Stock Market: ಬಿಎಸ್​ಇಗೆ 107 ದಿನದಲ್ಲಿ 1 ಕೋಟಿ ಹೂಡಿಕೆದಾರರ ಖಾತೆ ಸೇರ್ಪಡೆ, ಒಟ್ಟಾರೆ ಮೀರಿದ 8 ಕೋಟಿ ಗಡಿ

ಬಿಎಸ್​ಇಗೆ ಕೇವಲ 107 ದಿನಗಳ ಫಾಸಲೆಯಲ್ಲಿ 1 ಕೋಟಿ ಖಾತೆದಾರರ ಸೇರ್ಪಡೆ ಆಗಿದೆ. ಒಟ್ಟಾರೆಯಾಗಿ 8 ಕೋಟಿ ಆಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Stock Market: ಬಿಎಸ್​ಇಗೆ 107 ದಿನದಲ್ಲಿ 1 ಕೋಟಿ ಹೂಡಿಕೆದಾರರ ಖಾತೆ ಸೇರ್ಪಡೆ, ಒಟ್ಟಾರೆ ಮೀರಿದ 8 ಕೋಟಿ ಗಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Sep 22, 2021 | 4:41 PM

ಕೇವಲ 107 ದಿನಗಳ ಫಾಸಲೆಯಲ್ಲಿ ಬಿಎಸ್‌ಇ ತನ್ನ ಪ್ಲಾಟ್‌ಫಾರ್ಮ್‌ಗೆ ಒಟ್ಟು 1 ಕೋಟಿ ಹೂಡಿಕೆದಾರರ ಖಾತೆಗಳನ್ನು ಸೇರ್ಪಡೆ ಮಾಡಿದ್ದು, ಈಗ ಒಟ್ಟಾರೆ ಖಾತೆದಾರರ ಸಂಖ್ಯೆ 8 ಕೋಟಿಗೂ ಅಧಿಕವಾಗಿದೆ. ಜೂನ್ 6, 2021 ಮತ್ತು ಸೆಪ್ಟೆಂಬರ್ 21, 2021ರ ಮಧ್ಯೆಯೇ 1 ಕೋಟಿ ನೋಂದಾಯಿತ ಹೂಡಿಕೆದಾರರ ಖಾತೆಗಳನ್ನು ಸೇರಿಸಿದೆ. ಈ ವರ್ಷದ ಜೂನ್ 6ರಂದು ಪ್ರತಿಷ್ಠಿತ ಷೇರು ಮಾರುಕಟ್ಟೆಯ ನೋಂದಾಯಿತ ಬಳಕೆದಾರರ ಸಂಖ್ಯೆ 7 ಕೋಟಿ ಗಡಿ ದಾಟಿದೆ. ಮೇ 23, 2020ರಿಂದ 12 ತಿಂಗಳಲ್ಲಿ 2 ಕೋಟಿ ನೋಂದಾಯಿತ ಹೂಡಿಕೆದಾರರ ಖಾತೆಗಳ ಸೇರ್ಪಡೆಯಾಗಿದೆ. ಆಗ, ಈ ಸಂಖ್ಯೆ ಸುಮಾರು 5 ಕೋಟಿ ಇತ್ತು. ಜನವರಿಯಲ್ಲಿ ಇದು 6 ಕೋಟಿ ಗಡಿ ಮುಟ್ಟಿತ್ತು.

