ಶೀಘ್ರದಲ್ಲೇ ಟ್ವಿಟ್ಟರ್ಗೆ ಮಾಸಿಕ ಶುಲ್ಕ ಜಾರಿ ಸಾಧ್ಯತೆ; ಇಲಾನ್ ಮಸ್ಕ್ ಸುಳಿವು
Twitter Monthly Charges: ಟ್ವಿಟ್ಟರ್ ಅಥವಾ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಸ್ವಯಂಚಾಲಿತ ಬೋಟ್ಗಳ ಹಾವಳಿ ತಡೆಯಲು ಮಾಸಿಕ ಶುಲ್ಕ ವಿಧಿಸುವ ಕ್ರಮ ಜಾರಿಯಾಗುವ ಸಾಧ್ಯತೆ ಇದೆ. ಎಕ್ಸ್ ಮುಖ್ಯಸ್ಥ ಇಲಾನ್ ಮಸ್ಕ್ ಅವರು ಈ ನಿಟ್ಟಿನಲ್ಲಿ ಸುಳಿವು ನೀಡಿದ್ದಾರೆ. ಟ್ವಿಟ್ಟರ್ನ ಬ್ಲೂಟಿಕ್ಗೆ ಈಗಾಗಲೇ ಮಾಸಿಕ ಸಬ್ಸ್ಕ್ರಿಪ್ಷನ್ ಪ್ಲಾನ್ ಇದೆ. ಅದರ ಜೊತೆಗೆ ಎಲ್ಲಾ ಬಳಕೆದಾರರಿಗೂ ಸಣ್ಣ ಮೊತ್ತದ ಮಾಸಿಕ ಶುಲ್ಕ ವಿಧಿಸುವ ಯೋಜನೆ ಇದೆ.
ನವದೆಹಲಿ, ಸೆಪ್ಟೆಂಬರ್ 19: ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆಗಿರುವ ಟ್ವಿಟ್ಟರ್ ಅನ್ನು ಬಳಸಲು ಹಣ ಪಾವತಿಸಬೇಕಾಗಬಹುದು. ಎಕ್ಸ್ ಹೆಸರಿನಿಂದ ಗುರುತಿಸಲಾಗುತ್ತಿರುವ ಟ್ವಿಟ್ಟರ್ಗೆ ಮಾಸಿಕ ಸಬ್ಸ್ಕ್ರಿಪ್ಷನ್ (Monthly subscription) ದರ ವಿಧಿಸಲಾಗುತ್ತಿದೆ. ವರದಿ ಪ್ರಕಾರ ಶೀಘ್ರದಲ್ಲೇ ಟ್ವಿಟ್ಟರ್ ಪೇಯ್ಡ್ ಸೋಷಿಯಲ್ ಮೀಡಿಯಾ ಆಗಲಿದೆ. ಮಾಸಿಕ ಶುಲ್ಕ ಹೆಚ್ಚೇನೂ ಇರುವುದಿಲ್ಲ ಎನ್ನಲಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆಟಾನ್ಯಹು ಜೊತೆಗಿನ ಸಂವಾದದಲ್ಲಿ ಮಾತನಾಡುತ್ತಿದ್ದ ಎಕ್ಸ್ ಮುಖ್ಯಸ್ಥ ಇಲಾನ್ ಮಸ್ಕ್ (Elon Musk) ಅವರು ಈ ಬಗ್ಗೆ ಸುಳಿವು ನೀಡಿದ್ದಾರೆ.
ಬೋಟ್ಗಳ ಕಡಿವಾಣಕ್ಕೆ ಈ ಕ್ರಮ?
