China Action: ವಿಶ್ವ ಎಲೆಕ್ಟ್ರಾನಿಕ್ಸ್ ಅಡ್ಡೆಯಾಗಲು ಹೊರಟ ಭಾರತಕ್ಕೆ ಚೀನಾ ಅಡೆತಡೆ; ಗ್ಯಾಲಿಯಂ, ಜರ್ಮೇನಿಯಂ ರಫ್ತಿಗೆ ನಿರ್ಬಂಧ

Gallium and Germanium Supply: ಭಾರತದಲ್ಲಿ ಸೆಮಿಕಂಡಕ್ಟರ್ ಘಟಕ ನಿರ್ಮಾಣವಾಗುತ್ತಿರುವ ಹೊತ್ತಿನಲ್ಲಿ ಚೀನಾ ತನ್ನಲ್ಲಿರುವ ಗ್ಯಾಲಿಯಂ ಮತ್ತು ಜರ್ಮೇನಿಯಂ ಲೋಹಗಳ ರಫ್ತಿಗೆ ನಿರ್ಬಂಧ ಹಾಕಿದೆ. ಇದು ಭಾರತದ ಆಸೆಗೆ ತಣ್ಣೀರೆರಚಿದಂತಾಗುತ್ತದಾ ಎಂಬುದು ಪ್ರಶ್ನೆ.

China Action: ವಿಶ್ವ ಎಲೆಕ್ಟ್ರಾನಿಕ್ಸ್ ಅಡ್ಡೆಯಾಗಲು ಹೊರಟ ಭಾರತಕ್ಕೆ ಚೀನಾ ಅಡೆತಡೆ; ಗ್ಯಾಲಿಯಂ, ಜರ್ಮೇನಿಯಂ ರಫ್ತಿಗೆ ನಿರ್ಬಂಧ
ಸೆಮಿಕಂಡಕ್ಟರ್
Follow us
|

Updated on:Jul 05, 2023 | 4:05 PM

ಸೆಮಿಕಂಡಕ್ಟರ್​ಗಳು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಬಹಳ ಅಗತ್ಯವಾದ ವಸ್ತುಗಳು. ಇಡೀ ವಿಶ್ವ ಒಂದು ವರ್ಷಕ್ಕೆ ಹಲವು ಲಕ್ಷಕೋಟಿಗಳಷ್ಟು ಮೌಲ್ಯದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಬಳಸುತ್ತದೆ. ಚೀನಾದ ಪ್ರಮುಖ ಆದಾಯದಲ್ಲಿ ಇದೂ ಒಂದು. ಭಾರತ ಕೂಡ ಇದೀಗ ಮಾರುಕಟ್ಟೆ ಅಧಿಪತ್ಯ ಸ್ಥಾಪನೆಗೆ ಪ್ರಯತ್ನ ಆರಂಭಿಸಿದೆ. ಭಾರತದಲ್ಲಿ ಇದೆ ಮೊದಲ ಬಾರಿಗೆ ಸೆಮಿಕಂಡಕ್ಟರ್ ಉತ್ಪಾದನೆ (Semiconductor Manufacturing) ಶುರುವಾಗಲಿದೆ. ಗುಜರಾತ್​ನಲ್ಲಿ ಮೈಕ್ರೋನ್ ಸಂಸ್ಥೆ ಸದ್ಯದಲ್ಲೇ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಿ ಉತ್ಪಾದನೆಯನ್ನೂ ಆರಂಭಿಸಲಿದೆ. ಫಾಕ್ಸ್​ಕಾನ್ ಮತ್ತು ವೇದಾಂತ ಕಂಪನಿಗಳು ಜಂಟಿಯಾಗಿ ಇನ್ನೊಂದು ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲಿವೆ. ಈ ಘಟಕಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಿದಲ್ಲಿ ಭಾರತ ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಮುಖ ಹೆಜ್ಜೆ ಇರಿಸಿದಂತಾಗುತ್ತದೆ. ಇದೇ ವೇಳೆ, ಭಾರತದ ಓಟಕ್ಕೆ ಚೀನಾ ತೊಡರುಗಾಲು ಹಾಕಲು ಯತ್ನಿಸುತ್ತಿದೆ. ಗ್ಯಾಲಿಯಂ (Gallium) ಮತ್ತು ಜರ್ಮೇನಿಯಂ (Germanium) ಎಂಬ ಎರಡು ಲೋಹಗಳು ಹಾಗೂ ಅವುಗಳ ರಾಸಾಯನಿಕ ಸಂಯುಕ್ತಗಳನ್ನು (chemical compounds) ಆಗಸ್ಟ್ 1ರಿಂದ ರಫ್ತು ಆಗದಂತೆ ನಿರ್ಬಂಧ ಹೇರುತ್ತಿರುವುದಾಗಿ ಮೊನ್ನೆ (ಜುಲೈ 3) ಚೀನಾ ಘೋಷಣೆ ಮಾಡೇಬಿಟ್ಟಿತು. ಅದು ಕೊಟ್ಟ ಕಾರಣ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಆಗುತ್ತದೆ ಎಂದಾಗಿತ್ತು. ಅದೂ ನಿಜವೇ, ಭಾರತ ದ ಸೆಮಿಕಂಡಕ್ಟರ್ ಓಟಕ್ಕೆ ಹೆಚ್ಚು ಧಕ್ಕೆಯಾಗುವುದು ಚೀನಾದ ಹಿತಾಸಕ್ತಿಯೇ.

