ರೋಗಿಗಳಿಗೆ ಸಾಕಷ್ಟು ನೆಮ್ಮದಿಯ ವಿಚಾರ: ಈ ಬ್ರಾಂಡೆಡ್ ಔಷಧಿಗಳ ಬೆಲೆ ಅರ್ಧದಷ್ಟು ಕಡಿಮೆಯಾಗುತ್ತದೆ! ಇದಕ್ಕೆ ಕಾರಣವೇನು ಗೊತ್ತಾ?

ಸಾಮಾನ್ಯವಾಗಿ ಒಮ್ಮೆ ಔಷಧವು ಜಾಗತಿಕವಾಗಿ ತನ್ನ ಏಕಸ್ವಾಮ್ಯವನ್ನು ಕಳೆದುಕೊಂಡರೆ, ಜೆನೆರಿಕ್ ಆವೃತ್ತಿಗಳ ಪ್ರವೇಶದೊಂದಿಗೆ ಬೆಲೆಗಳು 90% ರಷ್ಟು ಕಡಿಮೆಯಾಗುತ್ತವೆ.

ರೋಗಿಗಳಿಗೆ ಸಾಕಷ್ಟು ನೆಮ್ಮದಿಯ ವಿಚಾರ: ಈ ಬ್ರಾಂಡೆಡ್ ಔಷಧಿಗಳ ಬೆಲೆ ಅರ್ಧದಷ್ಟು ಕಡಿಮೆಯಾಗುತ್ತದೆ! ಇದಕ್ಕೆ ಕಾರಣವೇನು ಗೊತ್ತಾ?
ಈ ಬ್ರಾಂಡೆಡ್ ಔಷಧಿಗಳ ಬೆಲೆ ಅರ್ಧದಷ್ಟು ಕಡಿಮೆಯಾಗುತ್ತದೆ
Follow us
ಸಾಧು ಶ್ರೀನಾಥ್​
|

Updated on: May 14, 2023 | 7:40 PM

ಪೇಟೆಂಟ್ ಆಡಳಿತದಿಂದ (patent regime) ಹೊರಬರುವ ಅನೇಕ ಔಷಧಿಗಳ (Medicines) ಬೆಲೆಯು 50 % ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಒಂದು ವರ್ಷದ ನಂತರ ಸಗಟು ಬೆಲೆ ಸೂಚ್ಯಂಕದಲ್ಲಿನ ಬದಲಾವಣೆಗೆ ಅನುಸಾರವಾಗಿ ಇವುಗಳ ಮಾರುಕಟ್ಟೆ ದರ (MRP) ಬದಲಾಗುತ್ತದೆ. ಭಾರತದಲ್ಲಿ ಪೇಟೆಂಟ್ (ಬೌದ್ಧಿಕ ಹಕ್ಕುಸ್ವಾಮ್ಯ) ರಕ್ಷಣೆ ಕಳೆದುಕೊಂಡ ಕೂಡಲೇ ಅಂತಹ ಪೇಟೆಂಟ್ ಹೊಂದಿರುವ ಔಷಧಿಗಳ ಬೆಲೆ ಅರ್ಧಕ್ಕೆ ಅರ್ಧದಷ್ಟು ಕಡಿಮೆಯಾಗಲಿದೆ ಇದರಿಂದ ರೋಗಿಗಳಿಗೆ ಸಾಕಷ್ಟು ನೆಮ್ಮದಿ ಸಿಗಲಿದೆ. ಪೇಟೆಂಟ್ ಕಳೆದುಕೊಂಡಿರುವ ಔಷಧದ ಬೆಲೆಯು (branded medicines) 50 % ರಷ್ಟು ಕಡಿಮೆಯಾಗಬಹುದು ಮತ್ತುಒಂದು ವರ್ಷದ ನಂತರ ಸಗಟು ಬೆಲೆ ಸೂಚ್ಯಂಕದಲ್ಲಿನ ಬದಲಾವಣೆಗೆ ಅನುಸಾರವಾಗಿ ಇವುಗಳ ಮಾರುಕಟ್ಟೆ ದರ (MRP) ಬದಲಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ನೆಮ್ಮದಿ ಸಿಗಲಿದೆ. ಏಕೆಂದರೆ ಸರ್ಕಾರ ಔಷಧ ಬೆಲೆ ನಿಯಂತ್ರಣ ಆದೇಶಕ್ಕೆ ತಿದ್ದುಪಡಿ ತಂದಿದೆ. ಪೇಟೆಂಟ್ ರಕ್ಷಣೆ ಮುಗಿದ ನಂತರ ಔಷಧಗಳ ಹೊಸ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ.

ವಾಸ್ತವವಾಗಿ, ಸಾಮಾನ್ಯವಾಗಿ ಒಮ್ಮೆ ಔಷಧವು ಜಾಗತಿಕವಾಗಿ ತನ್ನ ಏಕಸ್ವಾಮ್ಯವನ್ನು ಕಳೆದುಕೊಂಡರೆ, ಜೆನೆರಿಕ್ ಆವೃತ್ತಿಗಳ ಪ್ರವೇಶದೊಂದಿಗೆ ಬೆಲೆಗಳು 90% ರಷ್ಟು ಕಡಿಮೆಯಾಗುತ್ತವೆ. ಸರ್ಕಾರದ ನಿರ್ಧಾರವು ಬಹುರಾಷ್ಟ್ರೀಯ ಫಾರ್ಮಾ ಮೇಜರ್‌ಗಳು ಪೇಟೆಂಟ್‌ನಿಂದ ಹೊರಗುಳಿಯುವ ಬ್ಲಾಕ್‌ಬಸ್ಟರ್ ಔಷಧಿಗಳ ಮೇಲೆ ವಿಧಿಸಬಹುದಾದ ಬೆಲೆಗಳ ಬಗ್ಗೆ ಸ್ಪಷ್ಟತೆಯನ್ನು ಒದಗಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸರ್ಕಾರವು ಇದನ್ನು ಪರಿಹರಿಸಲು ಸಾಧ್ಯವಾಗದೆ ತಲೆಬಿಸಿ ಸಮಸ್ಯೆಯಾಗಿತ್ತು.

