AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ್​​ಜೆನ್: ಸಂಪೂರ್ಣ ದೇಶೀಯವಾಗಿ ತಯಾರಾದ ಭಾರತದ ಮೊದಲ ಮಲ್ಟಿಮೋಡಲ್ ಎಲ್​​ಎಲ್​ಎಂ; ಸರ್ವಂ ಎಐಗಿಂತ ಇದು ಹೇಗೆ ಭಿನ್ನ?

Bharat Gen, India's first multimodal LLM: ಭಾರತ ಸರ್ಕಾರದ ಬೆಂಬಲದೊಂದಿಗೆ ತಯಾರಾದ ಭಾರತ್​​ಜೆನ್ ಎನ್ನುವ ಮಲ್ಟಿಮೋಡಲ್ ಎಲ್​​ಎಲ್​ಎಂ ಬಿಡುಗಡೆಯಾಗಿದೆ. ಇದು ಸಂಪೂರ್ಣವಾಗಿ ದೇಶೀಯವಾಗಿ ರೂಪುಗೊಂಡ ಭಾರತದ ಮೊದಲ ಮಲ್ಟಿಮೋಡಲ್ ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಎನಿಸಿದೆ. ಐಐಟಿ ಬಾಂಬೆ ಹಾಗೂ ಇತರ ಶಿಕ್ಷಣ ಸಂಸ್ಥೆಗಳ ಸಂಶೋಧಕರು, ವಿಜ್ಞಾನಿಗಳು ಈ ತಯಾರಿಕೆಯಲ್ಲಿ ವಿವಿಧ ಪಾತ್ರ ವಹಿಸಿದ್ದಾರೆ.

ಭಾರತ್​​ಜೆನ್: ಸಂಪೂರ್ಣ ದೇಶೀಯವಾಗಿ ತಯಾರಾದ ಭಾರತದ ಮೊದಲ ಮಲ್ಟಿಮೋಡಲ್ ಎಲ್​​ಎಲ್​ಎಂ; ಸರ್ವಂ ಎಐಗಿಂತ ಇದು ಹೇಗೆ ಭಿನ್ನ?
ಸಚಿವ ಡಾ. ಜಿತೇಂದ್ರ ಸಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 03, 2025 | 11:41 AM

Share

ನವದೆಹಲಿ, ಜೂನ್ 3: ಚ್ಯಾಟ್​​ಜಿಪಿಟಿ (ChatGPT) ರೀತಿಯಲ್ಲಿ ಭಾರತದ್ದೇ ಸ್ವಂತ ಮಲ್ಟಿಮೋಡಲ್ ಎಲ್​ಎಲ್​​ಎಂವೊಂದು ತಯಾರಾಗಿದೆ. ನಿನ್ನೆ ಸೋಮವಾರ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ‘ಭಾರತ್ ಜೆನ್’ ಅನ್ನು (BharatGen multimodal LLM) ಬಿಡುಗಡೆ ಮಾಡಿದ್ದಾರೆ. ಭಾರತದಲ್ಲಿ ಸ್ವಂತವಾಗಿ ಅಭಿವೃದ್ಧಿಗೊಂಡ ಮೊದಲ ಮಲ್ಟಿಮೋಡಲ್ ಲಾರ್ಜ್ ಲ್ಯಾಂಗ್ವೇಜ್ ಎಐ ಮಾಡಲ್ ಇದು. ಜನರೇಟಿವ್ ಎಐ ಮತ್ತು ಎಲ್​​ಎಲ್​​ಎಂ ಸಮಿಟ್ ಮತ್ತು ಹ್ಯಾಕಥಾನ್ ಎನಿಸಿದ ‘ಭಾರತ್​ಜೆನ್ ಸಮಿಟ್’ (BharatGen Summit) ಕಾರ್ಯಕ್ರಮದ ವೇಳೆ ಸಚಿವರು ಈ ವಿಶೇಷ ಎಐ ಮಾಡಲ್ ಅನ್ನು ಅನಾವರಣಗೊಳಿಸಿದ್ದಾರೆ.

