EPF: ನಿಮ್ಮ ಇಪಿಎಫ್ ಖಾತೆಯನ್ನು ಎಷ್ಟು ಬಾರಿ ಮಾರ್ಪಡಿಸಬಹುದು? ಯಾವ್ಯಾವ ವಿವರ ಎಷ್ಟೆಷ್ಟು ಸಲ ಬದಲಿಸಲು ಸಾಧ್ಯ? ಇಲ್ಲಿದೆ ಮಾಹಿತಿ

|

Updated on: Mar 20, 2024 | 11:58 AM

Modifying EPF Account Details: ಇಪಿಎಫ್ ಖಾತೆಯ ಪ್ರೊಫೈಲ್​ನಲ್ಲಿ ಸದಸ್ಯರ ಹೆಸರು, ಜನ್ಮದಿನಾಂಕ ಸೇರಿದಂತೆ 11 ಅಂಶಗಳನ್ನು ಅಗತ್ಯಬಿದ್ದರೆ ಬದಲಾಯಿಸಬಹುದು. ಆದರೆ, ವೈವಾಹಿಕ ಸ್ಥಿತಿ ಹೊರತುಪಡಿಸಿ ಉಳಿದ 10 ಪ್ಯಾರಾಮೀಟರ್​ಗಳನ್ನು ಒಮ್ಮೆ ಮಾತ್ರವೇ ಬದಲಾವಣೆ ಮಾಡಲು ಸಾಧ್ಯ. ಹಾಗೆಯೇ, ಐದಕ್ಕಿಂತ ಹೆಚ್ಚು ಅಂಶಗಳಲ್ಲಿ ವಿವರ ಬದಲಾವಣೆಗೆ ಜಾಯಿಂಟ್ ಡಿಕ್ಲರೇಶನ್​ಗಳನ್ನು ಸಲ್ಲಿಸಲಾಗಿದ್ದರೆ ಅಧಿಕಾರಿಗಳು ಎಚ್ಚರ ವಹಿಸಿ, ಸೂಕ್ತವಾಗಿ ಪರಿಶೀಲನೆ ಮಾಡುತ್ತಾರೆ. ಇಪಿಎಫ್​ಒ ಮಾರ್ಚ್ 11ರಂದು ಹೊಸ ಎಸ್​ಒಪಿ ಅಥವಾ ಕ್ರಮಾವಳಿ ಬಿಡುಗಡೆ ಮಾಡಿದೆ.

EPF: ನಿಮ್ಮ ಇಪಿಎಫ್ ಖಾತೆಯನ್ನು ಎಷ್ಟು ಬಾರಿ ಮಾರ್ಪಡಿಸಬಹುದು? ಯಾವ್ಯಾವ ವಿವರ ಎಷ್ಟೆಷ್ಟು ಸಲ ಬದಲಿಸಲು ಸಾಧ್ಯ? ಇಲ್ಲಿದೆ ಮಾಹಿತಿ
ಇಪಿಎಫ್
Follow us on

ಇಪಿಎಫ್ ಹಣವನ್ನು ಹಿಂಪಡೆಯಲು ಸಲ್ಲಿಸಲಾಗುವ ಬಹಳಷ್ಟು ಕ್ಲೈಮ್​ಗಳು ರಿಜೆಕ್ಟ್ ಆಗುತ್ತಿವೆ ಎಂದು ದತ್ತಾಂಶಗಳು ಹೇಳುತ್ತಿವೆ. ಕ್ಲೈಮ್​ಗಳು ತಿರಸ್ಕೃತಗೊಳ್ಳಲು ಬಹಳಷ್ಟು ಕಾರಣಗಳಿರಬಹುದು. ಹೆಸರು, ಬ್ಯಾಂಕ್ ಖಾತೆ, ಕೆಲಸಕ್ಕೆ ಸೇರಿದ ದಿನ ಇತ್ಯಾದಿ ಮಾಹಿತಿಯನ್ನು ಅಕಸ್ಮಾತ್ ಆಗಿ ತಪ್ಪಾಗಿ ನೀಡಿದರೆ ರಿಜೆಕ್ಟ್ ಆಗುತ್ತದೆ. ಇನ್ನು ಇಪಿಎಫ್ ಖಾತೆಯೊಂದರ ವಿವರವನ್ನು ಬದಲಿಸುವ ಅವಕಾಶ ಇರುತ್ತದೆ. ಕೆಲಸ ಮಾಡುವ ಕಂಪನಿ ಜೊತೆ ಜಾಯಿಂಟ್ ಡಿಕ್ಲರೇಶನ್ (Joint Declaration) ಸಲ್ಲಿಸಬೇಕಾಗುತ್ತದೆ. ಉದ್ಯೋಗಿಯ ಯುಎಎನ್ ನಂಬರ್​ ಮತ್ತು ಸಂಸ್ಥೆಯ ಇಪಿಎಫ್ ಪ್ರೊಫೈಲ್​ಗಳನ್ನು ಸರಿಪಡಿಸಲು ಜಾಯಿಂಟ್ ಡಿಕ್ಲರೇಶನ್​ಗೆ ಇರುವ ಕ್ರಮಾವಳಿಯನ್ನು (SOP- Standard Operating Procedure) ಪರಿಷ್ಕರಿಸಲಾಗಿದೆ.

