Russia- Ukraine Crisis: ದೇಶ ತೊರೆಯುತ್ತಿರುವ ಕಂಪೆನಿಗಳ ಆಸ್ತಿ ರಷ್ಯಾ ಸರ್ಕಾರದ ಪಾಲು; ಕಂಪೆನಿ ರಾಷ್ಟ್ರೀಕರಣಕ್ಕೆ ಹೆಜ್ಜೆ

ಉಕ್ರೇನ್​ ಬಿಕ್ಕಟ್ಟಿನ ನಂತರ ಹಲವಾರು ಕಂಪೆನಿಗಳು ರಷ್ಯಾವನ್ನು ತೊರೆಯುತ್ತಿದ್ದು, ಇದೀಗ ವಿದೇಶೀ ಕಂಪೆನಿಗಳಿಗೆ ಹೊರಗಿನ ಮ್ಯಾನೇಜ್​ಮೆಂಟ್​ ತರುವ ಬಗ್ಗೆ ವ್ಲಾಡಿಮಿರ್ ಪುಡಿನ್ ಘೋಷಣೆ ಮಾಡಿದ್ದಾರೆ.

Russia- Ukraine Crisis: ದೇಶ ತೊರೆಯುತ್ತಿರುವ ಕಂಪೆನಿಗಳ ಆಸ್ತಿ ರಷ್ಯಾ ಸರ್ಕಾರದ ಪಾಲು; ಕಂಪೆನಿ ರಾಷ್ಟ್ರೀಕರಣಕ್ಕೆ ಹೆಜ್ಜೆ
ರಷ್ಯಾದ ಮಾಸ್ಕೋದಲ್ಲಿ GUM ಡಿಪಾರ್ಟ್‌ಮೆಂಟ್ ಸ್ಟೋರ್‌ನೊಳಗೆ ಮುಚ್ಚಿದ ಡಿಯರ್ ಅಂಗಡಿಯ ಹಿಂದೆ ಸಂದರ್ಶಕರೊಬ್ಬರು ನಡೆಯುತ್ತಾ ಸಾಗಿರುವುದು (ಅಸೋಸಿಯೇಟೆಡ್ ಪ್ರೆಸ್ ಚಿತ್ರ).
Follow us
TV9 Web
| Updated By: Srinivas Mata

