UPI Linking With Credit Card: ಯುಪಿಐ ಜತೆಗೆ ಕ್ರೆಡಿಟ್ ಕಾರ್ಡ್​ ಜೋಡಣೆ ಬಗ್ಗೆ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದೇನು?

ಯುಪಿಐ ಜತೆಗೆ ಕ್ರೆಡಿಟ್​ ಕಾರ್ಡ್​ಗಳನ್ನೂ ಜೋಡಣೆ ಮಾಡುವುದಕ್ಕೆ ಅನುಮತಿಸಲಾಗುವುದು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ದ್ವೈಮಾಸಿಕ ಹಣಕಾಸು ನೀತಿ ಸಭೆಯ ನಂತರ ತಿಳಿಸಿದ್ದಾರೆ.

UPI Linking With Credit Card: ಯುಪಿಐ ಜತೆಗೆ ಕ್ರೆಡಿಟ್ ಕಾರ್ಡ್​ ಜೋಡಣೆ ಬಗ್ಗೆ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದೇನು?
ಶಕ್ತಿಕಾಂತ ದಾಸ್
Follow us
TV9 Web
| Updated By: Srinivas Mata

Updated on: Jun 08, 2022 | 3:53 PM

ಯುನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್ (UPI) ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಪ್ರಮುಖ ಬದಲಾವಣೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೂನ್​ 8ರ ಬುಧವಾರದಂದು ಕ್ರೆಡಿಟ್ ಕಾರ್ಡ್‌ಗಳನ್ನು ಸಹ ಯುಪಿಐ ಖಾತೆಗಳಿಗೆ ಜೋಡಣೆ ಮಾಡಲು ಅನುಮತಿಸಲಾಗುವುದು ಎಂದು ಹೇಳಿದೆ. ಸ್ಥಳೀಯ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಜೋಡಣೆ ಮಾಡಲು ಅನುಮತಿಸುವುದರೊಂದಿಗೆ ಈ ಅನುಷ್ಠಾನವು ಪ್ರಾರಂಭವಾಗುತ್ತದೆ. ಆ ನಂತರ ವೀಸಾ ಮತ್ತು ಮಾಸ್ಟರ್‌ಕಾರ್ಡ್‌ನಂತಹ ಇತರ ಕಾರ್ಡ್ ನೆಟ್‌ವರ್ಕ್‌ಗಳು ಸಹ ಜೋಡಣೆ ಮಾಡಲಾಗುವುದು. ಇಲ್ಲಿಯವರೆಗೆ ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್‌ಗಳನ್ನು ಮಾತ್ರ ಯುಪಿಐಗೆ ಜೋಡಣೆ ಮಾಡಬಹುದಾಗಿತ್ತು. ಇದೀಗ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ತಮ್ಮ ಹಣಕಾಸು ನೀತಿ ಭಾಷಣದಲ್ಲಿ ಈ ಘೋಷಣೆ ಮಾಡಿದ್ದಾರೆ. “ಬಳಕೆದಾರರ ಡೆಬಿಟ್ ಕಾರ್ಡ್‌ಗಳ ಮೂಲಕ ಉಳಿತಾಯ ಅಥವಾ ಚಾಲ್ತಿ ಖಾತೆಗಳನ್ನು ಜೋಡಣೆ ಮಾಡುವುದರೊಂದಿಗೆ ಯುಪಿಐ ವಹಿವಾಟುಗಳನ್ನು ಸುಗಮಗೊಳಿಸುತ್ತದೆ.

