ಪದೇಪದೇ ಪ್ರಯಾಣ ಮಾಡುವಂಥ ಪ್ರಯಾಣಿಕರಿಗಾಗಿ ಶೀಘ್ರದಲ್ಲೇ ಚಿಪ್ ಇರುವಂಥ ಇ-ಪಾಸ್ಪೋರ್ಟ್ ಪರಿಚಯಿಸುವುದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಯೋಜನೆ ಇರುವುದಾಗಿ ಹೇಳಿಕೊಂಡಿದೆ. “ಪಾಸ್ಪೋರ್ಟ್ ಸೇವೆಯನ್ನು ನಿರಂತರವಾಗಿ ವಿಸ್ತರಿಸಲು ಸಚಿವಾಲಯದ ಪ್ರಯತ್ನ ಇದು. ವಾಸ್ತವದಲ್ಲಿ ಎಲ್ಲ ನಾಗರಿಕ ಸೇವೆಗಳು ಮತ್ತು ಹೊಸ ವೈಶಿಷ್ಟ್ಯಗಳು ಮತ್ತು ವ್ಯವಸ್ಥೆಗಳು ಹಾಗೂ ನಮ್ಮ ಪಾಸ್ಪೋರ್ಟ್ ಸೇವೆಗಳನ್ನು ಒದಗಿಸುತ್ತೇವೆ,” ಎಂದು ವಿದೇಶಾಂಗ ಸಚಿವಾಲಯಗಳ ವಕ್ತಾರರಾದ ಅರಿಂದಮ್ ಬಗ್ಚಿ ಈಚೆಗೆ ಹೇಳಿದ್ದಾರೆ. “ಸದ್ಯದಲ್ಲೇ ಭಾರತ ಮುಂದಿನ- ತಲೆಮಾರಿನ ಇ-ಪಾಸ್ಪೋರ್ಟ್ಗಳನ್ನು ನಾಗರಿಕರಿಗಾಗಿ ಪರಿಚಯಿಸಲಿದೆ,” ಎಂದು ವಿದೇಶಾಂಗ ಸಚಿವಾಲಯ ಪಾಸ್ಪೋರ್ಟ್ ಮತ್ತು ವೀಸಾ (CPV) ವಿಭಾಗದಲ್ಲಿ ರಾಯಭಾರ ಕಚೇರಿಯ ಕಾರ್ಯದರ್ಶಿಯಾದ ಸಂಜಯ್ ಭಟ್ಟಾಚಾರ್ಯ ಟ್ವೀಟ್ನಲ್ಲಿ ಹೇಳಿದ್ದಾರೆ. ಬಗ್ಚಿ ಇನ್ನೂ ಮುಂದುವರಿದು, ಈ ಯೋಜನೆಯ ಅನುಷ್ಠಾನದ ಪ್ರಕ್ರಿಯೆಯಲ್ಲಿ ಸರ್ಕಾರವಿದೆ ಎಂದು ತಿಳಿಸಿದ್ದಾರೆ. ಇಲ್ಲಿಯ ತನಕ ಭಾರತದ ಇ-ಪಾಸ್ಪೋರ್ಟ್ ಯೋಜನೆ ಪ್ರಕ್ರಿಯೆ ಬಗ್ಗೆ ಗೊತ್ತಿರುವ ಸಂಗತಿಗಳು ಇಲ್ಲಿವೆ.
– ಹೊಸ ಇ-ಪಾಸ್ಪೋರ್ಟ್ಗಳು ಸುರಕ್ಷಿತ ಬಯೋಮೆಟ್ರಿಕ್ ಡೇಟಾ ಮೇಲೆ ಆಧಾರವಾಗಿದೆ ಮತ್ತು ಜಾಗತಿಕವಾಗಿ ಸುಲಲಿತವಾದ ವಲಸೆ ಪ್ರಕ್ರಿಯೆಯನ್ನು ಖಾತ್ರಿಪಡಿಸುತ್ತದೆ, ಎಂದು ಭಟ್ಟಾಚಾರ್ಯ ಟ್ವೀಟ್ನಲ್ಲಿ ತಿಳಿಸಿದ್ದಾರೆ. ವಲಸೆ ಪ್ರಕ್ರಿಯೆಯಲ್ಲಿ ನಕಲಿ ಸಹಿಯನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ತೆಗೆದುಕೊಂಡಿರುವ ಪ್ರಯತ್ನದ ಭಾಗವಿದು.
