Fixed Deposits: ಎಸ್ಬಿಐ Vs ಐಸಿಐಸಿಐ ಬ್ಯಾಂಕ್ Vs ಎಚ್ಡಿಎಫ್ಸಿ ಬ್ಯಾಂಕ್ Vs ಆಕ್ಸಿಸ್ ಬ್ಯಾಂಕ್ ಎಫ್ಡಿ ಬಡ್ಡಿದರಗಳ ವಿವರ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ ಎಫ್ಡಿಯನ್ನು ನೀಡುತ್ತವೆ. ವಿವಿಧ ಬ್ಯಾಂಕ್ಗಳ ಎಫ್ಡಿ ಬಡ್ಡಿ ದರಗಳು ಠೇವಣಿ ಮೊತ್ತ, ಠೇವಣಿ ಅವಧಿ ಮತ್ತು ಠೇವಣಿದಾರರ ವಯಸ್ಸು ಇತ್ಯಾದಿಗಳಿಂದ ಬದಲಾಗುತ್ತವೆ.
ನಿಶ್ಚಿತ ಠೇವಣಿ (Fixed Deposits) ಎಂಬುದು ಬ್ಯಾಂಕ್ಗಳು ನೀಡುವ ಹೂಡಿಕೆಯ ಪ್ರಾಡಕ್ಟ್. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India), ಐಸಿಐಸಿಐ ಬ್ಯಾಂಕ್ (ICICI Bank), ಎಚ್ಡಿಎಫ್ಸಿ ಬ್ಯಾಂಕ್ (HDFC Bank) ಮತ್ತು ಆಕ್ಸಿಸ್ ಬ್ಯಾಂಕ್ (Axis Bank) 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ ಎಫ್ಡಿಯನ್ನು ನೀಡುತ್ತವೆ. ವಿವಿಧ ಬ್ಯಾಂಕ್ಗಳ ಎಫ್ಡಿ ಬಡ್ಡಿ ದರಗಳು ಠೇವಣಿ ಮೊತ್ತ, ಠೇವಣಿ ಅವಧಿ ಮತ್ತು ಠೇವಣಿದಾರರ ವಯಸ್ಸು ಇತ್ಯಾದಿಗಳಿಂದ ಬದಲಾಗುತ್ತವೆ. ಆದ್ದರಿಂದ, ನಿಮ್ಮ ಹಣವನ್ನು ಟರ್ಮ್ ಡೆಪಾಸಿಟ್ನಲ್ಲಿ ಇಡುವ ಮೊದಲು ವಿವಿಧ ಬ್ಯಾಂಕುಗಳು ನೀಡುವ ಬಡ್ಡಿ ದರಗಳನ್ನು ಹೋಲಿಸುವುದು ಯಾವಾಗಲೂ ಉತ್ತಮ.
ಎಸ್ಬಿಐ ಇತ್ತೀಚಿನ ಎಫ್ ಡಿ ದರಗಳು 7 ದಿನಗಳಿಂದ 10 ವರ್ಷಗಳ ಮಧ್ಯದ ಎಸ್ಬಿಐ ಎಫ್ಡಿಗಳು ಸಾಮಾನ್ಯ ಗ್ರಾಹಕರಿಗೆ ಶೇ. 2.9ರಿಂದ ಶೇ. 5.4ರಷ್ಟು ನೀಡಲಿದೆ. ಹಿರಿಯ ನಾಗರಿಕರು ಈ ಠೇವಣಿಗಳ ಮೇಲೆ 50 ಬೇಸಿಸ್ ಪಾಯಿಂಟ್ಗಳನ್ನು (ಬಿಪಿಎಸ್) ಹೆಚ್ಚುವರಿಯಾಗಿ ಪಡೆಯುತ್ತಾರೆ. ಈ ದರಗಳು 8 ಜನವರಿ 2021ರಿಂದ ಜಾರಿಗೆ ಬಂದಿದೆ.
7ರಿಂದ 45 ದಿನಗಳು – ಶೇ 2.9 46ರಿಂದ 179 ದಿನಗಳು- ಶೇ 3.9 180 ದಿನಗಳಿಂದ 210 ದಿನಗಳು- ಶೇ 4.4 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ – ಶೇ 4.4 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ – ಶೇ 5
ಎಚ್ಡಿಎಫ್ಸಿ ಬ್ಯಾಂಕ್ ಇತ್ತೀಚಿನ ಎಫ್ಡಿ ದರಗಳು ಎಚ್ಡಿಎಫ್ಸಿ ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ನಡುವೆ ಮೆಚ್ಯೂರಿಟಿ ಆಗುವ ಠೇವಣಿಗಳ ಮೇಲೆ ಶೇ. 2.50ರಿಂದ ಶೇ.5.50ರ ವರೆಗೆ ಬಡ್ಡಿ ನೀಡುತ್ತದೆ. ಈ ದರಗಳು 21 ಮೇ 2021ರಿಂದ ಜಾರಿಯಲ್ಲಿವೆ. ಎಚ್ಡಿಎಫ್ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ಎಫ್ಡಿಗಳ ಮೇಲೆ ಶೇ. 3ರಿಂದ ಶೇ. 6.25ರವರೆಗೆ ಬಡ್ಡಿ ದರಗಳನ್ನು ನೀಡುತ್ತದೆ.
7 – 14 ದಿನಗಳು ಶೇ 2.50 15 – 29 ದಿನಗಳು ಶೇ 2.50 30 – 45 ದಿನಗಳು ಶೇ 3 61 – 90 ದಿನಗಳು ಶೇ 3 91 ದಿನಗಳು – 6 ತಿಂಗಳು ಶೇ 3.5 6 ತಿಂಗಳು 1 ದಿನ – 9 ತಿಂಗಳು ಶೇ 4.4 9 ತಿಂಗಳು 1 ದಿನ < 1 ವರ್ಷ ಶೇ 4.4 1 ವರ್ಷ – ಶೇ 4.9 1 ವರ್ಷ 1 ದಿನ – 2 ವರ್ಷ ಶೇ 4.9 2 ವರ್ಷ 1 ದಿನ – 3 ವರ್ಷ ಶೇ 5.15 3 ವರ್ಷ 1 ದಿನ- 5 ವರ್ಷ ಶೇ 5.30 5 ವರ್ಷ 1 ದಿನ – 10 ವರ್ಷ ಶೇ 5.50
ಐಸಿಐಸಿಐ ಬ್ಯಾಂಕ್ ಇತ್ತೀಚಿನ ಎಫ್ ಡಿ ದರಗಳು ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ಠೇವಣಿಗಳ ಮೇಲೆ ಶೇ. 2.5ರಿಂದ ಶೇ. 5.50ರವರೆಗೆ ಬಡ್ಡಿ ದರಗಳನ್ನು ನೀಡುತ್ತದೆ. ಈ ದರಗಳು ಅಕ್ಟೋಬರ್ 21ರಿಂದ ಅನ್ವಯ ಆಗಿವೆ. ಹಿರಿಯ ನಾಗರಿಕರು ಇತರರಿಗಿಂತ 50 ಬೇಸಿಸ್ ಪಾಯಿಂಟ್ (ಬಿಪಿಎಸ್) ಹೆಚ್ಚಿನ ಬಡ್ಡಿ ದರವನ್ನು ಪಡೆಯುತ್ತಾರೆ.
7 ದಿನಗಳಿಂದ 14 ದಿನಗಳು – ಶೇ 2.50 15 ದಿನಗಳಿಂದ 29 ದಿನಗಳು – ಶೇ 2.50 30 ದಿನಗಳಿಂದ 45 ದಿನಗಳು – ಶೇ 3 46 ದಿನಗಳಿಂದ 60 ದಿನಗಳು – ಶೇ 3 61 ದಿನಗಳಿಂದ 90 ದಿನಗಳವರೆಗೆ- ಶೇ 3 91 ದಿನಗಳಿಂದ 120 ದಿನಗಳು – ಶೇ 3.5 121 ದಿನಗಳಿಂದ 184 ದಿನಗಳು – ಶೇ 3.5 185 ದಿನಗಳಿಂದ 210 ದಿನಗಳು – ಶೇ 4.40 211 ದಿನಗಳಿಂದ 270 ದಿನಗಳು – ಶೇ 4.40 271 ದಿನಗಳಿಂದ 289 ದಿನಗಳು – ಶೇ 4.40 290 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ – ಶೇ 4.40 1 ವರ್ಷದಿಂದ 389 ದಿನಗಳು – ಶೇ 4.9 390 ದಿನಗಳಿಂದ < 18 ತಿಂಗಳುಗಳು – ಶೇ 4.9 18 ತಿಂಗಳುಗಳಿಂದ 2 ವರ್ಷಗಳವರೆಗೆ – ಶೇ 5 2 ವರ್ಷ 1 ದಿನದಿಂದ 3 ವರ್ಷ – ಶೇ 5.15 3 ವರ್ಷ 1 ದಿನದಿಂದ 5 ವರ್ಷ – ಶೇ 5.35 5 ವರ್ಷ 1 ದಿನದಿಂದ 10 ವರ್ಷ – ಶೇ 5.50
ಆಕ್ಸಿಸ್ ಬ್ಯಾಂಕ್ ಎಫ್ ಡಿ ದರಗಳು ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ಅವಧಿ ಠೇವಣಿಗಳ ಮೇಲೆ ಶೇ 2.50 ರಿಂದ ಶೇ 5.75 ಬಡ್ಡಿ ದರವನ್ನು ನೀಡುತ್ತದೆ. ಈ ದರಗಳು 26 ಜೂನ್ 2021 ರಿಂದ ಜಾರಿಗೆ ಬಂದಿದೆ. 7 ದಿನಗಳಿಂದ 14 ದಿನ- ಶೇ 2.50 15 ದಿನಗಳಿಂದ 29 ದಿನಗಳು- ಶೇ 2.50 30 ದಿನಗಳಿಂದ 45 ದಿನಗಳು- ಶೇ 3 46 ದಿನಗಳಿಂದ 60 ದಿನಗಳು- ಶೇ 3 61 ದಿನಗಳು < 3 ತಿಂಗಳು- ಶೇ 3 3 ತಿಂಗಳು < 4 ತಿಂಗಳು- ಶೇ 3.5 4 ತಿಂಗಳು < 5 ತಿಂಗಳು- ಶೇ 3.5 5 ತಿಂಗಳು < 6 ತಿಂಗಳು- ಶೇ 3.5 6 ತಿಂಗಳು < 7 ತಿಂಗಳು- ಶೇ 4.40 7 ತಿಂಗಳು < 8 ತಿಂಗಳು- ಶೇ 4.40 8 ತಿಂಗಳು < 9 ತಿಂಗಳು- ಶೇ 4.40 9 ತಿಂಗಳು < 10 ತಿಂಗಳು- ಶೇ 4.40 10 ತಿಂಗಳು < 11 ತಿಂಗಳು- ಶೇ 4.40 11 ತಿಂಗಳು < 11 ತಿಂಗಳು 25 ದಿನಗಳು- ಶೇ 4.40 11 ತಿಂಗಳು 25 ದಿನಗಳು < 1 ವರ್ಷ- ಶೇ 4.40 1 ವರ್ಷ < 1 ವರ್ಷ 5 ದಿನಗಳು- ಶೇ 5.10% 1 ವರ್ಷ 5 ದಿನಗಳು < 1 ವರ್ಷ 11 ದಿನಗಳು- ಶೇ 5.15 1 ವರ್ಷ 11 ದಿನಗಳು < 1 ವರ್ಷ 25 ದಿನಗಳು- ಶೇ 5.10 1 ವರ್ಷ 25 ದಿನಗಳು < 13 ತಿಂಗಳು- ಶೇ 5.10 13 ತಿಂಗಳು < 14 ತಿಂಗಳು- ಶೇ 5.10 14 ತಿಂಗಳು < 15 ತಿಂಗಳು- ಶೇ 5.10 15 ತಿಂಗಳು < 16 ತಿಂಗಳು- ಶೇ 5.10 16 ತಿಂಗಳು < 17 ತಿಂಗಳು- ಶೇ 5.10 17 ತಿಂಗಳು < 18 ತಿಂಗಳು- ಶೇ 5.10 18 ತಿಂಗಳು < 2 ವರ್ಷಗಳು- ಶೇ 5.25 2 ವರ್ಷ < 30 ತಿಂಗಳು- ಶೇ 5.40 30 ತಿಂಗಳು < 3 ವರ್ಷ- ಶೇ 5.40 3 ವರ್ಷ < 5 ವರ್ಷ- ಶೇ 5.40 5 ವರ್ಷಗಳಿಂದ 10 ವರ್ಷ- ಶೇ 5.75
ಇದನ್ನೂ ಓದಿ: SBI Savings Plus: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಈ ಉಳಿತಾಯ ಖಾತೆ ಮೇಲೆ ಹೆಚ್ಚು ಬಡ್ಡಿ
(Here is the comparison of India’s major banks FD rate of interest including SBI, HDFC Bank, ICICI Bank, Axis Bank)