ಬಿಎಸ್‌ಇ ಸೆನ್ಸೆಕ್ಸ್ ಇತ್ತೀಚಿನ ವಾರಗಳಲ್ಲಿ ಅದ್ಭುತ ಏರಿಕೆ ಕಾಣುತ್ತಾ ಇದೆ. ಮಂಗಳವಾರ ಸೂಚ್ಯಂಕ 59,005 ಪಾಯಿಂಟ್ಸ್​ಗೆ ಕೊನೆಗೊಂಡಿತು. ಸೆನ್ಸೆಕ್ಸ್ ಮೂರು ಅವಧಿಗಳಲ್ಲಿ, ಆಗಸ್ಟ್ 31, 2021 ಮತ್ತು ಸೆಪ್ಟೆಂಬರ್ 3, 2021ರ ನಡುವೆ 57,000 ರಿಂದ 58,000 ಪಾಯಿಂಟ್ಸ್​ಗೆ ಸಾಗಿತು. 8 ಕೋಟಿ ನೋಂದಾಯಿತ ಹೂಡಿಕೆದಾರರ ಖಾತೆಗಳನ್ನು ದಾಟಿದ ಸಾಧನೆಯ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಬಿಎಸ್‌ಇ ಎಂಡಿ ಮತ್ತು ಸಿಇಒ ಆಶಿಶ್‌ಕುಮಾರ್ ಚೌಹಾಣ್, “ಈಕ್ವಿಟಿ ಹೂಡಿಕೆಗಳು ನೇರವಾಗಿ ಅಥವಾ ಮ್ಯೂಚುವಲ್ ಫಂಡ್‌ಗಳ ಮೂಲಕ ಕಳೆದ ಒಂದೂವರೆ ವರ್ಷಗಳಲ್ಲಿ ವೈವಿಧ್ಯತೆಯಿಂದಾಗಿ ಲಾಭ ಪಡೆಯುತ್ತಿವೆ. ಜಾಗತಿಕವಾದ ಕಾರಣಗಳು, ಮತ್ತು ದೇಶೀಯ ಮಾರುಕಟ್ಟೆಯು ಸಹ ವಿಶ್ವ ಮಟ್ಟದ ಟ್ರೆಂಡ್ ಅನ್ನು ಅನುಸರಿಸುತ್ತಿದೆ,” ಎಂದಿದ್ದಾರೆ.

ಮಾರುಕಟ್ಟೆಗೆ ಪ್ರವೇಶಿಸುವಾಗ ಹೂಡಿಕೆದಾರರು ಜಾಗರೂಕರಾಗಿರಬೇಕು ಮತ್ತು ವ್ಯಾಪಾರ ಅಥವಾ ಹೂಡಿಕೆ ಮಾಡಲು ಯೋಜಿಸಿರುವ ಕಂಪೆನಿಗಳು, ಪ್ರಕ್ರಿಯೆಗಳು ಮತ್ತು ಉಪಕರಣಗಳ ವಿವರಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಪ್ರಮುಖ ಮೈಲುಗಲ್ಲುಗಳನ್ನು ನೆನಪಿಸಿಕೊಳ್ಳುವುದಾದರೆ, ಎಂದು ಏಷ್ಯಾದ ಅತ್ಯಂತ ಹಳೆಯ ವಿನಿಮಯದ ಎಂ.ಡಿ. ಮತ್ತು ಸಿಇಒ ಮಾತನಾಡಿ, ಫೆಬ್ರವರಿ 2008ರಲ್ಲಿ, ವಿನಿಮಯವು ಕೇವಲ 1 ಕೋಟಿ ಹೂಡಿಕೆದಾರರ ಖಾತೆಗಳನ್ನು ಹೊಂದಿತ್ತು, ಇದು ಜುಲೈ 2011ರ ವೇಳೆಗೆ 2 ಕೋಟಿಗೆ ಹೆಚ್ಚಾಗಿದೆ. ಜನವರಿ 2014ರಲ್ಲಿ ಬಿಎಸ್‌ಇ ಅದನ್ನು 3 ಕೋಟಿಗೆ ತೆಗೆದುಕೊಳ್ಳಲು ಮೂರು ವರ್ಷಗಳು ಬೇಕಾಯಿತು, ಮತ್ತು ನಂತರ ಆಗಸ್ಟ್ 2018ರಲ್ಲಿ 4 ಕೋಟಿ ಮಟ್ಟವನ್ನು ಮೀರಿತು ಎಂದಿದ್ದಾರೆ. ಪ್ರತಿಸ್ಪರ್ಧಿ NSEಯ ಬಹುಪಾಲು ವ್ಯಾಪಾರದ ವಾಲ್ಯೂಮ್​ನಿಂದಾಗಿ, BSE ಇವುಗಳಲ್ಲಿ ಎಷ್ಟು ಹೂಡಿಕೆದಾರರ ಖಾತೆಗಳು ಸಕ್ರಿಯವಾಗಿವೆ ಅಥವಾ ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ ಮಾತ್ರ ಸೀಮಿತವಾಗಿವೆ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ.