ಟ್ವಿಟ್ಟರ್ನಲ್ಲಿ ಹಾವಳಿ ಎನಿಸಿರುವ ಬೋಟ್ಗಳಿಗೆ (bot) ಕಡಿವಾಣ ಹಾಕಲ ಇಲಾನ್ ಮಸ್ಕ್ ಅವರು ಮಾಸಿಕ ಶುಲ್ಕ ವಿಧಿಸುವ ಕ್ರಮಕ್ಕೆ ಮುಂದಾಗಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಹಣಕಾಸು ಕಷ್ಟ ಬಂದಾಗ ಲವ್ವಿ ಡವ್ವಿ ಜಾಸ್ತಿಯಾಗುತ್ತಾ? ಅಚ್ಚರಿ ಮೂಡಿಸುತ್ತೆ ಡೇಟಿಂಗ್ ಕಂಪನಿಗಳ ವ್ಯವಹಾರ ಅಂಕಿ ಅಂಶ
‘ಬೋಟ್ಗಳ ದೊಡ್ಡ ಪಡೆಗಳನ್ನ ಎದುರಿಸಲು ಇರುವ ಒಂದೇ ಮಾರ್ಗ ಎಂದರೆ ಇದೇ. ಒಂದು ಬಾಟ್ಗೆ ಒಂದು ಪೆನ್ನಿಯ (ಪೈಸೆ) ಸಣ್ಣ ಭಾಗ ಮಾತ್ರವೇ. ಕೆಲ ಡಾಲರ್ಗಳಷ್ಟು ಶುಲ್ಕ ಕಟ್ಟಬೇಕೆಂದರೆ ಈ ಬಾಟ್ಗಳು ದುಬಾರಿ ಎನಿಸಿಬಿಡುತ್ತವೆ’ ಎಂದು ಲೈವ್ ಸಂವಾದದಲ್ಲಿ ಇಲಾನ್ ಮಸ್ಕ್ ಹೇಳಿದ್ದರು. ಈ ಮೂಲಕ ಮಾಸಿಕ ಶುಲ್ಕ ವಿಧಿಸುವ ಸಾಧ್ಯತೆ ಕುರಿತು ಸುಳಿವು ನೀಡಿದ್ದರು.
ಎಕ್ಸ್ ಅನ್ನು ಪೂರ್ಣವಾಗಿ ಪೇಯ್ಡ್ ಸರ್ವಿಸ್ ಮಾಡುವ ಆಲೋಚನೆ ಒಂದು ವರ್ಷದಿಂದಲೂ ಇದೆ. ಟ್ಟಿಟ್ಟರ್ ಅನ್ನು ಖರೀದಿಸಿದಾಗಲೇ ಇಲಾನ್ ಮಸ್ಕ್ ಅವರು ಇಂಥದ್ದೊಂದು ಪ್ರಸ್ತಾಪ ಮಾಡಿದ್ದರು. ಅದರ ಭಾಗವಾಗಿ ಟ್ವಿಟ್ಟರ್ನ ಬ್ಲೂಟಿಕ್ಗೆ ಮಾಸಿಕ ಸಬ್ಸ್ಕ್ರಿಪ್ಷನ್ ಪ್ಲಾನ್ ಕೊಡಲಾಗಿದೆ. ಅಂತೆಯೇ ಪ್ರತಿಯೊಬ್ಬ ಬಳಕೆದಾರರಿಂದಲೂ ಸಣ್ಣ ಮೊತ್ತದ ಮಾಸಿಕ ಶುಲ್ಕ ಪಡೆಯುವ ಆಲೋಚನೆಯೂ ಅವರಲ್ಲಿದೆ.
ಇದನ್ನೂ ಓದಿ: ನರೇಂದ್ರ ಮೋದಿಯನ್ನು ಚೀನಾದ ಲೆಜೆಂಡ್ ಡೆಂಗ್ ಶಿಯೋಪಿಂಗ್ಗೆ ಹೋಲಿಸಿದ ಅಮೆರಿಕದ ಇನ್ವೆಸ್ಟರ್ ರೇ ಡೇಲಿಯೋ
ಬ್ಲೂಟಿಕ್ ಸಬ್ಸ್ಕ್ರಿಪ್ಷನ್ ಪಡೆಯುವವರಿಗೆ ಹಲವು ಸೌಲಭ್ಯಗಳು ಮತ್ತು ಫೀಚರ್ಗಳು ಸಿಗುತ್ತವೆ. ಇತರ ಸಾಮಾನ್ಯರಿಗೆ ಬೇಸಿಕ್ ಫೀಚರ್ ಮಾತ್ರವೇ ಇರುತ್ತದೆ. ಇನ್ನು ಬೋಟ್ಗಳ ವಿಚಾರಕ್ಕೆ ಬಂದರೆ ಹಲವು ಏಜೆನ್ಸಿಗಳು ನಕಲಿ ಬಳಕೆದಾರರನ್ನು ಸೃಷ್ಟಿಸಲು ಈ ಸ್ವಯಂಚಾಲಿತ ಖಾತೆಗಳನ್ನು ಸೃಷ್ಟಿಸುತ್ತವೆ. ಕೃತಕ ಫಾಲೋಯರ್ಸ್ಗಳ ಬಳಗ ಸೃಷ್ಟಿಸಲು ಈ ಬೋಟ್ಗಳನ್ನು ಬಳಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