GDP Data: ಇಗೋ ನೋಡಿ ಭಾರತದ ಆರ್ಥಿಕ ಬೆಳವಣಿಗೆ; ಕೊನೆಯ ಕ್ವಾರ್ಟರ್​ನಲ್ಲಿ ಶೇ. 6.1, ಇಡೀ ವರ್ಷದಲ್ಲಿ ಶೇ. 7.2 ಜಿಡಿಪಿ ವೃದ್ಧಿ

Indian Economic Growth: 2023ರ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ 43.62 ಲಕ್ಷ ಕೋಟಿ ಆಗಿದೆ. ಹಿಂದಿನ ವರ್ಷದ ಈ ಅವಧಿಗೆ ಹೋಲಿಸಿದರೆ ಶೇ. 6.1ರಷ್ಟು ಹೆಚ್ಚಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಜಿಡಿಪಿ ವೃದ್ಧಿ ಶೇ. 7.2ರಷ್ಟಿದೆ.

GDP Data: ಇಗೋ ನೋಡಿ ಭಾರತದ ಆರ್ಥಿಕ ಬೆಳವಣಿಗೆ; ಕೊನೆಯ ಕ್ವಾರ್ಟರ್​ನಲ್ಲಿ ಶೇ. 6.1, ಇಡೀ ವರ್ಷದಲ್ಲಿ ಶೇ. 7.2 ಜಿಡಿಪಿ ವೃದ್ಧಿ
ಜಿಡಿಪಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 31, 2023 | 6:28 PM

ನವದೆಹಲಿ: ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯ ಜಿಡಿಪಿ ದತ್ತಾಂಶ (GDP Data) ಬಿಡುಗಡೆ ಆಗಿದ್ದು, ಈ ಸಮಯದಲ್ಲಿ ಶೇ. 6.1ರಷ್ಟು ಬೆಳವಣಿಗೆ ಆಗಿರುವುದು ಗೊತ್ತಾಗಿದೆ. ಇದು ಕೊನೆಯ ತ್ರೈಮಾಸಿಕವಾಗಿರುವುದರಿಂದ 2022-23ರ ಇಡೀ ಹಣಕಾಸು ವರ್ಷದ (Financial Year) ಜಿಡಿಪಿ ಬೆಳವಣಿಗೆಯ ಲೆಕ್ಕ ಸಿಕ್ಕಂತಾಗಿದೆ. ಹಿಂದಿನ ಮೂರು ಕ್ವಾರ್ಟರ್​ಗಳ ಜಿಡಿಪಿ ಬೆಳವಣಿಗೆಯನ್ನೂ ಸೇರಿಸಿದರೆ 23ರ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಆರ್ಥಿಕ ಅಭಿವೃದ್ಧಿ ಆಗಿರುವುದು ಕಂಡುಬರುತ್ತದೆ.

ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ (Statistics and Programme Implementation Ministry) ಮೇ 31ರಂದು ಜಿಡಿಪಿ ದತ್ತಾಂಶದ ವರದಿ ಬಿಡುಗಡೆ ಮಾಡಿದೆ. ಅದರ ಪ್ರಕಾರ 2022-23ರ ಹಣಕಾಸು ವರ್ಷದಲ್ಲಿ ಜಿಡಿಪಿ 43.62 ಲಕ್ಷ ಕೋಟಿ ರೂ ಆಗಿದ್ದಿರಬಹುದು. ಇದು 2011-12ರ ದರಗಳನ್ನು ಬೇಸ್ ಆಗಿರಿಸಿ ಮಾಡಿದ ಲೆಕ್ಕಾಚಾರ. ಹಿಂದಿನ ಹಣಕಾಸು ವರ್ಷದ ಇದೇ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ, ಅಂದರೆ 2022ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ 41.12 ಲಕ್ಷ ಕೋಟಿ ರೂನಷ್ಟು ಜಿಡಿಪಿ ಇತ್ತು. ಅದಕ್ಕೆ ಹೋಲಿಸಿದರೆ ಜಿಡಿಪಿ ಶೇ. 6.1ರಷ್ಟು ಬೆಳೆದಿದೆ. ಈಗಿನ ಬೆಲೆಗಳನ್ನು ಆಧಾರವಾಗಿ ಇಟ್ಟುಕೊಂಡರೆ ಈ ಕ್ವಾರ್ಟರ್​ನಲ್ಲಿ ಜಿಡಿಪಿ 71.82 ಲಕ್ಷ ಕೋಟಿ ರೂ ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 10.4ರಷ್ಟು ಜಿಡಿಪಿ ವೃದ್ಧಿಯಾಗಿದೆ.

