ವಿದೇಶದಲ್ಲಿ ವ್ಯಾಸಂಗಕ್ಕೋ ಪ್ರವಾಸಕ್ಕೋ ವೈದ್ಯಕೀಯ ಕಾರಣಗಳಿಗೋ ವ್ಯವಹಾರ- ವ್ಯಾಪಾರದ ಉದ್ದೇಶಕ್ಕೋ ಅಥವಾ ಕುಟುಂಬಸ್ಥರ ಭೇಟಿಗೋ ಪಾಸ್‌ಪೋರ್ಟ್ (Passport) ಬಹಳ ಮುಖ್ಯವಾದ ದಾಖಲಾತಿ. ಇನ್ನೂ ಸರಳವಾಗಿ ಹೇಳಬೇಕು ಅಂದರೆ, ಭಾರತೀಯರಾಗಿದ್ದು, ಭಾರತ ದೇಶದ ಗಡಿಯನ್ನು ದಾಟಬೇಕು ಹಾಗೂ ಮತ್ತೊಂದು ದೇಶಕ್ಕೆ ಹೋಗಬೇಕು ಅಂತಾದಲ್ಲಿ ಪಾಸ್‌ಪೋರ್ಟ್ ಅತ್ಯವಶ್ಯ. ವಿದೇಶಾಂಗ ಸಚಿವಾಲಯ ಮತ್ತು ಭಾರತ ಸರ್ಕಾರವು ತನ್ನ ನಾಗರಿಕರಿಗಾಗಿ ಮತ್ತು ದೇಶದಿಂದ ಹೊರಗೆ ಇರುವವರಿಗೆ ಆನ್‌ಲೈನ್‌ನಲ್ಲಿ ಪಡೆಯುವುದಕ್ಕೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸಿದೆ. ಒಂದು ವೇಳೆ ಭಾರತದಲ್ಲೇ ಇರುವಂಥವರಾದಲ್ಲಿ ಆಫ್ಲೈನ್ ಮೂಲಕವೂ ಪಾಸ್‌ಪೋರ್ಟ್ ಪಡೆಯುವಂಥ ಅವಕಾಶ ಇದೆ. ಈ ಲೇಖನದಲ್ಲಿ ನಿಮಗೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಹಂತಹಂತವಾಗಿ ತಿಳಿಸಲಿದ್ದೇವೆ.
ಪಾಸ್‌ಪೋರ್ಟ್ ಹಾಗೂ ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಸೇವೆಗಳನ್ನು ಪಾಸ್‌ಪೋರ್ಟ್ ಸೇವಾ ಮೂಲಕ ಸರಳ, ದಕ್ಷ, ಮತ್ತು ಪಾರದರ್ಶಕ ಪ್ರಕ್ರಿಯೆ ಮೂಲಕ ಒದಗಿಸಲಾಗುತ್ತದೆ. ಸರ್ಕಾರಿ ನೌಕರರಿಗೆ ಮತ್ತು ಕಚೇರಿಗಳಿಗೆ ದೇಶದಾದ್ಯಂತ ನೆಟ್ವರ್ಕ್ ಒದಗಿಸುವುದನ್ನು ಹೊರತುಪಡಿಸಿ, ಅರ್ಜಿದಾರರ ಕ್ರೆಡೆನ್ಷಿಯಲ್ಸ್ಗಳನ್ನು ಪರಿಶೀಲಿಸಲು ರಾಜ್ಯ ಪೊಲೀಸರ ಜತೆಗೆ ಹಾಗೈ ಪಾಸ್‌ಪೋರ್ಟ್ ಡೆಲಿವರಿಗೆ ಇಂಡಿಯಾ ಪೋಸ್ಟ್ನ ಜತೆಗೆ ಜೋಡಿಸುತ್ತದೆ. ಯಾರು ಭಾರತದಿಂದ ಹೊರ ಹೋಗಲು ಬಯಸುತ್ತಾರೋ ಹಾಗೂ ದೇಶಕ್ಕೆ ಬರುತ್ತಾರೋ ಅವರ ಬಳಿ ಸಿಂಧುವಾದ ಪಾಸ್‌ಪೋರ್ಟ್ ಅಥವಾ ಪ್ರಯಾಣ ದಾಖಲಾತಿ ಇರಬೇಕು.
