AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GST Act: ನ್ಯಾಯಮಂಡಳಿ ನೇಮಕಾತಿ ನಿಯಮದಲ್ಲಿ ತಾಳಮೇಳ ತರಲು ಜಿಎಸ್​ಟಿ ಕಾಯ್ದೆ ತಿದ್ದುಪಡಿ ಮಸೂದೆ ತಂದ ಸರ್ಕಾರ

Nirmala Sitharaman Tells Lok Sabha: ಸೆಂಟ್ರಲ್ ಗೂಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್ ಕಾಯ್ದೆಗೆ ಎರಡನೇ ಬಾರಿ ತಿದ್ದುಪಡಿ ಮಾಡಿ ಸರ್ಕಾರ ಮಸೂದೆ ತಂದಿದೆ. ಟ್ರಿಬುನಲ್ ರಚನೆ ವಿಚಾರದಲ್ಲಿ ಮೇಲ್ಮನವಿ ನ್ಯಾಯಮಂಡಳಿ ಕಾಯ್ದೆ ಮತ್ತು ನ್ಯಾಯಮಂಡಳಿ ಸುಧಾರಣೆ ಕಾಯ್ದೆ ಮಧ್ಯೆ ವೈರುದ್ಧ್ಯತೆ ಇದೆ. ಸಿಜೆಐ ಚಂದ್ರಚೂಡ್ ಈ ವೈರುದ್ಧ್ಯತೆಗಳನ್ನು ಎತ್ತಿ ತೋರಿಸಿದ್ದರಿಂದ ಕಾಯ್ದೆಗೆ ತಿದ್ದುಪಡಿ ತಂದು ಪ್ರಸ್ತುಪಡಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

GST Act: ನ್ಯಾಯಮಂಡಳಿ ನೇಮಕಾತಿ ನಿಯಮದಲ್ಲಿ ತಾಳಮೇಳ ತರಲು ಜಿಎಸ್​ಟಿ ಕಾಯ್ದೆ ತಿದ್ದುಪಡಿ ಮಸೂದೆ ತಂದ ಸರ್ಕಾರ
ನಿರ್ಮಲಾ ಸೀತಾರಾಮನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 20, 2023 | 4:22 PM

ನವದೆಹಲಿ, ಡಿಸೆಂಬರ್ 20: ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ಮಸೂದೆ (Central Goods and Services Tax Amendment Bill) ತರಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾರಣ ಬಿಚ್ಚಿಟ್ಟಿದ್ದಾರೆ. ಸಿಜಿಎಸ್​ಟಿ 2017 ಮತ್ತು ನ್ಯಾಯಮಂಡಳಿ ಸುಧಾರಣೆ ಕಾಯ್ದೆ 2021 (Tribunal Reforms Act) ಮಧ್ಯೆ ಇರುವ ಕೆಲ ವೈರುದ್ಧ್ಯಗಳನ್ನು ಸಿಜೆಐ ಡಿವೈ ಚಂದ್ರಚೂಡ್ (CJI DY Chandrachud) ಎತ್ತಿತೋರಿಸಿದರು. ಈ ದೋಷಗಳನ್ನು ನಿವಾರಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಗೆ ತಿಳಿಸಿದ್ದಾರೆ.

ಈ ಎರಡು ಕಾಯ್ದೆಗಳಲ್ಲಿ ಏನು ವೈರುದ್ಧ್ಯ?

ಸಿಜಿಎಸ್​ಟಿ ಕಾಯ್ದೆ ಪ್ರಕಾರ ಮೇಲ್ಮನವಿ ನ್ಯಾಯಮಂಡಳಿಯ (GST Appellate tribunal) ಅಧ್ಯಕ್ಷ ಸ್ಥಾನಕ್ಕೆ ವಯೋಮಿತಿ 67 ವರ್ಷ ಇದ್ದರೆ, ಸದಸ್ಯರಿಗೆ 65 ವರ್ಷ ಇದೆ. ಟ್ರಿಬುನಲ್ ರಿಫಾರ್ಮ್ಸ್ ಆ್ಯಕ್ಟ್ 2021 ಪ್ರಕಾರ ಅಧ್ಯಕ್ಷ ಮೇಲ್ಮನವಿ ನ್ಯಾಯಮಂಡಳಿ ಸ್ಥಾನ ಮತ್ತು ಸದಸ್ಯ ಸ್ಥಾನಗಳಿಗೆ ಕ್ರಮವಾಗಿ 70 ಮತ್ತು 67 ವರ್ಷ ಇದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ತಮ್ಮ ಆಡಳಿತ ಸಿಬ್ಬಂದಿ ಮೂಲಕ ಮೇಲಿನ ವೈರುದ್ದ್ಯ ಅಂಶಗಳ ಬಗ್ಗೆ ಹಣಕಾಸು ಸಚಿವಾಲಯದ ಗಮನಕ್ಕೆ ತಂದರಂತೆ.