ಈ ಪರಿಷ್ಕೃತ ಕ್ರಮಾವಳಿ ಪ್ರಕಾರ ಸದಸ್ಯರ ತಂದೆ ಅಥವಾ ತಾಯಿಯ ಹೆಸರನ್ನು ಬದಲಿಸಲು ಜೆಡಿ ಸಲ್ಲಿಸುವ ವೇಳೆ ತಂದೆ ಅಥವಾ ತಾಯಿಯ ಹೆಸರಿರುವ ಸದಸ್ಯನ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಹತ್ತು ಅಥವಾ ಹನ್ನೊಂದನೇ ತರಗತಿ ಅಂಕ ಪಟ್ಟಿ ಮತ್ತು ಡ್ರೈವಿಂಗ್ ಲೈಸೆನ್ಸ್ ದಾಖಲೆಗನ್ನು ಸಲ್ಲಿಸಬಹುದು.

ಇದನ್ನೂ ಓದಿ: ಎಷ್ಟು ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು? ಟ್ಯಾಕ್ಸ್ ಉಳಿಸುವ ಮಾರ್ಗಗಳ್ಯಾವುವು ತಿಳಿದಿರಿ

ಇಪಿಎಫ್ ಸದಸ್ಯರು ತಮ್ಮ ಪಿಫ್ ಖಾತೆಯ ಪ್ರೊಫೈಲ್​ನಲ್ಲಿ 11 ಅಂಶಗಳಲ್ಲಿ ಬದಲಾವಣೆ ಮಾಡಬಹುದು. ಹಾಗಂತ ಇಚ್ಛೆ ಬಂದಂತೆ ಮಾರ್ಪಡಿಸಲು ಆಗುವುದಿಲ್ಲ. ಪ್ರತಿಯೊಂದು ಅಂಶವನ್ನು ಒಮ್ಮೆ ಮಾತ್ರವೇ ಬದಲಾವಣೆ ಮಾಡಲು ಸಾಧ್ಯ.

ಇಪಿಎಫ್ ಪ್ರೊಫೈಲ್​ನಲ್ಲಿ ಯಾವ್ಯಾವುದನ್ನು ಎಷ್ಟು ಬಾರಿ ಬದಲಿಸಬಹುದು?

  1. ಸದಸ್ಯರ ಹೆಸರು: 1
  2. ಲಿಂಗ: 1
  3. ಜನ್ಮ ದಿನಾಂಕ: 1
  4. ತಂದೆ ಅಥವಾ ತಾಯಿ ಹೆಸರು: 1
  5. ಸಂಬಂಧ: 1
  6. ವೈವಾಹಿಕ ಸ್ಥಿತಿ: 2
  7. ಕೆಲಸ ಸೇರಿದ ದಿನಾಂಕ: 1
  8. ಕೆಲಸ ಬಿಟ್ಟ ದಿನಾಂಕ: 1
  9. ಕೆಲಸ ಬಿಡಲು ಕಾರಣ: 1
  10. ರಾಷ್ಟ್ರೀಯತೆ: 1
  11. ಆಧಾರ್ ನಂಬರ್: 1

ಇದನ್ನೂ ಓದಿ: ಯುನಿಲಿವರ್​ನಿಂದ ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕ; 7,500 ಮಂದಿ ಲೇ ಆಫ್ ಸಾಧ್ಯತೆ

ಐದಕ್ಕಿಂತ ಹೆಚ್ಚು ಅಂಶಗಳ ತಿದ್ದುಪಡಿ ಬಂದರೆ ಎಚ್ಚರ..!

ಒಬ್ಬ ಸದಸ್ಯರು ಮೇಲಿನ 11 ಅಂಶಗಳ ಪೈಕಿ ಐದು ಅಂಶಗಳಲ್ಲಿ ರೆಗ್ಯುಲರ್ ಜಾಯಿಂಟ್ ಡಿಕ್ಲರೇಶನ್​ಗಳ ಮೂಲಕ ತಿದ್ದುಪಡಿಗೆ ಮನವಿ ಸಲ್ಲಿಸಬಹುದು. ಐದಕ್ಕಿಂತ ಹೆಚ್ಚು ಅಂಶಗಳಲ್ಲಿ ತಿದ್ದುಪಡಿಗೆ ಮನವಿ ಮಾಡಿದ್ದಲ್ಲಿ ಸಂಬಂಧಿತ ಅಧಿಕಾರಿಗಳು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸುತ್ತಾರೆ. ಯಾಕೆಂದರೆ, ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತಿದ್ದುಪಡಿ ಮಾಡಲು ಯತ್ನಿಸಲಾಗುತ್ತಿದೆ ಎಂದರೆ ಅದು ವಂಚಕರಿಂದ ದುರುಪಯೋಗ ಆಗುತ್ತಿರಬಹುದು ಎನ್ನುವ ಅನುಮಾನ ಹುಟ್ಟು ಹಾಕುತ್ತದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾರಾಮೀಟರ್​ಗಳ ತಿದ್ದುಪಡಿಗೆ ಮನವಿ ಬಂದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ವಿಚಾರಣೆ ನಡೆಸಿ, ಆ ಬಳಿಕವಷ್ಟೇ ಪ್ರೋಸಸಿಂಗ್ ಮಾಡಲಾಗುತ್ತದೆ. ಇದು ಮಾರ್ಚ್ 11ರಂದು ಬಿಡುಗಡೆ ಆದ ಕ್ರಮಾವಳಿಯಲ್ಲಿ ಇರುವ ಒಂದು ನಿಯಮ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