ಈಗ ಯುಪಿಐ ಪ್ಲಾಟ್‌ಫಾರ್ಮ್‌ನಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಜೋಡಣೆ ಮಾಡುವುದಕ್ಕೆ ಅನುಮತಿಸಲು ಪ್ರಸ್ತಾಪಿಸಲಾಗಿದೆ. ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐಗೆ ಜೋಡಣೆ ಮಾಡಲಾಗುವುದು,” ಎಂದು ಅವರು ಹೇಳಿದರು. “ಇದು ಬಳಕೆದಾರರಿಗೆ ಹೆಚ್ಚುವರಿ ಅನುಕೂಲವನ್ನು ಒದಗಿಸುತ್ತದೆ ಮತ್ತು ಡಿಜಿಟಲ್ ಪಾವತಿಗಳ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ,” ಎಂದು ದಾಸ್ ಹೇಳಿದರು. ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಮಾಡಿದ ಯುಪಿಐ ವಹಿವಾಟುಗಳಿಗೆ ವ್ಯಾಪಾರಿ ರಿಯಾಯಿತಿ ದರವನ್ನು (MDR) ಹೇಗೆ ಅನ್ವಯಿಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರತಿ ವಹಿವಾಟಿಗೆ ವ್ಯಾಪಾರಿಯು ವಹಿವಾಟಿನ ಮೊತ್ತದ ನಿರ್ದಿಷ್ಟ ಶೇಕಡಾವಾರು ಮೊತ್ತವನ್ನು ಪಾವತಿಸುತ್ತಾರೆ, ನಂತರ ಅದನ್ನು ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಪೂರೈಕೆದಾರರ ಮಧ್ಯೆ ವಿಂಗಡಿಸಲಾಗುತ್ತದೆ. ಜನವರಿ 1, 2020ರಂದು ಜಾರಿಗೆ ಬಂದ ರೂಢಿಯ ಪ್ರಕಾರ, ಯುಪಿಐ ಮತ್ತು RuPay ಶೂನ್ಯ-MDR ಅನ್ನು ವಿಧಿಸುತ್ತವೆ, ಅಂದರೆ ಈ ವಹಿವಾಟುಗಳಿಗೆ ಯಾವುದೇ ಶುಲ್ಕಗಳನ್ನು ಅನ್ವಯಿಸುವುದಿಲ್ಲ. ದೇಶದಾದ್ಯಂತ ವ್ಯಾಪಾರಿಗಳು ಯುಪಿಐ ಅನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಶೇ 2ರಿಂದ 3ರ ಮಧ್ಯೆ MDR

ಮತ್ತೊಂದೆಡೆ, ಕ್ರೆಡಿಟ್ ಕಾರ್ಡ್‌ಗಳು ಶೇ 2ರಿಂದ 3ರ ಮಧ್ಯೆ ಅತ್ಯಧಿಕ MDR ಆಕರ್ಷಿಸುತ್ತವೆ. ಯುಪಿಐಗೆ ಜೋಡಣೆ ಮಾಡಲಾದ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಮಾಡಿದ ವಹಿವಾಟುಗಳಿಗೆ MDR ಅನ್ನು ಬಿಡಬೇಕೇ ಎಂಬುದರ ಕುರಿತು ಸ್ಪಷ್ಟತೆ ಅಗತ್ಯವಿದೆ. ಅಲ್ಲದೆ, ಕ್ರೆಡಿಟ್ ಕಾರ್ಡ್‌ಗಳು ಎರಡು ಅಂಶಗಳ ದೃಢೀಕರಣವನ್ನು ಒಳಗೊಂಡಂತೆ ಹೆಚ್ಚಿನ ಭದ್ರತಾ ಕ್ರಮಗಳನ್ನು ಒಳಗೊಂಡಿರುತ್ತದೆ. ಇದನ್ನು ಯುಪಿಐ ವಹಿವಾಟುಗಳಿಗೆ ಕಾರ್ಯಗತಗೊಳಿಸಲು ಕಷ್ಟಕರವಾಗಿರುತ್ತದೆ. ಯುಪಿಐ ಅನ್ನು ರುಪೇ ಜೊತೆಗೆ ಇತರ ಕ್ರೆಡಿಟ್ ಕಾರ್ಡ್‌ಗಳನ್ನು ಜೋಡಣೆ ಮಾಡುವ ಎಂಡಿಆರ್ ಮತ್ತು ಇತರ ಶುಲ್ಕ ರಚನೆಗಳ ಕುರಿತು, ಆರ್‌ಬಿಐ ಡೆಪ್ಯೂಟಿ ಗವರ್ನರ್ ಟಿ. ರವಿಶಂಕರ್ ಅವರು ನೀತಿ ಪ್ರಕಟಣೆ ನಂತರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದು, “ಬೆಲೆ ರಚನೆಯ ಬಗ್ಗೆ ಯೋಚಿಸುವುದಾದರೆ ಇದು ಚೌಕಟ್ಟಿನಿಂದ ಆಚೆಗೆ ಹೋಗುತ್ತದೆ.”

