ಬೆಂಗಳೂರು: ಆಕಾಶದೆತ್ತರಕ್ಕೆ ಇದ್ದ ಚಿನ್ನದ ಬೆಲೆ ಇದೀಗ ಕನಿಷ್ಠ ಮಟ್ಟಕ್ಕೆ ತಲುಪಿದೆ. ಮಹಿಳೆಯರಿಗಂತೂ ಎಲ್ಲಿಲ್ಲದ ಖುಷಿ ತಂದಿದೆ. ದರದಲ್ಲಿ 50,000ಕ್ಕೂ ಹೆಚ್ಚಿಗೆ ಏರಿಕೆಯತ್ತ ಮುಖ ಮಾಡಿದ್ದ ಚಿನ್ನ ಇದೀಗ ಇಳಿಕೆಯತ್ತ ಸಾಗುತ್ತಿರುವುದು ಗ್ರಾಹಕರಿಗೆ ತೃಪ್ತಿದಾಯಕವೆನಿಸುತ್ತಿದೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ಚಿನ್ನದ ದರ 22ಕ್ಯಾರೆಟ್ 10 ಗ್ರಾಂಗೆ ₹43,400 ಹಾಗೂ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹47,350 ದರವಿದೆ. ನಿನ್ನೆ ಮೌಲ್ಯಕ್ಕಿಂತ ಇಂದು ₹350 ಕಡಿಮೆಯಾಗಿದೆ. ಅಂದರೆ, ನಿನ್ನೆ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹43,750 ಇತ್ತು. ಇಂದು ದರ ಇಳಿಕೆಯತ್ತ ಸಾಗಿದ್ದು ₹43,400 ಆಗಿದೆ. ಅದೇ ರೀತಿ 24 ಕ್ಯಾರೆಟ್ ಚಿನ್ನದ ದರ ನಿನ್ನೆ ₹47,730 ಇದ್ದು, ಇಂದಿನ ದರ ₹47,350 ಆಗಿದೆ. ದರದಲ್ಲಿ 380 ರೂ ಇಳಿಕೆ ಕಂಡಿದೆ.
ಅದೆಷ್ಟೋ ವರ್ಷಗಳಿಂದ ಚಿನ್ನ ಕೊಂಡುಕೊಳ್ಳುವ ಆಸೆ ಹೊತ್ತು ಮಹಿಳೆಯರು ಒಳ್ಳೆಯ ಸಮಯಕ್ಕಾಗಿ ಕಾದು ಕುಳಿತಿರುತ್ತಾರೆ. ಅದೆಷ್ಟೋ ವಿಧದ ರೋಲ್ಡ್ ಗೋಲ್ಡ್ ಬಂದರೂ ಕೂಡಾ ಚಿನ್ನದ ಹೊಳಪು ಹೊಂದಲು ಇನ್ಯಾವುದಕ್ಕೂ ಸಾಧ್ಯವಿಲ್ಲ. ಮಹಿಳೆಯರು ಸುಂದರವಾಗಿ ಕಾಣುವುದು ಚಿನ್ನದೊಂದಿಗೆ ಅಲಂಕಾರಗೊಂಡಾಗ. ಸಾಂಪ್ರದಾಯಿಕ ಸೀರೆಯುಟ್ಟು, ಚಿನ್ನಾಭರಣ ತೊಟ್ಟು ನಿಂತ ಮಹಿಳೆಯರ ಮುಖದಲ್ಲಿ ಮೂಡುವ ಸಂತೋಷದ ಕಳೆಯ ಬಣ್ಣಿಸಲು ಸಾಧ್ಯವೆ.
ಮನೆಯಲ್ಲಿ ವಿಶೇಷ ಬಂದರೆ ಸಾಕು. ಚಿನ್ನ ಕೊಳ್ಳುವುದು ಸಾಮಾನ್ಯ. ಪೂಜೆ ಪುನಸ್ಕಾರವಿದ್ದಾಗ ಚಿನ್ನ ಖರೀದಿಸುವುದು ಇತ್ತೀಚೆಗೆ ಸಾಂಪ್ರದಾಯ ಎಂಬ ಮಾತಾಗಿ ಬಿಟ್ಟಿದೆ. ಹಾಗಿದ್ದಾಗ ಚಿನ್ನ ಖರೀದಿಗೆ ಇದು ಉತ್ತಮ ಸಮಯ ನೋಡಿ. ಇಳಿಕೆಯತ್ತ ಚಿನ್ನ ಮುಖ ಮಾಡಿದಾಗಲೇ ಚಿನ್ನ ಖರೀದಿಯತ್ತ ಯೋಚಿಸಿ.