ಐಐಟಿ ಬಾಂಬೆ ನೆರವಿನಿಂದ ಮತ್ತು ಸರ್ಕಾರದ ಪ್ರಾಯೋಜಕತ್ವದಲ್ಲಿ ಭಾರತ್ ಜೆನ್ ಎಲ್​ಎಲ್​​ಎಂ ಅನ್ನು ರೂಪಿಸಲಾಗಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇತರ ಹಲವು ಶಿಕ್ಷಣ ಸಂಸ್ಥೆಗಳ ಸಂಶೋಧಕರು ಮತ್ತು ವಿಜ್ಞಾನಿಗಳು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಈ ಹಿಂದೆ ಚ್ಯಾಟ್​​ಜಿಪಿಟಿ ಬಿಡುಗಡೆ ಆದಾಗ ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​​ಮ್ಯಾನ್ ಅವರು ಭಾರತಕ್ಕೆ ಇಂಥ ಎಲ್​​ಎಲ್​​ಎಂ ಅನ್ನು ಸ್ವಂತವಾಗಿ ತಯಾರಿಸಲು ಆಗೋದಿಲ್ಲ ಎಂದು ನಿಷ್ಠುರವಾಗಿ ಹೇಳಿದ್ದರು. ಒಂದು ವರ್ಷದ ಅಂತರದಲ್ಲಿ ಭಾರತೀಯರು ಸ್ಯಾಮ್​​ಗೆ ತಕ್ಕ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಎಷ್ಟು ಮನೆಗಳಲ್ಲಿ ಸ್ಮಾರ್ಟ್​​ಫೋನ್ ಇದೆ? ಇಲ್ಲಿದೆ ಕುತೂಹಲಕಾರಿ ಅಂಕಿ ಅಂಶ

ಇದನ್ನೂ ಓದಿ
Image
ಇಂಟರ್ನೆಟ್ ಬಳಸದಿರುವವರು ಸಮೀಕ್ಷೆಯಲ್ಲಿ ಕೊಟ್ಟ ಕಾರಣಗಳಿವು...
Image
ಕಾವೇರಿ ಜೆಟ್ ಎಂಜಿನ್ ವೈಫಲ್ಯ, ಯಶಸ್ಸು ಮತ್ತು ಭವಿಷ್ಯದ ಕಥೆ
Image
ಭಾರತೀಯ ವಿಜ್ಞಾನಿಗಳಿಂದ ಸೂಪರ್​ಫಾಸ್ಟ್ ಸೋಡಿಯಂ ಬ್ಯಾಟರಿ
Image
ಹೊಸ ಮಾದರಿಯ ಫೋನ್ ತರಲಿದೆ ಓಪನ್​ಎಐ

ಸರ್ವಮ್ ಎಐ, ಚ್ಯಾಟ್​ಜಿಪಿಟಿಗಿಂತ ಭಾರತ್ ಜೆನ್ ಹೇಗೆ ಭಿನ್ನ?

ಕಳೆದ ತಿಂಗಳು ಸರ್ವಮ್ ಎಐ (Sarvam AI) ಎನ್ನುವ ಮಾಡಲ್ ಅನ್ನು ಬಿಡುಗಡೆ ಮಾಡಲಾಗಿತ್ತು. ಇದು ಸ್ವಂತ ಪ್ಲಾಟ್​​ಫಾರ್ಮ್​​ನಲ್ಲಿ ರೂಪುಗೊಂಡ ಮಾಡಲ್ ಅಲ್ಲ. ಯೂರೋಪ್​​ನಲ್ಲಿ ಅಭಿವೃದ್ಧಿಪಡಿಸಲಾದ ಮಿಸ್ತ್ರಾಲ್ ಸ್ಮಾಲ್ ಎನ್ನುವ ಓಪನ್ ಸೋರ್ಸ್ ಮಾಡಲ್ ಅನ್ನು ಉಪಯೋಗಿಸಿಕೊಂಡು ತಯಾರಿಸಲಾಗಿದೆ.

