ಆರೋಗ್ಯಕ್ಕೆ ಜನರ ಖಾಸಗಿ ವೆಚ್ಚಕ್ಕಿಂತ ಸರ್ಕಾರಿ ವೆಚ್ಚ ಅಧಿಕ; ಭಾರತದಲ್ಲಿ ಇದೇ ಮೊದಲು; ಇದು ಆಯುಷ್ಮಾನ್ ಸ್ಕೀಮ್ ಪರಿಣಾಮವಾ?

Health expenditure, Govt vs Pvt: ಕೇಂದ್ರ ಆರೋಗ್ಯ ಸಚಿವಾಲಯ ಮಾಡಿರುವ ಅಂದಾಜು ಪ್ರಕಾರ 2020-21ರಲ್ಲಿ ಆರೋಗ್ಯಕ್ಕಾಗಿ ಸರ್ಕಾರ ಮಾಡುವ ವೆಚ್ಚ ಖಾಸಗಿ ವೆಚ್ಚವನ್ನು ಮೀರಿಸಿದೆ. ಭಾರತದಲ್ಲಿ ಇಂತಹದ್ದು ಆಗಿದ್ದು ಅದೇ ಮೊದಲು. 2013-14ರಲ್ಲಿ ಆರೋಗ್ಯಕ್ಕಾಗಿ ಜನರು ಖಾಸಗಿಯಾಗಿ ಮಾಡುತ್ತಿದ್ದ ವೆಚ್ಚ ಶೇ. 64ರಷ್ಟಿತ್ತು. 2021-22ರಲ್ಲಿ ಇದು ಶೇ. 39ಕ್ಕೆ ಇಳಿದಿದೆ. ಸರ್ಕಾರದ ವೆಚ್ಚ ಶೇ. 28 ಇದ್ದದ್ದು ಶೇ. 48ಕ್ಕೆ ಏರಿದೆ.

ಆರೋಗ್ಯಕ್ಕೆ ಜನರ ಖಾಸಗಿ ವೆಚ್ಚಕ್ಕಿಂತ ಸರ್ಕಾರಿ ವೆಚ್ಚ ಅಧಿಕ; ಭಾರತದಲ್ಲಿ ಇದೇ ಮೊದಲು; ಇದು ಆಯುಷ್ಮಾನ್ ಸ್ಕೀಮ್ ಪರಿಣಾಮವಾ?
ಆರೋಗ್ಯ ವೆಚ್ಚ
Follow us
|

Updated on: Oct 01, 2024 | 2:52 PM

ನವದೆಹಲಿ, ಅಕ್ಟೋಬರ್ 1: ಜನರು ತಮ್ಮ ಆರೋಗ್ಯಕ್ಕೆ ಕೈಯಿಂದ ಮಾಡುತ್ತಿರುವುದಕ್ಕಿಂತ ಹೆಚ್ಚು ವೆಚ್ಚವನ್ನು ಸರ್ಕಾರ ಮಾಡುತ್ತಿದೆ. ಭಾರತದಲ್ಲಿ ಇಂಥದ್ದೊಂದು ಸ್ಥಿತಿ ಇದೇ ಮೊದಲ ಬಾರಿ ನಿರ್ಮಾಣವಾಗಿದೆ. ದೇಶದಲ್ಲಿ ಆರೋಗ್ಯಪಾಲನೆಗೆ ಆಗುತ್ತಿರುವ ಒಟ್ಟಾರೆ ವೆಚ್ಚದಲ್ಲಿ ಜನರು ಖಾಸಗಿಯಾಗಿ ಮಾಡುತ್ತಿರುವ ವೆಚ್ಚ 40 ಪ್ರತಿಶತದಷ್ಟಿದೆ. ಉಳಿದ ಹಣವನ್ನು ಸರ್ಕಾರ ಭರಿಸುತ್ತಿದೆ. ಆಯುಷ್ಮಾನ್ ಭಾರತ್ ಹೆಲ್ತ್ ಸ್ಕೀಮ್ ಸಾಕಷ್ಟು ಜನರನ್ನು ತಲುಪಿರುವುದು ಈ ಬೆಳವಣಿಗೆಗೆ ಕಾರಣವಿರಬಹುದು.

