HDFC: ಯುಪಿಐ ಕ್ಯೂಅರ್ ಕೋಡ್ಗೆ ಡಿಜಿಟಲ್ ರುಪಾಯಿ ಲಿಂಕ್ ಮಾಡಿದ ಮೊದಲ ಬ್ಯಾಂಕ್ ಎಚ್ಡಿಎಫ್ಸಿ
e Rupee Transaction: ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಿದ ಇರುಪಾಯಿಯಲ್ಲಿ ವಹಿವಾಟು ಸಾಧ್ಯವಾಗುವಂತೆ ಎಚ್ಡಿಎಫ್ಸಿ ಬ್ಯಾಂಕ್ ಯುಪಿಐ ಕ್ಯೂಆರ್ ಕೋಡ್ಗೆ ಲಿಂಕ್ ಮಾಡಿದೆ. ಈಗ ಈ ಕ್ಯೂಆರ್ ಕೊಡ್ ಸ್ಕ್ಯಾನ್ ಮಾಡಿ ಇರುಪಾಯಿಯಲ್ಲಿ ಹಣ ಪಾವತಿ ಮಾಡಬಹುದು.
ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ಗಳಲ್ಲೊಂದೆನಿಸಿದ ಎಚ್ಡಿಎಫ್ಸಿ ಬ್ಯಾಂಕ್ (HDFC Bank) ಇದೀಗ ಡಿಜಿಟಲ್ ರುಪಾಯಿ ಕರೆನ್ಸಿಯನ್ನು ಯುಪಿಐ ಕ್ಯೂಆರ್ ಕೋಡ್ಗೆ ಲಿಂಕ್ ಮಾಡಿದೆ. ಈ ರೀತಿ ಮಾಡಿದ ದೇಶದ ಮೊದಲ ಬ್ಯಾಂಕ್ ಎನಿಸಿದೆ. ಆರ್ಬಿಐ ಬಿಡುಗಡೆ ಮಾಡಿದ ಸಿಬಿಡಿಸಿ (Central Bank Digital Currency) ಅಥವಾ ಇ ರುಪೀ ಅನ್ನು ಯುಪಿಐ ಪಾವತಿಯಂತೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಯುಪಿಐನ ಕ್ಯೂಆರ್ ಕೋಡ್ ಬಳಸಿ ಇರುಪೀ ಪಾವತಿ ಮಾಡಬಹುದು.
ಆರ್ಬಿಐ ಉಪಗವರ್ನರ್ ಟಿ ರಬಿ ಶಂಕರ್ ಅವರು ಇತ್ತೀಚೆಗೆ ಈ ಬಗ್ಗೆ ಮಾತನಾಡಿ ಡಿಜಿಟಲ್ ಕರೆನ್ಸಿಯ ಯುಪಿಐ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜುಲೈನಲ್ಲಿ ಜಾರಿಗೆ ತರಲಾಗುವುದು ಎಂದು ಹೇಳಿದ್ದರು. ಅದರಂತೆ ಎಚ್ಡಿಎಫ್ಸಿ ಬ್ಯಾಂಕ್ ಈ ವ್ಯವಸ್ಥೆ ಅಳವಡಿಸಿದ ಮೊದಲ ಬ್ಯಾಂಕ್ ಎನಿಸಿದೆ.
ಇದನ್ನೂ ಓದಿ: Elon Musk: ಪ್ರಪಂಚ ಅರಿಯುವ ಗುರಿ; ಇಲಾನ್ ಮಸ್ಕ್ ಹೊಸ ಎಐ ಸಾಹಸ; ಗೂಗಲ್, ಓಪನ್ಎಐಗೆ ಓಪನ್ ಚಾಲೆಂಜಾ?
