AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಪನಿ ಮಾರಿ ನೌಕರರನ್ನು ಶ್ರೀಮಂತರನ್ನಾಗಿಸಿದ ಮಾಲೀಕ; ಭಾರತ ಮೂಲದ ಅಮೆರಿಕನ್ ಉದ್ಯಮಿ ಜೈ ಚೌಧರಿಯ ಕಥೆ ಇದು

How an Indian billionaire made his employees rich: ಉದ್ಯಮಿಗಳಿಗೆ ತಮ್ಮ ಕಂಪನಿ ಅಸ್ತಿತ್ವ ಮುಖ್ಯವಾಗಿರುತ್ತದೆ. ಉದ್ಯೋಗಿಗಳಿಗೆ ಸಂಬಳ ಬಿಟ್ಟರೆ ಬೇರೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಭಾರತ ಮೂಲದ ಅಮೆರಿಕನ್ ಉದ್ಯಮಿ ಜಯ್ ಚೌಧರಿ ಅವರು ಇದಕ್ಕೆ ಭಿನ್ನವಾಗಿ ನಿಲ್ಲುವವರ ಸಾಲಿಗೆ ಬರುತ್ತಾರೆ. ತಾವು ಸ್ಥಾಪಿಸಿದ್ದ ಕಂಪನಿಯ ಷೇರುಗಳನ್ನು ಇವರು ಉದ್ಯೋಗಿಗಳಿಗೆ ಹಂಚುವ ಮೂಲಕ ಅವರು ಶ್ರೀಮಂತರಾಗಲು ಕಾರಣರಾಗಿದ್ದರು.

ಕಂಪನಿ ಮಾರಿ ನೌಕರರನ್ನು ಶ್ರೀಮಂತರನ್ನಾಗಿಸಿದ ಮಾಲೀಕ; ಭಾರತ ಮೂಲದ ಅಮೆರಿಕನ್ ಉದ್ಯಮಿ ಜೈ ಚೌಧರಿಯ ಕಥೆ ಇದು
ಜೈ ಚೌಧರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 03, 2024 | 1:01 PM

ಕೆಲಸ ಮಾಡುವ ಉದ್ಯೋಗಿಗಳ ಜೀವನ ಮತ್ತು ಹಣ ಅವರ ಸಂಬಳದ ಸಂಕೋಲೆಯೊಳಗೆಯೇ ಗಿರಕಿ ಹೊಡೆಯುತ್ತಿರುತ್ತದೆ. ವರ್ಷಾನುಗಟ್ಟಲೆ ನಿರಂತರ ತ್ಯಾಗಗಳ ಮೂಲಕ ಒಂದಷ್ಟು ಹಣ ಉಳಿಸಿ ತಕ್ಕಮಟ್ಟಿಗೆ ಜೀವನ ಸುಧಾರಣೆ ಕಂಡವರ ಸಂಖ್ಯೆ ಕಡಿಮೆ. ಹಬ್ಬ ಹರಿದಿನಗಳಲ್ಲಿ ಕೆಲ ಮಾಲೀಕರು ತಮ್ಮ ಉದ್ಯೋಗಿಗಳಿಗೆ ಕಾರು, ಬೈಕು, ಗೋಲ್ಡ್ ಕಾಯಿನ್, ಸಿಲ್ವರ್ ಕಾಯಿನ್ ಇತ್ಯಾದಿ ಗಿಫ್ಟ್ ಕೊಡುವುದನ್ನು ನೋಡಿದ್ದೇವೆ. ಈ ಮಧ್ಯೆ ಭಾರತ ಮೂಲದ ಅಮೆರಿಕನ್ ಉದ್ಯಮಿ ಜೈ ಚೌಧರಿ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಅವರು ತಮ್ಮ ಕಂಪನಿಯ ಬಹುತೇಕ ಎಲ್ಲಾ ಉದ್ಯೋಗಿಗಳನ್ನೂ ಶ್ರೀಮಂತರನ್ನಾಗಿಸಿದ ಘಟನೆ ಸ್ಮರಣಾರ್ಹ.

ಹಿಮಾಚಲಪ್ರದೇಶ ಮೂಲದ 65 ವರ್ಷದ ಜೈ ಚೌಧರಿ ಹಲವು ಕಂಪನಿಗಳನ್ನು ಸ್ಥಾಪಿಸಿದವರು. ಸದ್ಯ ಝಡ್​ಸ್ಕೇಲರ್ ಎಂಬ ಕ್ಲೌಡ್ ಸೆಕ್ಯೂರಿಟಿ ಕಂಪನಿಯ ಸಿಇಒ ಆಗಿದ್ದಾರೆ. ತೊಂಬತ್ತರ ದಶಕದಲ್ಲಿ ಅವರು ತಮ್ಮ ಪತ್ನಿ ಜ್ಯೋತಿ ಜೊತೆ ಸೇರಿ ಸೆಕ್ಯೂರ್​ಐಟಿ ಎಂಬ ತಮ್ಮ ಚೊಚ್ಚಲ ಕಂಪನಿ ಸ್ಥಾಪಿಸಿದ್ದರು. ಗಂಡ ಹೆಂಡತಿ ಇಬ್ಬರೂ ತಮ್ಮ ಜೀವಮಾನದ ಉಳಿತಾಯ ಹಣವನ್ನು ಸೇರಿಸಿ ಕಟ್ಟಿದ ಈ ಕಂಪನಿ ಯಶಸ್ವಿಯಾಯಿತು. ಸೆಕ್ಯೂರ್​ಐಟಿ ಕಂಪನಿಯಲ್ಲಿ 80 ಉದ್ಯೋಗಿಗಳಿದ್ದರು.