“ಯುಪಿಐಗೆ ಕ್ರೆಡಿಟ್ ಕಾರ್ಡ್‌ಗಳನ್ನು ಜೋಡಣೆ ಮಾಡುವ ಮೂಲ ಉದ್ದೇಶವು ಗ್ರಾಹಕರಿಗೆ ವ್ಯಾಪಕ ಆಯ್ಕೆಯ ಪಾವತಿಗಳನ್ನು ಒದಗಿಸುವುದು. ಅದರ ಬೆಲೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನಾವು ನೋಡಬೇಕಾಗಿದೆ. ಏಕೆಂದರೆ ಅದು ಬ್ಯಾಂಕ್‌ಗಳು ಮತ್ತು ಇತರ ಘಟಕಗಳು ಮಾಡಬೇಕಾಗಿದೆ. ಈ ಹಂತದಲ್ಲಿ ನಾವು ವ್ಯವಸ್ಥೆಯನ್ನು ಪರಿಚಯಿಸುತ್ತೇವೆ,” ಎಂದು ಅವರು ಹೇಳಿದರು. ಆರ್‌ಬಿಐ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 2020ರಲ್ಲಿ ಭಾರತದ ಕಾರ್ಡ್ ಮಾರುಕಟ್ಟೆಯಲ್ಲಿ ಶೇ 60ರಷ್ಟು ಪಾಲನ್ನು ವಶಪಡಿಸಿಕೊಳ್ಳುವಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಕಾರ್ಡ್ ನೆಟ್‌ವರ್ಕ್ ರುಪೇ ಯಶಸ್ವಿಯಾಗಿದೆ. ಆದರೆ ಇದರಲ್ಲಿ ಡೆಬಿಟ್ ಕಾರ್ಡ್‌ಗಳು ಮುಂಚೂಣಿಯಲ್ಲಿವೆ. ಆದರೆ ಕ್ರೆಡಿಟ್ ಕಾರ್ಡ್ ಜಾಗದಲ್ಲಿ ವೀಸಾ ಮತ್ತು ಮಾಸ್ಟರ್‌ಕಾರ್ಡ್ ಮುನ್ನಡೆ ಸಾಧಿಸುತ್ತವೆ.

ಈ ವರ್ಷದಲ್ಲಿ 1-ಟ್ರಿಲಿಯನ್ ಡಾಲರ್ ಗುರುತನ್ನು ದಾಟಿದೆ

ಯುಪಿಐನಲ್ಲಿ ಮುಂಚೂಣಿಯಲ್ಲಿ ಇರುವ ಫೋನ್​ಪೇ ಮತ್ತು ಬಿಜಿಸಿಯ ಇತ್ತೀಚಿನ ವರದಿಯ ಪ್ರಕಾರ, ಡಿಜಿಟಲ್ ಮರ್ಚೆಂಟ್ ಪಾವತಿಗಳು ಮುಂದಿನ ಐದು ವರ್ಷಗಳಲ್ಲಿ 7 ಪಟ್ಟು ಬೆಳವಣಿಗೆಯನ್ನು ಸಾಧಿಸುತ್ತವೆ. ಸದ್ಯಕ್ಕೆ ಇರುವ 30- 40 ಸಾವಿರ ಕೋಟಿ ಯುಎಸ್​ಡಿಯಿಂದ 2026ರ ವೇಳೆಗೆ 2.5ರಿಂದ 2.7 ಲಕ್ಷ ಕೋಟಿ ಡಾಲರ್​ಗೆ ತಲಪಬಹುದು ಎನ್ನುತ್ತವೆ. ಹಣಕಾಸು ವರ್ಷ 2022ರಲ್ಲಿ ಭಾರತದಲ್ಲಿನ ಒಟ್ಟಾರೆ ರೀಟೇಲ್ ಡಿಜಿಟಲ್ ಪಾವತಿಗಳಲ್ಲಿ ಯುಪಿಐ ಪಾಲು ಶೇ 60ರಷ್ಟಿದೆ. ಈ ವರ್ಷದಲ್ಲಿ ಪಾವತಿ ವ್ಯವಸ್ಥೆಯು ವಹಿವಾಟಿನ ಮೌಲ್ಯಗಳಲ್ಲಿ 1-ಟ್ರಿಲಿಯನ್ ಡಾಲರ್ ಗುರುತನ್ನು ದಾಟಿದೆ.

ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐ ಖಾತೆಗಳಿಗೆ ಜೋಡಣೆ ಮಾಡಲು ಅನುಮತಿಸುವ ಕ್ರಮವು ಕಳೆದ ಎರಡು ವರ್ಷಗಳಲ್ಲಿ ಯುಪಿಐ ಅಳವಡಿಕೆಯು ತೀವ್ರವಾಗಿ ಹೆಚ್ಚುತ್ತಿರುವ ಸಮಯದಲ್ಲಿ ಬಂದಿದೆ. ಯುಪಿಐಗೆ ಸದ್ಯಕ್ಕೆ 26 ಕೋಟಿ ವಿಶಿಷ್ಟ ಬಳಕೆದಾರರನ್ನು ಮತ್ತು 5 ಕೋಟಿ ವ್ಯಾಪಾರಿಗಳನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಂದಿದೆ ಎಂದು ದಾಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. 2022ರ ಮೇ ತಿಂಗಳಿನಲ್ಲಿ 10.40 ಲಕ್ಷ ಕೋಟಿ ರೂಪಾಯಿ ಮೊತ್ತದ 594.63 ಕೋಟಿ ವಹಿವಾಟುಗಳನ್ನು ಯುಪಿಐ ಮೂಲಕ ಪ್ರೊಸೆಸ್ ಮಾಡಲಾಗಿದೆ. ಏಪ್ರಿಲ್‌ನಲ್ಲಿ ಇದ್ದ 558 ಕೋಟಿಯಿಂದ ಏರಿಕೆಯಾಗಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ. ವಹಿವಾಟಿನ ಮೌಲ್ಯಗಳು ಈ ತಿಂಗಳಲ್ಲಿ ಮೊದಲ ಬಾರಿಗೆ 10 ಲಕ್ಷ ಕೋಟಿ ರೂಪಾಯಿ ದಾಟಿದೆ.