– ಇ-ಪಾಸ್ಪೋರ್ಟ್ ಐಸಿಎಒ ನಿಯಮಾವಳಿಗಳಿಗೆ ತಕ್ಕಂತೆ ಇರುತ್ತದೆ. ಇಂಡಿಯಾ ಸೆಕ್ಯೂರಿಟಿ ಪ್ರೆಸ್, ನಾಸಿಕ್ಗೆ ಇ-ಪಾಸ್ಪೋರ್ಟ್ ಉತ್ಪಾದನೆಗೆ ಎಲೆಕ್ಟ್ರಾನಿಕ್ ಕಾಂಟ್ಯಾಕ್ಟ್ಲೆಸ್ ಇನ್ಲೇಗಳನ್ನು ಖರೀದಿಸಲು ಸರ್ಕಾರ ಅನುಮತಿ ನೀಡಿದೆ. ಜಾಗತಿಕ ಟೆಂಡರ್ ಕರೆಯುವುದಕ್ಕೆ ನಾಸಿಕ್ನ ಐಎಸ್ಪಿ ಅಧಿಕೃತವಾಗಿ ಅನುಮತಿ ಪಡೆದಿದೆ. ಇ-ಪಾಸ್ಪೋರ್ಟ್ಗಾಗಿ ಇದು ಅತ್ಯಗತ್ಯ. ಪ್ರೆಸ್ನಿಂದ ಯಶಸ್ವಿಯಾಗಿ ಟೆಂಡರ್ ಮತ್ತು ಖರೀದಿ ಮುಗಿದ ಮೇಲೆ ಇ-ಪಾಸ್ಪೋರ್ಟ್ ಉತ್ಪಾದನೆ ಶುರುವಾಗುತ್ತದೆ ಎಂದು ವರದಿಯಾಗಿದೆ.
– ವಿದೇಶಗಳಿಗೆ ಪ್ರಯಾಣ ಮಾಡುವವರಿಗೆ ಪಾಸ್ಪೋರ್ಟ್ ಆಗಿ ಸಾಂಪ್ರದಾಯಿಕ ಬುಕ್ಲೆಟ್ಸ್ ನೀಡುತ್ತದೆ. ಪಾಸ್ಪೋರ್ಟ್ ವಿತರಣೆ ಪ್ರಾಧಿಕಾರದಿಂದ 2019ರಲ್ಲಿ 1.28 ಕೋಟಿಗು ಹೆಚ್ಚು ಪಾಸ್ಪೋರ್ಟ್ ವಿತರಣೆ ಮಾಡಲಾಗಿತ್ತು ಎಂದು ವೆಬ್ಸೈಟ್ವೊಂದು ವರದಿ ಮಾಡಿತ್ತು. ಆ ಸಮಯದಲ್ಲಿ ಚೀನಾದ ನಂತರ ಅತಿ ಹೆಚ್ಚು ಪಾಸ್ಪೋರ್ಟ್ ವಿತರಿಸಿದ ದೇಶ ಭಾರತ ಎಂಬ ಶ್ರೇಯಕ್ಕೆ ಪಾತ್ರವಾಗಿತ್ತು. ಆದರೆ ಸಾಂಪ್ರದಾಯಿಕವಾಗಿ ಬಳಸುವ ಪಾಸ್ಪೋರ್ಟ್ನಲ್ಲಿ ವಂಚನೆ ಸಾಧ್ಯತೆ ಹೆಚ್ಚು. ಅದನ್ನು ಇ-ಪಾಸ್ಪೋರ್ಟ್ ತಡೆಯುತ್ತದೆ ಎಮಬ ಗುರಿ ಇದೆ. ಪಾಸ್ಪೋರ್ಟ್ ನಲ್ಲಿ ಇರುವ ಚಿಪ್ ಹಲವು ಮಾಹಿತಿಗಳನ್ನು ಒಳಗೊಂಡಿರುತ್ತದೆ. ಅದು ಪಾಸ್ಪೋರ್ಟ್ನ ಎರಡನೇ ಪುಟದಲ್ಲಿ ಇದ್ದು, ಅದರಲ್ಲಿ ಡಿಜಿಟಲ್ ಸುರಕ್ಷತೆ ವೈಶಿಷ್ಟ್ಯ ಇರುತ್ತದೆ. ಇದರರ್ಥ ಏನೆಂದರೆ, ಆ ಚಿಪ್ನಲ್ಲಿ ಪ್ರತಿ ದೇಶದ ವಿಶಿಷ್ಟ ಸಹಿ ಇದ್ದು, ಅದನ್ನು ಅವರ ಪ್ರಮಾಣಪತ್ರಗಳನ್ನು ದೃಢೀಕರಿಸಬಹುದು.
