ಎಲೆಕ್ಟ್ರಿಕ್ ಬಸ್, ಸೈಕ್ಲಿಂಗ್ ಟ್ರ್ಯಾಕ್, ವಾಕಿಂಗ್… ಹೇಗಿದೆ ನೋಡಿ ಕೇಂದ್ರದ ಅರ್ಬನ್ ಮೊಬಿಲಿಟಿ ಮಿಷನ್

Urban mobility mission: ನಗರ ಭಾಗದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಕೇಂದ್ರ ಸರ್ಕಾರ ಅರ್ಬನ್ ಮೊಬಿಲಿಟಿ ಮಿಷನ್ ಅನ್ನು ಮುಂದಿನವ ವರ್ಷ ಜಾರಿಗೊಳಿಸುತ್ತಿದೆ. ಇದರಲ್ಲಿ ಮೆಗಾಬಸ್ ಮಿಷನ್ ಇತ್ಯಾದಿ ವಿವಿಧ ಉಪಕ್ರಮಗಳೂ ಇವೆ. 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಸಂಚಾರ ಹೆಚ್ಚಿಸುವುದು, ವಿವಿಧೆಡೆ ಪ್ರತ್ಯೇಕ ಸೈಕ್ಲಿಂಗ್ ಟ್ರ್ಯಾಕ್, ವಾಕಿಂಗ್ ಪಾತ್​​ಗಳನ್ನು ನಿರ್ಮಿಸುವುದು ಇವೇ ಮುಂತಾದ ಕಾರ್ಯಗಳು ಈ ಯೋಜನೆಯಲ್ಲಿವೆ.

ಎಲೆಕ್ಟ್ರಿಕ್ ಬಸ್, ಸೈಕ್ಲಿಂಗ್ ಟ್ರ್ಯಾಕ್, ವಾಕಿಂಗ್... ಹೇಗಿದೆ ನೋಡಿ ಕೇಂದ್ರದ ಅರ್ಬನ್ ಮೊಬಿಲಿಟಿ ಮಿಷನ್
ಎಲೆಕ್ಟ್ರಿಕ್ ಬಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2024 | 5:14 PM

ನವದೆಹಲಿ, ಅಕ್ಟೋಬರ್ 22: ನಗರದ ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಮೆಗಾಬಸ್ ಮಿಷನ್ ಚಾಲನೆಗೊಳಿಸುತ್ತಿದೆ. ಭಾರತ್ ಅರ್ಬನ್ ಮೆಗಾಬಸ್ ಮಿಷನ್ ಐದು ವರ್ಷದ ಯೋಜನೆಯಾಗಿದ್ದು, ನಗರ ಭಾಗದಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಸೇವೆಯನ್ನು ಪರಿಚಯಿಸಲಿದೆ. 1.75 ಲಕ್ಷ ಕೋಟಿ ರೂ ಮೊತ್ತದ ಈ ಮಿಷನ್​ನಲ್ಲಿ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಓಡಾಟ ಆಗಲಿದೆ. ಐದು ವರ್ಷದಲ್ಲಿ ಈ ನಗರಗಳಲ್ಲಿ ಒಂದು ಲಕ್ಷ ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಿಸುವ ಗುರಿ ಇಡಲಾಗಿದೆ. ಬಸ್ಸಿನ ಜೊತೆಗೆ ಅದಕ್ಕೆ ಸಂಬಂಧಿಸಿದ ಸೌಕರ್ಯ ವ್ಯವಸ್ಥೆಯಾದ ಬಸ್ ನಿಲ್ದಾಣ, ಟರ್ಮಿನಲ್, ಡಿಪೋ ಇತ್ಯಾದಿಯನ್ನೂ ನಿರ್ಮಿಸುವ ಉದ್ದೇಶ ಇದೆ.

2025ರಲ್ಲಿ ಜಾರಿಯಾಗಲಿರುವ ಅರ್ಬನ್ ಮೊಬಿಲಿಟಿ ಮಿಷನ್​​ನಲ್ಲಿ ಎಲೆಕ್ಟ್ರಿಕ್ ಬಸ್ ಮಾತ್ರವಲ್ಲ, ಇನ್ನೂ ಹಲವು ಕಾರ್ಯಗಳನ್ನು ನೆರವೇರಿಸಲಾಗುತ್ತದೆ. ಅದರಲ್ಲಿ 5,000 ಕಿಮೀನಷ್ಟು ಪಾದಚಾರಿ ಮಾರ್ಗ ಮತ್ತು ಸೈಕ್ಲಿಂಗ್ ಸ್ನೇಹಿ ಬೀದಿಗಳನ್ನು ನಿರ್ಮಿಸುವ ಯೋಜನೆಯೂ ಇದೆ. 2025ರಲ್ಲಿ ಆರಂಭವಾಗಿ 2030ರವರೆಗೂ ಈ ಯೋಜನೆ ಚಾಲನೆಯಲ್ಲಿ ಇರಲಿದೆ.

