Online Fraud: ಆನ್​ಲೈನ್ ವ್ಯವಹಾರದ ವೇಳೆ ವಂಚನೆಯಿಂದ ತಪ್ಪಿಸಿಕೊಳ್ಳುವ ಕ್ರಮಗಳಿವು

ಆನ್​ಲೈನ್​ ವಂಚನೆ ಮಾಡುವವರಿಂದ ಸುರಕ್ಷತೆ ಪಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ವಿವಿಧ ಮಾಹಿತಿಗಳು ಈ ಲೇಖನದಲ್ಲಿ ಲಭ್ಯ ಇದೆ.

Online Fraud: ಆನ್​ಲೈನ್ ವ್ಯವಹಾರದ ವೇಳೆ ವಂಚನೆಯಿಂದ ತಪ್ಪಿಸಿಕೊಳ್ಳುವ ಕ್ರಮಗಳಿವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 27, 2021 | 9:01 PM

ಆನ್‌ಲೈನ್ ವಹಿವಾಟುಗಳ ಹೆಚ್ಚಳದೊಂದಿಗೆ ಸೈಬರ್ ವಂಚಕರು ಹೆಚ್ಚು ಆಧುನಿಕವಾಗುತ್ತಿದ್ದಾರೆ ಮತ್ತು ಬ್ಯಾಂಕ್ ಖಾತೆಯಿಂದ ಹಣವನ್ನು ಕದಿಯಲು ಹೊಸ ಮಾರ್ಗಗಳನ್ನು ಕಂಡುಹಿಡಿದು ಕೊಳ್ಳುತ್ತಿದ್ದಾರೆ. ಗೋಪ್ಯ ಮಾಹಿತಿಯನ್ನು ಕದಿಯಲು ಅವರು ನಿಮ್ಮ KYC (Know Your Customer) ವಿವರಗಳನ್ನು ನವೀಕರಿಸುವರಂತೆ ನಟಿಸುವ ಮೂಲಕ, ಮರು-KYC ಅನ್ನು ಸೂಚಿಸುವ ಮೂಲಕ, ಉದ್ಯೋಗಗಳನ್ನು ನೀಡುವುದಾಗಿ ಹೇಳುವ ಮೂಲಕ, ನಿಮ್ಮ ಖಾತೆ ನಿರ್ಬಂಧಿಸುವುದಾಗಿ ಬೆದರಿಕೆಯೊಡ್ಡಿ ಅಥವಾ ಅಸ್ತಿತ್ವದಲ್ಲಿ ಇಲ್ಲದ ತುರ್ತುಸ್ಥಿತಿಗಳ ಬಗ್ಗೆ ಮಾತನಾಡುವ ಮೂಲಕ ಮನವರಿಕೆ ಮಾಡಲು ಪ್ರಯತ್ನಿಸುತ್ತಾರೆ. ಬ್ಯಾಂಕರ್‌ಗಳು, ವಿಮಾ ಏಜೆಂಟ್‌ಗಳು, ಆರೋಗ್ಯ ಅಥವಾ ಟೆಲಿಕಾಂ ಕೆಲಸಗಾರರು ಮತ್ತು ಸರ್ಕಾರಿ ಅಧಿಕಾರಿಗಳಂತೆ ನಟಿಸುತ್ತಾ ವಂಚಕರು ಗ್ರಾಹಕರನ್ನು ಸಂಪರ್ಕಿಸುತ್ತಾರೆ.

ನಿರ್ಣಾಯಕ ಮತ್ತು ಅಗತ್ಯ ಸೇವೆಗಳನ್ನು ನೀಡುವುದಾಗಿ ಹೇಳುವ ಮೂಲಕ ಗೋಪ್ಯ ಕ್ರೆಡೆನ್ಷಿಷಿಯಲ್​ಗಳ ದೃಢೀಕರಣವನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲವು ನಿದರ್ಶನಗಳಲ್ಲಿ, ಖಾತೆ ನಿರ್ಬಂಧಿಸುವುದಾಗಿ, ತುರ್ತುಸ್ಥಿತಿ ಎನ್ನುವಂತೆ, ನಿರ್ಣಾಯಕ ವೈದ್ಯಕೀಯ ಆರೈಕೆ ಉತ್ಪನ್ನಗಳ ಪೂರೈಕೆ ಕೊರತೆಯೂ ಸೇರಿದಂತೆ ಇತರ ಬೆದರಿಕೆಗಳನ್ನು ಉಲ್ಲೇಖಿಸಿ, ತುರ್ತಾಗಿ ಮಾಹಿತಿಯನ್ನು ಹಂಚಿಕೊಳ್ಳಲು ಗ್ರಾಹಕರ ಮೇಲೆ ಒತ್ತಡ ಹೇರುತ್ತಾರೆ. ಗ್ರಾಹಕರನ್ನು ವಂಚಿಸಲು ಅವರು ಈ ಕ್ರೆಡೆನ್ಷಿಯಲ್​ಗಳನ್ನು ಬಳಸುತ್ತಾರೆ. ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳು, ಲಾಗಿನ್ ಕ್ರೆಡೆನಷಿಯಲ್​ಗಳು, ಕಾರ್ಡ್ ಮಾಹಿತಿ, ಪಿನ್‌ಗಳು ಮತ್ತು ಒಟಿಪಿಗಳ ವಿವರಗಳನ್ನು ಹಂಚಿಕೊಳ್ಳಲು ಒತ್ತಾಯಿಸುವ ಅನಪೇಕ್ಷಿತ ಕರೆಗಳು, ಟೆಕ್ಸ್ಟ್ ಮೆಸೇಜ್​ಗಳು ಮತ್ತು ಇ-ಮೇಲ್‌ಗಳಂತಹ ಸಾಂಪ್ರದಾಯಿಕ ವಿಧಾನಗಳಿಗಿಂತ ಇದು ಹೆಚ್ಚಾಗಿದೆ.

ಗೋಪ್ಯ ಮಾಹಿತಿಗೆ ಸಂಪರ್ಕ ಪಡೆಯಲು ನಿಮ್ಮ ಫೋನ್‌ನ ನಿಯಂತ್ರಣವನ್ನು ತೆಗೆದುಕೊಳ್ಳಲು ದೃಢೀಕತ ಅಲ್ಲದ ಮೊಬೈಲ್ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್ ಮಾಡಲು ವಂಚಕರು ಮನವೊಲಿಸುತ್ತಾರೆ. ಈ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಅನುಸರಿಸಬಹುದಾದ ಮುನ್ನೆಚ್ಚರಿಕೆಗಳ ಪಟ್ಟಿ ಇಲ್ಲಿದೆ:

ಪಿನ್ ಅಥವಾ OTP ಅನ್ನು ಎಂದಿಗೂ ಹಂಚಿಕೊಳ್ಳಬೇಡಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಸ್ವೀಕರಿಸಲು PIN ಅಥವಾ OTP ಮೂಲಕ ದೃಢೀಕರಿಸುವ ಅಗತ್ಯವಿಲ್ಲ ಎಂಬುದನ್ನು ನೆನಪಿಡಿ. OTP/PIN ಅನ್ನು ಹಂಚಿಕೊಳ್ಳಲು ಅಂತಹ ಯಾವುದೇ ವಿನಂತಿಯನ್ನು ಸ್ವೀಕರಿಸುವಾಗ ತಕ್ಷಣ ಎಚ್ಚರಿಕೆಯನ್ನು ವಹಿಸಬೇಕು. ಬ್ಯಾಂಕ್ ಅಥವಾ ಯಾವುದೇ ಇತರ ಸಂಸ್ಥೆಯು ಗೋಪ್ಯ ಮಾಹಿತಿಯನ್ನು ಎಂದಿಗೂ ಕೇಳುವುದಿಲ್ಲ ಎಂಬುದನ್ನು ನೆನಪಿಡಿ.

ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಆಫರ್‌ಗಳು ನಿಜವಾಗಲೂ ತುಂಬಾ ಉತ್ತಮವಾಗಿದ್ದರೆ, ಅವು ಬಹುಶಃ ನಿಜವಲ್ಲ. ಹಿಂದೆಂದೂ ನೋಡಿರದ ಕೊಡುಗೆಗಳನ್ನು ಭರವಸೆ ನೀಡುವ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನೀವು ವಂಚನೆಗೆ ಒಳಗಾಗುವ ಅಪಾಯವನ್ನು ಒಡ್ಡುವ ಫಿಶಿಂಗ್ ವೆಬ್‌ಸೈಟ್‌ಗಳಿಗೆ ನಿರ್ದೇಶಿಸುವ ಅವಕಾಶವಿದೆ.