ಗ್ಯಾಲಿಯಂ, ಜರ್ಮೇನಿಯಂ ಇಲ್ಲದಿದ್ದರೆ ಏನಂತೆ..?

ಗ್ಯಾಲಿಯಂ ಮತ್ತು ಜರ್ಮೇನಿಯಂ ಲೋಹಗಳು ಸೆಮಿಕಂಡಕ್ಟರ್, ಕಮ್ಯೂನಿಕೇಶನ್ ಉಪಕರಣ ಮತ್ತು ಚಿಪ್ ಇತ್ಯಾದಿ ವಸ್ತುಗಳ ತಯಾರಿಕೆಗೆ ಬೇಕೇ ಬೇಕು. ಸೆಮಿಕಂಡಕ್ಟರ್, ಇಸಿಬಿ, ಎಲ್​ಇಡಿ, ಥರ್ಮೋಮೀಟರ್, ಬ್ಯೋರೋಮೀಟರ್ ಸೆನ್ಸಾರ್ ಇತ್ಯಾದಿಗೆ ಗ್ಯಾಲಿಯಂ ಬಳಕೆ ಆಗುತ್ತದೆ. ಆಪ್ಟಿಕಲ್ ಫೈಬರ್, ಸೋಲಾರ್ ಸೆಲ್, ಕ್ಯಾಮರಾ ಲೆನ್ಸ್ ಇತ್ಯಾದಿ ತಯಾರಿಕೆಗೆ ಜರ್ಮೇನಿಯಂ ಬೇಕು. ಇವು ಸ್ವಂತವಾಗಿ ಅಸ್ತಿತ್ವದಲ್ಲಿರುವುದಿಲ್ಲ. ಅಲೂಮಿನಿಯಮ್, ಜಿಂಕ್ ಇತ್ಯಾದಿ ಬೇರೆ ಬೇರೆ ಲೋಹಗಳ ಉಪಉತ್ಪನ್ನವಾಗಿ ಈ ಎರಡು ಲೋಹಗಳಿವೆ.

ಇದನ್ನೂ ಓದಿFraud: 9ಲಕ್ಷಕ್ಕೂ ಹೆಚ್ಚು ಹಣದ ಸಿಗುತ್ತೆ ಅಂತ ನಂಬಿದ ಅಜ್ಜಿ ಪಾಲಿಗೆ ಬಂದಿದ್ದು 32,000 ರೂ; ಇನ್ಷೂರೆನ್ಸ್ ಕಂಪನಿಯಿಂದ ಹಣ ಕಕ್ಕಿಸಿದ ಗ್ರಾಹಕ ವೇದಿಕೆ

ಗ್ಯಾಲಿಯಂ ಮತ್ತು ಜರ್ಮೇನಿಯಂ ಲೋಹಗಳನ್ನು ಭಾರತ ಬಹುತೇಕ ಆಮದು ಮಾಡಿಕೊಳ್ಳುತ್ತದೆ. ಸೆಮಿಕಂಡಕ್ಟರ್ ಘಟಕಕ್ಕೆ ಸಾಕಷ್ಟು ಪ್ರಮಾಣದಲ್ಲಿ ಗ್ಯಾಲಿಯಂ ಬೇಕಾಗುತ್ತದೆ.

