NPS Changes: ಎನ್ಪಿಎಸ್ ಮಾರ್ಪಾಡು?; ಹಳೆಯ ಪಿಂಚಣಿ ಸಿಸ್ಟಂಗೆ ಸಮೀಪ ಇದೆ ಈ ಬದಲಾವಣೆ; ಅದು ಶೇ. 50, ಇದು ಶೇ. 45; ಇಲ್ಲಿದೆ ಹೆಚ್ಚಿನ ವಿವರ
Pension Upto 45% Salary: ಸಾಕಷ್ಟು ಟೀಕೆ ಮತ್ತು ಪ್ರತಿಭಟನೆಗೆ ಕಾರಣವಾಗಿರುವ ಹೊಸ ಪೆನ್ಷನ್ ಸಿಸ್ಟಂನಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಹೊರಟಿದೆ. ಹಳೆಯ ಪೆನ್ಷನ್ ಸಿಸ್ಟಂನಲ್ಲಿ ಶೇ. 50ರಷ್ಟು ಸಂಬಳವನ್ನು ಪಿಂಚಣಿಯಾಗಿ ಕೊಡಲಾಗುತ್ತು. ಈಗ ಶೇ. 45ರಷ್ಟು ಕೊಡಬಹುದು.
ನವದೆಹಲಿ: ಸರ್ಕಾರ ಕೆಲ ವರ್ಷ ಹಿಂದೆ ಹಳೆಯ ಪಿಂಚಣಿ ಸ್ಕೀಮ್ (OPS- Old Pension System) ಅನ್ನು ರದ್ದು ಮಾಡಿ ಹೊಸ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಜಾರಿಗೆ ತಂದಿತ್ತು. ಅದು ಬಹಳ ದೊಡ್ಡ ಪ್ರತಿಭಟನೆಗಳಿಗೆ ಕಾರಣರವಾಗಿರುವುದು ಹೌದು. ಸರ್ಕಾರ ಇದೀಗ ಈ ಎನ್ಪಿಎಸ್ (New Pension Scheme) ಸ್ಕೀಮ್ನಲ್ಲಿ ಬದಲಾವಣೆ ತರಲು ಹೊರಟಿದೆ. ಆದರೆ, ಯಾವುದೇ ಕಾರಣಕ್ಕೆ ಒಪಿಎಸ್ ಅನ್ನು ಮರಳಿ ತರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಳೆಯ ಪಿಂಚಣಿ ಸ್ಕೀಮ್ (ಒಪಿಎಸ್) ಹೇಗಿತ್ತು?
ಕೇಂದ್ರ ಸರ್ಕಾರಿ ನೌಕರರು ಹಳೆಯ ಪಿಂಚಣಿ ಸ್ಕೀಮ್ ಪ್ರಕಾರ ತಾವು ನಿವೃತ್ತಿ ಹೊಂದುವಾಗ ಹಿಂದಿನ ತಿಂಗಳು ಎಷ್ಟು ಸಂಬಳ ಪಡೆಯುತ್ತಿದ್ದರೋ ನಿವೃತ್ತಿ ಬಳಿಕ ಅದರ ಅರ್ಧದಷ್ಟು ಮೊತ್ತವನ್ನು ಮಾಸಿಕ ಪಿಂಚಣಿಯಾಗಿ ಪಡೆಯುತ್ತಿದ್ದರು. ಸಂಬಳದಿಂದ ಪಿಂಚಣಿ ಹಣವನ್ನು ಕಡಿತ ಮಾಡಲಾಗುತ್ತಿರಲಿಲ್ಲ.
ಹೊಸ ಪಿಂಚಣಿ ಸ್ಕೀಮ್ (ಎನ್ಪಿಎಸ್) ಹೇಗಿದೆ?
