16ನೇ ಹಣಕಾಸು ಆಯೋಗದ ಸದಸ್ಯ ನಿರಂಜನ್ ರಾಜಾಧ್ಯಕ್ಷ ಹೊರಕ್ಕೆ; ವೈಯಕ್ತಿಕ ಕಾರಣದಿಂದ ಹಿಂದೆ ಸರಿದ ಸದಸ್ಯ

16th Finance Commission: ಜನವರಿ 31ರಂದು 16ನೇ ಹಣಕಾಸು ಆಯೋಗಕ್ಕೆ ಸದಸ್ಯರಾಗಿ ನೇಮಕವಾಗಿದ್ದ ಡಾ. ನಿರಂಜನ್ ರಾಜಾಧ್ಯಕ್ಷ ಈಗ ಆಯೋಗದಿಂದ ಹೊರಬಂದಿದ್ದಾರೆ. ಅನಿರೀಕ್ಷಿತ ವೈಯಕ್ತಿಕ ಸಂದರ್ಭ ಕಾರಣಕ್ಕೆ ಅವರು ಜವಾಬ್ದಾರಿಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ. ಅರವಿಂದ್ ಪನಗರಿಯಾ ಛೇರ್ಮನ್ ಆಗಿರುವ ಈ ಆಯೋಗದಲ್ಲಿ ನಾಲ್ವರು ಸದಸ್ಯರಿದ್ದು, ಈಗ ನಿರಂಜನ್ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಕ ಮಾಡಲಾಗುತ್ತದೆ.

16ನೇ ಹಣಕಾಸು ಆಯೋಗದ ಸದಸ್ಯ ನಿರಂಜನ್ ರಾಜಾಧ್ಯಕ್ಷ ಹೊರಕ್ಕೆ; ವೈಯಕ್ತಿಕ ಕಾರಣದಿಂದ ಹಿಂದೆ ಸರಿದ ಸದಸ್ಯ
ಡಾ. ನಿರಂಜನ್ ರಾಜಾಧ್ಯಕ್ಷ ಈ ಫೋಟೋದಲ್ಲಿ ಎಡದಿಂದ ಮೊದಲನೆಯವರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 20, 2024 | 10:41 AM

ನವದೆಹಲಿ, ಫೆಬ್ರುವರಿ 20: ಹದಿನಾರನೇ ಹಣಕಾಸು ಆಯೋಗದ (16th Finance Commission) ನಾಲ್ವರು ಸದಸ್ಯರಲ್ಲೊಬ್ಬರಾಗಿದ್ದ ನಿರಂಜನ್ ರಾಜಾಧ್ಯಕ್ಷ (Dr. Niranjan Rajadhyaksha) ತಮ್ಮ ಸ್ಥಾನದಿಂದ ಹಿಂದಕ್ಕೆ ಸರಿದಿದ್ದಾರೆ. ವೈಯಕ್ತಿಕ ಕಾರಣದಿಂದ ಅವರು ಆಯೋಗದ ಸದಸ್ಯರಾಗಿ ಮುಂದುವರಿಯದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರದಿಂದ ಈ ಸಂಬಂಧ ನಿನ್ನೆ ಫೆಬ್ರುವರಿ 19ರಂದು ಹೇಳಿಕೆ ಬಂದಿದೆ. ‘ಡಾ. ರಾಜಾಧ್ಯಕ್ಷ ಅವರು ಅನಿರೀಕ್ಷಿತವಾಗಿ ಎದುರಾದ ವೈಯಕ್ತಿಕ ಸಂದರ್ಭಗಳ ಕಾರಣದಿಂದ ಈ ಜವಾಬ್ದಾರಿ ಹೊರಲು ತಮ್ಮಿಂದ ಆಗುವುದಿಲ್ಲ ಎಂದು ಹೇಳಿದ್ದಾರೆ,’ ಎಂದು ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

16ನೇ ಹಣಕಾಸು ಆಯೋಗದಲ್ಲಿ ಡಾ. ರಾಜಾಧ್ಯಕ್ಷ ಅವರ ಸ್ಥಾನಕ್ಕೆ ಇನ್ನೊಬ್ಬ ಸದಸ್ಯರನ್ನು ನೇಮಕ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ರಾಜಾಧ್ಯಕ್ಷ ಅವರು ಆ ಆಯೋಗದ ಮೂವರು ಪೂರ್ಣಾವಧಿ ಸದಸ್ಯರ ಪೈಕಿ ಒಬ್ಬರಾಗಿದ್ದರು. ಅರ್ಥ ಗ್ಲೋಬಲ್ ಎಂಬ ಆರ್ಥಿಕ ನೀತಿ ಚಿಂತನಾ ವೇದಿಕೆಯ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ. ಜನವರಿ 31ರಂದು ಅವರನ್ನು ಹೊಸ ಹಣಕಾಸು ಆಯೋಗಕ್ಕೆ ಸದಸ್ಯರಾಗಿ ನೇಮಕ ಮಾಡಲಾಗಿತ್ತು. ಫೆಬ್ರುವರಿ 14ರಂದು ಈ ಆಯೋಗದ ಮೊದಲ ಸಭೆ ಕೂಡ ನಡೆದಿತ್ತು. ಇದರ ಬೆನ್ನಲ್ಲೇ ನಿರಂಜನ್ ಹೊರ ಉಳಿಯಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಆರ್ಥಿಕತೆಗಿಂತಲೂ ದೊಡ್ಡದು ಟಾಟಾ ಗ್ರೂಪ್ ಮಾರುಕಟ್ಟೆ ಬಂಡವಾಳ

ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆಯ ಸೂತ್ರವನ್ನು ಶಿಫಾರಸು ಮಾಡುವ ಜವಾಬ್ದಾರಿ ಹಣಕಾಸು ಆಯೋಗದ್ದಾಗಿದೆ. ಪ್ರತೀ ಹಣಕಾಸು ಆಯೋಗದ ಶಿಫಾರಸು ಐದು ವರ್ಷಕ್ಕೆ ಸಿಂಧು ಇರುತ್ತದೆ. ಸರ್ಕಾರ ರಚಿಸಿರುವ 16ನೇ ಹಣಕಾಸು ಆಯೋಗಕ್ಕೆ ಛೇರ್ಮನ್ ಆಗಿ ಮಾಜಿ ನೀತಿ ಆಯೋಗ್ ಮುಖ್ಯಸ್ಥ ಅರವಿಂದ್ ಪನಗರಿಯಾ ಆಯ್ಕೆಯಾಗಿದ್ದಾರೆ.

ಜನವರಿ 31ರಂದು ಸರ್ಕಾರ ಈ ಆಯೋಗಕ್ಕೆ ನಾಲ್ವರು ಸದಸ್ಯರನ್ನು ನೇಮಕ ಮಾಡಿತ್ತು. ಅದರಲ್ಲಿ ಅಜಯ್ ನಾರಾಯಣ್ ಝಾ, ಆ್ಯನೀ ಜಾರ್ಜ್ ಮ್ಯಾಥ್ಯೂ, ಡಾ. ನಿರಂಜನ್ ರಾಜಾಧ್ಯಕ್ಷ ಮತ್ತು ಡಾ. ಸೌಮ್ಯಾ ಕಾಂತಿ ಘೋಷ್ ಇದ್ದಾರೆ. ಇವರ ಪೈಕಿ ಎಸ್​ಬಿಐನ ಮುಖ್ಯ ಆರ್ಥಿಕ ಸಲಹೆಗಾರ್ತಿ ಸೌಮ್ಯಾ ಮಾತ್ರವೇ ಅರೆಕಾಲಿಕ ಸದಸ್ಯೆ. ಉಳಿದವರು ಪೂರ್ಣಾವಧಿ ಸದಸ್ಯರಾಗಿದ್ದಾರೆ. ಅಜಯ್ ನಾರಾಯಣ ಝಾ ಅವರು ಹಿಂದಿನ 15ನೇ ಹಣಕಾಸು ಆಯೋಗದ ಸದಸ್ಯ ಕೂಡ ಹೌದು. ಝಾ ಮತ್ತು ಆನ್ನೀ ಜಾರ್ಜ್ ಮ್ಯಾಥ್ಯೂ ಇಬ್ಬರೂ ವೆಚ್ಚ ಇಲಾಖೆಯಲ್ಲಿ ಕರ್ತವ್ಯ ನಿಭಾಯಿಸಿದವರು.

ಇದನ್ನೂ ಓದಿ: ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ತಾರತಮ್ಯದ ಆರೋಪ: 16ನೇ ಹಣಕಾಸು ಆಯೋಗದ ಮುಖ್ಯಸ್ಥರು ಹೇಳೋದಿದು

ಈ 16ನೇ ಹಣಕಾಸು ಆಯೋಗ ಎಲ್ಲಾ ರಾಜ್ಯಗಳಲ್ಲಿ ಅಭಿಪ್ರಾಯ ಪಡೆದು ಅಂತಿಮವಾಗಿ ಕೇಂದ್ರ ಮತ್ತು ರಾಜ್ಯಗಳಿಗೆ ತೆರಿಗೆ ಪಾಲು ಹೇಗೆ ಆಗಬೇಕು ಎಂದು ಸೂತ್ರವನ್ನು ಶಿಫಾರಸು ಮಾಡಲಿದೆ. ಅದಕ್ಕೆ 2025ರ ಅಕ್ಟೋಬರ್ 31ರವರೆಗೂ ಕಾಲಾವಕಾಶ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:39 am, Tue, 20 February 24

ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