಸೆಂಟಿ ಮಿಲಿಯನ್ ಎಂದರೆ ನೂರು ಮಿಲಿಯನ್. ಅಂದರೆ 10 ಕೋಟಿ. ಸೆಂಟಿ ಮಿಲಿಯನೇರ್ ಎನಿಸಿದವರು 100 ಮಿಲಿಯನ್ ಡಾಲರ್ ಮೌಲ್ಯದ ಹೂಡಿಕೆಗರ್ಹವಾದ ಆಸ್ತಿ ಹೊಂದಿರುವವರಾಗಿರುತ್ತಾರೆ. ರುಪಾಯಿ ಲೆಕ್ಕದಲ್ಲಿ 850 ಕೋಟಿ ರೂ ಆಸ್ತಿವಂತರು. ಬಿಲಿಯನೇರ್ಗಿಂತ ಕಡಿಮೆ ಆಸ್ತಿ ಉಳ್ಳವರು. ಇಲ್ಲಿ ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಪ್ರಾಪರ್ಟಿ, ಕ್ಯಾಷ್, ಬ್ಯಾಂಕ್ ಠೇವಣಿ ಇತ್ಯಾದಿ ಕಡೆ ಹೊಂದಿರುವ ಸಾಲಮುಕ್ತ ಆಸ್ತಿ ಮತ್ತು ಅದರ ಮೌಲ್ಯವನ್ನು ಪರಿಗಣಿಸಲಾಗಿದೆ.
ಇದನ್ನೂ ಓದಿ: ಎಂಎಸ್ಸಿಐ ಐಎಂಐ ಸೂಚ್ಯಂಕದಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ; ವಿಶ್ವದ ಆರು ಪ್ರಮುಖ ಮಾರುಕಟ್ಟೆಗಳಲ್ಲಿ ಭಾರತ
ಹೆನ್ಲೀ ಅಂಡ್ ಪಾರ್ಟ್ನರ್ಸ್ ಪಟ್ಟಿ ಪ್ರಕಾರ ವಿಶ್ವಾದ್ಯಂತ 29,350 ಶತ ಮಿಲಿಯನೇರ್ಸ್ ಇದ್ದಾರೆ. ಈ ಪೈಕಿ ಅಮೆರಿಕನ್ನರ ಸಂಖ್ಯೆ ಅತಿಹೆಚ್ಚು. ಟಾಪ್-50 ಪಟ್ಟಿಯಲ್ಲಿ 15 ಅಮೆರಿಕನ್ ನಗರಗಳೇ ಇವೆ. ಟಾಪ್-3ಯಲ್ಲಿ ನ್ಯೂಯಾರ್ಕ್, ದಿ ಬೇ ಏರಿಯಾ, ಲಾಸ್ ಏಂಜಲಿಸ್ ಇವೆ. ಈ ಮೂರೂ ಕೂಡ ಅಮೆರಿಕದ ಪ್ರದೇಶಗಳೇ. ಭಾರತದ ಮುಂಬೈ ಮತ್ತು ದೆಹಲಿ ನಗರಗಳು ಈ ಅಗ್ರಮಾನ್ಯ 50ರ ಪಟ್ಟಿಯಲ್ಲಿವೆ. ಈ ಟಾಪ್-50 ಪಟ್ಟಿ ಈ ಕೆಳಕಂಡಂತಿದೆ:
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