ಹೊಸ ಪೆನ್ಷನ್ ಸಿಸ್ಟಂ ಪ್ರಕಾರ ಉದ್ಯೋಗಿಗಳ ಮೂಲವೇತನದಲ್ಲಿ ಶೇ. 10ರಷ್ಟು ಭಾಗವನ್ನು ಕಡಿತಗೊಳಿಸುತ್ತಿದೆ. ಇದಕ್ಕೆ ಸರ್ಕಾರ ಶೇ. 14ರಷ್ಟು ಪಾಲು ಭರ್ತಿ ಮಾಡುತ್ತದೆ. ಈ ಹಣವನ್ನು ಷೇರು ಮತ್ತು ಇತರ ಹಣಕಾಸು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಈ ಹೂಡಿಕೆಯಿಂದ ಸಿಗುವ ಲಾಭವನ್ನು ಪಿಂಚಣಿ ವೇಳೆ ಸದಸ್ಯರಿಗೆ ಕೊಡಲಾಗುತ್ತದೆ.
ಇದನ್ನೂ ಓದಿ: NPS Rule Change: ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ; ನ್ಯಾಷನಲ್ ಪೆನ್ಷನ್ ಸ್ಕೀಮ್ ಸದಸ್ಯರಿಗೆ ಖುಷಿ ಸುದ್ದಿಯಾ?
ಎನ್ಪಿಎಸ್ನಲ್ಲಿ ಈಗ ತರಲು ಉದ್ದೇಶಿಸಿರುವ ಮಾರ್ಪಾಡುಗಳೇನು?
ಎನ್ಪಿಎಸ್ನಲ್ಲಿ ಸರ್ಕಾರ ತರುತ್ತಿರುವ ಮಹತ್ವದ ಮಾರ್ಪಾಡು ಎಂದರೆ ನಿಶ್ಚಿತ ಮೊತ್ತದ ಪಿಂಚಣಿಯದ್ದು. ಹಳೆಯ ಪಿಂಚಣಿ ಸ್ಕೀಮ್ನಲ್ಲಿ ಕೊನೆಯ ಸಂಬಳದ ಶೇ. 50ರಷ್ಟು ಮೊತ್ತವು ಮಾಸಿಕ ಪಿಂಚಣಿಯಾಗಿ ನಿಗದಿಯಾಗಿದ್ದರೆ, ಎನ್ಪಿಎಸ್ ನಿಯಮ ಮಾರ್ಪಾಡಾದರೆ ಇದು ಶೇ. 45 ಆಗುತ್ತದೆ. ಅಂದರೆ ಉದ್ಯೋಗಿ ನಿವೃತ್ತಿ ಆಗುವ ಹಿಂದಿನ ತಿಂಗಳು ಪಡೆಯುವ ಸಂಬಳದ ಶೇ. 45ರಷ್ಟು ಮೊತ್ತವನ್ನು ನಿಶ್ಚಿತ ಮಾಸಿಕ ಪಿಂಚಣಿಯಾಗಿ ನಿಗದಿ ಮಾಡಲಾಗುತ್ತದೆ. ಇದು ಬಹಳ ಮುಖ್ಯ.
ಆದರೆ, ಗಮನಿಸಬೇಕಾದ ಸಂಗತಿ ಎಂದರೆ ಕೇಂದ್ರ ಸರ್ಕಾರಿ ಉದ್ಯೋಗಿ ವೃತ್ತಿಜೀವನದಲ್ಲಿ ಅವರ ಸಂಬಳದಲ್ಲಿ ಶೇ. 10ರಷ್ಟು ಮೂಲವೇತನ ಕಡಿತದ ಪ್ರಕ್ರಿಯೆ ಮಾತ್ರ ನಿಲ್ಲುವುದಿಲ್ಲ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಸಿಗುವ ಲಾಭವನ್ನು ಹಂಚುವುದರ ಬದಲು ನಿಶ್ಚಿತ ಮೊತ್ತವನ್ನು ಪಿಂಚಣಿಯಾಗಿ ಕೊಡಲಾಗುತ್ತದೆ. ಇದು ಸರ್ಕಾರಿ ನೌಕರರ ಪಿಂಚಣಿಗೆ ಮಾತ್ರ ಅನ್ವಯ ಅಗುವಂಥದ್ದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