Cyber Security: ನಿಮ್ಮ ಡೇಟಾಗಳನ್ನು ಸೈಬರ್ ಕಳ್ಳರಿಂದ ರಕ್ಷಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ

| Updated By: Rakesh Nayak Manchi

Updated on: Aug 22, 2022 | 11:14 AM

ತಾಂತ್ರೀಕರಣವು ಅದರ ಭದ್ರತಾ ಅಪಾಯಗಳೊಂದಿಗೆಯೇ ಹುಟ್ಟುಕೊಂಡಿದ್ದು, ಇಂತಹ ಅಪಾಯಗಳಲ್ಲಿ ಸೈಬರ್ ಅಪರಾಧಗಳು, ಡೇಟಾ ಕಳ್ಳತನ ಮತ್ತು ಹ್ಯಾಕಿಂಗ್‌ ಇತ್ಯಾದಿಗಳು ಸೇರಿವೆ. ಹೀಗಿದ್ದಾಗ ನಿಮ್ಮ ಗೌಪ್ಯ ವ್ಯಾಪಾರ ಮಾಹಿತಿಯನ್ನು ಪರಿಣಾಮಕಾರಿಯಾಗಿ ಸುರಕ್ಷಿತಗೊಳಿಸುವುದು ಅವಶ್ಯಕ.

Cyber Security: ನಿಮ್ಮ ಡೇಟಾಗಳನ್ನು ಸೈಬರ್ ಕಳ್ಳರಿಂದ ರಕ್ಷಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಪ್ರಸ್ತುತ ಇಡೀ ಜಗತ್ತಿನಲ್ಲಿ ನಡೆಯುವ ಎಲ್ಲಾ ಕೊಡು ಕೊಳ್ಳುವಿಕೆ ವ್ಯವಹಾರಗಳು ಡಿಜಿಟೈಸ್ ಆಗಿವೆ. ಮಾತ್ರವಲ್ಲದೆ ತಂತ್ರಜ್ಞಾನ ಎಷ್ಟು ಬದಲಾಗಿದೆ ಎಂಬುದಕ್ಕೆ ಐಸಿಟಿ ಮತ್ತು ಕ್ಲೌಡ್ ತಂತ್ರಜ್ಞಾನದ ಪರಿಚಯವೇ ನಿದರ್ಶನ. ಇವುಗಳು ಜೀವನದ ಪ್ರತಿಯೊಂದು ಕ್ಷೇತ್ರವನ್ನು ಕ್ರಾಂತಿಗೊಳಿಸಿದೆ. ಇವುಗಳ ಮೂಲಕ ವ್ಯಾಪಾರ ಮಾಲೀಕರು, ಅಥವಾ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿ, ದಾಖಲೆ ಇತ್ಯಾದಿಗಳನ್ನು ಯಾರಿಗೂ ಕಾಣದಂತೆ ಸಂಗ್ರಹಿಸಬಹುದು. ತಂತ್ರಜ್ಞಾನ ಬೆಳೆಯುತ್ತಾ ಹೋದಂತೆ ಅಪಾಯಗಳು ಕೂಡ ಹೆಚ್ಚಾಗಿರುವುದನ್ನು ಅಲ್ಲಗೆಳೆಯುವಂತಿಲ್ಲ. ತಾಂತ್ರೀಕರಣವು ಅದರ ಭದ್ರತಾ ಅಪಾಯಗಳೊಂದಿಗೆಯೇ ಹುಟ್ಟುಕೊಂಡಿದ್ದು, ಇಂತಹ ಅಪಾಯಗಳಲ್ಲಿ ಸೈಬರ್ ಅಪರಾಧಗಳು, ಡೇಟಾ ಕಳ್ಳತನ ಮತ್ತು ಹ್ಯಾಕಿಂಗ್‌ ಇತ್ಯಾದಿಗಳು ಸೇರಿವೆ. ಹೀಗಿದ್ದಾಗ ನಿಮ್ಮ ಗೌಪ್ಯ ವ್ಯಾಪಾರ ಮಾಹಿತಿಯನ್ನು ಪರಿಣಾಮಕಾರಿಯಾಗಿ ಸುರಕ್ಷಿತಗೊಳಿಸಲು ಏನು ಮಾಡಬೇಕು? ಈ ಕೆಳಗಿನ ಸಲಹೆಗಳನ್ನು ಅಳವಡಿಸಿಕೊಳ್ಳಿ:

