ಉದ್ಯೋಗಿಗಳಿಗೆ ನಿರಾಸೆ; ಡಿಎ ಹೆಚ್ಚಳ ಜಾರಿ ಮಾಡಿದರೂ ಶೇ. 25ರಷ್ಟು ಗ್ರಾಚುಟಿ ಹೆಚ್ಚಳ ಜಾರಿಯಾಗಿಲ್ಲ

No Gratuity rise now: ಕೇಂದ್ರ ಸರ್ಕಾರ ಮಾರ್ಚ್ ತಿಂಗಳಲ್ಲಿ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು ಶೇ. 50ಕ್ಕೆ ಹೆಚ್ಚಿಸಿದೆ. ನಿಯಮ ಪ್ರಕಾರ ಡಿಎ ಶೇ. 50 ತಲುಪಿದರೆ ನಿವೃತ್ತಿ ಗ್ರಾಚುಟಿ ಗರಿಷ್ಠ ಮಿತಿ ಶೇ. 25ರಷ್ಟು ಹೆಚ್ಚಾಗಬೇಕಿತ್ತು. ಮೇ 30ರಂದು ಇಪಿಎಫ್​ಒ ಸಂಸ್ಥೆ ಈ ಸಂಬಂಧ ಆದೇಶ ಕೂಡ ಹೊರಡಿಸಿದೆ. ಆದರೆ, ಒಂದು ವಾರದ ಬಳಿ ಮೇ 7ರಂದು ಇಪಿಎಫ್​ಒ ಸುತ್ತೋಲೆ ಹೊರಡಿಸಿ, ಡೆತ್ ಗ್ರಾಚುಟಿ ಮತ್ತು ರಿಟೈರ್ಮೆಂಟ್ ಗ್ರಾಚುಟಿಯ ಗರಿಷ್ಠ ಮಿತಿಯನ್ನು ಹೆಚ್ಚಿಸುವ ನಿರ್ಧಾರವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ತಿಳಿಸಿದೆ.

ಉದ್ಯೋಗಿಗಳಿಗೆ ನಿರಾಸೆ; ಡಿಎ ಹೆಚ್ಚಳ ಜಾರಿ ಮಾಡಿದರೂ ಶೇ. 25ರಷ್ಟು ಗ್ರಾಚುಟಿ ಹೆಚ್ಚಳ ಜಾರಿಯಾಗಿಲ್ಲ
ಗ್ರಾಚುಟಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 20, 2024 | 5:20 PM

ನವದೆಹಲಿ, ಮೇ 20: ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು (DA- Dearness Allowance) ಶೇ. 50ಕ್ಕೆ ಹೆಚ್ಚಿಸಿದೆ. ಗ್ರಾಚುಟಿ ಮಿತಿಯನ್ನೂ ಕೂಡ ಶೇ. 25ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿತ್ತು. ಉದ್ಯೋಗಿಗಳಿಗೆ ಇದು ಡಬಲ್ ಖುಷಿಯ ಸಂಗತಿಯಾಗಿತ್ತು. ಆದರೆ, ಗ್ರಾಚುಟಿ ಹೆಚ್ಚಳ ಜಾರಿಯನ್ನು (Gratuity benefit maximum limit) ಇಪಿಎಫ್​ಒ ಸದ್ಯಕ್ಕೆ ತಡೆಯಲ್ಲಿಟ್ಟಿದೆ. ಡಿಎ ಹೆಚ್ಚಳದಿಂದಾಗಿ ಗ್ರಾಚುಟಿ ಮಿತಿ ಹೆಚ್ಚಳವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಮೇ 7ರಂದು ಇಪಿಎಫ್​ಒ ಹೊರಡಿಸಿದ ಸುತ್ತೋಲೆಯಲ್ಲಿ ಈ ಮಾಹಿತಿ ಪ್ರಕಟಿಸಲಾಗಿದೆ.