ಮೂರು ವರ್ಷಗಳಲ್ಲಿ ದಿನಕ್ಕೆ 100 ಕೋಟಿ ಡಾಲರ್

ಎನ್​ಪಿಸಿಐ ಎಲ್ಲವನ್ನೂ ಒಳಗೊಂಡ ಸಂಸ್ಥೆಯಾಗಿದ್ದು, ಯುಪಿಐ, RuPay, ಭಾರತ್ ಬಿಲ್ ಪೇ ಇತ್ಯಾದಿಗಳನ್ನು ನಿರ್ವಹಿಸುತ್ತದೆ. ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ದಿನಕ್ಕೆ 100 ಕೋಟಿ ಡಾಲರ್ ಮೌಲ್ಯದ ಯುಪಿಐ ವಹಿವಾಟಿನ ಗುರಿಯನ್ನು ಹೊಂದಿದೆ. ಎನ್​ಪಿಸಿಐ ಎರಡು ಪ್ರಮುಖ ಕಾರ್ಯಗಳನ್ನು ಹೊಂದಿದೆ-ಫೀಚರ್ ಫೋನ್‌ಗಳಲ್ಲಿ ಮತ್ತು ಸ್ಮಾರ್ಟ್‌ಫೋನ್‌ಗಳಿಗಾಗಿ ಆಫ್‌ಲೈನ್ ವಿಧಾನದಲ್ಲಿ ಯುಪಿಐ ಅನ್ನು ಸಕ್ರಿಯಗೊಳಿಸುವುದು. ಫೀಚರ್ ಫೋನ್‌ಗಳಿಗಾಗಿ UPI 123Pay ಅನ್ನು ಪರೀಕ್ಷಿಸಲಾಗುತ್ತಿದೆ. ಯುಪಿಐ ಲೈಟ್ ಆಫ್‌ಲೈನ್ ವಿಧಾನದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತು ಎನ್​ಪಿಸಿಐ ಸುತ್ತೋಲೆಯನ್ನು ಹೊರಡಿಸಿದೆ. ಎನ್​ಪಿಸಿಐ ಕೂಡ ಯುಪಿಐ ಮೂಲಕ ಗ್ರಾಹಕರು ಕ್ರೆಡಿಟ್ ಲೈನ್‌ಗಳನ್ನು ಬಳಸಲು ಅನುಮತಿಸುವ ಉತ್ಪನ್ನದ ಮೇಲೆ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿದುಬಂದಿದ್ದು, ಆದರೆ ಉತ್ಪನ್ನವನ್ನು ಎಂದಿಗೂ ಪ್ರಾರಂಭಿಸಿಲ್ಲ.

ಯುಪಿಐ ವಹಿವಾಟುಗಳು ಮಾರುಕಟ್ಟೆ ಬಹುಪಾಲು ಪಾಲನ್ನು ಹೊಂದಿರುವ ಮೂರು ಪ್ರಮುಖ ಕಂಪೆನಿಗಳ ಪ್ರಾಬಲ್ಯ ಹೊಂದಿವೆ; ಅವು ಯಾವುವೆಂದರೆ, ಫೋನ್​ಪೇ (PhonePe), ಗೂಗಲ್​ ಪೇ (Google Pay) ಮತ್ತು ಪೇಟಿಎಂ (Paytm) ಪಾವತಿ ಬ್ಯಾಂಕ್. ಫೋನ್​ಪೇ (PhonePe) ಮಾಸಿಕ ವಹಿವಾಟುಗಳಲ್ಲಿ ಶೇ 47ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಆದರೆ ಗೂಗಲ್​ ಪೇ (Google Pay) ಮತ್ತು ಪೇಟಿಎಂ (Paytm) ಪಾವತಿ ಬ್ಯಾಂಕ್ ಅನುಕ್ರಮವಾಗಿ ಶೇ 35 ಮತ್ತು ಶೇ 15ರಷ್ಟು ಪಾಲನ್ನು ಹೊಂದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: RBI: ರೆಪೋ ರೇಟ್ ಶೇ. 4.90ಕ್ಕೆ ಹೆಚ್ಚಿಸಿದ ಆರ್​ಬಿಐ; ಬ್ಯಾಂಕ್ ಸಾಲದ ಬಡ್ಡಿ ದರವೂ ಏರಿಕೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್