ವಿಪಿಎನ್ ಬಳಕೆ : ನಿಮ್ಮ ಗೌಪ್ಯ ವ್ಯಾಪಾರ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ವಿಪಿಎನ್ ಅನ್ನು ಬಳಸುವುದು ಒಂದು ಉತ್ತಮ ಮಾರ್ಗವಾಗಿದೆ. ಏಕೆಂದರೆ ಇದು ನಿಮಗೆ ಹೆಚ್ಚುವರಿ ಭದ್ರತೆಯಾಗಿ ಕಾರ್ಯನಿರ್ವಹಿಸುತ್ತದೆ. ಉಚಿತ ವಿಪಿಎನ್ ನಿಮ್ಮ ವ್ಯಾಪಾರದ ಪ್ರಮುಖ ಮಾಹಿತಿಯನ್ನು ರಕ್ಷಿಸುವ ಪರಿಣಾಮಕಾರಿ ಮಾರ್ಗವಾಗಿದ್ದು, ನಿಮ್ಮ ಮೊಬೈಲ್ ಸಾಧನಗಳಿಗೆ ಅನಧಿಕೃತ ಪ್ರವೇಶದಿಂದ ರಕ್ಷಣೆ ನೀಡಲಿದೆ.

ಎಂಎಫ್​ಎ ಬಳಕೆ: ಬಹು ಅಂಶದ ದೃಢೀಕರಣವು ನಿಮ್ಮ ಖಾಸಗಿ ಫೈಲ್‌ಗಳಿಗೆ ಪ್ರವೇಶವನ್ನು ಹೊಂದಲು ಹ್ಯಾಕರ್‌ಗಳಿಗೆ ಕಷ್ಟವಾಗುವಂತೆ ಮಾಡಲು ಒಂದಕ್ಕಿಂತ ಹೆಚ್ಚು ದೃಢೀಕರಣ ಪ್ರಕ್ರಿಯೆಯನ್ನು ಹಾಕಲಾಗುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಎಂಎಫ್​ಎ ಗುರುತು ಮತ್ತು ಪ್ರವೇಶ ನಿರ್ವಹಣೆ (IAM) ನೀತಿಯ ಪ್ರಮುಖ ಅಂಶವಾಗಿದೆ. ಕೇವಲ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಕೇಳುವುದರ ಜೊತೆಗೆ ಒಂದು ಅಥವಾ ಹೆಚ್ಚಿನ ಹೆಚ್ಚುವರಿ ಪರಿಶೀಲನಾ ಅಂಶಗಳ ಅಗತ್ಯವಿರುತ್ತದೆ, ಇದು ಸೈಬರ್ ದಾಳಿಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಬಲವಾದ ಪಾಸ್‌ವರ್ಡ್ ಬಳಕೆ: ನಿಮ್ಮ ಗೌಪ್ಯ ವ್ಯವಹಾರ ಮಾಹಿತಿಯನ್ನು ರಕ್ಷಿಸಲು ಮತ್ತೊಂದು ಸರಳ ಮತ್ತು ಪರಿಣಾಮಕಾರಿ ಮಾರ್ಗವೆಂದರೆ ಅಕ್ಷರಗಳು, ಚಿಹ್ನೆಗಳು ಮತ್ತು ವರ್ಣಮಾಲೆಗಳನ್ನು ಒಳಗೊಂಡಿರುವ ಕನಿಷ್ಠ ಹನ್ನೆರಡು ಅಕ್ಷರಗಳನ್ನು ಹೊಂದಿರುವ ಬಲವಾದ ಪಾಸ್‌ವರ್ಡ್ ಅನ್ನು ಅಳವಡಿಸಿಕೊಳ್ಳುವುದು. ನೀವು ಅಂತಹ ವ್ಯಕ್ತಿಗೆ ನಿಮ್ಮ ಪಾಸ್‌ವರ್ಡ್ ನೀಡದ ಹೊರತು ಯಾರಾದರೂ ನಿಮ್ಮ ಸಾಧನಕ್ಕೆ ಲಾಗ್​ಇನ್ ಆಗುವುದು ಕಷ್ಟಸಾಧ್ಯ.