Updated on: Mar 12, 2022 | 8:27 PM

ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ “Evropeisky” ಎಂಬ ಮಾಲ್ ಇತ್ತು. ಅದು ಒಮ್ಮೆ ಜಾಗತಿಕ ಗ್ರಾಹಕ ಆರ್ಥಿಕತೆಯಲ್ಲಿ ತಳುಕು ಹಾಕಿಕೊಂಡ ರಷ್ಯಾದ ಸಂಕೇತವಾಗಿತ್ತು. ಅಲ್ಲಿ ಲಂಡನ್, ಪ್ಯಾರಿಸ್ ಮತ್ತು ರೋಮ್‌ನಂತಹ ನಗರಗಳ ಹೆಸರಿನಲ್ಲಿ ಇರುವ ಉತ್ಪನ್ನಗಳು ಇಲ್ಲಿ ದೊರೆಯುತ್ತಿದ್ದವು. ಆದರೆ ಈಗ ಏಳು ಅಂತಸ್ತಿನ ಶಾಪಿಂಗ್ ಸೆಂಟರ್‌ನ ದೊಡ್ಡ ಭಾಗಗಳು ಸ್ತಬ್ಧವಾಗಿಬಿಟ್ಟಿವೆ. ಉಕ್ರೇನ್‌ನಲ್ಲಿ ಹಿಂಸಾಚಾರ ಮತ್ತು ಮಾನವೀಯ ಬಿಕ್ಕಟ್ಟು ಕಳೆದ ವಾರದಲ್ಲಿ ವೇಗವನ್ನು ಹೆಚ್ಚಿಸುವುದರೊಂದಿಗೆ ಹಾಗೂ ಪಾಶ್ಚಾತ್ಯ ಸರ್ಕಾರಗಳು ಆರ್ಥಿಕ ನಿರ್ಬಂಧಗಳನ್ನು (Economic Sanctions) ಜಾಸ್ತಿ ಮಾಡುವುದರೊಂದಿಗೆ ನೂರಾರು ಕಂಪೆನಿಗಳು ರಷ್ಯಾದೊಂದಿಗಿನ ಸಂಬಂಧಗಳನ್ನು ಕಡಿತಗೊಳಿಸುವ ಯೋಜನೆಗಳನ್ನು ಘೋಷಿಸಿವೆ. ಉಕ್ರೇನ್ ಅನ್ನು ಆಕ್ರಮಿಸಿದ ಎರಡು ವಾರಗಳಲ್ಲಿ ಆಪಲ್‌ನಿಂದ ವಿಕ್ಟೋರಿಯಾಸ್ ಸೀಕ್ರೆಟ್‌ವರೆಗಿನ ಪಾಶ್ಚಾತ್ಯ ಬ್ರ್ಯಾಂಡ್‌ಗಳು ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ನಿಲ್ಲಿಸಿದ ಮೇಲೆ ಈ ಬೆಳವಣಿಗೆ ಆಗಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಪ್ರತಿಕ್ರಿಯಿಸಿ, ವಿದೇಶಿ ಕಂಪೆನಿಗಳು ರಷ್ಯಾದಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದರೆ, “ಹೊರಗಿನ ಮ್ಯಾನೇಜ್​ಮೆಂಟ್​ ತರಲು ಮತ್ತು ಆ ನಂತರ ಈ ಕಂಪೆನಿಗಳಲ್ಲಿ ಕೆಲಸ ಮಾಡಲು ಬಯಸುವವರಿಗೆ ವರ್ಗಾವಣೆ ಮಾಡುವ” ಯೋಜನೆ ಕಡೆಗೆ ಒಲವು ತೋರಿದ್ದಾರೆ. ರಷ್ಯಾದಲ್ಲಿ ಕಂಪೆನಿಯ ಕಾರ್ಯಾಚರಣೆಯನ್ನು ನಿಲ್ಲಿಸುವ ಕಂಪೆನಿಗಳು ಮತ್ತು ಕನಿಷ್ಠ ಶೇ 25ರಷ್ಟು ವಿದೇಶೀ ಒಡೆತನದ ಕಂಪೆನಿಗಳಿಗೆ ಕೋರ್ಟ್​ ಕಾನೂನು ರೂಪಿಸುವ ಸಾಧ್ಯತೆ ಇದ್ದು, ಬಾಹ್ಯ ಆಡಳಿತಗಾರರನ್ನು ನೇಮಿಸುವ ಕುರಿತು ಕರಡು ಕಾನೂನು ಸಿದ್ಧಗೊಳ್ಳಬಹುದು.ಮಾಲೀಕರು ಕಾರ್ಯಾಚರಣೆಯನ್ನು ಪುನರಾರಂಭಿಸಲು ಅಥವಾ ಮಾರಾಟ ಮಾಡಲು ನಿರಾಕರಿಸಿದರೆ ಕಂಪೆನಿಯ ಷೇರುಗಳನ್ನು ಹರಾಜು ಮಾಡಬಹುದು ಎಂದು ಆಡಳಿತಾರೂಢ ಯುನೈಟೆಡ್ ರಷ್ಯಾ ಪಕ್ಷವು ಇದನ್ನು “ರಾಷ್ಟ್ರೀಕರಣದತ್ತ ಮೊದಲ ಹೆಜ್ಜೆ” ಎಂದು ಕರೆದಿದೆ.

