New ITR Form: ಏಕರೂಪದ ಐಟಿಆರ್ ಅರ್ಜಿ; ಪ್ರಯೋಜನಗಳು ಇಲ್ಲಿವೆ ನೋಡಿ

| Updated By: ಗಣಪತಿ ಶರ್ಮ

Updated on: Nov 09, 2022 | 12:50 PM

ಏಕರೂಪದ ಐಟಿಆರ್ ಅರ್ಜಿ ನಮೂನೆಯನ್ನು ಬಳಕೆಗೆ ತರುವ ಬಗ್ಗೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಇತ್ತೀಚೆಗೆ ಪ್ರಸ್ತಾವ ಸಲ್ಲಿಸಿದೆ. ಡಿಸೆಂಬರ್ 15ರೊಳಗೆ ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನೂ ಕೋರಿದೆ. ಹೊಸ ಅರ್ಜಿ ನಮೂನೆ ಜಾರಿಗೆ ಬಂದರೆ ಅದರಿಂದಾಗಬಹುದಾದ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

New ITR Form: ಏಕರೂಪದ ಐಟಿಆರ್ ಅರ್ಜಿ; ಪ್ರಯೋಜನಗಳು ಇಲ್ಲಿವೆ ನೋಡಿ
ಸಾಂದರ್ಭಿಕ ಚಿತ್ರ
Follow us on

ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶದಿಂದ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (CBDT) ಏಕರೂಪದ ಐಟಿಆರ್ ಅರ್ಜಿ ನಮೂನೆಯನ್ನು ಬಳಕೆಗೆ ತರುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ. ಈಗ ಅಸ್ತಿತ್ವದಲ್ಲಿರುವ 7 ಅರ್ಜಿ ನಮೂನೆಗಳನ್ನು ವಿಲೀನಗೊಳಿಸುವ ಬಗ್ಗೆಯೂ ಸಿಬಿಡಿಟಿ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ. ಏಕರೂಪದ ಐಟಿಆರ್ ಅರ್ಜಿಯು ವೈಯಕ್ತಿಕ ಆದಾಯ ತೆರಿಗೆ ವಿವರ ಸಲ್ಲಿಕೆಯನ್ನು ಇನ್ನಷ್ಟು ಸರಳವಾಗಿಸಲಿದ್ದು, ಉದ್ದಿಮೆಯೇತರ ತೆರಿಗೆ ಪಾವತಿದಾರರಿಗೆ ನೆರವಾಗಲಿದೆ ಎಂದು ಸಿಬಿಡಿಟಿ ಹೇಳಿದೆ.

ಪ್ರಸ್ತಾವಿತ ಏಕರೂಪದ ಅರ್ಜಿ ನಮೂನೆಯಲ್ಲಿ ಲಾಭರಹಿತ ಸಂಘಟನೆಗಳು ಮತ್ತು ಟ್ರಸ್ಟ್​ಗಳನ್ನು ಹೊರತುಪಡಿಸಿ ಇತರ ಎಲ್ಲ ತೆರಿಗೆದಾರರು ಐಟಿಆರ್ ಸಲ್ಲಿಸಬಹುದಾಗಿದೆ. ನೂತನ ಐಟಿಆರ್ ಅರ್ಜಿಗೆ ಸಂಬಂಧಿಸಿ ಡಿಸೆಂಬರ್ 15ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಬಿಡಿಟಿ ಸಾರ್ವಜನಿಕರನ್ನು ಕೋರಿದೆ.

ಏಕರೂಪದ ಅರ್ಜಿಯಿಂದ ಐಟಿ ರಿಟರ್ನ್ ಸರಳ, ಹೇಗೆ?

ಇದನ್ನೂ ಓದಿ
ಆರೋಗ್ಯ ವಿಮೆ ಪೋರ್ಟ್ ಮಾಡುವುದು ಹೇಗೆ, ಪ್ರಯೋಜನವೇನು? ಇಲ್ಲಿದೆ ವಿವರ
Bank Strike: ನವೆಂಬರ್ 19ಕ್ಕೆ ಬ್ಯಾಂಕ್ ಮುಷ್ಕರ; ಎಟಿಎಂ ಸೇವೆಯಲ್ಲೂ ವ್ಯತ್ಯಯ ಸಾಧ್ಯತೆ
ನಿಮ್ಮ ಪಿಎಫ್​ ಖಾತೆಗೂ ಬಂತೇ ಇಪಿಎಫ್​ ಬಡ್ಡಿ ಹಣ, ಪರಿಶೀಲಿಸುವುದು ಹೇಗೆ? ಇಲ್ಲಿದೆ ನೋಡಿ
ಹೆಚ್ಚಿದ ಡಿಜಿಟಲ್ ಪಾವತಿ, 20 ವರ್ಷಗಳ ಕನಿಷ್ಠಕ್ಕೆ ನಗದು ಚಲಾವಣೆ; ಎಸ್​ಬಿಐ ವರದಿ

ಐಟಿಆರ್ ಸಲ್ಲಿಕೆ ಪ್ರಕ್ರಿಯೆಯಲ್ಲಿ ಹಲವು ಬಾರಿ ಬದಲಾವಣೆ ಮಾಡಿರುವುದು ತೆರಿಗೆ ಪಾವತಿಸುವವರು ಅದನ್ನು ಮತ್ತೆ-ಮತ್ತೆ ಕಲಿಯುವಂತೆ ಮಾಡಿದೆ. ಹೀಗಾಗಿ ಏಕರೂಪದ ಐಟಿಆರ್ ಅರ್ಜಿ ನಮೂನೆ ಐಟಿಆರ್ ಸಲ್ಲಿಕೆಯನ್ನು ಸರಳವಾಗಿಸಲಿದೆ ಎಂದಿದ್ದಾರೆ ತಜ್ಞರು.

