Gold Price Today: ಮುಂದುವರಿದ ಬೆಳ್ಳಿ ಬೆಲೆ ಏರಿಕೆ, ಚಿನ್ನವೂ ದುಬಾರಿ; ಇಲ್ಲಿದೆ ನೋಡಿ ಪೂರ್ಣ ವಿವರ

Ganapathi Sharma

Ganapathi Sharma |

Updated on: Jan 25, 2023 | 5:00 AM

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಮುಂದುವರಿದ ಬೆಳ್ಳಿ ಬೆಲೆ ಏರಿಕೆ, ಚಿನ್ನವೂ ದುಬಾರಿ; ಇಲ್ಲಿದೆ ನೋಡಿ ಪೂರ್ಣ ವಿವರ
ಚಿನ್ನದ ದರ (ಸಾಂದರ್ಭಿಕ ಚಿತ್ರ)
Image Credit source: PTI

Gold Silver Price in Bangalore | ಬೆಂಗಳೂರು: ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನವೂ ಏರಿಕೆಯಾಗಿದೆ. ಜತೆಗೆ, ಹಿಂದಿನ ದಿನ ತಟಸ್ಥವಾಗಿದ್ದ ಬೆಳ್ಳಿ ದರ ಮತ್ತೆ ಏರಿಕೆಯಾಗಿದೆ. ಇದರೊಂದಿಗೆ ಚಿನ್ನ, ಬೆಳ್ಳಿ ದರದ ಏರಿಳಿತ ಮುಂದುವರಿದಂತಾಗಿದೆ. ಇಂದು 22 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ 350 ರೂ. ಏರಿಕೆಯಾದರೆ, 24 ಕ್ಯಾರೆಟ್​​ನ 10 ಗ್ರಾಂ ಚಿನ್ನದ ಬೆಲೆ 380 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ 100 ರೂ. ಹೆಚ್ಚಳವಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 350 ರೂ. ಏರಿಕೆಯಾಗಿ 52,700 ರೂ. ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 380 ರೂ. ಹೆಚ್ಚಳವಾಗಿ 57,490 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂ. ಹೆಚ್ಚಾಗಿ 72,500 ರೂ. ಆಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

 • ಚೆನ್ನೈ – 53,550 ರೂ.
 • ಮುಂಬೈ- 52,700 ರೂ.
 • ದೆಹಲಿ- 52,850 ರೂ.
 • ಕೊಲ್ಕತ್ತಾ- 52,700 ರೂ.
 • ಬೆಂಗಳೂರು- 52,750 ರೂ.
 • ಹೈದರಾಬಾದ್- 52,700 ರೂ.
 • ಕೇರಳ- 52,700 ರೂ.
 • ಪುಣೆ- 52,700 ರೂ.
 • ಮಂಗಳೂರು- 52,750 ರೂ.
 • ಮೈಸೂರು- 52,750 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

 • ಚೆನ್ನೈ- 58,420 ರೂ.
 • ಮುಂಬೈ- 57,490 ರೂ.
 • ದೆಹಲಿ- 57,650 ರೂ.
 • ಕೊಲ್ಕತ್ತಾ- 57,490 ರೂ.
 • ಬೆಂಗಳೂರು- 57,550 ರೂ.
 • ಹೈದರಾಬಾದ್- 57,490 ರೂ.
 • ಕೇರಳ- 57,490 ರೂ.
 • ಪುಣೆ- 57,490 ರೂ.
 • ಮಂಗಳೂರು- 57,550 ರೂ.
 • ಮೈಸೂರು- 57,550 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

 • ಬೆಂಗಳೂರು- 74,000 ರೂ.
 • ಮೈಸೂರು- 74,000 ರೂ.
 • ಮಂಗಳೂರು- 74,000 ರೂ.
 • ಮುಂಬೈ- 72,500 ರೂ.
 • ಚೆನ್ನೈ- 74,000 ರೂ.
 • ದೆಹಲಿ- 72,500 ರೂ.
 • ಹೈದರಾಬಾದ್- 74,000 ರೂ.
 • ಕೊಲ್ಕತ್ತಾ- 72,500 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada