ಮೈಸೂರು: ಹಾರುವ ಎಲೆಕ್ಟ್ರಿಕ್ ಕಾರು (Flying Electric Vehicle) ಮತ್ತು ಡ್ರೋನ್ಗಳ ನಿರ್ಮಾಣಕ್ಕೆ ಬೆಂಗಳೂರು ಮತ್ತು ಮೈಸೂರಿನ ಟೆಕ್ ಕಂಪನಿಗಳೆರಡು ಐಐಟಿ ಮದ್ರಾಸ್ ಸ್ಥಾಪಿತ ಇಪ್ಲೇನ್ (ePlane) ಎಂಬ ಕಂಪನಿ ಜೊತೆ ಎಂಒಯು ಒಪ್ಪಂದ ಮಾಡಿಕೊಂಡಿದೆ. ಇಪ್ಲೇನ್ ಕಂಪನಿ ಎಲೆಕ್ಟ್ರಿಕ್ ಟ್ಯಾಕ್ಸಿ ಮತ್ತು ಡ್ರೋನ್ ಸಿಸ್ಟಂಗಳ ನಿರ್ಮಾಣದಲ್ಲಿ ಸ್ಪೆಷಲಿಸ್ಟ್ ಎನಿಸಿದೆ. ಇದರೊಂದಿಗೆ ಎಂಒಯು ಮಾಡಿಕೊಂಡಿರುವುದು ವಿನ್ಯಾಸ್ ಇನೊವೇಟಿವ್ ಟೆಕ್ನಾಲಜೀಸ್ ಮತ್ತು ಪ್ರಿಂಟಾಲಿಟಿಕ್ಸ್ ಸಂಸ್ಥೆಗಳು. ವಿನ್ಯಾಸ್ ಇನೋವೇಟಿವ್ ಟೆಕ್ನಾಲಜೀಸ್ ಸಂಸ್ಥೆ ಮೈಸೂರಿನದ್ದಾದರೆ, ಪ್ರಿಂಟಾಲಿಟಿಕ್ಸ್ ಬೆಂಗಳೂರು ಮೂಲದ ಕಂಪನಿ. ಮೇ 18ರಂದು ಮೈಸೂರಿನಲ್ಲಿ ಎಂಒಯುಗೆ ಸಹಿಬಿದ್ದಿದೆ.
ಮೈಸೂರಿನ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಸಂಸ್ಥೆ ವಿವಿಧ ರೀತಿಯ ಡ್ರೋನ್ಗಳು ಮತ್ತು ಚಾಲಕರಹಿತ ವಿಮಾನಗಳನ್ನು (UAV- Unmanned Aerial Vehicle) ತಯಾರಿಸಲಿದೆ. ಇವುಗಳ ಸರ್ವಿಸಿಂಗ್ ಮತ್ತು ಮಾರ್ಕೆಂಟಿಂಗ್ ಹೊಣೆಯನ್ನೂ ಹೊತ್ತುಕೊಂಡಿದೆ. ಇನ್ನು, ಬೆಂಗಳೂರಿನ ಪ್ರಿಂಟಾಲಿಟಿಕ್ಸ್ ಸಂಸ್ಥೆ ಈ ಯುಎವಿ ಮತ್ತು ಫ್ಲೈಯಿಂಗ್ ಟ್ಯಾಕ್ಸಿಗಳ ತಯಾರಿಕೆಗೆ ಬೇಕಾದ ಮೆಕ್ಯಾನಿಕಲ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಸಪೋರ್ಟ್ ಒದಗಿಸಲಿದೆ.
ಐಐಟಿ ಮದ್ರಾಸ್ನಿಂದ ಸ್ಥಾಪಿತವಾದ ಇಪ್ಲೇನ್ ಕಂಪನಿ ಬಳಿ ಡ್ರೋನ್, ಯುಎವಿ, ಫ್ಲೈಯಿಂಗ್ ಟ್ಯಾಕ್ಸಿಗಳ ನಿರ್ಮಾಣಕ್ಕೆ ಬೇಕಾದ ತಂತ್ರಜ್ಞಾನ ಮತ್ತಿತರ ಎಲ್ಲವೂ ಜ್ಞಾನವೂ ಇದೆ. ಇದರ ನೆರವಿನಿಂದ ಈ ವಾಯು ವಾಹನಗಳ ನಿರ್ಮಾಣವಾಗಲಿದೆ. ಮೈಸೂರಿನಲ್ಲಿ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಸಂಸ್ಥೆಯ ಉತ್ಪಾದಕ ಘಟಕ ಇದ್ದು, ಅಲ್ಲಿಯೇ ಈ ಬ್ಯಾಟರಿ ಚಾಲಿತ ಹಾರುವ ವಾಹನಗಳ ತಯಾರಿಕೆ ನಡೆಯಲಿದೆ.