ಇದನ್ನೂ ಓದಿ: RBI: ಭಾರತದ ಫಾರೆಕ್ಸ್ ದರ ವ್ಯವಸ್ಥೆ ಮರುವರ್ಗೀಕರಿಸಿದ ಐಎಂಎಫ್​ನ ಕ್ರಮಕ್ಕೆ ಭಾರತ ಅಸಮಾಧಾನ

ಸಿಜಿಎಸ್​ಟಿ ಕಾಯ್ದೆಯ ಸೆಕ್ಷನ್ 100ಯಲ್ಲಿ ಜಿಎಸ್​ಟಿ ಮೇಲ್ಮನವಿ ನ್ಯಾಯಮಂಡಳಿಯ ರಚನೆ ಬಗ್ಗೆ ನಿರ್ದೇಶನ ಇದೆ. ಆ ಟ್ರಿಬಿನಲ್ ಸದಸ್ಯ ಸ್ಥಾನಕ್ಕೆ ಅರ್ಹತಾ ಮಾನದಂಡಗಳನ್ನು ತಿಳಿಸಲಾಗಿದೆ. 2019ರಲ್ಲಿ ಮದ್ರಾಸ್ ಹೈಕೋರ್ಟ್ ಜಿಎಸ್​ಟಿ ಅಪೆಲ್ಲೇಟ್ ಟ್ರಿಬಿನಲ್ ರಚನೆಯನ್ನು ರದ್ದುಗೊಳಿಸಿತ್ತು. ಅದರ ತಾಂತ್ರಿಕ ಸದಸ್ಯರು ನ್ಯಾಯಾಂಗ ಸದಸ್ಯರಿಗಿಂತ ಹೆಚ್ಚಿನ ಸಂಖ್ಯೆಯಯಲ್ಲಿದ್ದರಿಂದ ಕೋರ್ಟ್ ಈ ತೀರ್ಪು ಹೊರಡಿಸಿತ್ತು.

2021ರ ಆಗಸ್ಟ್ ತಿಂಗಳಲ್ಲಿ ಟ್ರಿಬುನಲ್ ರಿಫಾರ್ಮ್ಸ್ ಆ್ಯಕ್ಟ್ 2021 ಅನ್ನು ಜಾರಿಗೆ ತರಲಾಯಿತು. ಎಲ್ಲಾ ನ್ಯಾಯಮಂಡಳಿತಗಳ ನೇಮಕಾತಿ ಪ್ರಕ್ರಿಯೆ ಮತ್ತು ಅರ್ಹತಾ ಮಾನದಂಡಗಳನ್ನು ಪ್ರಮಾಣೀಕೃತಗೊಳಿಸಲು ಈ ಕಾಯ್ದೆ ತರಲಾಗಿತ್ತು.

ಇದನ್ನೂ ಓದಿ: RBI Circular: ಎಐಎಫ್ ಮೇಲೆ ಹೂಡಿಕೆ ಮಾಡಲು ಬ್ಯಾಂಕುಗಳಿಗೆ ಆರ್​ಬಿಐ ನಿರ್ಬಂಧ; ಸಾಲ ತೀರಿಕೆಗೆ ಸಾಲ ಸಿಗುವುದು ಇನ್ಮುಂದೆ ಕಷ್ಟ

ಇನ್ನು, ಕೋರ್ಟ್ ತೀರ್ಪುಗಳ ಆಧಾರದ ಮೇಲೆ ಜಿಎಸ್​ಟಿ ಮೇಲ್ಮನವಿ ನ್ಯಾಯಮಂಡಳಿಗೆ ಅಗತ್ಯ ಬದಲಾವಣೆ ತರುವ ಬಗ್ಗೆ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಾಯಿತು. ಅದಾದ ಬಳಿಕ ಹಣಕಾಸು ಕಾಯ್ದೆ 2023 ಮೂಲಕ ಸಿಜಿಎಸ್​ಟಿ ಕಾಯ್ದೆಯ ಸೆಕ್ಷನ್ 110ಕ್ಕೆ ತಿದ್ದುಪಡಿ ಮಾಡಲಾಯಿತು.

ಇದಾದ ಬಳಿಕ ಮುಖ್ಯ ನ್ಯಾಯಮೂರ್ತಿಗಳು ಟ್ರಿಬುನಲ್ ರಚನೆ ವಿಚಾರದಲ್ಲಿ ಮೇಲ್ಮನವಿ ನ್ಯಾಯಮಂಡಳಿ ಕಾಯ್ದೆ ಮತ್ತು ನ್ಯಾಯಮಂಡಳಿ ಸುಧಾರಣೆ ಕಾಯ್ದೆ ಮಧ್ಯೆ ಭಿನ್ನತೆ ಇರುವುದನ್ನು ಎತ್ತಿತೋರಿಸಿದ್ದಾರೆ. ಹೀಗಾಗಿ ಎರಡನೇ ಬಾರಿ ಮಸೂದೆಗೆ ತಿದ್ದುಪಡಿ ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