ಪಾಸ್‌ವರ್ಡ್​​ನ ನಿಯಮಿತ ಬದಲಾಣೆ: ಕೇವಲ ತಮ್ಮ ಪಾಸ್‌ವರ್ಡ್ ಅನ್ನು ರಚಿಸಿ ಜೀವನದುದ್ದಕ್ಕೂ ಅದನ್ನೇ ಬಳಕೆ ಮಾಡಬೇಡಿ. ನಿಮ್ಮ ಪ್ರಮುಖ ಮತ್ತು ಸೂಕ್ಷ್ಮ ವ್ಯವಹಾರ ಮಾಹಿತಿ ಮತ್ತು ಡೇಟಾದ ನಿರಂತರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಪಾಸ್‌ವರ್ಡ್ ಅನ್ನು ನಿಯಮಿತವಾಗಿ ಬದಲಾಯಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಕಂಪನಿಯ ಸೂಕ್ಷ್ಮ ಮಾಹಿತಿಗೆ ಪ್ರವೇಶ ನಿರಾಕರಿಸಿ: ಕಂಪನಿಗೆ ಹೊಸದಾಗಿ ಕೆಲಸಕ್ಕೆ ಸೇರಿಕೊಳ್ಳುವವರಿದ್ದರೆ ಅಥವಾ ಸಂಸ್ಥೆಗೆ ಹೊಸಬರಾಗಿದ್ದರೆ ಮತ್ತು ಇನ್ನೂ ಪರೀಕ್ಷೆ ಮತ್ತು ಪರಿಶೀಲನೆಯಲ್ಲಿದ್ದರೆ ಅಂತಹ ಉದ್ಯೋಗಿಗೆ ಕಂಪನಿಯ ಸೂಕ್ಷ್ಮ ಮಾಹಿತಿಯನ್ನು ನೀಡುವುದು, ಸೂಕ್ಷ್ಮ ಮಾಹಿತಿಗಳುಲ್ಲ ವಿಭಾಗಕ್ಕೆ ಒಮ್ಮಿಂದೊಮ್ಮೆಲೇ ಅವಕಾಶ ನೀಡುವುದು ಸೂಕ್ತವಲ್ಲ. ಉದ್ಯೋಗಿ ಈ ಹಿಂದೆ ದುರುದ್ದೇಶಪೂರಿತ ಚಟುವಟಿಕೆಗಳಿಗೆ ತಪ್ಪಿತಸ್ಥರಾಗಿದ್ದರೆ ಅಂತಹ ಉದ್ಯೋಗಿಗೆ ಕಂಪನಿಯ ಖಾಸಗಿ ಮತ್ತು ಸೂಕ್ಷ್ಮ ಫೈಲ್‌ಗಳು ಮತ್ತು ಮಾಹಿತಿಯ ಬಗ್ಗೆ ಮಾಹಿತಿ ಹಂಚಿಕೊಳ್ಳದಿರಿ.

ಡೇಟಾ ಉಲ್ಲಂಘನೆ ಮಾನಿಟರಿಂಗ್ ಸೇವೆಯ ಬಳಕೆ: ಡೇಟಾ ಉಲ್ಲಂಘನೆ ಮಾನಿಟರಿಂಗ್ ಅಪ್ಲಿಕೇಶನ್ ಏನು ಮಾಡುತ್ತದೆ ಎಂದರೆ ಅದು ನಿಮ್ಮ ಮೇಲ್‌ಗೆ ಮಾಲ್‌ವೇರ್ ಕಳುಹಿಸಿದಾಗಲೆಲ್ಲಾ ಅದು ನಿಮಗೆ ಎಚ್ಚರಿಕೆ ನೀಡುತ್ತದೆ. ಅದಾಗ್ಯೂ ನಿಮ್ಮ ವ್ಯಾಪಾರ ಸೂಕ್ಷ್ಮ ಫೈಲ್‌ಗಳು ಡಾರ್ಕ್ ವೆಬ್‌ನಲ್ಲಿ ಮಾರಾಟವಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವ ಕೆಲವು ತಾಂತ್ರಿಕ ತಜ್ಞರನ್ನು ನೀವು ಬಳಸಿಕೊಳ್ಳಬಹುದು.