2013-14ರ ಹಣಕಾಸು ವರ್ಷದಲ್ಲಿ ಆರೋಗ್ಯಕ್ಕಾಗಿ ಖಾಸಗಿ ವೆಚ್ಚ ಶೇ. 64.2ರಷ್ಟು ಇತ್ತು. ಸರ್ಕಾರದ ಹೆಲ್ತ್ ಎಕ್ಸ್​ಪೆಂಡಿಚರ್ ಶೇ. 28.6ರಷ್ಟು ಇತ್ತು. ಅಲ್ಲಿಂದೀಚೆ ಖಾಸಗಿ ವೆಚ್ಚ ಕ್ರಮೇಣ ಕಡಿಮೆ ಆಗುತ್ತಾ ಬಂದಿದೆ. ಅದೇ ವೇಳೆ ಸರ್ಕಾರಿಂದ ಮಾಡಲಾಗುವ ವೆಚ್ಚ ಕ್ರಮವೇಣವಾಗಿ ಹೆಚ್ಚುತ್ತಾ ಬಂದಿದೆ. 2017ರ ಬಳಿಕ ಇದು ತೀವ್ರವಾಗಿ ಹೆಚ್ಚಾಗಿದೆ. 2021ರಲ್ಲಿ ಸರ್ಕಾರದ ಆರೋಗ್ಯ ವೆಚ್ಚವು ಖಾಸಗಿ ವೆಚ್ಚವನ್ನು ಮೊದಲ ಬಾರಿಗೆ ಮೀರಿಸಿದೆ. 2021-22ರಲ್ಲಿ ಜನರು ತಮ್ಮ ಕೈಯಿಂದ ಮಾಡುತ್ತಿರುವ ವೆಚ್ಚದ ಪ್ರಮಾಣ ಶೇ. 39.4ರಷ್ಟಿದೆ. ಸರ್ಕಾರದಿಂದ ಆಗುತ್ತಿರುವ ವೆಚ್ಚ ಶೇ. 48ರಷ್ಟಿದೆ.

ಪ್ರತೀ ವ್ಯಕ್ತಿಗೆ ಸರಾಸರಿಯಾಗಿ ಸರ್ಕಾರ ಮಾಡುತ್ತಿರುವ ವೆಚ್ಚ ಹತ್ತು ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. 2013-14ರಲ್ಲಿ ಹೆಲ್ತ್​ಕೇರ್ ಕ್ಷೇತ್ರದಲ್ಲಿ ಪ್ರತೀ ವ್ಯಕ್ತಿಗೆ ಸರ್ಕಾರ ಮಾಡಿದ ಸರಾಸರಿ ವೆಚ್ಚ 1,042 ರೂ ಇತ್ತು. 2021-22ರಲ್ಲಿ ಇದು 3,169 ರೂಗೆ ಏರಿದೆ.

ಇದನ್ನೂ ಓದಿ: ಜನರಿಗೆ ಷೇರುಪೇಟೆ ಭ್ರಮೆ ಎಂದ ಐಐಟಿ ಪ್ರೊಫೆಸರ್; ಪರ್ಯಾಯ ಹೂಡಿಕೆ ಮಾರ್ಗಗಳೇನು?

ಈ ಮೇಲಿನ ಅಂಕಿ ಅಂಶಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಕಳೆದ ವಾರ ಬಿಡುಗಡೆ ಮಾಡಿತ್ತು. 2020-21 ಮತ್ತು 2021-22ರಲ್ಲಿ ನ್ಯಾಷನಲ್ ಹೆಲ್ತ್ ಅಕೌಂಟ್ ಎಸ್ಟಿಮೇಟ್​ನಲ್ಲಿ ಭಾರತದಲ್ಲಿ ಹೆಲ್ತ್​ಕೇರ್ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಎಂಬುದನ್ನು ಅಂದಾಜಿಸಲಾಗಿದೆ. 2020-21 ಮತ್ತು 2021-22ರಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಹೂಡಿಕೆಗಳನ್ನು ಮಾಡಿರುವುದರ ಪರಿಣಾಮವಾಗಿ ಜನರ ವೆಚ್ಚ ತಗ್ಗಿದೆ.