ಇದನ್ನೂ ಓದಿ: New ITR Form: ಐಟಿ ರಿಟರ್ನ್ ಸಲ್ಲಿಕೆ ಇನ್ನಷ್ಟು ಸರಳ; ಒಂದೇ ಅರ್ಜಿ ನಮೂನೆಗೆ ಸಿಬಿಡಿಟಿ ಪ್ರಸ್ತಾವನೆ

ಏಕರೂಪದ ಐಟಿಆರ್ ಅರ್ಜಿ ನಮೂನೆಯಲ್ಲಿ ತೆರಿಗೆದಾರನಿಗೆ ಅನ್ವಯಿಸದ ವಿಷಯಗಳ ಕಾಲಂ ಕಾಣಿಸುವುದೇ ಇಲ್ಲ. ಹೀಗಾಗಿ ಸಂಬಂಧಿಸದ ವಿಷಯಗಳ ಕಾಲಂ ಅನ್ನು ಭರ್ತಿ ಮಾಡಬೇಕೇ ಅಥವಾ ಬೇಡವೇ ಎಂಬ ಗೊಂದಲಕ್ಕೆ ಒಳಗಾಗಬೇಕಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ಮತ್ತು ಮಾನದಂಡಗಳನ್ನು ಗಣನೆಯಲ್ಲಿಟ್ಟುಕೊಂಡು ಏಕರೂಪದ ಐಟಿಆರ್ ಅರ್ಜಿ ನಮೂನೆಯ ಪ್ರಸ್ತಾಪ ಸಿದ್ಧಪಡಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

ಐಟಿಆರ್​ನ 7 ನಮೂನೆಯ ಅರ್ಜಿಗಳು

ಐಟಿಆರ್ ಅರ್ಜಿ 1 (ಸಹಜ್): ವೇತನ ಆದಾಯ, ಮನೆ ಆಸ್ತಿ ಅಥವಾ ಇತರ ಮೂಲಗಳಿಂದ 50 ಲಕ್ಷ ರೂ.ವರೆಗೆ ಆದಾಯ ಇರುವ ವ್ಯಕ್ತಿಗಳು ಸಹಜ್ ಅರ್ಜಿ ನಮೂನೆಯಲ್ಲಿ ಐಟಿಆರ್​ ಸಲ್ಲಿಸುತ್ತಿದ್ದಾರೆ.

ಐಟಿಆರ್-2: ವಸತಿ ಆಸ್ತಿಯಿಂದ ದೊರೆಯುವ ಆದಾಯದ ವಿವರವನ್ನು ಈ ಅರ್ಜಿಯ ಮೂಲಕ ಸಲ್ಲಿಸಲಾಗುತ್ತದೆ.

ಐಟಿಆರ್-3: ಉದ್ಯಮ / ವೃತ್ತಿಯಿಂದ ಲಾಭದ ರೂಪದಲ್ಲಿ ಗಳಿಸುವ ಆದಾಯದ ವಿವರವನ್ನು ಈ ಅರ್ಜಿ ನಮೂನೆಯಲ್ಲಿ ಸಲ್ಲಿಸಲಾಗುತ್ತದೆ.

ಐಟಿಆರ್ ಅರ್ಜಿ 4 (ಸುಗಮ್): ಹೆಚ್ಚಿನ ಸಂಖ್ಯೆ ಸಣ್ಣ ಮತ್ತು ಮಧ್ಯಮ ಗಾತ್ರದ ತೆರಿಗೆದಾರರು ಈ ಅರ್ಜಿಗಳಲ್ಲೇ ಐಟಿಆರ್ ಸಲ್ಲಿಸುತ್ತಿದ್ದಾರೆ.

ಐಟಿಆರ್ ಅರ್ಜಿ 5: ಸೀಮಿತಿ ಹೊಣೆಗಾರಿಕೆಯ ಪಾಲುದಾರಿಕೆ ಹೊಂದಿರುವವರು ಅಥವಾ ಎಲ್​ಎಲ್​ಪಿಗಳು ಈ ಮಾದರಿಯ ಅರ್ಜಿಯಲ್ಲಿ ಐಟಿಆರ್ ಸಲ್ಲಿಸುತ್ತಿದ್ದಾರೆ.

ಐಟಿಆರ್ ಅರ್ಜಿ 6: ಉದ್ದಿಮೆಗಳು ಆದಾಯ ವಿವರ ಸಲ್ಲಿಸುವ ಅರ್ಜಿ ನಮೂನೆ ಇದು.

ಐಟಿಆರ್ ಅರ್ಜಿ 7: ಟ್ರಸ್ಟ್​ಗಳು ಆದಾಯ ವಿವರ ಸಲ್ಲಿಸಲು ಇರುವ ಅರ್ಜಿ ನಮೂನೆ ಇದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