ಮಹಿಳೆಯರ ಆಸೆಗೆ ಕೊನೆಯಿಲ್ಲ ಎಂಬ ಮಾತನ್ನ ಕೇಳುತ್ತಲೇ ಇರುತ್ತೇವೆ. ಚಿನ್ನ ಕೊಡಿಸುವ ಗಂಡಸರಂತೂ ಆಗಾಗ ಹೇಳುತ್ತಲೇ ಇರುತ್ತಾರೆ. ಅದರಲ್ಲೂ ಚಿನ್ನ ಅಂದ ತಕ್ಷಣ ಮಹಿಳೆಯರಿಗೆ ಒಲವು ಕೊಂಚ ಜಾಸ್ತಿ. ಕೊಡಿಸುವವರಿಗೆ ಹಾಗೂ ಕೊಳ್ಳುವವರಿಗೆ ಇದು ಉತ್ತಮ ಸಮಯ. ಚಿನ್ನದ ದರ ಇಳಿಕೆಯತ್ತ ಸಾಗಿದೆ. ಒಮ್ಮೆ ಯೋಚಿಸಿ ನೀವು ಕೂಡಿಟ್ಟ ಮೌಲ್ಯಕ್ಕೆ ಚಿನ್ನ ಖರೀದಿಸಬಹುದು ಎಂದೆನಿಸಿದರೆ ಇಂದೇ ಖರೀದಿಸಿ.
ಬೆಂಗಳೂರಿನಲ್ಲಿ ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ದರ
ಗ್ರಾಂ 22 ಕ್ಯಾರೆಟ್ ಚಿನ್ನ(ಇಂದು) 22 ಕ್ಯಾರೆಟ್ ಚಿನ್ನ (ನಿನ್ನೆ)
1 ಗ್ರಾಂ ₹4,375 ₹4,340
8ಗ್ರಾಂ ₹34,720 ₹35,000
10 ಗ್ರಾಂ ₹43,400 ₹43,750
100ಗ್ರಾಂ ₹4,34,00 ₹4,37,500
ಬೆಂಗಳೂರಿನಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ದರ:
ಗ್ರಾಂ 24 ಕ್ಯಾರೆಟ್ ಚಿನ್ನದ 24 ಕ್ಯಾರೆಟ್ ಚಿನ್ನದ ದರ(ನಿನ್ನೆ)
1ಗ್ರಾಂ ₹4,735 ₹4,773
8ಗ್ರಾಂ ₹37,880 ₹38,184
10ಗ್ರಾಂ ₹47,350 ₹47,730
100ಗ್ರಾಂ ₹4,73,500 ₹4,77,300
ಬೆಳ್ಳಿ ದರ:
ಬೆಳ್ಳಿಯ ದರವೂ ಕೂಡಾ ಇಳಿಕೆಯತ್ತ ಮುಖ ಮಾಡಿದೆ. ಪೂಜೆ, ಸಮಾರಂಭಗಳಿಗೆ ಬೆಳ್ಳಿ ಖರೀದಿದಲು ಹೊರಟಿದ್ದೀರಿ ಎಂದಾದರೆ ಈಗಲೇ ಯೋಚಿಸಿ. ಇದು ಉತ್ತಮ ಸಮಯ. 1 ಕೆಜಿ ಬೆಳ್ಳಿ ದರ ನಿನ್ನೆ ₹71,200 ಇದ್ದು, ಇಂದು ₹69,500 ಕ್ಕೆ ಇಳಿದಿದೆ.
ಗ್ರಾಂ ಬೆಳ್ಳಿ ದರ (ಇಂದು) ಬೆಳ್ಳಿ ದರ (ನಿನ್ನೆ)
1ಗ್ರಾಂ ₹69.50 ₹71.20
8ಗ್ರಾಂ ₹556 ₹556.60
10ಗ್ರಾಂ ₹695 ₹712
100 ಗ್ರಾಂ ₹6,950 ₹7,120
1 ಕೆ.ಜಿ ₹69,500 ₹71,200
ಇದನ್ನೂ ಓದಿ: Gold Price: ಗ್ರಾಹಕರಿಗೆ ಇಂದು ಖುಷಿ ಸುದ್ದಿ; ಚಿನ್ನದ ದರದಲ್ಲಿ ಇಳಿಕೆ