Gold Rate Today: ಗ್ರಾಹಕರಿಗೆ ಶುಭ ಸುದ್ಧಿ; ಬೆಂಗಳೂರಿನಲ್ಲಿ ಚಿನ್ನದ ದರ 1,000 ರೂ. ಇಳಿಕೆ; ಬೆಳ್ಳಿ ಬೆಲೆಯೂ ಇಳಿಕೆ? ವಿವರ ಹೀಗಿದೆ

Gold Silver Price Today: ನಿನ್ನೆ ದರ ಏರಿಕೆಯ ಬಳಿಕ ಬೆಂಗಳೂರಿನಲ್ಲಿ ಚಿನ್ನದ ದರ 50,000ದ ಗಡಿ ದಾಟಿತ್ತು. ಇಂದು ಸ್ವಲ್ಪ ಪ್ರಮಾಣದಲ್ಲಿಯೇ ಇಳಿಕೆ ಕಂಡಿದ್ದರಿಂದ 49 ಸಾವಿರದ ಆಸು-ಪಾಸಿನಲ್ಲಿದೆ. ಕಳೆದೆರಡು ದಿನಗಳಿಂದ ಬೆಳ್ಳಿ ಬೆಲೆ ಏರಿಕೆಯತ್ತ ಸಾಗುತ್ತಿದ್ದು, ಇಂದು ಸ್ಥಿರವಾಗಿ ಉಳಿದಿದೆ.

Gold Rate Today: ಗ್ರಾಹಕರಿಗೆ ಶುಭ ಸುದ್ಧಿ; ಬೆಂಗಳೂರಿನಲ್ಲಿ ಚಿನ್ನದ ದರ 1,000 ರೂ. ಇಳಿಕೆ; ಬೆಳ್ಳಿ ಬೆಲೆಯೂ ಇಳಿಕೆ? ವಿವರ ಹೀಗಿದೆ
ಸಾಂದರ್ಭಿಕ ಚಿತ್ರ

Gold Silver Rate Today | ಬೆಂಗಳೂರು: ಚಿನ್ನದ ದರ ಏರಿಕೆಯತ್ತ ಸಾಗುತ್ತಿರುವಾಗ ಚಿನ್ನ ಪ್ರಿಯರು ಕೊಂಚ ಬೇಸರಗೊಂಡಿದ್ದರು. ಇಳಿಕೆಯತ್ತ ಸಾಗುವುದು ಯಾವಾಗ ಎಂಬುದೇ ಗ್ರಾಹಕ ಮುಂದಿರುವ ಪ್ರಶ್ನೆಯಾಗಿತ್ತು. ಇಂದು (ಶುಕ್ರವಾರ ಜೂನ್​ 11) ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದೆ. ಚಿನ್ನದ ಮೇಲೆ ಮೋಹ ಉಳ್ಳವರಿಗೆ ಖುಷಿಯ ವಿಚಾರ. 22 ಕ್ಯಾರೆಟ್​ 100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 1,000 ರೂಪಾಯಿ ಇಳಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನ 45,800 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನ 4,58,000 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,970 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ದರ 4,99,700 ರೂಪಾಯಿಗೆ ಇಳಿದಿದೆ.

