PF Rules: ಕೆಲಸ ಬಿಟ್ಟುಹೋದ ಉದ್ಯೋಗಿಯ ಪಿಎಫ್ ಹಣ ಹಿಂಪಡೆಯುವ ಅಧಿಕಾರ ಸಂಸ್ಥೆಗೆ ಇದೆಯೇ? ಇಲ್ಲಿದೆ ಉತ್ತರ

Withdrawal from Employer: ಉದ್ಯೋಗಿಯ ನಿವೃತ್ತಿ ನಂತರದ ಜೀವನದ ಭದ್ರತೆಗೆಂದು ರೂಪಿಸಲಾಗಿರುವ ಉಳಿತಾಯ ಯೋಜನೆ ಇಪಿಎಫ್. ಒಂದು ಕಂಪನಿ ತನ್ನಲ್ಲಿ ಸೇರುವ ಉದ್ಯೋಗಿಯ ಹೆಸರಿನಲ್ಲಿ ಹೊಸ ಪ್ರಾವಿಡೆಂಟ್ ಫಂಡ್ ಖಾತೆಯನ್ನು ತೆರೆಯಬೇಕಾಗುತ್ತದೆ. ಪಿಎಫ್ ಖಾತೆಗೆ ಉದ್ಯೋಗಿಯ ಬ್ಯಾಂಕ್ ಖಾತೆ ಕೂಡ ಜೋಡಿತವಾಗಿರುತ್ತದೆ. ಹೀಗಾಗಿ ಆ ಹಣವನ್ನು ಕಂಪನಿ ಹಿಂಪಡೆಯಲು ಆಗುವುದಿಲ್ಲ.

PF Rules: ಕೆಲಸ ಬಿಟ್ಟುಹೋದ ಉದ್ಯೋಗಿಯ ಪಿಎಫ್ ಹಣ ಹಿಂಪಡೆಯುವ ಅಧಿಕಾರ ಸಂಸ್ಥೆಗೆ ಇದೆಯೇ? ಇಲ್ಲಿದೆ ಉತ್ತರ
ಪಿಎಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 28, 2024 | 2:38 PM

ತಾನು ಕೆಲಸ ಮಾಡುತ್ತಿದ್ದ ಕಂಪನಿಯನ್ನು ಕೆಲ ವರ್ಷಗಳ ಹಿಂದೆ ತೊರೆದಿದ್ದೆ. ಈಗ ತನ್ನ ಪಿಎಫ್ ಬ್ಯಾಲನ್ಸ್ ಪರಿಶೀಲಿಸಿ ನೋಡಿದರೆ ಹಣವನ್ನು ಹಿಂಪಡೆಯಲಾಗಿರುವುದು ತಿಳಿದುಬಂದಿದೆ. ಹೀಗೆಂದು ಸೋಷಿಯಲ್ ಮೀಡಿಯಾದಲ್ಲಿ ಒಬ್ಬ ವ್ಯಕ್ತಿ ಪೋಸ್ಟ್ ಹಾಕಿದ್ದರು. ಈ ರೀತಿ ಪಿಎಫ್ ಹಣವನ್ನು ಹಿಂಪಡೆದುಕೊಳ್ಳಲು ಆಗುವುದಿಲ್ಲ ಎಂದು ಹಲವರು ಕಾಮೆಂಟಿಸಿದ್ದಾರೆ. ಅದು ನಿಜ. ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ನಿಯಮ (EPF rules) ಬಹಳ ಕಟ್ಟುನಿಟ್ಟಾಗಿದೆ. ಪಿಎಫ್ ಖಾತೆ ಸೃಷ್ಟಿಸುವ ಸಂಸ್ಥೆಯೂ ಕೂಡ ಅದರಲ್ಲಿರುವ ಹಣವನ್ನು ಮುಟ್ಟಲು ಸಾಧ್ಯವಾಗುವುದಿಲ್ಲ.

ಕೆಲಸಕ್ಕೆ ಸೇರುವ ಪ್ರತಿಯೊಬ್ಬ ಉದ್ಯೋಗಿಗೂ ಪ್ರತ್ಯೇಕವಾದ ಪಿಎಫ್ ಖಾತೆಯನ್ನು ಸೃಷ್ಟಿಸಲಾಗುತ್ತದೆ. ಇಪಿಎಫ್​ಒನಲ್ಲಿ ಈ ಖಾತೆ ತೆರೆಯಲಾಗುತ್ತದೆ. ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸಿ ಅದನ್ನು ಸಂಸ್ಥೆ ಈ ಖಾತೆಗೆ ವರ್ಗಾಯಿಸುತ್ತದೆ. ಜೊತೆಗೆ ತನ್ನ ಪಾಲನ್ನೂ ಸೇರಿಸಿ ಖಾತೆಗೆ ವರ್ಗಾವಣೆ ಮಾಡುತ್ತದೆ. ಉದ್ಯೋಗಿ ಮತ್ತು ಸಂಸ್ಥೆ ವತಿಯಿಂದ ಪ್ರತೀ ತಿಂಗಳೂ ನಿರ್ದಿಷ್ಟ ಹಣವು ಪಿಎಫ್ ಖಾತೆಗೆ ಸಂದಾಯವಾಗುತ್ತಾ ಹೋಗುತ್ತದೆ. ಈ ಹಣಕ್ಕೆ ಸರ್ಕಾರ ವರ್ಷಕ್ಕೊಮ್ಮೆ ಬಡ್ಡಿ ತುಂಬಿಸುತ್ತದೆ.