ರಷ್ಯಾದಲ್ಲಿ ಪರಿಣತಿ ಹೊಂದಿರುವ ಕನ್ಸಲ್ಟೆನ್ಸಿ ಮ್ಯಾಕ್ರೋ-ಅಡ್ವೈಸರಿಯ ಕ್ರಿಸ್ ವೀಫರ್, ರಷ್ಯಾದ ಸರ್ಕಾರವು “ವಿದೇಶೀ ವ್ಯವಹಾರಕ್ಕೆ ಕ್ಯಾರೆಟ್ ಅಂಡ್​ ಸ್ಟಿಕ್ ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ” ಎಂದು ಹೇಳಿದ್ದು, ರಾಷ್ಟ್ರೀಕರಣದ ಚರ್ಚೆಯು ಉಳಿಯುವವರಿಗೆ ಸರ್ಕಾರದ ಸಹಾಯದೊಂದಿಗೆ ಸಮತೋಲನಗೊಳ್ಳುತ್ತದೆ. ಸಾಮೂಹಿಕ ನಿರುದ್ಯೋಗವನ್ನು ತಪ್ಪಿಸಲು ಕ್ರೆಮ್ಲಿನ್‌ನ ಬಯಕೆಯಾಗಿದ್ದು, ಇದು ಪ್ರಮುಖ ಕಾರಣ ಎಂದು ವೀಫರ್ ಹೇಳಿದ್ದಾರೆ. “ಸಾಮಾಜಿಕ ಒತ್ತಡಗಳು ಅಥವಾ ಸಂಭಾವ್ಯ ಸಾರ್ವಜನಿಕ ಹಿನ್ನಡೆ ಎಂಬ ವಿಚಾರಕ್ಕೆ ಬಂದಾಗ ಅವರು ಬಿಗ್ ಮ್ಯಾಕ್ ಅನ್ನು ಖರೀದಿಸಲು ಸಾಧ್ಯವಾಗದ ಕಾರಣ ಬೀದಿಗಿಳಿಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಾನು ಅಂದುಕೊಳ್ಳುತ್ತೇನೆ,” ಎಂದು ವೀಫರ್ ಹೇಳಿದ್ದಾರೆ. “ಆದರೆ ಅವರಿಗೆ ಕೆಲಸವಿಲ್ಲದಿದ್ದರೆ ಮತ್ತು ಆದಾಯವಿಲ್ಲದಿದ್ದರೆ ಬೀದಿಗಿಳಿಯಬಹುದು,” ಎಂದಿದ್ದಾರೆ.

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಮಾತನಾಡಿ, “ಈ ಕಂಪೆನಿಗಳ ಸ್ವತ್ತುಗಳನ್ನು ವಶಪಡಿಸಿಕೊಳ್ಳಲು ರಷ್ಯಾ ಮುಂದಾದರೆ ಅದು ಕಾನೂನುಬಾಹಿರ ನಿರ್ಧಾರ” ಎಂದು ಟೀಕಿಸಿದ್ದು, ಇದು “ಅಂತಿಮವಾಗಿ ರಷ್ಯಾಕ್ಕೆ ಇನ್ನಷ್ಟು ಆರ್ಥಿಕ ನೋವನ್ನು ಉಂಟುಮಾಡುತ್ತದೆ,” ಎಂದು ಹೇಳಿದ್ದಾರೆ. “ಹೂಡಿಕೆ ಮತ್ತು ವ್ಯಾಪಾರ ಮಾಡಲು ರಷ್ಯಾ ಸುರಕ್ಷಿತ ಸ್ಥಳವಲ್ಲ ಎಂದು ಜಾಗತಿಕ ವ್ಯಾಪಾರ ಸಮುದಾಯಕ್ಕೆ ಇದು ಸ್ಪಷ್ಟ ಸಂದೇಶವನ್ನು ನೀಡುತ್ತದೆ,” ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ. “ರಷ್ಯಾವು ಆಸ್ತಿಯನ್ನು ವಶಪಡಿಸಿಕೊಂಡ ಕಂಪೆನಿಗಳು ತಮ್ಮ ಕಾನೂನು ಹಕ್ಕುಗಳನ್ನು ಸ್ಥಾಪಿಸಲು ಮುಂದಾಗುವಂತೆ ಆಗಬಹುದು,” ಎನ್ನಲಾಗಿದೆ.