ನಿನ್ನೆ ದರ ಏರಿಕೆಯ ಬಳಿಕ ಬೆಂಗಳೂರಿನಲ್ಲಿ ಚಿನ್ನದ ದರ 50,000ದ ಗಡಿ ದಾಟಿತ್ತು. ಇಂದು ಸ್ವಲ್ಪ ಪ್ರಮಾಣದಲ್ಲಿಯೇ ಇಳಿಕೆ ಕಂಡಿದ್ದರಿಂದ 49 ಸಾವಿರದ ಆಸು-ಪಾಸಿನಲ್ಲಿದೆ. ಕಳೆದೆರಡು ದಿನಗಳಿಂದ ಬೆಳ್ಳಿ ಬೆಲೆ ಏರಿಕೆಯತ್ತ ಸಾಗುತ್ತಿದೆ. ಆದರೆ ಇಂದು ಸ್ಥಿರವಾಗಿ ಉಳಿದಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಕೆಜಿ ಬೆಳ್ಳಿ ಬೆಲೆ 71,400 ರೂಪಾಯಿ ಆಗಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 100 ಗ್ರಾಂ ಚಿನ್ನದ ದರ 1,500 ರೂಪಾಯಿ ಇಳಿಕೆ ಕಂಡಿದೆ. ಆ ಮೂಲಕ 4,61,500 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ದರ 46,150 ರೂಪಾಯಿ ಇಳಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,350 ರೂಪಾಯಿ ನಿಗದಿಯಾಗಿದೆ. ಹಾಗೂ 100 ಗ್ರಾಂ ಚಿನ್ನದ ದರ 5,03,500 ರೂಪಾಯಿ ಆಗಿದೆ. ಇನ್ನು, ಕೆಜಿ ಬೆಳ್ಳಿ ದರ 76,100 ರೂಪಾಯಿ ಇದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 100 ಗ್ರಾಂ ಚಿನ್ನದ ದರ 900 ರೂಪಾಯಿ ಇಳಿಕೆ ಬಳಿಕ 4,79,500 ರೂಪಾಯಿ ನಿಗದಿಯಾಗಿದೆ. ಹಾಗೂ 10 ಗ್ರಾಂ ಚಿನ್ನದ ದರ 47,950 ರೂಪಾಯಿಗೆ ಕುಸಿದಿದೆ. 24 ಕ್ಯಾರೆಟ್​ 100 ಗ್ರಾಂ ಚಿನ್ನದ ದರದಲ್ಲಿ 1,200 ರೂಪಅಯಿ ಇಳಿಕೆಯಾಗಿದೆ. ಆ ಮೂಲಕ 5,23,000 ರೂಪಾಯಿ ನಿದಿಯಾಗಿದೆ. 10 ಗ್ರಾಂ ಚಿನ್ನ 52,300 ರೂಪಾಯಿಗೆ ಕುಸಿದಿದೆ. ಇನ್ನು, ಕೆಜಿ ಬೆಳ್ಳಿ ದರ 71,400 ರೂಪಾಯಿ ಇದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಇಂದು ಚಿನ್ನದ ದರ ಏರಿಕೆ ಆಗಿದೆ. 22 ಕ್ಯಾರೆಟ್ 100 ಗ್ರಾಂ ಚಿನ್ನದಲ್ಲಿ 2,000 ರೂಪಾಯಿ ಏರಿಕೆ ಆಗಿದೆ. ಆ ಮೂಲಕ 4,78,800 ರೂಪಾಯಿ ನಿಗದಿಯಾಗಿದೆ. 10 ಗ್ರಾಂ ಚಿನ್ನದ ದರ 47,880 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ದರದಲ್ಲಿ 200 ರೂಪಾಯಿ ಏರಿಕೆ ಬಳಿಕ 48,880 ರೂಪಾಯಿ ಆಗಿದೆ. ಹಾಗೂ 100 ಗ್ರಾಂ ಚಿನ್ನದ ದರ 4,88,800 ರೂಪಾಯಿಗೆ ಏರಿಕೆ ಆಗಿದೆ. ಇನ್ನು, ಕೆಜಿ ಬೆಳ್ಳಿ ಬೆಲೆಯಲ್ಲಿ ಹೆಚ್ಚಳವಾಗಲೀ ಅಥವಾ ಇಳಿಕೆಯಾಗಲೀ ಕಂಡು ಬಂದಿಲ್ಲ. ಆ ಮೂಲಕ 71,400 ರೂಪಾಯಿ ನಿಗದಿಯಾಗಿದೆ.

ಇದನ್ನೂ ಓದಿ:

Gold Silver Rate Today: ಬೆಂಗಳೂರು ನಗರದಲ್ಲಿ ಚಿನ್ನದ ದರ 50,090 ರೂಪಾಯಿ! ವಿವಿಧ ನಗರಗಳಲ್ಲಿ ಆಭರಣ ಬೆಲೆ ಎಷ್ಟಿದೆ?

Gold Silver Rate Today: ಚಿನ್ನದ ದರ ಏರಿಕೆ, ಬೆಳ್ಳಿ ಬೆಲೆ ಇಳಿಕೆ! ಬೆಂಗಳೂರು, ದೆಹಲಿ, ಚೆನ್ನೈನಲ್ಲಿ ಆಭರಣದ ದರ ವಿವರ ಹೀಗಿದೆ!