ಆದರೆ, ಸದ್ಯ ಯಾವಾಗಿನಿಂದ ಏರಿಯಲ್ ವಾಹನಗಳ ತಯಾರಿಕೆ ನಡೆಯುತ್ತದೆ ಎಂಬ ಮಾಹಿತಿ ಗೊತ್ತಾಗಿಲ್ಲ. ಇಲ್ಲಿ ಸಿದ್ಧವಾಗುವ ವಾಹನಗಳು ಎಲ್ಲೆಲ್ಲಿ ಬಳಕೆಯಾಗುತ್ತದೆ ಎಂಬುದೂ ಗೊತ್ತಿಲ್ಲ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಇಪ್ಲೇನ್ ವಿಶ್ವದ ಅತ್ಯಂತ ಕಾಂಪ್ಯಾಕ್ಟ್ ಫ್ಲೈಯಿಂಗ್ ಎಲೆಕ್ಟ್ರಿಕ್ ಟ್ಯಾಕ್ಸಿ ನಿರ್ಮಿಸುತ್ತದೆ. ವಿಶ್ವದಲ್ಲಿ ಎಲ್ಲೆಲ್ಲಿ ಇದರ ಟ್ಯಾಕ್ಸಿಗಳನ್ನು ಕೊಳ್ಳಲು ಒಪ್ಪಂದವಾಗಿದೆ ಎಂಬುದು ತಿಳಿದಿಲ್ಲ. ಭಾರತದಲ್ಲಿ ಈ ಫ್ಲೈಯಿಂಗ್ ಟ್ಕಾಕ್ಸಿ ಓಡಾಟ ನಡೆಸುತ್ತಾ ಕಾದುನೋಡಬೇಕು. ಆದರೆ, ಇಪ್ಲೇನ್ ಈ ಫ್ಲೈಯಿಂಗ್ ಕಾರಿನ ಪ್ರೋಟೋಟೈಪ್ ನಿರ್ಮಿಸಿ ಬೆಂಗಳೂರಿನ ಏರೋ ಇಂಡಿಯಾ 2023 ಶೋನದಲ್ಲಿ ಪ್ರದರ್ಶಿಸಿತ್ತು.
ಇದನ್ನೂ ಓದಿ: Super Rich: ಭಾರತದಲ್ಲಿ ನೂರಕ್ಕೊಬ್ಬ ಶ್ರೀಮಂತರ ಗುಂಪಿಗೆ ಸೇರಬೇಕಾ? ನಿಮಗೆಷ್ಟು ಕೋಟಿ ಹಣವಿರಬೇಕು? ಇಲ್ಲಿದೆ ಡೀಟೇಲ್ಸ್
2017ರಲ್ಲಿ ಆರಂಭವಾದ ಇಪ್ಲೇನ್ ಕಂಪನಿಯ ಹಾರುವ ವಾಹನಗಳು ಎಸ್ಯುವಿ ಕಾರಿನ ಗಾತ್ರ ಇದ್ದು, ಒಮ್ಮೆ ಚಾರ್ಜ್ ಮಾಡಿದರೆ 200 ಕಿಮೀ ದೂರದದವರೆಗೂ ಸಾಗಬಲ್ಲುದು. ಆದರೆ, ಎಷ್ಟು ಮಂದಿ ಈ ಟ್ಯಾಕ್ಸಿಯಲ್ಲಿ ಕೂರಬಹುದು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಸದ್ಯಲ್ಲಿ ಕೆಲವೇ ವರ್ಷಗಳಲ್ಲಿ ಭಾರತದ ನಗರಗಳ ಮೇಲೆ ಹಾರುವ ಕಾರುಗಳ ಹಾರಾಟ ಕಾಣಬಹುದು ಎಂಬುದು ಮಾತ್ರ ನಿಜ