ಗ್ಯಾಲಿಯಂ ಮತ್ತು ಜರ್ಮೇನಿಯಂ ಪಡೆಯಲು ಭಾರತಕ್ಕೇನು ದಾರಿ?

ಅಲೂಮಿನಾ ಉತ್ಪಾದಿಸುವ ವೇಳೆ ಉಪಉತ್ಪನ್ನವಾಗಿ ಗ್ಯಾಲಿಯಂ ಸಿಗುತ್ತದೆ. ಉತ್ತರಪ್ರದೇಶದ ರೇಣುಕೂಟ ಎಂಬಲ್ಲಿರುವ ಹಿಂಡಾಲ್ಕೋ ಹಾಗು ಒಡಿಶಾದ ನಾಲ್ಕೋ ದಾಮನಜೋಡಿ ಅಲೂಮಿನಾ ರಿಫೈನರಿ ಫ್ಯಾಕ್ಟರಿಯಲ್ಲಿ ಗ್ಯಾಲಿಯಂ ಅನ್ನು ಈ ಹಿಂದೆ ತಯಾರಿಸಲಾಗುತ್ತಿತ್ತು. ಆದರೆ, ಜರ್ಮೇನಿಯಂ ಮಾತ್ರ ಸ್ವಲ್ಪವೂ ಲಭ್ಯ ಇಲ್ಲ.

ಇದನ್ನೂ ಓದಿInspiring: ಕಾಲೇಜು ಶುಲ್ಕ ಕಟ್ಟಲು ಚಹಾ ಮಾರುತ್ತಿದ್ದ ವಿಜಯ್ ಇವತ್ತು ಸಾವಿರ ಕೋಟಿ ರೂ ರಾಯಲ್ ಓಕ್ ಒಡೆಯ

ಮಹತ್ವದ ಖನಿಜಗಳತ್ತ ಭಾರತದ ಗಮನ

ಕೇಂದ್ರ ಸರ್ಕಾರ ಈಗ ಬಹಳ ಮಹತ್ವ ಇರುವ ಖನಿಜಗಳನ್ನು ಗುರುತಿಸುವ ಕೆಲಸ ನಡೆಸುತ್ತಿದೆ. 33 ಖನಿಜಗಳ ಪೈಕಿ 17 ಖನಿಜಗಳು ವಿರಳವಾಗಿರುವುದು ಮಾತ್ರವಲ್ಲ, ಆರ್ಥಿಕವಾಗಿ ಮಹತ್ವವೂ ಆಗಿದೆ. ಈ ಪೈಕಿ ತೀರಾ ದುರ್ಲಭ ಇರುವ 7 ಲೋಹಗಳನ್ನು ಗುರುತಿಸಲಾಗಿದೆ. ಇದರಲ್ಲಿ ಜರ್ಮೇನಿಯಂ ಕೂಡ ಒಂದು. ಈ ಎಲ್ಲಾ ಮಹತ್ವದ ಖನಿಜಗಳನ್ನು ಬಳಸಲು ಅನುವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆಗಳನ್ನಿಡುತ್ತಿದೆ. ಆದರೆ, ಈ ಪ್ರಯತ್ನ ಎಷ್ಟರಮಟ್ಟಿಗೆ ಫಲ ಕೊಡುತ್ತದೆ? ಕೊಟ್ಟರೂ ಸೆಮಿಕಂಡಕ್ಟರ್ ಘಟಕಗಳ ನಿರ್ವಹಣೆಗೆ ಸರಕುಗಳನ್ನು ಎಲ್ಲಿಂದ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:32 pm, Wed, 5 July 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್