ಇದನ್ನೂ ಓದಿ: 90 ದಿನದಲ್ಲಿ ಹಣ ಡಬಲ್; ರಿಲಾಯನ್ಸ್ ಬೆಂಬಲಿತ ಬಾಲಾಜಿ ಟೆಲಿಫಿಲಂಸ್​ನ ಷೇರು ಮ್ಯಾಜಿಕ್

ಒಂದು ವೇಳೆ, ಯಾವುದೇ ಕಾರಣಕ್ಕಾದರೂ ಉದ್ಯೋಗಿ ಕೆಲಸದಿಂದ ಬಿಟ್ಟುಹೋಗಿಬಿಟ್ಟರೆ ಆ ಪಿಎಫ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಸಂಸ್ಥೆಗೆ ಇರುವುದಿಲ್ಲ. ಪಿಎಫ್ ಖಾತೆಗೆ ಉದ್ಯೋಗಿಯ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಲಾಗಿರುತ್ತದೆ. ವಿತ್​ಡ್ರಾ ಮಾಡಿದರೂ ಅದು ಉದ್ಯೋಗಿಯ ಬ್ಯಾಂಕ್ ಖಾತೆಗೆ ಹಣ ಹೋಗುತ್ತದೆ.

ಸರ್ಕಾರ ಕೂಡ ಪಿಎಫ್ ಖಾತೆಯಲ್ಲಿರುವ ಹಣವನ್ನು ರದ್ದು ಮಾಡುವುದಿಲ್ಲ, ಅಥವಾ ಹಿಂಪಡೆಯುವುದಿಲ್ಲ. ಅದು ಉದ್ಯೋಗಿಯ ನಿವೃತ್ತಿ ನಂತರದ ಜೀವನಕ್ಕೆಂದು ಮೀಸಲಿರಿಸಲಾಗಿರುತ್ತದೆ. ನಿವೃತ್ತಿಗೆ ಮುನ್ನ ಉದ್ಯೋಗಿಗೆ ಯಾವುದಾದರೂ ತುರ್ತು ಅಗತ್ಯ ಬಿದ್ದರಷ್ಟೇ ಹಣ ವಿತ್​ಡ್ರಾ ಮಾಡಲು ಸಾಧ್ಯ. ಹೀಗೆ ಹಣ ವಿತ್​ಡ್ರಾ ಮಾಡಬೇಕಾದರೆ ಸಂಸ್ಥೆಯ ಅನುಮತಿ ಬೇಕಾಗುತ್ತದೆ. ಅದು ಬಿಟ್ಟರೆ ಉದ್ಯೋಗಿಯ ಪಿಎಫ್ ಖಾತೆಯ ಮೇಲೆ ಸಂಸ್ಥೆಗೆ ಯಾವುದೇ ನಿಯಂತ್ರಣ ಇರುವುದಿಲ್ಲ.

ಇದನ್ನೂ ಓದಿ: ಶಿವರಾತ್ರಿ, ಹೋಳಿ, ಗುಡ್​ಫ್ರೈಡೆಗೆ ಬ್ಯಾಂಕ್ ರಜೆ ಇದೆಯಾ? ಮಾರ್ಚ್ ತಿಂಗಳ 14 ದಿನ ರಜಾ ಪಟ್ಟಿ

ಹೀಗಾಗಿ, ಉದ್ಯೋಗಿ ತನ್ನ ಪಿಎಫ್ ಖಾತೆ ಚಿಂತೆ ಪಡುವ ಅವಶ್ಯಕತೆ ಇರುವುದಿಲ್ಲ. ಸರ್ಕಾರ ವರ್ಷಕ್ಕೆ ಶೇ. 8ರ ಆಸುಪಾಸಿನಲ್ಲಿ ಬಡ್ಡಿ ತುಂಬಿಸುವುದರಿಂದ ಅದು ಸೇವಿಂಗ್ಸ್ ಮತ್ತು ಇನ್ವೆಸ್ಟ್​ಮೆಂಟ್ ಎರಡೂ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