ವಿಶ್ವದ ಆರನೇ ಅತಿದೊಡ್ಡ ಷೇರು ಮಾರುಕಟ್ಟೆ ಈ ಮಹತ್ವದ ಸಾಧನೆಯೊಂದಿಗೆ ಭಾರತ ಈಗ ವಿಶ್ವದ ಆರನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿದೆ. ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಮೊದಲ ಬಾರಿಗೆ ಫ್ರಾನ್ಸ್ ಅನ್ನು ಹಿಂದಿಕ್ಕಿದೆ. ಈ ವರ್ಷ ಇಲ್ಲಿಯವರೆಗೆ ಸೆನ್ಸೆಕ್ಸ್ ಶೇ 23.85 ಅಥವಾ 11,389.83 ಅಂಕಗಳಿಗಿಂತ ಹೆಚ್ಚಾಗಿದೆ. ಬಿಎಸ್ಇ-ಲಿಸ್ಟೆಡ್ ಕಂಪೆನಿಗಳ ಮಿಡ್-ಕ್ಯಾಪ್ ಸೆಪ್ಟೆಂಬರ್ 16ರ ವೇಳೆಗೆ 3.54 ಟ್ರಿಲಿಯನ್ ಡಾಲರ್ ಅಥವಾ ರೂ. 260.78 ಲಕ್ಷ ಕೋಟಿಗೆ ಏರಿತು.

ಝೆರೋಧಾ, ಅಪ್‌ಸ್ಟಾಕ್ಸ್, ಏಂಜೆಲ್ ಬ್ರೋಕಿಂಗ್ ಮತ್ತು ಶೇರ್‌ಖಾನ್ ಮತ್ತು ಐಸಿಐಸಿಐ ಸೆಕ್ಯೂರಿಟೀಸ್, ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ಮತ್ತು ಕೊಟಕ್ ಸೆಕ್ಯೂರಿಟೀಸ್‌ನಂತಹ ಸಾಂಸ್ಥಿಕ ಷೇರು ಬ್ರೋಕರ್​ಗಳು ಕೂಡ ತಮ್ಮ ಹೂಡಿಕೆದಾರರ ಖಾತೆಯಲ್ಲಿ ಭಾರೀ ಏರಿಕೆ ಕಂಡಿವೆ. ಅತ್ಯಂತ ಮೌಲ್ಯಯುತ ಮಾರುಕಟ್ಟೆಗಳೆಂದರೆ ಅಮೆರಿಕ (51 ಟ್ರಿಲಿಯನ್ ಯುಎಸ್​ಡಿ), ಚೀನಾ ( 12 ಟ್ರಿಲಿಯನ್ ಯುಎಸ್​ಡಿ), ಜಪಾನ್ (7.5 ಟ್ರಿಲಿಯನ್ ಯುಎಸ್​ಡಿ), ಹಾಂಕಾಂಗ್ (6.5 ಟ್ರಿಲಿಯನ್ ಯುಎಸ್​ಡಿ) ಮತ್ತು ಬ್ರಿಟನ್ (3.51 ಟ್ರಿಲಿಯನ್ ಯುಎಸ್​ಡಿ).

ಇದನ್ನೂ ಓದಿ: Indian Stock Market: ಇದೇ ಮೊದಲ ಬಾರಿಗೆ ಫ್ರಾನ್ಸ್​ನ ಮೀರಿಸಿದ ಭಾರತದ ಷೇರು ಮಾರುಕಟ್ಟೆ; ಏನಿದು ಸಾಧನೆ ಗೊತ್ತೆ?

(BSE Added 1 Crore Investors Account Within A Span Of 107 Days Total Account 8 Crores)

Published On - 11:49 pm, Tue, 21 September 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