Kannada News Business EPFO Joint Declaration : How to Update Online Using the joint declaration form SIU
EPFO Joint Declaration : ಉದ್ಯೋಗದಾರರು ಇಪಿಎಫ್ ಖಾತೆಯ ವಿವರಗಳನ್ನು ತಿದ್ದುಪಡಿ ಮಾಡಬೇಕೆ? ಇಲ್ಲಿದೆ ಸುಲಭ ಮಾರ್ಗ
ಉದ್ಯೋಗದಲ್ಲಿರುವ ಪ್ರತಿಯೊಬ್ಬರು ಕೂಡ ಪಿಎಫ್ ಖಾತೆ ಯನ್ನು ಹೊಂದಿರುತ್ತಾರೆ. ಪ್ರತಿ ತಿಂಗಳ ವೇತನದಲ್ಲಿ ಕನಿಷ್ಠ ಮೊತ್ತವು ಕಡಿತಗೊಂಡು, ಈ ಮೊತ್ತ ನಿವೃತ್ತಿ ಜೀವನದಲ್ಲಿ ಸಹಾಯಕ್ಕೆ ಬರುತ್ತದೆ ಎನ್ನುವುದು ಗೊತ್ತಿರುವ ವಿಚಾರ. ಆದರೆ ಒಂದು ವೇಳೆ ನಿಮ್ಮ ಇಪಿಎಫ್ ದಾಖಲೆಗಳಲ್ಲಿ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕಾಗಿದ್ದರೆ ಇಪಿಎಫ್ಒ ಜಂಟಿ ಘೋಷಣೆ ಫಾರ್ಮ್ ಅನ್ನು ಭರ್ತಿ ಮಾಡಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.
ಬಹುತೇಕ ಕಂಪನಿಗಳಲ್ಲಿ ಪ್ರತಿ ತಿಂಗಳು ನೌಕರರ ವೇತನದಿಂದ ಒಂದು ನಿರ್ದಿಷ್ಟ ಮೊತ್ತವು ಕಡಿತ ಮಾಡಲಾಗುತ್ತದೆ. ಕೆಲಸದಲ್ಲಿರುವ ಉದ್ಯೋಗಿ ಭವಿಷ್ಯ ನಿಧಿ ಫಾರ್ಮ್‌ಗಳನ್ನು ಭರ್ತಿ ಮಾಡಿರುತ್ತಾರೆ. ಆದರೆ ಕೆಲವೊಮ್ಮೆ ಸಣ್ಣ ತಪ್ಪುಗಳಿಂದ ಇಪಿಎಫ್ ಖಾತೆಗಳಲ್ಲಿ ಕೆಲವು ತಪ್ಪುಗಳಾಗಿರಬಹುದು. ಆದರೆ ಉದ್ಯೋಗಿಗಳು ಪಿಎಫ್ ಖಾತೆಯಲ್ಲಿ ನಮೂದಿಸಿದ ತಪ್ಪಾದ ಮಾಹಿತಿಯನ್ನು ಸರಿಪಡಿಸಲು ಜಂಟಿ ಘೋಷಣೆ ಫಾರ್ಮ್ ಬಳಸಿಕೊಳ್ಳಬಹುದಾಗಿದೆ. ಉದ್ಯೋಗಿಯು ಪ್ರಾದೇಶಿಕ ಪಿಎಫ್ ಕಮಿಷನರ್‌ಗೆ ಸಲ್ಲಿಸಬೇಕಾದ ಜಂಟಿ ನಮೂನೆ ಇದಾಗಿದೆ.
ಜಂಟಿ ಘೋಷಣೆಯ ನಮೂನೆ (ಫಾರ್ಮ್ ) ಯ ಉದ್ದೇಶ:
ಉದ್ಯೋಗದಾತರ ಪಿಎಫ್ ಖಾತೆಯಲ್ಲಿ ಯಾವುದೇ ವ್ಯತ್ಯಾಸಗಳಿದ್ದರೂ ಸರಿಪಡಿಸಲು ಅಥವಾ ತಮ್ಮ ಇಪಿಎಫ್ ಖಾತೆಗೆ ಲಿಂಕ್ ಮಾಡಲಾದ ಹೆಸರು, ಜನ್ಮ ದಿನಾಂಕ, ಸಂಪರ್ಕ ವಿವರಗಳು ಅಥವಾ ಬ್ಯಾಂಕ್ ಖಾತೆ ಮಾಹಿತಿಯಂತಹ ಅವರ ವೈಯಕ್ತಿಕ ಮಾಹಿತಿಯನ್ನು ತಿದ್ದುಪಡಿ ಮಾಡಲು ಉದ್ಯೋಗಿಗಳಿಗೆ ಅವಕಾಶವನ್ನು ನೀಡುತ್ತದೆ. ಜಂಟಿ ಘೋಷಣೆಯ ನಮೂನೆ (ಫಾರ್ಮ್) ಉದ್ಯೋಗಿಗಳ ಇಪಿಎಫ್ ದಾಖಲೆಗಳಲ್ಲಿನ ಬದಲಾವಣೆಗೆ ಅನುವು ಮಾಡಿಕೊಡುತ್ತಾರೆ.