ಗ್ರಾಹಕರ ವೈಯಕ್ತಿಕ ಡೇಟಾವನ್ನು ಗೂಡಲಿಪಿ ಮಾಡಿ: ನೀವು ಇ-ಕಾಮರ್ಸ್‌ನಂತಹ ವ್ಯವಹಾರವನ್ನು ನಡೆಸುತ್ತಿದ್ದರೆ ನಿಮ್ಮ ಗ್ರಾಹಕರ ಮಾಹಿತಿಯನ್ನು ಗೂಡಲಿಪಿ (Encrypt) ಮಾಡಿಕೊಳ್ಳಿ. ಸಾಮಾನ್ಯವಾಗಿ ಹ್ಯಾಕರ್‌ಗಳು ಸಾಮಾನ್ಯವಾಗಿ ಗ್ರಾಹಕರ ಮಾಹಿತಿಯನ್ನು ಗುರಿಯಾಗಿಸುತ್ತಾರೆ. ಏಕೆಂದರೆ, ಹ್ಯಾಕರ್​ಗಳು ಮಾಹಿತಿಯನ್ನು ತೆರಿಗೆ ವಂಚನೆಗೆ ಬಳಸಬಹುದು, ಡಾರ್ಕ್ ವೆಬ್‌ನಲ್ಲಿ ಅಥವಾ ನಿಮ್ಮ ಪ್ರತಿಸ್ಪರ್ಧಿಗಳಿಗೆ ನಿಗದಿತ ಬೆಲೆಗೆ ಮರುಮಾರಾಟ ಮಾಡಬಹುದು.

ಕೆಲವು ವ್ಯಾಪಾರದ ಪ್ರತಿಸ್ಪರ್ಧಿಗಳು, ಹ್ಯಾಕರ್‌ಗಳು ಮತ್ತು ಸೈಬರ್ ಅಪರಾಧಿಗಳು ನಿರ್ದಿಷ್ಟವಾಗಿ ಗೌಪ್ಯ ಮಾಹಿತಿ ಮತ್ತು ಡೇಟಾದ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಅವರು ನಿಮ್ಮ ಸಂಸ್ಥೆಯ ಮೇಲೆ ಸೈಬರ್ ದಾಳಿ ನಡೆಸಿದಾಗ ಅವರು ಮೊದಲು ಪ್ರವೇಶವನ್ನು ಹೊಂದಲು ಬಯಸುವ ವಿಭಾಗ ಇದಾಗಿದೆ.

ವೈಯಕ್ತಿಕ ಡೇಟಾ: ವೈಯಕ್ತಿಕ ಮಾಹಿತಿ ಮತ್ತು ಸಾಮಾಜಿಕ ಭದ್ರತೆ ಸಂಖ್ಯೆಗಳು, ಜನ್ಮ ದಿನಾಂಕ, ಬ್ಯಾಂಕ್ ಹೇಳಿಕೆಗಳು, ಹಣಕಾಸು ವ್ಯವಹಾರಗಳು ಮತ್ತು ಮಾರ್ಕೆಟಿಂಗ್ ತಂತ್ರಗಳಂತಹ ಡೇಟಾಗಳ ಬಗ್ಗೆ ಹ್ಯಾಕರ್‌ಗಳು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಏಕೆಂದರೆ ಅವರು ಅದನ್ನು ಡಾರ್ಕ್ ವೆಬ್‌ನಲ್ಲಿ ನಿಮ್ಮ ಪ್ರತಿಸ್ಪರ್ಧಿಗಳಿಗೆ ಭಾರೀ ಬೆಲೆಗೆ ಮರುಮಾರಾಟ ಮಾಡುತ್ತಾರೆ.

ಕಾರ್ಪೊರೇಟ್ ಮಾಹಿತಿ: ಇಂಟರ್ನೆಟ್ ವಂಚಕರು ಆಸಕ್ತಿ ಹೊಂದಿರುವ ಮತ್ತೊಂದು ಮಾಹಿತಿಯೆಂದರೆ, ನಿಮ್ಮ ಕಾರ್ಪೊರೇಟ್ ಡೇಟಾ ಸಂಗ್ರಹ. ಒಂದೊಮ್ಮೆ ಈ ಮಾಹಿತಿ ವಂಚಕರು ಕೈವಶವಾದರೆ ಅವರು ನಿಮ್ಮ ಹೆಸರಿನಲ್ಲಿ ಹಣವನ್ನು ಕೋರುವ ಮೂಲಕ ನಿಮ್ಮ ಗ್ರಾಹಕರಿಗೆ ವಂಚಿಸುತ್ತಾರೆ.