ಉಕ್ರೇನ್‌ನ ಆಕ್ರಮಣಕ್ಕೂ ಮುಂಚೆಯೇ, ರಷ್ಯಾ ಈಗಾಗಲೇ 2014ರಲ್ಲಿ ಯುರೋಪಿಯನ್ ಒಕ್ಕೂಟದ ಮೇಲೆ ನಿರ್ಬಂಧಗಳನ್ನು ವಿಧಿಸಿದ ನಂತರ ತನ್ನ ಆಹಾರ ಪೂರೈಕೆಯನ್ನು ದೇಶೀಯಗೊಳಿಸಲು ಪ್ರಯತ್ನಿಸುತ್ತಿದೆ. ಆ ವ್ಯಾಪಾರ ಪಾಲುದಾರರಿಂದ ಯಾವುದೇ ತಾಜಾ ಆಹಾರವನ್ನು ಆಮದು ಮಾಡಿಕೊಳ್ಳದೆ, ದೇಶೀಯ ಆಹಾರ ಮತ್ತು ಟರ್ಕಿಯಂತಹ ಮಿತ್ರ ದೇಶಗಳಿಂದ ಆಮದು ಮಾಡಿಕೊಳ್ಳುವುದರ ಮೇಲೆ ರಷ್ಯಾ ಹೆಚ್ಚಿನ ಗಮನವನ್ನು ನೀಡಿದೆ. ರಷ್ಯಾದಲ್ಲಿ ಬಂಡವಾಳ ಹೂಡಿಕೆಯನ್ನು ಸ್ಥಗಿತಗೊಳಿಸುತ್ತಿರುವ, ಆದರೆ ಅಲ್ಲಿ ಉತ್ಪಾದನೆಯನ್ನು ಮುಂದುವರಿಸುತ್ತಿರುವ ಫ್ರೆಂಚ್ ಆಹಾರಗಳ ದೈತ್ಯ ಡ್ಯಾನೋನ್‌ನಂತಹ ಕಂಪೆನಿಗಳು ಸ್ಥಳೀಯ ಸಿಬ್ಬಂದಿ ಮತ್ತು ಸಪ್ಲೈ ಚೈನ್​ನೊಂದಿಗೆ “ಮೂಲಭೂತವಾಗಿ ರಷ್ಯಾದ ಕಂಪನಿಗಳು” ಮತ್ತು ವಿದೇಶೀ ಮಾಲೀಕರಿಂದ ಹೆಚ್ಚು ಅಥವಾ ಕಡಿಮೆ ಸ್ವಾಯತ್ತವಾಗಿ ಕಾರ್ಯ ನಿರ್ವಹಿಸಬಹುದು ಎಂದು ವೀಫರ್ ಹೇಳಿದ್ದಾರೆ.

ಆದರೆ, ರಷ್ಯಾದಲ್ಲಿ ವ್ಯವಹಾರಗಳನ್ನು ನಿರ್ವಹಿಸುವುದು – ಸರ್ಕಾರದ ಮಧ್ಯಸ್ಥಿಕೆಯಿಂದಲೂ – ಸುಲಭವಲ್ಲ. ಏಕೆಂದರೆ ವಿದೇಶೀ ಕಂಪೆನಿಗಳು ರಷ್ಯಾವನ್ನು ತೊರೆಯಲು ಕಾರಣವಾದ ಪರಿಸ್ಥಿತಿಗಳು ಇನ್ನೂ ಜಾರಿಯಲ್ಲಿವೆ: ಅಂತಾರಾಷ್ಟ್ರೀಯ ನಿರ್ಬಂಧಗಳು, ಸಪ್ಲೈ ಚೈನ್ ಅಡ್ಡಿ ಮತ್ತು ಯುರೋಪ್ ಹಾಗೂ ಉತ್ತರ ಅಮೆರಿಕಾದಲ್ಲಿನ ಗ್ರಾಹಕರಿಂದ ಒತ್ತಡ ಇದೆ.

ವಿದೇಶೀ ನಿರ್ಮಿತ ಎಲೆಕ್ಟ್ರಾನಿಕ್ಸ್‌ನ ಅವಲಂಬನೆಯಿಂದ ಆಟೋ ಉದ್ಯಮವು ನಿರ್ದಿಷ್ಟವಾಗಿ ಹಾನಿಗೊಳಗಾಗಿದೆ. ರಷ್ಯಾದ ನಿರ್ಮಾಪಕ ಅವ್ಟೋವಾಜ್‌ನ ಬಹುಪಾಲು ಮಾಲೀಕ ಫ್ರೆಂಚ್ ಕಾರು ತಯಾರಕ ರೆನಾಲ್ಟ್‌ನಂತಹ ರಷ್ಯಾದಲ್ಲಿ ಉಳಿದುಕೊಂಡಿರುವ ಕಂಪೆನಿಗಳು ಸಹ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು. ಆಮದು ಇಲ್ಲದೆ, ಪೀಠೋಪಕರಣ ತಯಾರಕ Ikea ಅಥವಾ ಅನೇಕ ಫ್ಯಾಷನ್ ರೀಟೇಲ್ ವ್ಯಾಪಾರಿಗಳಂತಹ ವ್ಯವಹಾರಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಹಾಗೂ ರಷ್ಯಾದ ಮಾರುಕಟ್ಟೆಯನ್ನು ಸಂಪೂರ್ಣವಾಗಿ ತೊರೆಯಬೇಕಾಗುತ್ತದೆ ಎಂದು ವೀಫರ್ ಹೇಳಿದ್ದಾರೆ.

