China: ಚೀನಾದ ಒಂದು ಕಾನೂನಿಂದ ರಿಯಲ್ ಎಸ್ಟೇಟ್ ಅಲ್ಲೋಲಕಲ್ಲೋಲ; ಎವರ್ಗ್ರ್ಯಾಂಡ್ಗೆ 81 ಬಿಲಿಯನ್ ಡಾಲರ್ ನಷ್ಟ
Real Estate Sector: 2020ರಲ್ಲಿ ಚೀನಾ ಸರ್ಕಾರ ತಂದ ಒಂದು ರಿಯಲ್ ಎಸ್ಟೇಟ್ ಕಾನೂನಿನಿಂದಾಗಿ ಅಲ್ಲಿನ ಆ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಎಮರ್ ಗ್ರಾಂಡ್ ಎಂಬ ದೈತ್ಯ ಕಂಪನಿ 2 ವರ್ಷದಲ್ಲಿ 81 ಬಿಲಿಯನ್ ಡಾಲರ್ ಹಣ ನಷ್ಟ ಮಾಡಿಕೊಂಡಿದೆ.
ನವದೆಹಲಿ, ಜುಲೈ 19: ಮೂರು ವರ್ಷಗಳ ಹಿಂದೆ ಚೀನಾ ಸರ್ಕಾರ ಜಾರಿಗೆ ತಂದ ಒಂದು ಕಾನೂನಿನಿಂದ ಅಲ್ಲಿನ ರಿಯಲ್ ಎಸ್ಟೇಟ್ (China Real Estate) ಉದ್ಯಮವೇ ಅಲ್ಲೋಲಕಲ್ಲೋಲಗೊಂಡಂತಿದೆ. ಕಳೆದ ವರ್ಷ ಚೀನಾದ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿ ಕಂಟ್ರಿ ಗಾರ್ಡನ್ ಹೋಲ್ಡಿಂಗ್ಸ್ನ (Country Garden Holdings) ಲಾಭ ಗಳಿಕೆಯಲ್ಲಿ ಶೇ. 96ರಷ್ಟು ಕುಸಿತಗೊಂಡು, ಅದರ ಮಾಲಕಿ ಯಾಂಗ್ ಹುಯಾನ್ ಅವರ ಷೇರುಸಂಪತ್ತಿಗೆ ಭಾರೀ ಕತ್ತರಿಬಿದ್ದಿತ್ತು. ಇದೀಗ ಮತ್ತು ಚೀನೀ ಬಿಲ್ಡರ್ ಎವರ್ಗ್ರ್ಯಾಂಡ್ (Evergrande) ಎರಡು ವರ್ಷದಲ್ಲಿ 81 ಬಿಲಿಯನ್ ಡಾಲರ್ (ಸುಮಾರು 6.65 ಲಕ್ಷಕೋಟಿ ರೂ) ನಷ್ಟ ಮಾಡಿಕೊಂಡಿರುವುದು ವರದಿಯಾಗಿದೆ. ಬಿಬಿಸಿ ಬವರದಿ ಪ್ರಕಾರ 2021 ಮತ್ತು 2022ರಲ್ಲಿ ಎವರ್ಗ್ರಾಂಡ್ ಒಟ್ಟು 81 ಬಿಲಿಯಲ್ ಡಾಲರ್ನಷ್ಟು ನಷ್ಟ ಮಾಡಿಕೊಂಡಿದೆ.