ನ್ಯಾಷನಲ್ ಹೆಲ್ತ್ ಪಾಲಿಸಿ ನಿಗದಿ ಮಾಡಿದ ಗುರಿಗೆ ಸಮೀಪ…

ದೇಶದಲ್ಲಿ ಆರೋಗ್ಯಕ್ಕಾಗಿ ಸರ್ಕಾರ ಮಾಡುವ ವೆಚ್ಚವು ಜಿಡಿಪಿಯ ಶೇ. 2.5ರಷ್ಟು ಇರಬೇಕು ಎಂದು 2017ರ ನ್ಯಾಷನಲ್ ಹೆಲ್ತ್ ಪಾಲಿಸಿ ಗುರಿ ನಿಗದಿ ಮಾಡಿತ್ತು. 2014-15ರಲ್ಲಿ ಸರ್ಕಾರದ ಆರೋಗ್ಯ ವೆಚ್ಚವು ದೇಶದ ಜಿಡಿಪಿಯ ಶೇ. 1.13ರಷ್ಟಿತ್ತು. 2021-22ರಲ್ಲಿ ಅದು ಶೇ. 1.84ಕ್ಕೆ ಏರಿರುವುದು ಗಮನಾರ್ಹ.

ಇದನ್ನೂ ಓದಿ: Inspiring: 22 ವರ್ಷಕ್ಕೆ ಐಎಎಸ್ ಹುದ್ದೆ ಬಿಟ್ಟು 14,000 ಕೋಟಿ ರೂ ಉದ್ಯಮ ಕಟ್ಟಿದ ಯುವಕ ರೋಮನ್ ಸೈನಿ

ಆಯುಷ್ಮಾನ್ ಭಾರತ್ ಹೆಲ್ತ್ ಸ್ಕೀಮ್ ಸೇರಿದಂತೆ ಸರ್ಕಾರದ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್​ಗಳು ಸಾಕಷ್ಟು ಬಳಕೆ ಕಂಡಿವೆ. ಈಗ ಆಯುಷ್ಮಾನ್ ಭಾರತ್ ಯೋಜನೆಯನ್ನು ಹಿರಿಯ ನಾಗರಿಕರಿಗೂ ವಿಸ್ತರಿಸಲಾಗಿದೆ. ಇದರಿಂದ ಖಾಸಗಿ ವೆಚ್ಚ ಮತ್ತಷ್ಟು ಇಳಿಯಲಿದೆ, ಸರ್ಕಾರದ ವೆಚ್ಚ ಹೆಚ್ಚಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮುಡಾ ಸೈಟ್​ಗೂ ಮುನ್ನವೇ ಹಲವು ಸೈಟ್ ಪಡೆದಿದ್ದ ಸಿದ್ದರಾಮಯ್ಯ: ಕುಮಾರಸ್ವಾಮಿ
ಮುಡಾ ಸೈಟ್​ಗೂ ಮುನ್ನವೇ ಹಲವು ಸೈಟ್ ಪಡೆದಿದ್ದ ಸಿದ್ದರಾಮಯ್ಯ: ಕುಮಾರಸ್ವಾಮಿ
ಚಂದ್ರಶೇಖರ್​ ಗೆಟ್​ ಲಾಸ್ಟ್​​ : ADGP ವಿರುದ್ಧ ಸಿಂಹ ಪ್ರತಾಪ
ಚಂದ್ರಶೇಖರ್​ ಗೆಟ್​ ಲಾಸ್ಟ್​​ : ADGP ವಿರುದ್ಧ ಸಿಂಹ ಪ್ರತಾಪ
ಕೋಸಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಸೇತುವೆಯಿಂದ ಓಡಿದ ಜನ
ಕೋಸಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಸೇತುವೆಯಿಂದ ಓಡಿದ ಜನ
ಶಓಮಿ ರೆಡ್ಮಿ ಸ್ಮಾರ್ಟ್​ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!
ಶಓಮಿ ರೆಡ್ಮಿ ಸ್ಮಾರ್ಟ್​ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಬಿಗ್ ಬಾಸ್ ಮನೆಗೆ ಕಿಚ್ಚು ಹೊತ್ತಿಸಿದ ನಾಮಿನೇಷನ್ ಪ್ರಕ್ರಿಯೆ
ಬಿಗ್ ಬಾಸ್ ಮನೆಗೆ ಕಿಚ್ಚು ಹೊತ್ತಿಸಿದ ನಾಮಿನೇಷನ್ ಪ್ರಕ್ರಿಯೆ
ನಾಗಮಂಗಲ ಗಲಭೆ ಕೇಸ್; ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಬಿಡುಗಡೆ
ನಾಗಮಂಗಲ ಗಲಭೆ ಕೇಸ್; ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಬಿಡುಗಡೆ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