ಔಷಧಿಗಳ ಬೆಲೆ ಕಡಿಮೆಯಾಗಲಿದೆ

ಕಳೆದ ಕೆಲವು ವರ್ಷಗಳಿಂದ ವಿಲ್ಡಾಗ್ಲಿಪ್ಟಿನ್ ಮತ್ತು ಸಿಟಾಗ್ಲಿಪ್ಟಿನ್ ಸೇರಿದಂತೆ ಜನಪ್ರಿಯ ಮಧುಮೇಹ ತಡೆ ಔಷಧಿಗಳ ಬೆಲೆಗಳು ಮತ್ತು ವಲ್ಸಾರ್ಟನ್ ಸೇರಿದಂತೆ ಹೃದಯ ಔಷಧಿಗಳ ಬೆಲೆಗಳು ತಮ್ಮ ಏಕಸ್ವಾಮ್ಯವನ್ನು ಕಳೆದುಕೊಂಡ ನಂತರ ಕುಸಿದಿವೆ. ತರುವಾಯ, ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು ಎರಡು ಔಷಧಿಗಳ ಕೈಗೆಟುಕುವಿಕೆ ಮತ್ತು ಪ್ರವೇಶವನ್ನು ಸುಧಾರಿಸಲು ಸೀಲಿಂಗ್ ಬೆಲೆಗಳನ್ನು ಸಹ ನಿಗದಿಪಡಿಸಿತು.

ಇದನ್ನೂ ಓದಿ: ಮೋದಿ ಸರ್ಕಾರದಿಂದ ಜನಸಾಮಾನ್ಯರಿಗೆ ಪರಿಹಾರ! ಅಗತ್ಯ ಔಷಧಿಗಳ ಬೆಲೆ ಏಪ್ರಿಲ್‌ನಿಂದ ಕಡಿಮೆ!

ಹೆಚ್ಚುವರಿಯಾಗಿ, ಪೇಟೆಂಟ್ ಅವಧಿ ಮುಗಿದ ನಂತರ, ಆರೋಗ್ಯದ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಔಷಧಿಗಳ ಪ್ರವೇಶವನ್ನು ಸುಧಾರಿಸಲು, ಸಹಾಯ ಮಾಡಲು ಉತ್ತಮ-ಗುಣಮಟ್ಟದ ಜೆನೆರಿಕ್ಸ್ ಮಾರುಕಟ್ಟೆಯನ್ನು ಪ್ರವೇಶಿಸಬಹುದು. ರೋಗಿಗಳಿಗೆ ಪ್ರತಿ ಟ್ಯಾಬ್ಲೆಟ್ (ಔಷಧ) ವೆಚ್ಚವು ಕಡಿಮೆಯಾಗುತ್ತದೆ ಮತ್ತು ಮಾರುಕಟ್ಟೆಯಲ್ಲಿ ಒಳ್ಳೆಯ ಚಿಕಿತ್ಸೆ ಲಭ್ಯವಾಗತೊಡಗುತ್ತದೆ. ನಂತರ ಅದನ್ನು ದೊಡ್ಡ ಸಂಖ್ಯೆಯ ರೋಗಿಗಳಿಗೆ ಶಿಫಾರಸು ಮಾಡಬಹುದು. ಇದು ಸಾಮಾನ್ಯವಾಗಿ ನವೀನ ಔಷಧಗಳ ಮಾರುಕಟ್ಟೆಗೆ ವರವಾಗಲಿದೆ.

ಪೇಟೆಂಟ್ ಔಷಧಿಗಳಿಗೆ ನೀತಿಯನ್ನು ದೃಢೀಕರಿಸಲಾಗಿಲ್ಲ

ಪೇಟೆಂಟ್ ಔಷಧಿಗಳ ಕಲ್ಪನೆಗಳಲ್ಲಿನ ವ್ಯತ್ಯಾಸದಿಂದಾಗಿ, ನೀತಿಯನ್ನು ಇನ್ನೂ ದೃಢೀಕರಿಸಲಾಗಿಲ್ಲ. ಹಿಂದೆ, ಸರ್ಕಾರವು ಬೆಲೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಹಲವಾರು ಸಮಿತಿಗಳನ್ನು ರಚಿಸಿತು ಮತ್ತು ಮಾತುಕತೆ ಮತ್ತು ನಮೂದಿತ ಬೆಲೆ ಸೇರಿದಂತೆ ವಿವಿಧ ವಿಧಾನಗಳನ್ನು ಚರ್ಚಿಸಿತು. ಮಾತುಕತೆಯ ನಂತರವೂ ಹೆಚ್ಚಿನ ಜನಸಂಖ್ಯೆಗೆ ಪೇಟೆಂಟ್ ಔಷಧಿಗಳ ಬೆಲೆ ಹೆಚ್ಚಾಗಿರುವುದು ಕಂಡುಬಂದಿದೆ. ಅದನ್ನು ಖರೀದಿಸಲು ಕಷ್ಟವಾಗುತ್ತದೆ ಎಂದು ತಜ್ಞರು ಅಭಿಪ್ರಾಯ/ ಆತಂಕವನ್ನು ವ್ಯಕ್ತಪಡಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