ಇದನ್ನೂ ಓದಿ: ಭಾರತದ ಜಿಡಿಪಿಗಿಂತ ಹೆಚ್ಚಿದೆ ಷೇರುಮಾರುಕಟ್ಟೆ ಬಂಡವಾಳ; ಇದು ಆತಂಕಕಾರಿ ಸಂಗತಿಯಾ? ಸಿಇಒ ಎಚ್ಚರಿಕೆಯ ಮಾತುಗಳಿವು

ಈ ಹೊತ್ತಲ್ಲೇ ಜೈ ಚೌಧರಿ ಅವರು ಹೂಡಿಕೆದಾರರ ಸಮ್ಮತಿ ಪಡೆದು, ಸೆಕ್ಯೂರ್​ಐಟಿ ಕಂಪನಿಯ ಈಕ್ವಿಟಿಯ ಒಂದಷ್ಟು ಭಾಗವನ್ನು ತಮ್ಮ 70 ಉದ್ಯೋಗಿಗಳಿಗೆ ಹಂಚಿದರು. ಮುಂದಿನ ದಿನಗಳಲ್ಲಿ ಈ ಷೇರುಗಳನ್ನು ಪಡೆದ ಉದ್ಯೋಗಿಗಳೇ ಧನ್ಯರಾದರು.

ಜೈ ಚೌಧರಿ ತಮ್ಮ ಸೆಕ್ಯೂರ್​ಐಟಿ ಕಂಪನಿಯನ್ನು 1998ರಲ್ಲಿ ವೆರಿಸೈನ್ ಸಂಸ್ಥೆಗೆ ಮಾರಿದರು. ಅವರ ಕಂಪನಿಯು ವೆರಿಸೈನ್ ಜೊತೆ ವಿಲೀನವಾಯಿತು. ಸೆಕ್ಯೂರ್​ಐಟಿ ಸಂಸ್ಥೆಯ ಷೇರುದಾರರಿಗೆ ವೆರಿಸೈನ್​ನ ಷೇರುಗಳು ಸಿಕ್ಕವು. ಮುಂದಿನ ದಿನಗಳಲ್ಲಿ ವೆರಿಸೈನ್ ಷೇರುಬೆಲೆ ಸಿಕ್ಕಾಪಟ್ಟೆ ಏರತೊಡಗಿತು.

ಹಲವು ಉದ್ಯೋಗಿಗಳು ದಿಢೀರ್ ಲಕ್ಷಾಧಿಪತಿಗಳಾಗಿ ಹೋದರು. ಕೆಲವರು ಷೇರುಗಳನ್ನು ಮಾರಿ, ಮನೆ, ವಾಹನ ಖರೀದಿಸಿ ಆನಂದಿತರಾಗಿದ್ದು ಹೌದು.

ಇದನ್ನೂ ಓದಿ: ಹಾರುವ ಕಾರಿಗೆ ಭಾರತವೇ ಅತಿದೊಡ್ಡ ಮಾರುಕಟ್ಟೆ; ಇನ್ನೆರಡು ವರ್ಷದೊಳಗೆ ಕಾಣಲಿದೆ ಮೊದಲ ಏರ್ ಟ್ಯಾಕ್ಸಿ

ಹಿಮಾಚಲಪ್ರದೇಶದ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಜೈ ಚೌಧರಿ ನಾಲ್ಕೈದು ಕಂಪನಿಗಳನ್ನು ಸ್ಥಾಪಿಸಿ ಮಾರಿದ್ದಾರೆ. ಸದ್ಯ 2008ರಲ್ಲಿ ಸ್ಥಾಪಿಸಿದ್ದ ಝಡ್​ಸ್ಕೇಲರ್ ಕಂಪನಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಫೋರ್ಬ್ಸ್ ಪ್ರಕಾರ ಅವರ ಒಟ್ಟಾರೆ ಆಸ್ತಿ ಮೌಲ್ಯ 11.3 ಬಿಲಿಯನ್ ಡಾಲರ್ ಇದೆ. ಅಂದರೆ 10,000 ಕೋಟಿ ರೂನಷ್ಟು ಸಂಪತ್ತಿರುವ ಉದ್ಯಮಿ ಅವರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