ಕಾರ್ಪೊರೇಟ್ ಗುರುತು : ನಿಮ್ಮ ಕಾರ್ಪೊರೇಟ್ ಗುರುತು ನಿಮ್ಮ ವ್ಯಾಪಾರದ ಚಿತ್ರಣ, ಉತ್ಪನ್ನ ವಿನ್ಯಾಸಗಳು ಮತ್ತು ಸಂಶೋಧನೆಗಳಂತಹ ಬೌದ್ಧಿಕ ಆಸ್ತಿಯ ವಿಷಯವನ್ನು ಹೊಂದಿರುತ್ತದೆ. ಈ ರೀತಿಯ ಮಾಹಿತಿಗಳಲ್ಲಿಯೂ ಸೈಬರ್ ಅಪರಾಧಿಗಳು ಆಸಕ್ತಿ ವಹಿಸುತ್ತಾರೆ.

ಸೈಬರ್ ವಂಚಕರು ಡೇಡಾ ಕಳ್ಳತನ ಹೇಗೆ ಮಾಡುತ್ತಾರೆ?

ವೈಯಕ್ತಿಕಗೊಳಿಸಿದ ವ್ಯಾಪಾರ ಮಾಹಿತಿಯನ್ನು ಹ್ಯಾಕರ್‌ಗಳು ಆರಾಮವಾಗಿ ಕದಿಯಲು ಅವರು ಕೆಲವು ತಂತ್ರಗಳನ್ನು ಅಳವಡಿಸಿಕೊಳ್ಳುತ್ತಾರೆ. ಅವುಗಳು ಈ ಕೆಳಗಿನಂತಿವೆ:

ಮೋಸದ ಇ-ಮೇಲ್: ನಿಮ್ಮ ಪ್ರಮುಖ ವ್ಯಾಪಾರ ಮಾಹಿತಿಗೆ ಪ್ರವೇಶವನ್ನು ಹೊಂದಲು ಹ್ಯಾಕರ್‌ಗಳು ಬಳಸುವ ಒಂದು ಪ್ರಬಲ ಮಾರ್ಗಗಳಲ್ಲಿ ಮೋಸದ ಇ-ಮೇಲ್ ಒಂದಾಗಿದೆ. ಲಗತ್ತಿಸಲಾದ ಲಿಂಕ್ ಹೊಂದಿರುವ ಮೋಸದ ಮೇಲ್ ಅನ್ನು ನಿಮಗೆ ಕಳುಹಿಸುವುದರೊಂದಿಗೆ ಇದು ಸಂಬಂಧಿಸಿದೆ. ಇದು ನೈಜವಾಗಿ ಕಾಣುವಂತೆ ವಿನ್ಯಾಸಗೊಳಿಸಲಾಗಿರುವುದರಿಂದ ನಿಮಗೆ ಇಂತಹ ಮೇಲ್​ಗಳ ಮೇಲೆ ಅನುಮಾನ ಹುಟ್ಟುವುದಿಲ್ಲ.

ವೆಬ್​ಸೈಟ್​ಗೆ ವೈರಸ್ ಲಿಂಕ್: ನಿರ್ದಿಷ್ಟ ವೆಬ್‌ಸೈಟ್​ಗೆ ನುಗ್ಗಿ ಅದರ ಕೋಡ್​ಗೆ  ವೈರಸ್ ಲಿಂಕ್ ಮಾಡುತ್ತಾರೆ. ಇಂತಹ ವೆಬ್​ಸೈಟ್​ಗೆ ಯಾರೇ ಬಂದು ಯುಎಸ್​ಬಿ ಹಾಕಿದರೆ ಅದರಲ್ಲಿನ ಮಾಹಿತಿಗಳು ಸುಲಭವಾಗಿ ಹ್ಯಾಕರ್​ಗಳ ಕೈಸೇರುತ್ತವೆ.

ಈ ಪ್ರಾಯೋಜಿತ ಲೇಖನದ ಮೂಲಕ ಸೈಬರ್ ಅಪರಾಧಿಗಳ ಕೈಚಳಕ ಮತ್ತು ನಿಮ್ಮ ಡೇಡಾಗಳನ್ನು ಹೇಗೆ ಗೌಪ್ಯವಾಗಿರುವುದು ಎಂಬಿತ್ಯಾದಿ ಮಾಹಿತಿಗಳನ್ನು ನೀಡಲಾಗಿದೆ. ಅದಾಗ್ಯೂ ನೀವು ಸೈಬರ್ ಪರಿಣತರನ್ನು ಭೇಟಿಯಾಗಿ ಈ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಮುಂದಿನ ಹೆಜ್ಜೆ ಇರಿಸಿ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