ಸಣ್ಣ ಸೆಟಿಲೈಟ್ಗಳನ್ನು ಹೊತ್ತೊಯ್ಯುವ ಎಸ್ಎಸ್ಎಲ್ವಿ ರಾಕೆಟ್ಗಳನ್ನು ತಯಾರಿಸುವ ಗುತ್ತಿಗೆ ಎಚ್ಎಎಲ್ಗೆ
HAL gets contract to build SSLV rockets: ಬೆಂಗಳೂರಿನ ಏರೋಸ್ಪೇಸ್ ಕಂಪನಿಯಾದ ಎಚ್ಎಎಲ್ ಈಗ ಎಸ್ಎಸ್ಎಲ್ವಿ ರಾಕೆಟ್ ತಯಾರಿಸುವ ಗುತ್ತಿಗೆಯನ್ನು ಪಡೆದಿದೆ. ಇಸ್ರೋ ಹಾಗೂ ಇನ್ಪಸ್ಪೇಸ್ ಕರೆದಿದ್ದ ಬಿಡ್ನಲ್ಲಿ ಒಂಬತ್ತು ಕಂಪನಿಗಳ ಪೈಕಿ ಎಚ್ಎಎಲ್ ಆಯ್ಕೆಯಾಗಿದೆ. ಇದು 511 ಕೋಟಿ ರೂ ಬಿಡ್ ಸಲ್ಲಿಸಿತ್ತು. ವರ್ಷಕ್ಕೆ 6-12 ಎಸ್ಎಸ್ಎಲ್ವಿ ರಾಕೆಟ್ಗಳನ್ನು ನಿರ್ಮಿಸುವ ಗುರಿಯನ್ನು ಎಚ್ಎಎಲ್ ಹೊಂದಿದೆ.

ನವದೆಹಲಿ, ಜೂನ್ 20: ಸಾಕಷ್ಟು ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ (HAL) ಇದೀಗ ಸಣ್ಣ ರಾಕೆಟ್ಗಳನ್ನು ಅಥವಾ ಉಡಾವಣಾ ವಾಹನಗಳನ್ನು (SSLV- Small Satellite Launch Vehicles) ತಯಾರಿಸುವ ಗುತ್ತಿಗೆ ಗಿಟ್ಟಿಸಿದೆ. ಸಣ್ಣ ಸೆಟಿಲೈಟ್ಗಳನ್ನು ಹೊತ್ತು ಹೋಗಬಲ್ಲ ಎಸ್ಎಸ್ಎಲ್ವಿ ರಾಕೆಟ್ಗಳನ್ನು (SSLV rockets) ತಯಾರಿಸುವ ಗುತ್ತಿಗೆಗಾಗಿ ನಡೆಸಲಾದ ಬಿಡ್ ಅನ್ನು ಎಚ್ಎಎಲ್ ಗೆದ್ದಿದೆ. ಬೆಂಗಳೂರಿನ ಮತ್ತೊಂದು ಕಂಪನಿಯಾದ ಆಲ್ಫಾ ಡಿಸೈನ್ ಹಾಗೂ ಹೈದರಾಬಾದ್ ಮೂಲದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಕಂಪನಿಗಳ ನೇತೃತ್ವದ ಇನ್ನೆರಡು ಗುಂಪುಗಳು ಕೂಡ ಈ ಗುತ್ತಿಗೆಗಾಗಿ ಬಿಡ್ ಸಲ್ಲಿಸಿದ್ದವು. ಅಂತಿಮವಾಗಿ ಅತಿಹೆಚ್ಚು ಮೊತ್ತದ ಬಿಡ್ ಸಲ್ಲಿಸಿದ ಎಚ್ಎಎಲ್ಗೆ ಗುತ್ತಿಗೆ ಸಿಕ್ಕಿದೆ. ಎಚ್ಎಎಲ್ 511 ಕೋಟಿ ರೂ ಮೊತ್ತವನ್ನು ಆಫರ್ ಮಾಡಿತ್ತು.
ಈ ಗುತ್ತಿಗೆಯೊಂದಿಗೆ, ಎಚ್ಎಎಲ್ ರಾಕೆಟ್ ತಯಾರಿಸುವ ಮೂರನೇ ಕಂಪನಿ ಎನಿಸಿದೆ. ಈಗಾಗಲೇ ಹೈದರಾಬಾದ್ನ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಹಾಗೂ ಚೆನ್ನೈನ ಅಗ್ನಿಕುಲ್ ಕಾಸ್ಮೋಸ್ (Agnikul Cosmos) ಎನ್ನುವ ಖಾಸಗಿ ಕಂಪನಿಗಳು ರಾಕೆಟ್ಗಳನ್ನು ತಯಾರಿಸಲು ಆರಂಭಿಸಿವೆ.