ಎಚ್ಡಿಎಫ್ಸಿ ಬ್ಯಾಂಕ್ನ ಈ ಯೋಜನೆಗೆ 1 ಲಕ್ಷ ಗ್ರಾಹಕರು ಮತ್ತು 1.7 ಲಕ್ಷ ವರ್ತಕರು ಜೋಡಿಸಿಕೊಂಡಿದ್ದಾರೆ. ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಖಾತೆ ಇರುವ ವರ್ತಕರು ಆ ಬ್ಯಾಂಕ್ನ ಸಿಬಿಡಿಸಿ ಪ್ಲಾಟ್ಫಾರ್ಮ್ ಮೂಲಕ ಗ್ರಾಹಕರಿಂದ ಡಿಜಿಟಲ್ ರುಪಾಯಿ ಕರೆನ್ಸಿಯಲ್ಲಿ ಹಣಪಾವತಿ ಸ್ವೀಕರಿಸಬಲ್ಲುರು. ಎಚ್ಡಿಎಫ್ಸಿ ಬ್ಯಾಂಕ್ ಸದ್ಯ ಈ ಪ್ರಯೋಗವನ್ನು ಬೆಂಗಳೂರು, ದೆಹಲಿ, ಮುಂಬೈ, ಚಂಡೀಗಡ, ಭುವನೇಶ್ವರ್, ಅಹ್ಮದಾಬಾದ್, ಗುವಾಹಟಿ, ಗ್ಯಾಂಗ್ಟಕ್ ಮೊದಲಾದ ಕೆಲ ನಗರಗಳಲ್ಲಿ ಚಾಲನೆಗೊಳಿಸಿದೆ.
ಎಚ್ಡಿಎಫ್ಸಿ ಬ್ಯಾಂಕ್ ತನ್ನ ಸಿಬಿಡಿಸಿ ಪ್ಲಾಟ್ಫಾರ್ಮ್ಗೆ ಜೋಡಿಸಿಕೊಂಡಿರುವ ವರ್ತಕರಿಗೆ ವಿಶೇಷ ಕ್ಯುಆರ್ ಕೋಡ್ ಒದಗಿಸುತ್ತದೆ. ಇದನ್ನು ಸ್ಕ್ಯಾನ್ ಮಾಡಿದರೆ ಡಿಜಿಟಲ್ ಕರೆನ್ಸಿ ಜೊತೆಗೆ ಯುವುದೇ ಯುಪಿಐ ವ್ಯಾಲಟ್ನಿಂದಲೂ ಹಣ ಪಾವತಿಸಬಹುದು.
ಇದನ್ನೂ ಓದಿ: Online Gaming: ಆನ್ಲೈನ್ ಗೇಮಿಂಗ್ಗೆ ಶೇ. 28ಜಿಎಸ್ಟಿ; 2023-24ರಲ್ಲಿ 20,000 ಕೋಟಿ ರೂ ತೆರಿಗೆ ಸಂಗ್ರಹ ನಿರೀಕ್ಷೆ
ಏನಿದು ಇ ರುಪಾಯಿ?
ಇ ರುಪಾಯಿ ಎಂಬುದು ನಗದು ಹಣದ ಎಲೆಕ್ಟ್ರಾನಿಕ್ ರೂಪ. ನೀವು ಕ್ಯಾಷ್ ಬದಲು ಇ ರುಪಾಯಿ ಇರಿಸಿಕೊಳ್ಳಬಹುದು. ಬ್ಲಾಕ್ಚೈನ್ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ತಂತ್ರಜ್ಞಾನ ಬಳಸಿ ಸಿಬಿಡಿಸಿಯನ್ನು ಅಭಿವೃದ್ದಿಗೊಳಿಸಲಾಗಿದೆ. ಕ್ಯಾಷ್ ವಹಿವಾಟಿನಂತೆ ಇದರ ವಹಿವಾಟು ಕೂಡ ಆನ್ಲೈನ್ನಲ್ಲಿ ಟ್ರ್ಯಾಕ್ ಅಗುವುದಿಲ್ಲ.
ಈಗಾಗಲೇ ಬಹಳಷ್ಟು ಜನರು ಇ ರುಪಾಯಿ ಬಳಸುತ್ತಿದ್ದಾರೆ. ದಿನಕ್ಕೆ 10 ಸಾವಿರದವರೆಗೂ ವಹಿವಾಟು ನಡೆಯುತ್ತಿದೆ. ಇದರ ಪ್ರಮಾಣವನ್ನು ಈ ವರ್ಷದೊಳಗೆ ದಿನಕ್ಕೆ 10 ಲಕ್ಷಕ್ಕೆ ಏರಿಸಬೇಕೆನ್ನುವ ಗುರಿ ಆರ್ಬಿಐನದ್ದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