ಉದ್ಯೋಗಿಯ ನಿವೃತ್ತಿ ಮತ್ತು ಸಾವಿನ ಸಂದರ್ಭದಲ್ಲಿ ಗರಿಷ್ಠ 20 ಲಕ್ಷ ರೂವರೆಗೆ ಗ್ರಾಚುಟಿ ಕೊಡಲಾಗುತ್ತದೆ. ಈಗ ಈ ಗ್ರಾಚುಟಿ ಮಿತಿಯನ್ನು ಶೇ. 25ರಷ್ಟು, ಅಂದರೆ 20 ರಿಂದ 25 ಲಕ್ಷ ರೂಗೆ ಹೆಚ್ಚಿಸಲು ಇಪಿಎಫ್​ಒ ಏಪ್ರಿಲ್ 30ರಂದು ಆದೇಶ ಹೊರಡಿಸಿತ್ತು. ಅದಾಗಿ ಒಂದು ವಾರದಲ್ಲಿ ಈ ಆದೇಶವನ್ನು ಹಿಂಪಡೆಯುವ ಸುತ್ತೋಲೆ ಹೊರಡಿಸಿದೆ. ಡಿಎ ಹೆಚ್ಚಳದಿಂದಾಗಿ ಗ್ರಾಚುಟಿ ಮಿತಿ ಹೆಚ್ಚಳಕ್ಕೆ ತಡೆ ಇಟ್ಟಿರುವುದಾಗಿ ಹೇಳಲಾಗಿದೆಯಾದರೂ ಅದಕ್ಕೆ ಕಾರಣ ಸ್ಪಷ್ಟಪಡಿಸಿಲ್ಲ.

ಇದನ್ನೂ ಓದಿ: ಇಪಿಎಫ್​ಒ ಅಪ್​ಡೇಟ್; ಸದಸ್ಯ ಸತ್ತಾಗ ಕ್ಲೇಮ್ ಮಾಡುವ ಪ್ರಕ್ರಿಯೆ ಈಗ ಸರಳ

ನಿಯಮಗಳ ಪ್ರಕಾರ ಡಿಎ ಅಥವಾ ತುಟ್ಟಿಭತ್ಯೆಯು ಶೇ. 50ರಷ್ಟು ಆದಾಗ ರಿಟೈರ್ಮೆಂಟ್ ಗ್ರಾಚುಟಿ ಮತ್ತು ಡೆತ್ ಗ್ರಾಚುಟಿಯ ಗರಿಷ್ಠ ಮಿತಿ ಶೇ. 25ರಷ್ಟು ಹೆಚ್ಚಾಗಬೇಕು. ಈಗ ಇದನ್ನು ಜಾರಿ ತರಲು ಸರ್ಕಾರ ಸದ್ಯಕ್ಕೆ ಹಿಂದೇಟು ಹಾಕಿದಂತೆ ಕಾಣುತ್ತಿದೆ.

ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ ಅನ್ನು ಶೇ. 4ರಷ್ಟು ಹೆಚ್ಚಿಸಿತು. ಶೇ. 46ರಷ್ಟು ಇದ್ದ ಡಿಎ ಶೇ. 50ಕ್ಕೆ ಏರಿಕೆ ಆಗಿದೆ. ಈ ಡಿಎ ಹೆಚ್ಚಳದ ಪರಿಣಾಮವಾಗಿ ಉದ್ಯೋಗಿಯ ಸಂಬಳದ ಇತರ ಭಾಗಗಳೂ ಹೆಚ್ಚಳ ಕಂಡಿವೆ. ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟಲ್ ಸಬ್ಸಿಡಿ ಮೊದಲಾದ ಭತ್ಯೆಗಳೂ ಪರಿಷ್ಕರಣೆಗೆ ಒಳಪಟ್ಟಿವೆ.

ಇದನ್ನೂ ಓದಿ: ಬ್ರಿಟನ್​ನಲ್ಲಿ ದಿಕ್ಕಾಪಾಲಾಗುತ್ತಿದೆ ‘ಬೇಬಿ ಬೂಮರ್ಸ್’ ಆಸ್ತಿ; ಇದು ಪಿತ್ರಾರ್ಜಿತ ಆಸ್ತಿ ತೆರಿಗೆ ತಂದ ಫಜೀತಿ

ಏನಿದು ಡಿಎ, ಡಿಆರ್?

ಡಿಎ ಎಂದರೆ ಡಿಯರ್ನೆಸ್ ಅಲೋಯನ್ಸ್. ಇದನ್ನು ಸರ್ಕಾರಿ ಉದ್ಯೋಗಿಯ ಮೂಲವೇತನದ ಮೇಲೆ ಹೆಚ್ಚುವರಿಯಾಗಿ ಕೊಡುವ ಹಣ. ಡಿಆರ್ ಎಂಬುದ ಪಿಂಚಣಿದಾರರಿಗೆ ಹೆಚ್ಚುವರಿಯಾಗಿ ಕೊಡುವ ಹಣ. ಬೆಲೆ ಏರಿಕೆ ಪರಿಣಾಮವು ಹಣದ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಇದನ್ನು ತಪ್ಪಿಸಲು ಉದ್ಯೋಗಿಗೆ ಸಂಬಳಕ್ಕೆ ಹೆಚ್ಚುವರಿಯಾಗಿ ಹಣ ನೀಡುವುದೇ ತುಟ್ಟಿಭತ್ಯೆ ಅಥವಾ ಡಿಎ ಎನ್ನುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