ಇದನ್ನೂ ಓದಿ: ಎಂಟು ವರ್ಷದಲ್ಲಿ ಆರು ಲಕ್ಷಕ್ಕೂ ಹೆಚ್ಚು ಗ್ರಾಮಗಳ ಭೂದಾಖಲೆಗಳ ಡಿಜಿಟೀಕರಣವಾಗಿದೆ: ಗ್ರಾಮೀಣಾಭಿವೃದ್ಧಿ ಸಚಿವ

ಅರ್ಬನ್ ಮೊಬಿಲಿಟಿ ಮಿಷನ್ ಉದ್ದೇಶ ಏನು?

ನಗರಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವುದು; ಜನರು ಖಾಸಗಿ ವಾಹನ ಬದಲು ಸಾರ್ವಜನಿಕ ವಾಹನಗಳನ್ನು ಬಳಸುವುದು; ಸೈಕಲ್ ಬಳಕೆ ಉತ್ತೇಜಿಸುವುದು ಇವೇ ಮುಂತಾದ ಉದ್ದೇಶದಿಂದ ಸರ್ಕಾರವು ಅರ್ಬನಲ್ ಮೊಬಿಲಿಟಿ ಮಿಷನ್ ಆರಂಭಿಸುತ್ತಿದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಪಾಲು 2030ರೊಳಗೆ ಶೇ. 60ರಷ್ಟಾದರೂ ಆಗಬೇಕು. 2036ರೊಳಗೆ ಈ ಪಾಲು ಶೇ. 80ಕ್ಕೆ ಹೆಚ್ಚಬೇಕು ಎಂಬ ಗುರಿ ಇದೆ. ಹಾಗೆಯೇ, 2030ರೊಳಗೆ ನಗರದ ಎಲ್ಲಾ ಸಂಚಾರದಲ್ಲಿ ಸೈಕ್ಲಿಂಗ್ ಮತ್ತು ವಾಕಿಂಗ್ ಇತ್ಯಾದಿ ಸಂಚಾರದ ಪಾಲು ಶೇ. 50ರಷ್ಟಾಗಬೇಕು ಎನ್ನುವ ಉದ್ದೇಶವು ಈ ಮಿಷನ್​ನ ಹಿಂದಿದೆ.

ಇದನ್ನೂ ಓದಿ: ದೇಶಾದ್ಯಂತ ಜನೌಷಧ ಕೇಂದ್ರಗಳಲ್ಲಿ ಆದ ಒಟ್ಟು ಬಿಸಿನೆಸ್ ಈ ವರ್ಷ 1,000 ಕೋಟಿ ರೂಗಿಂತಲೂ ಹೆಚ್ಚು

ಸೈಕ್ಲಿಂಗ್​ಗೆ ಉತ್ತೇಜನ…

ನಗರ ಭಾಗಗಳಲ್ಲಿ ಕೆಲಸಕ್ಕೆ ಹೋಗುವ ಜನರು ಬಸ್ ನಿಲ್ದಾಣದಲ್ಲಿ ಇಳಿದು ಆಟೋ ಮೂಲಕ ಕಚೇರಿಗೆ ಹೋಗುವುದೇ ಹೆಚ್ಚು. ಇದನ್ನು ತಪ್ಪಿಸಲು, ವಿವಿಧೆಡೆ ಪ್ರತ್ಯೇಕವಾದ ಸೈಕ್ಲಿಂಗ್ ಟ್ರ್ಯಾಕ್​ಗಳನ್ನು ನಿರ್ಮಿಸಲಾಗುತ್ತದೆ. ಬಾಡಿಗೆಗೆ ಸೈಕಲ್ ಸಿಗುವ ವ್ಯವಸ್ಥೆ ನಿರ್ಮಿಸಲಾಗುತ್ತದೆ. ನಗರ ಭಾಗದ ಶೇ. 56ರಷ್ಟು ಪ್ರಯಾಣಗಳು 5 ಕಿಮೀಗಿಂತ ಕಡಿಮೆ ದೂರದ್ದಾಗಿವೆ. ಹೀಗಾಗಿ, ಹೆಚ್ಚಿನ ಜನರು ಸೈಕಲ್ ಮೂಲಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್