ಮೆಕ್‌ಡೊನಾಲ್ಡ್ಸ್ ಮತ್ತು ಸಿಗರೇಟ್ ಉತ್ಪಾದಕ ಇಂಪೀರಿಯಲ್ ಬ್ರಾಂಡ್‌ಗಳಂತಹ ರಷ್ಯಾದ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುತ್ತಿರುವ ಕೆಲವು ವಿದೇಶೀ ಕಂಪೆನಿಗಳು ತಮ್ಮ ಕೆಲಸದ ಸ್ಥಳಗಳನ್ನು ಮುಚ್ಚಿದ್ದರೂ ಸಿಬ್ಬಂದಿಗೆ ಪಾವತಿಸುವುದನ್ನು ಮುಂದುವರಿಸುವುದಾಗಿ ಹೇಳಿವೆ. ಅದು ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ, ಮತ್ತು ಕಂಪೆನಿಗಳು ಕಾರ್ಯಾಚರಣೆಯನ್ನು ಪುನರಾರಂಭಿಸಬೇಕೆ ಅಥವಾ ಸಂಪೂರ್ಣವಾಗಿ ಬಿಡಬೇಕೆ ಎಂದು ಬೇಸಿಗೆಯ ಅಂತ್ಯದ ವೇಳೆಗೆ ನಿರ್ಧರಿಸುವ ಅಗತ್ಯವಿದೆ ಎಂದು ವೀಫರ್ ಭವಿಷ್ಯ ನುಡಿದಿದ್ದಾರೆ. ವಿದೇಶೀ ಸಂಸ್ಥೆಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ವಿರುದ್ಧ ಹಿಂದಕ್ಕೆ ತಳ್ಳುವ ಒಂದು ಧ್ವನಿಯೆಂದರೆ, ಕೋಟ್ಯಧಿಪತಿ ಲೋಹಗಳ ಉದ್ಯಮಿ ವ್ಲಾಡಿಮಿರ್ ಪೊಟಾನಿನ್. ಅವರು ಇದನ್ನು ಕಮ್ಯುನಿಸ್ಟರು ಅಧಿಕಾರ ವಹಿಸಿಕೊಂಡ 1917ರ ರಷ್ಯಾದ ಕ್ರಾಂತಿಗೆ ಹೋಲಿಸಿದ್ದಾರೆ.

“ಇದು ನಮ್ಮನ್ನು 1917ಕ್ಕೆ 100 ವರ್ಷಗಳ ಹಿಂದಕ್ಕೆ ಒಯ್ಯುತ್ತದೆ ಮತ್ತು ಈ ರೀತಿ ಹೆಜ್ಜೆ ಪರಿಣಾಮಗಳು – ಹೂಡಿಕೆದಾರರಲ್ಲಿ ಇರುವ ರಷ್ಯಾದ ಮೇಲಿನ ಜಾಗತಿಕ ಅಪನಂಬಿಕೆ – ಹಲವು ದಶಕಗಳ ಕಾಲ ನಾವು ಅನುಭವಿಸುತ್ತೇವೆ,” ಎಂದು ಅವರು ತಮ್ಮ ಕಂಪೆನಿ ನಾರ್ನಿಕಲ್ ಸಾಮಾಜಿಕ ಮಾಧ್ಯಮದ ಹೇಳಿಕೆಯಲ್ಲಿ ಗುರುವಾರ ತಿಳಿಸಿದ್ದಾರೆ.

ಮೂಲ: ಎಪಿ (ಅಸೋಸಿಯೇಟೆಡ್ ಪ್ರೆಸ್)

ಇದನ್ನೂ ಓದಿ: ಆಪಲ್, ಪೆಪ್ಸಿ, ರೋಲೆಕ್ಸ್ ಸೇರಿದಂತೆ 300ಕ್ಕೂ ಹೆಚ್ಚು ಕಂಪೆನಿಗಳಿಂದ ರಷ್ಯಾದಲ್ಲಿ ಕಾರ್ಯಾಚರಣೆ ಸ್ಥಗಿತ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್