ಸಂಪರ್ಕ ವಿವರಗಳನ್ನು ಪಡೆಯಲು ಅಧಿಕೃತ ವೆಬ್‌ಸೈಟ್‌ಗಳನ್ನು ಬಳಸಿ ವಂಚಕರು ಸಾಮಾನ್ಯವಾಗಿ ಗ್ರಾಹಕರಿಗೆ ತಪ್ಪಾದ ಗ್ರಾಹಕ ಸೇವಾ ಕೇಂದ್ರದ ಸಂಖ್ಯೆಗಳನ್ನು ಒದಗಿಸುತ್ತಾರೆ ಮತ್ತು ಅವರು ತಮ್ಮ ಬ್ಯಾಂಕ್/ವಿಮಾ ಕಂಪೆನಿಯಿಂದ ಅಧಿಕೃತ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದಾರೆ ಎಂದು ನಂಬುವಂತೆ ಅವರನ್ನು ಮೋಸಗೊಳಿಸುತ್ತಾರೆ. ಬ್ಯಾಂಕ್/ವಿಮಾ ಕಂಪೆನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಸಂಪರ್ಕ ಸಂಖ್ಯೆಗಳನ್ನು ಮರುದೃಢೀಕರಿಸುವುದು ಯಾವಾಗಲೂ ಉತ್ತಮ.

ಅಜ್ಞಾತ ಉದ್ಯೋಗ/ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಎಂದಿಗೂ ಪಾವತಿ ಮಾಡಬೇಡಿ ನೋಂದಣಿ ಸಮಯದಲ್ಲಿ ತಮ್ಮ ಬ್ಯಾಂಕ್ ಖಾತೆ ವಿವರಗಳು, ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್ ಇತ್ಯಾದಿಗಳನ್ನು ಹಂಚಿಕೊಳ್ಳುವ ಗ್ರಾಹಕರನ್ನು ವಂಚಿಸಲು ವಂಚಕರು ನಕಲಿ ಪೋರ್ಟಲ್ ಉದ್ಯೋಗಗಳನ್ನು ಬಳಸುತ್ತಾರೆ. ಅಂತಹ ಪೋರ್ಟಲ್‌ಗಳ ಬಗ್ಗೆ ಎಚ್ಚರದಿಂದಿರಿ ಮತ್ತು ಈ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಸುರಕ್ಷಿತ ಕ್ರೆಡೆನ್ಷಿಯಲ್​ಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.

ನೀವು ಜಾಗರೂಕರಾಗಿರಿ ಮತ್ತು ಹಣವನ್ನು ಸುರಕ್ಷಿತವಾಗಿರಿಸಲು ಈ ಸರಳ ಹಂತಗಳನ್ನು ಅನುಸರಿಸಿ. ಸೈಬರ್ ವಂಚನೆಗಳ ವಿರುದ್ಧ ತಮ್ಮ ಗ್ರಾಹಕರನ್ನು ರಕ್ಷಿಸಲು, ಅನೇಕ ಬ್ಯಾಂಕ್‌ಗಳು ಸಾಮಾಜಿಕ ಮಾಧ್ಯಮ, ಟೆಕ್ಸ್ಟ್ ಮೆಸೇಜ್​ಗಳು, ಇ-ಮೇಲ್‌ಗಳು ಮತ್ತು ನಿಯಮಿತ ಅಧಿಸೂಚನೆಗಳ ಮೂಲಕ “ಸುರಕ್ಷಿತ ಬ್ಯಾಂಕಿಂಗ್ ಅಭಿಯಾನಗಳನ್ನು” ಪ್ರಾರಂಭಿಸಿವೆ. ಇತ್ತೀಚಿನ ವಂಚನೆ ವಿಧಾನಗಳು ಮತ್ತು ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: LPG Subsidy: ಮತ್ತೆ ಎಲ್​ಪಿಜಿ ಸಬ್ಸಿಡಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ; ನಿಮಿಷಗಳಲ್ಲಿ ಪರಿಶೀಲನೆ ಮಾಡುವುದು ಹೇಗೆ?

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