ಭಾರತ್​​ಜೆನ್ ಬಹುತೇಕ ಚ್ಯಾಟ್​​ಜಿಪಿಟಿ ಮಾದರಿಯಲ್ಲಿ ಇರುವ, ಆದರೆ, ಭಾರತದಲ್ಲೇ ಸ್ವಂತವಾಗಿ ತಯಾರಾಗಿರುವ ಮಲ್ಟಿಮೋಡಲ್ ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಆಗಿದೆ. ಚ್ಯಾಟ್​​ಜಿಪಿಟಿ ಇತ್ಯಾದಿಗಿಂತ ಭಾರತ್ ಜೆನ್ ಸ್ವಲ್ಪ ಭಿನ್ನ ಎನಿಸಿಕೊಳ್ಳುವುದು ಇದರ ಭಾರತೀಯ ಭಾಷೆಗಳ ಅಳವಡಿಕೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳ ಕಂಟೆಂಟ್ ಅನ್ನು ಯಥೇಚ್ಛವಾಗಿ ಬಳಸಿ ಈ ಮಾಡಲ್​​ಗೆ ಟ್ರೇನ್ ಮಾಡಲಾಗಿದೆ.

ಭಾರತ್​​ಜೆನ್ ಭಾರತೀಯ ಭಾಷೆಗಳಲ್ಲಿ ಸಂವಹನ ನಡೆಸಬಲ್ಲುದು. ಭಾರತೀಯ ಭಾಷೆ ಮತ್ತು ಸಂಸ್ಕೃತಿಯ ಅಂಶಗಳನ್ನು ಅಳವಡಿಸಿಕೊಂಡಿರುವ ಇದು ಭಾರತೀಯರಿಗೆ ಅವರದೇ ಭಾಷೆಯಲ್ಲಿ ಎಐ ಸೇವೆ ನೀಡಲು ಹೆಚ್ಚು ಸಮರ್ಪಕ ಎನಿಸಬಹುದು.

ಇದನ್ನೂ ಓದಿ: ಸೂಪರ್ ಫಾಸ್ಟ್ ಆಗಿ ಚಾರ್ಚ್ ಆಗುವ ಸೋಡಿಯಂ ಬ್ಯಾಟರಿ ತಯಾರಿಸಿದ ಬೆಂಗಳೂರಿನ ವಿಜ್ಞಾನಿಗಳು; ಸ್ವಾವಲಂಬನೆಯ ಹಾದಿ ಸುಗಮ

ಭಾರತ್​ಜೆನ್ ಉಪಯೋಗ ಹೇಗೆ?

ಮಲ್ಟಿಮೋಡಲ್ ಎಲ್​ಎಲ್​ಎಂಗಳು ಹಲವು ರೀತಿಯಲ್ಲಿ ಉಪಯುಕ್ತ ಎನಿಸಬಲ್ಲುವು. ಕೃಷಿ, ಶಿಕ್ಷಣ, ಆರೋಗ್ಯ, ವ್ಯವಹಾರ ಇತ್ಯಾದಿ ಕ್ಷೇತ್ರಗಳಲ್ಲಿ ಸಾಕಷ್ಟು ವಿಷಯಗಳನ್ನು ಈ ಎಐ ಮಾಡಲ್​​ಗಳು ಕರಗತ ಮಾಡಿಕೊಂಡಿದ್ದು, ಜನರ ಬಹುತೇಕ ಅನುಮಾನಗಳಿಗೆ ಪರಿಹಾರ ಒದಗಿಸಲು ಸಮರ್ಥವಾಗಿರುತ್ತವೆ. ಸದ್ಯ ಭಾರತ್​ಜೆನ್ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಸಾರ್ವಜನಿಕ ಬಳಕೆಗೆ ಲಭ್ಯ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