ಎವರ್ಗ್ರಾಂಡ್ ಕಂಪನಿ 300 ಬಿಲಿಯನ್ ಡಾಲರ್ನಷ್ಟು (24 ಲಕ್ಷಕೋಟಿ ರುಪಾಯಿ) ಸಾಲ ಮಾಡಿಕೊಂಡಿದೆ. ರಿಯಲ್ ಎಸ್ಟೇಟ್ ವಲಯ ಕುಸಿದಿರುವ ಕಾರಣಕ್ಕೆ ಎವರ್ಗ್ರಾಂಡ್ ಸಂಸ್ಥೆಯ ಆದಾಯ ಕಳೆದ 2 ವರ್ಷದಲ್ಲಿ ಬಹಳ ಕಡಿಮೆ ಆಗಿದೆ. 2021ರಲ್ಲಿ 1.2 ಬಿಲಿಯನ್ ಡಾಲರ್ಗಳ ಅಂತಾರಾಷ್ಟ್ರೀಯ ಸಾಲಕ್ಕೆ ಬಡ್ಡಿ ಕಟ್ಟಲೂ ಅದಕ್ಕೆ ಸಾಧ್ಯವಾಗಿರಲಿಲ್ಲ. ಷೇರುಪೇಟೆಗಳ ಲಿಸ್ಟ್ಗಳಿಂದ ಎವರ್ಗ್ರಾಂಡ್ ಕಂಪನಿಯ ಷೇರನ್ನು ತೆಗೆದುಹಾಕಲಾಗಿತ್ತು. ಇಷ್ಟಕ್ಕೆಲ್ಲಾ ಕಾರಣವಾಗಿದ್ದು 2020ರಲ್ಲಿ ಚೀನಾ ಸರ್ಕಾರ ತಂದ ಹೊಸ ರಿಯಲ್ ಎಸ್ಟೇಟ್ ಕಾನೂನು.
ಇದನ್ನೂ ಓದಿ: HDFC: ಎಚ್ಡಿಎಫ್ಸಿ ಬ್ಯಾಂಕ್ ಭರ್ಜರಿ ಆದಾಯ; ಷೇರಿಗೆ ಒಳ್ಳೆಯ ಬೇಡಿಕೆ; ಈಗಲೇ ಹೂಡಿಕೆ ಮಾಡಿದರೆ ಭರ್ಜರಿ ಲಾಭದ ನಿರೀಕ್ಷೆ
ಚೀನಾದ ಹೊಸ ಕಾನೂನುಏನು ಹೇಳುತ್ತದೆ?
ಚೀನಾ ಸರ್ಕಾರ 2020ರಲ್ಲಿ ರಿಯಲ್ ಎಸ್ಟೇಟ್ ವಲಯದ ಸುಧಾರಣೆ ಹೆಸರಿನಲ್ಲಿ ಒಂದು ಕಾನೂನು ರೂಪಿಸಿತ್ತು. ಅದರಂತೆ, ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಗಳು ಮಾಡಬಹುದಾದ ಸಾಲಕ್ಕೆ ಮಿತಿ ಹಾಕುವುದು ಆ ನಿಯಮ. ಇದು ಅಲ್ಲಿಯ ರಿಯಲ್ ಎಸ್ಟೇಟ್ ವಲಯದ ಬುಡ ಅಲುಗಾಡಿಸಿತ್ತು.
ಎವರ್ಗ್ರಾಂಡ್ ಹಣಕಾಸು ಬಿಕ್ಕಟ್ಟಿಗೆ ಸಿಲುಕಿದ್ದು ಅಲ್ಲಿಯ ಇತರ ರಿಯಲ್ ಎಸ್ಟೇಟ್ ಕಂಪನಿಗಳಿಗೂ ಪರಿಣಾಮ ಬೀರಿತ್ತು. ಒಂದೆಡೆ ಏರುತ್ತಿರುವ ಸಾಲ, ಇನ್ನೊಂದೆಡೆ ಹೊಸ ಸಾಲ ಪಡೆಯಲು ಸಾಧ್ಯವಾಗದೇ ಇರುವುದು, ಮಗದೊಂದೆಡೆ ಜನರು ಮನೆ ಖರೀದಿಗೆ ಆಸಕ್ತಿ ತೋರದೇ ಇರುವುದು ಇವೆಲ್ಲವೂ ರಿಯಲ್ ಎಸ್ಟೇಟ್ ಕಂಪನಿಗಳನ್ನು ನಡುಗಿಸಿದ್ದವು. ಕೈಹಾಕಿದ್ದ ನಿರ್ಮಾಣ ಪ್ರಾಜೆಕ್ಟ್ಗಳನ್ನು ನಡುನೀರಿನಲ್ಲೇ ಬಿಟ್ಟು ಓಡಿ ಹೋಗಿದ್ದರು ಚೀನೀ ಬಿಲ್ಡರ್ಗಳು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