ಇದನ್ನೂ ಓದಿ: ಫ್ರಾನ್ಸ್ನ ಏರೋಸ್ಪೇಸ್ ಕಂಪನಿ ಲಾವುಕ್ ಗ್ರೂಪ್ ಅನ್ನು ಖರೀದಿಸಲಿರುವ ವಿಪ್ರೋ
ಎಸ್ಎಸ್ಎಲ್ವಿ ರಾಕೆಟ್ ತಯಾರಿಸುವ ಗುತ್ತಿಗೆಗಾಗಿ ಎರಡು ಹಂತದ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಇಸ್ರೋ ಹಾಗೂ ಇನ್ಸ್ಪೇಸ್ (In-SPACE) (ಬಾಹ್ಯಾಕಾಶ ನಿಯಂತ್ರಕ ಸಂಸ್ಥೆ) ಜಂಟಿಯಾಗಿ ಈ ಬಿಡ್ ಕರೆದಿದ್ದುವು. ಒಟ್ಟು 9 ಬಿಡ್ಗಳು ಸಲ್ಲಿಕೆಯಾಗಿದ್ದವು. ಮೊದಲ ಹಂತದ ಪರಿಶೀಲನೆ ಬಳಿಕ ಆರು ಕಂಪನಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಯಿತು. ಎರಡನೇ ಹಂತದಲ್ಲಿ ಎಚ್ಎಎಲ್, ಆಲ್ಫಾ ಡಿಸೈನ್ ಮತ್ತು ಬಿಡಿಎಲ್ ಶಾರ್ಟ್ಲಿಸ್ಟ್ ಆದವು. ತಜ್ಞರ ಸಮಿತಿಯನ್ನು ಇದಕ್ಕಾಗಿ ನೇಮಿಸಲಾಗಿತ್ತು. ಅಂತಿಮವಾಗಿ ಎಚ್ಎಎಲ್ಗೆ ಬಿಡ್ ಒಲಿದುಬಂದಿತು.
ಎಚ್ಎಎಲ್ಗೆ ಇಸ್ರೋದಿಂದ ತಂತ್ರಜ್ಞಾನ ರವಾನೆ
ಸದ್ಯ ರಾಕೆಟ್ ತಂತ್ರಜ್ಞಾನವು ಇಸ್ರೋ ಬಳಿ ಇದೆ. ಮುಂದಿನ ಎರಡು ವರ್ಷದಲ್ಲಿ ಇಸ್ರೋ ಈ ತಂತ್ರಜ್ಞಾನವನ್ನು ಎಚ್ಎಎಲ್ಗೆ ರವಾನಿಸಲಿದೆ. ಈ ಅವಧಿಯಲ್ಲಿ ಎಚ್ಎಎಲ್ ಎರಡು ರಾಕೆಟ್ ಪ್ರೋಟೋಟೈಪ್ ಸಿದ್ಧಪಡಿಸಬೇಕು. ಈ ಪ್ರೋಟೋಟೈಪ್ ನಿರ್ಮಾಣದ ವೇಳೆ ಎಚ್ಎಎಲ್ ಸಂಸ್ಥೆ ಇಸ್ರೋದ ಸರಬರಾಜು ಮೂಲಗಳನ್ನೇ ಬಳಸಿಕೊಳ್ಳಬೇಕು. ಅದು ಹೇಳಿದ ರೀತಿಯಲ್ಲೇ ಪ್ರೋಟೋಟೈಪ್ ಡಿಸೈನ್ ಇರಬೇಕು.
ಇದನ್ನೂ ಓದಿ: India’s Power: ವಿದ್ಯುತ್ ಉತ್ಪಾದನೆ ಹೆಚ್ಚಳ: ಚೀನಾ, ಅಮೆರಿಕ ನಂತರ ಭಾರತವೇ ಮುಂದು
ಪ್ರೋಟೋಟೈಪ್ ನಿರ್ಮಾಣದ ಬಳಿಕ ಎಚ್ಎಎಲ್ ತನ್ನದೇ ಸರಬರಾಜು ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ರಾಕೆಟ್ ವಿನ್ಯಾಸವನ್ನೂ ಬದಲಾಯಿಸಬಹುದು. ಈ ಕಾರ್ಯದಲ್ಲಿ ಇಸ್ರೋ ನೆರವನ್ನೂ ಪಡೆಯಲು ಅವಕಾಶ ಇರುತ್ತದೆ. ಉತ್ಪಾದನಾ ಹಂತ ಬಂದಾಗ ಎಚ್ಎಎಲ್ ಒಂದು ವರ್ಷದಲ್ಲಿ 6-12 ಎಸ್ಎಸ್ಎಲ್ವಿ ರಾಕೆಟ್ಗಳನ್ನು ತಯಾರಿಸಲು ಗುರಿ ಇಟ್ಟುಕೊಂಡಿದೆ. ಕಡಿಮೆ ಬೆಲೆಗೆ ರಾಕೆಟ್ ತಯಾರಿಸುವುದಾಗಿಯೂ ಅದು ಹೇಳಿಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