– ಮೊದಲ ಬಾರಿಗೆ ಇ-ಪಾಸ್ಪೋರ್ಟ್ಗಳನ್ನು ಆರಂಭಿಸಿದ್ದು 2017ರಲ್ಲಿ. ಆ ನಂತರ ಪ್ರಾಯೋಗಿಕವಾಗಿ 20 ಸಾವಿರ ರಾಜತಾಂತ್ರಿಕರಿಗೆ ಹಾಗೂ ಅಧಿಕಾರಿಗಳಿಗೆ ಇ-ಪಾಸ್ಪೋರ್ಟ್ಗಳನ್ನು ವಿತರಿಸಲಾಗಿದೆ. ಇವೆಲ್ಲದರಲ್ಲಿ ಚಿಪ್ ಇವೆ. ಪೂರ್ತಿಯಾಗಿ ಡಿಜಿಟಲ್ ಆದ ಪಾಸ್ಪೋರ್ಟ್ ಪರಿಚಯಿಸುವ ಗುರಿ ಸರ್ಕಾರಕ್ಕೆ ಇದೆ. ಇದನ್ನು ಮೊಬೈಲ್ಫೋನ್ನಂಥ ಸಾಧನದಲ್ಲಿ ಸಂಗ್ರಹಿಸಬಹುದು. ಕೇಂದ್ರೀಯ ವ್ಯವಸ್ಥೆ ಅಡಿಯಲ್ಲಿ ಭಾರತದ ನಾಗರಿಕರಿಗೆ ಕೇಂದ್ರೀಕೃತ ವ್ಯವಸ್ಥೆ ಅಡಿಯಲ್ಲಿ ಭಾರತೀಯ ನಾಗರಿಕರಿಗೆ ಇ-ಪಾಸ್ಪೋರ್ಟ್ಗಳನ್ನು ವಿತರಿಸುವ ಕೆಲ ನಡೆಯುತ್ತಿದೆ ಎಂದು 2019ರಲ್ಲಿ ಪ್ರಧಾನಿ ಮೋದಿ ಹೇಳಿದ್ದರು.
– ಎರಡನೇ ಹಂತದ ಪಾಸ್ಪೋರ್ಟ್ ಸೇವಾ ಕಾರ್ಯಕ್ರಮಕ್ಕೆ ಟಿಸಿಎಸ್ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿತ್ತು. ಈ ಕಾರ್ಯಕ್ರಮ 2008ರಲ್ಲಿ ಆರಂಭವಾಗಿತ್ತು. ಆಗ ಪಾಸ್ಪೋರ್ಟ್ ದೊರೆಯುವುದನ್ನು ಡಿಜಿಟಲ್ ಆಗಿ ಬದಲಾವಣೆ ಮಾಡಿತ್ತು. ಆನ್ಲೈನ್ನಲ್ಲಿ ಸೇವೆ, ಜಾಗತಿಕ ಮಟ್ಟದಲ್ಲಿ ಸಮಾನವಾದ ವಿಶ್ವಾಸಾರ್ಹತೆ ಹಾಗೂ ಕಾಲಾವಧಿಯನ್ನು ನಿಗದಿ ಮಾಡಿತ್ತು. ಈಗಿನ ಹಂತದಲ್ಲಿ ಟಿಸಿಎಸ್ನಿಂದ ಇ-ಪಾಸ್ಪೋರ್ಟ್ ವಿತರಣೆಗೆ ಹೊಸ ವೈಶಿಷ್ಟ್ಯ ಸೇರ್ಪಡೆ ಮಾಡಲಿದೆ.
ಇದನ್ನೂ ಓದಿ: World’s Powerful Passports: ವಿಶ್ವದ ಪ್ರಬಲ ಪಾಸ್ಪೋರ್ಟ್ಸ್ ಟಾಪ್ ಟೆನ್ ದೇಶಗಳಿವು; ಭಾರತಕ್ಕೆ ಎಷ್ಟನೇ ಸ್ಥಾನ