ಪಾಸ್‌ಪೋರ್ಟ್ ಕಾಯ್ದೆ 1967ರ ಅಡಿಯಲ್ಲಿ ಭಾರತ ಸರ್ಕಾರದಿಂದ ವಿವಿಧ ಪಾಸ್ಪೋರ್ಟ್ಗಳನ್ನು ಮತ್ತು ಪ್ರಯಾಣ ದಾಖಲಾತಿಗಳನ್ನು ವಿತರಿಸಲಾಗುತ್ತದೆ. ಸಾಮಾನ್ಯ ಪಾಸ್‌ಪೋರ್ಟ್, ರಾಜತಾಂತ್ರಿಕ ಪಾಸ್‌ಪೋರ್ಟ್, ಅಧಿಕಾರಿಗಳ ಪಾಸ್‌ಪೋರ್ಟ್, ತುರ್ತು ಪ್ರಮಾಣ ಪತ್ರ ಮತ್ತು ಉದ್ದೇಶದ ಸಲುವಾಗಿ ಗುರುತಿನ ಪ್ರಮಾಣ ಪತ್ರ. ಕೊನೆ ಎರಡು ದಾಖಲಾತಿಗಳನ್ನು ಕಡ್ಡಾಯವಾಗಿ ತುರ್ತು ಉದ್ದೇಶಗಳಿಗೆ ಮಾತ್ರ ನೀಡಲಾಗುತ್ತದೆ. ಇನ್ನು ಭಾರತದಲ್ಲಿ ಆನ್‌ಲೈನ್ ಮೂಲಕ ಪಾಸ್‌ಪೋರ್ಟ್ ಅಪ್ಲೈ ಮಾಡುವುದು ಹೇಗೆ ಅನ್ನೋದನ್ನ ನೋಡೋಣ.
ಭಾರತದಲ್ಲಿ ಪಾಸ್‌ಪೋರ್ಟ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕ್ರಮಗಳು:
1. ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್ ಮೂಲಕ ನೋಂದಾಯಿಸಿ.
2. ನೋಂದಾಯಿತ ಲಾಗಿನ್ ಐಡಿಯೊಂದಿಗೆ ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ಗೆ ಲಾಗಿನ್ ಮಾಡಿ.
3. ಹೊಸದಾಗಿ ಪಾಸ್‌ಪೋರ್ಟ್/ಪಾಸ್‌ಪೋರ್ಟ್ ಮರು-ಹಂಚಿಕೆಗಾಗಿ ಅನ್ವಯಿಸುವ ಲಿಂಕ್‌ನ ಕ್ಲಿಕ್ ಮಾಡಿ.
4. ಅರ್ಜಿಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.
5. ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಲು ವೀಕ್ಷಿಸಿ ಉಳಿಸಿದ/ಸಲ್ಲಿಸಿದ ಅಪ್ಲಿಕೇಷನ್‌ಗಳ ಪರದೆಯಲ್ಲಿ ಪಾವತಿ ಮತ್ತು ವೇಳಾಪಟ್ಟಿ ನೇಮಕಾತಿ ಲಿಂಕ್ ಅನ್ನು ಕ್ಲಿಕ್ ಮಾಡಿ. ಎಲ್ಲ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು/ಪಾಸ್‌ಪೋರ್ಟ್ ಕಚೇರಿಗಳಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು ಆನ್‌ಲೈನ್ ಪಾವತಿಯನ್ನು ಕಡ್ಡಾಯಗೊಳಿಸಲಾಗಿದೆ. ಕ್ರೆಡಿಟ್/ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಮತ್ತು ಅಸೋಸಿಯೇಟ್ ಬ್ಯಾಂಕ್‌ಗಳು ಮತ್ತು ಇತರ ಬ್ಯಾಂಕ್‌ಗಳಂತಹ ಯಾವುದೇ ವಿಧಾನಗಳನ್ನು ಬಳಸಿಕೊಂಡು ಆನ್‌ಲೈನ್ ಪಾವತಿಯನ್ನು ಮಾಡಬಹುದು.
6. ಅರ್ಜಿಯ ಉಲ್ಲೇಖ ಸಂಖ್ಯೆ/ಅಪಾಯಿಂಟ್‌ಮೆಂಟ್ ಸಂಖ್ಯೆಯನ್ನು ಹೊಂದಿರುವ ಅರ್ಜಿ ರಶೀದಿಯನ್ನು ಮುದ್ರಿಸಲು ಪ್ರಿಂಟ್ ಅಪ್ಲಿಕೇಷನ್ ರಶೀದಿ ಲಿಂಕ್ ಅನ್ನು ಕ್ಲಿಕ್ ಮಾಡಿ. ಪಾಸ್‌ಪೋರ್ಟ್ ಕಚೇರಿಗೆ ನಿಮ್ಮ ಭೇಟಿಯ ಸಮಯದಲ್ಲಿ ನಿಮ್ಮ ಅಪಾಯಿಂಟ್‌ಮೆಂಟ್ ವಿವರಗಳೊಂದಿಗೆ ಎಸ್ಸೆಮ್ಮೆಸ್ ಅನ್ನು ಅಪಾಯಿಂಟ್‌ಮೆಂಟ್ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ.
7. ಪಾಸ್‌ಪೋರ್ಟ್ ಸೇವಾ ಕೇಂದ್ರ ಅಥವಾ ಸಮಯವನ್ನು ಬುಕ್ ಮಾಡಿದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಮೂಲ ದಾಖಲೆಗಳೊಂದಿಗೆ ಭೇಟಿ ನೀಡಿ.
ಇದನ್ನೂ ಓದಿ: E- Passports: ಮೈಕ್ರೋಚಿಪ್ನೊಂದಿಗೆ ಭಾರತದಲ್ಲಿ ಪರಿಚಯ ಆಗಲಿದೆ ಇ-ಪಾಸ್‌ಪೋರ್ಟ್; ಏನಿದರ ವೈಶಿಷ್ಟ್ಯ, ಹೇಗೆ ವಿಭಿನ್ನ?