How to Claim TDS Refund: TDS ಮರುಪಾವತಿಗಾಗಿ ಕ್ಲೈಮ್ ಮಾಡುವುದು ಹೇಗೆ?
How You Can Claim TDS Refund: ಐಟಿ ಇಲಾಖೆಯಿಂದ ಅನುಮತಿ ಪಡೆದ ನಂತರ ಒಂದೆರೆಡು ತಿಂಗಳಲ್ಲಿ TDS ಮರುಪಾವತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹಾಗೆಯೇ ಫೈನಾನ್ಸ್ ಇಯರ್ನಲ್ಲಿ ಪಾವತಿಸಬೇಕಾದ ಒಟ್ಟು ತೆರಿಗೆಯ ಶೇ. 10 ಕ್ಕಿಂತ ಹೆಚ್ಚಿನ ಮರುಪಾವತಿಯನ್ನು ಪಾವತಿಸಬೇಕಾದ ಸಂದರ್ಭಗಳಲ್ಲಿ, ಮರುಪಾವತಿಯೊಂದಿಗೆ ವಾರ್ಷಿಕ ಶೇ. 6 ರಷ್ಟು ಬಡ್ಡಿದರವನ್ನು ಪಾವತಿಸಲಾಗುತ್ತದೆ.
ಟಿಡಿಎಸ್ ಅಥವಾ ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್ (TDS) ಅಂದರೆ ಉದ್ಯೋಗಿಗಳಿಂದ ನೇರವಾಗಿ ತೆರಿಗೆ ಸಂಗ್ರಹಿಸುವ ವ್ಯವಸ್ಥೆಯಾಗಿದೆ. ಅಂದರೆ ಉದ್ಯೋಗದಾತ ಸಂಸ್ಥೆಗಳು ತಮ್ಮ ನೌಕರರಿಗೆ ವೇತನ ಪಾವತಿಸುವ ಸಂದರ್ಭದಲ್ಲಿ ಆದಾಯ ತೆರಿಗೆಯನ್ನು ಕಡಿತಗೊಳಿಸಬೇಕಾಗುತ್ತದೆ. ಅಲ್ಲದೆ ಅದನ್ನು ನೇರವಾಗಿ ಕೇಂದ್ರ ಸರ್ಕಾರದ ಆದಾಯ ಇಲಾಖೆಗೆ ಪಾವತಿಸುತ್ತಾರೆ. ಆದರೆ ಇಲ್ಲಿ ತೆರಿಗೆ ವಿಧಿಸಬಹುದಾದ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಟಿಡಿಎಸ್ ಅನ್ನು ಕಡಿತಗೊಳಿಸಿದ್ದರೆ, ಅದನ್ನು ಮರಳಿ ಪಡೆಯಬಹುದು. ಇದಕ್ಕಾಗಿ ಟಿಡಿಎಸ್ ಕ್ಲೈಮ್ ಮಾಡಿಕೊಳ್ಳಬೇಕಾಗುತ್ತದೆ.
TDS ಮರುಪಾವತಿಯನ್ನು ಪಡೆಯುವುದು ಹೇಗೆ? ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಕಡಿತವನ್ನು ನಮೂದಿಸುವ ಮೂಲಕ ತಮ್ಮ TDS ಮರುಪಾವತಿಯನ್ನು ಕ್ಲೈಮ್ ಮಾಡಬಹುದು. ಸರಿಯಾದ ಪರಿಶೀಲನೆಯ ನಂತರ, ಐಟಿ ಇಲಾಖೆಯು ನೀವು ಒದಗಿಸಿದ ಬ್ಯಾಂಕ್ ಖಾತೆಗೆ ಹೆಚ್ಚುವರಿ ಮೊತ್ತವನ್ನು ಮರುಪಾವತಿ ಮಾಡುತ್ತದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಯಾವುದೇ ವಿಳಂಬ ಶುಲ್ಕ ಅಥವಾ ದಂಡವಿಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಹೀಗಾಗಿ ಶೀಘ್ರದಲ್ಲೇ ಮರುಪಾವತಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ ಎಂಬ ಪ್ರಕ್ರಿಯೆ ಈ ಕೆಳಗಿನಂತಿದೆ.
- ಟಿಡಿಎಸ್ ಕ್ಲೈಮ್ ಮಾಡುವ ಸುಲಭ ವಿಧಾನವೆಂದರೆ ಅಗತ್ಯ ಮಾಹಿತಿ ಮತ್ತು ಪ್ರಮುಖ ದಾಖಲೆಗಳೊಂದಿಗೆ ನಿಮ್ಮ ಬ್ಯಾಂಕ್‌ಗೆ ಹೋಗಿ ಫಾರ್ಮ್ 15G ಅನ್ನು ಸಲ್ಲಿಸುವುದು. ಇನ್ನು ಆನ್ಲೈನ್ನಲ್ಲೂ ಸಲ್ಲಿಸುವ ಅವಕಾಶವಿದೆ. ಅಂದರೆ ವಾರ್ಷಿಕ ಹಣಕಾಸು ಆಯವ್ಯಯಗಳ ಘೋಷಣೆಯ ಸಮಯದಲ್ಲಿ ಮರುಪಾವತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಟಿಡಿಎಸ್ ಮರುಪಾವತಿ ಸ್ಟೇಟಸ್ ಪರಿಶೀಲಿಸುವುದು ಹೇಗೆ?
- ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ
- ಅಗತ್ಯವಿರುವ ಆಧಾರವನ್ನು ನಮೂದಿಸುವ ಮೂಲಕ ನಿಮ್ಮ ಖಾತೆಗೆ ಸೈನ್ ಇನ್ ಮಾಡಿ.
- ಡ್ರಾಪ್-ಡೌನ್ ಮೆನುವಿನಿಂದ “View Return / Forms” ಆಯ್ಕೆಮಾಡಿ.
- ಡ್ರಾಪ್-ಡೌನ್ ಮೆನುವಿನಿಂದ “Income Tax Returns” ಆಯ್ಕೆಮಾಡಿ.
- ನಂತರ ಸಂಬಂಧಿತ ಮೌಲ್ಯಮಾಪನ ವರ್ಷವನ್ನು ನಮೂದಿಸಿ ಮತ್ತು ಸಬ್ಮಿಟ್ ಬಟನ್ ಕ್ಲಿಕ್ ಮಾಡಿ
- ಅಂತಿಮವಾಗಿ, ನಿಮ್ಮ ವಿನಂತಿಯ ಸ್ಟೇಟಸ್ ಪರಿಶೀಲಿಸಲು ಡ್ರಾಪ್-ಡೌನ್ ಮೆನುವಿನಿಂದ ಸ್ವೀಕೃತಿ ಸಂಖ್ಯೆಯನ್ನು ಆಯ್ಕೆಮಾಡಿ.
NSDL ವೆಬ್‌ಸೈಟ್‌ನಲ್ಲಿರುವ ಮರುಪಾವತಿ ಟ್ರ್ಯಾಕಿಂಗ್ ಪೇಜ್ ಮೂಲಕ ತೆರಿಗೆದಾರರು ತಮ್ಮ TDS ಮರುಪಾವತಿಯ ಸ್ಟೇಟಸ್ ಅನ್ನು ಸಹ ಟ್ರ್ಯಾಕ್ ಮಾಡಬಹುದು . ಇಲ್ಲಿ ವ್ಯಕ್ತಿಯು ಮರುಪಾವತಿಯನ್ನು ಕ್ಲೈಮ್ ಮಾಡಿರುವ ಮೌಲ್ಯಮಾಪನವನ್ನು ಸಲ್ಲಿಸಬೇಕು ಮತ್ತು ಕ್ಯಾಪ್ಚಾ ವಿವರಗಳನ್ನು ಪರಿಶೀಲಿಸುವ ಮೊದಲು ಪ್ಯಾನ್ ಕಾರ್ಡ್ ವಿವರಗಳನ್ನು ಸಲ್ಲಿಸಬೇಕು.
ಐಟಿ ಇಲಾಖೆಯಿಂದ ಅನುಮತಿ ಪಡೆದ ನಂತರ ಒಂದೆರೆಡು ತಿಂಗಳಲ್ಲಿ TDS ಮರುಪಾವತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹಾಗೆಯೇ ಫೈನಾನ್ಸ್ ಇಯರ್ನಲ್ಲಿ ಪಾವತಿಸಬೇಕಾದ ಒಟ್ಟು ತೆರಿಗೆಯ ಶೇ. 10 ಕ್ಕಿಂತ ಹೆಚ್ಚಿನ ಮರುಪಾವತಿಯನ್ನು ಪಾವತಿಸಬೇಕಾದ ಸಂದರ್ಭಗಳಲ್ಲಿ, ಮರುಪಾವತಿಯೊಂದಿಗೆ ವಾರ್ಷಿಕ ಶೇ. 6 ರಷ್ಟು ಬಡ್ಡಿದರವನ್ನು ಪಾವತಿಸಲಾಗುತ್ತದೆ. ಇಲ್ಲಿ ತೆರಿಗೆ ಪಾವತಿದಾರರಿಗೆ ಬಡ್ಡಿ ಪಾವತಿಗೆ ಸಂಬಂಧಿಸಿದಂತೆ ಸೆಕ್ಷನ್ 143 (1) ಅಡಿಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಂದಹಾಗೆ ಯಾವುದೇ ವಿಳಂಬ ಶುಲ್ಕ ಅಥವಾ ದಂಡವಿಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದ್ದು, ಹೀಗಾಗಿ ತಿಂಗಳೊಳಗೆ ಅರ್ಜಿ ಸಲ್ಲಿಸಿ.