ಇದನ್ನೂ ಓದಿFiscal Deficit: ವಿತ್ತೀಯ ಕೊರತೆ ಶೇ. 6.4: 2022-23ರ ಗುರಿ ಮುಟ್ಟಿದ ಸರ್ಕಾರ; ಅನುಕೂಲವಾದ ಅಂಶಗಳೇನು?

2023ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಯಾವ್ಯಾವ ವಲಯ ಎಷ್ಟೆಷ್ಟು ವೃದ್ಧಿ?

  • ಕೃಷಿ ವಲಯ: ಶೇ. 10.3ರಷ್ಟು ವೃದ್ಧಿ
  • ಗಣಿಗಾರಿಕೆ ವಲಯ: ಶೇ. 16.3ರಷ್ಟು ವೃದ್ಧಿ
  • ನಿರ್ಮಾಣ ವಲಯ: ಶೇ. 10.4ರಷ್ಟು ವೃದ್ಧಿ

2022-23ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ, ಅಂದರೆ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ ಬರೋಬ್ಬರಿ ಶೇ. 13.1ರಷ್ಟು ಬೆಳವಣಿಗೆ ಕಂಡಿತ್ತು. ಅದಾದ ನಂತರದ ಮೂರು ಕ್ವಾರ್ಟರ್​ಗಳಲ್ಲಿ ಕ್ರಮವಾಗಿ ಶೇ. 6.2, ಶೇ. 4.5 ಮತ್ತು ಶೇ. 6.1ರಷ್ಟು ಜಿಡಿಪಿ ವೃದ್ಧಿ ಕಂಡಿದೆ.

ಇದನ್ನೂ ಓದಿIndian Growth: 2013ಕ್ಕೆ ಮುಂಚಿನ ಭಾರತವೇ ಬೇರೆ, ಈಗಿನ ಭಾರತವೇ ಬೇರೆ; ಶಹಬ್ಬಾಸ್​ಗಿರಿ ನೀಡಿದ ಜಾಗತಿಕ ಹಣಕಾಸು ದೈತ್ಯ ಮಾರ್ಗನ್ ಸ್ಟಾನ್ಲೀ

ಕೊನೆಯ ಕ್ವಾರ್ಟರ್​ನಲ್ಲಿ ಹಲವು ಸಂಸ್ಥೆಗಳು ಮತ್ತು ಆರ್ಥಿಕ ತಜ್ಞರು ಮಾಡಿದ್ದ ಅಂದಾಜಿಗಿಂತ ಹೆಚ್ಚು ಬೆಳವಣಿಗೆಯಾಗಿದೆ ನಾಲ್ಕನೇ ಕ್ವಾರ್ಟರ್​ನ ಜಿಡಿಪಿ. 2023ರ ಜನವರಿಯಿಂದ ಮಾರ್ಚ್​ವರೆಗಿನ ಆ ಕ್ವಾರ್ಟರ್​ನಲ್ಲಿ ಜಿಡಿಪಿ ವೃದ್ಧಿ ಶೇ. 5.1 ಇರಬಹುದು ಎಂದು ಆರ್​ಬಿಐ ಅಂದಾಜು ಮಾಡಿತ್ತು. ಎಸ್​ಬಿಐ ಪ್ರಕಾರ ಶೇ. 5.5, ರಾಯ್ಟರ್ಸ್ ಅಭಿಮತದ ಪ್ರಕಾರ ಶೇ. 5 ಮಾತ್ರ ಇರಬಹುದು ಎಂದು ಭಾವಿಸಲಾಗಿತ್ತು. ಆದರೆ, ವಾಸ್ತವದಲ್ಲಿ ನಿರೀಕ್ಷೆಮೀರಿದಷ್ಟು ಪ್ರಗತಿಯನ್ನು ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಭಾರತ ಕಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