Credit Score: ಕ್ರೆಡಿಟ್ ಸ್ಕೋರ್ ಉತ್ತಮಗೊಳಿಸುವುದು ಹೇಗೆ? ಇಲ್ಲಿದೆ ಸಲಹೆ

ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವಂತೆ ನೋಡಿಕೊಳ್ಳುವ ಬಗ್ಗೆ ಬ್ಯಾಂಕಿಂಗ್ ಕ್ಷೇತ್ರದ ಪರಿಣಿತರು ಹಲವು ಸಂದರ್ಭಗಳಲ್ಲಿ ನೀಡಿರುವ ಮಾಹಿತಿ ಮತ್ತು ವಿಶ್ಲೇಷಣೆಗಳ ಆಧಾರದಲ್ಲಿ ಕೆಲವು ಸಲಹೆ​ಗಳನ್ನು ಇಲ್ಲಿ ನೀಡಲಾಗಿದೆ.

Credit Score: ಕ್ರೆಡಿಟ್ ಸ್ಕೋರ್ ಉತ್ತಮಗೊಳಿಸುವುದು ಹೇಗೆ? ಇಲ್ಲಿದೆ ಸಲಹೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Oct 17, 2022 | 9:00 AM

ಹಲವು ಬಾರಿ ಕ್ರೆಡಿಟ್ ಸ್ಕೋರ್ (Credit Score) ಅಥವಾ ಸಿಬಿಲ್ ಸ್ಕೋರ್ (Sibil Score) ಅನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಕ್ರೆಡಿಟ್ ಸ್ಕೋರ್ ಹೇಗೆ ನಿರ್ಧರಿಸಲ್ಪಡುತ್ತದೆ? ನಾವು ಸಾಲದ (Loan) ಕಂತುಗಳನ್ನು ಪಾವತಿಸುವುದು ಸಿಬಿಲ್ ಅಥವಾ ಸಿಆರ್​ಐಎಫ್​ (ಸಾಲದ ವ್ಯವಹಾರವನ್ನು ಟ್ರ್ಯಾಕ್ ಮಾಡುವ ಮತ್ತು ವರದಿ ಮಾಡಿ ಅದಕ್ಕನುಗುಣವಾಗಿ ಅಂಕಗಳನ್ನು ನೀಡುವ ಎರಡು ಸಂಸ್ಥೆಗಳು) ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದಿರುವುದು ಬಹಳ ಮುಖ್ಯವಾಗಿದೆ. ಇಲ್ಲವಾದಲ್ಲಿ ಮುಂದೆ ಸಾಲ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಲುಕಬೇಕಾಗಬಹುದು. ಸಾಲ ಪಡೆಯುವ ಸಂದರ್ಭದಲ್ಲಿ ಬ್ಯಾಂಕ್​ಗಳು ಮೊದಲು ಪರಿಶೀಲಿಸುವುದೇ ಗ್ರಾಹಕರ ಕ್ರೆಡಿಟ್ ಸ್ಕೋರ್ ಹೇಗಿದೆ ಎಂಬುದನ್ನು. ಕ್ರೆಡಿಟ್ ಸ್ಕೋರ್ ಕಳಪೆ ಅಥವಾ ಕಡಿಮೆಯಾಗಿದ್ದರೆ ಸಾಲ ದೊರೆಯುವುದು ಕಷ್ಟಸಾಧ್ಯ.

ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವಂತೆ ನೋಡಿಕೊಳ್ಳುವ ಬಗ್ಗೆ ಬ್ಯಾಂಕಿಂಗ್ ಕ್ಷೇತ್ರದ ಪರಿಣಿತರು ಹಲವು ಸಂದರ್ಭಗಳಲ್ಲಿ ನೀಡಿರುವ ಮಾಹಿತಿ ಮತ್ತು ವಿಶ್ಲೇಷಣೆಗಳ ಆಧಾರದಲ್ಲಿ ಕೆಲವು ಸಲಹೆ​ಗಳನ್ನು ಇಲ್ಲಿ ನೀಡಲಾಗಿದೆ.

ಏನಿದು ಕ್ರೆಡಿಟ್ ಸ್ಕೋರ್?

ಇದನ್ನೂ ಓದಿ
Image
Digital Banking Units: ಡಿಜಿಟಲ್ ಮೂಲಸೌಕರ್ಯ ವೃದ್ಧಿಗೆ ನೆರವಾಗಲಿವೆ ಡಿಬಿಯು; ಆರ್​ಬಿಐ ಗವರ್ನರ್
Image
Digital Banking Units: ಡಿಜಿಟಲ್ ಬ್ಯಾಂಕಿಂಗ್ ಘಟಕದಲ್ಲಿ ನೀವು ಏನೇನು ವ್ಯವಹಾರ ಮಾಡಬಹುದು?
Image
SBI Interest Rate on FD: ಎಫ್​ಡಿ ಬಡ್ಡಿ ಹೆಚ್ಚಿಸಿದ ಎಸ್​ಬಿಐ, ಇಲ್ಲಿದೆ ಪರಿಷ್ಕೃತ ಬಡ್ಡಿ ದರ ಮಾಹಿತಿ
Image
Global Recession: ಆರ್ಥಿಕ ಹಿಂಜರಿತದಿಂದ ಭಾರತಕ್ಕೆ ಹೆಚ್ಚಿನ ತೊಂದರೆಯಾಗದೆಂದ ಎಸ್​ಬಿಐ ಅಧ್ಯಕ್ಷ, ಕಾರಣವೇನು?

ಕ್ರೆಡಿಟ್ ಸ್ಕೋರ್ ಎಂಬುದು ನಮ್ಮ ಸಾಲ ಪಡೆಯುವಿಕೆಯ ಅಭ್ಯಾಸಕ್ಕೆ ಸಂಬಂಧಿಸಿದ 3 ಅಂಕಿಗಳ ಒಂದು ಸಂಖ್ಯೆ. ನಾವು ಎಷ್ಟು ಸಾಲ ಪಡೆದಿದ್ದೇವೆ, ಎಷ್ಟರ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡುತ್ತಿದ್ದೇವೆ ಎಂಬುದರ ಆಧಾರದಲ್ಲಿ ಈ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದಲ್ಲಿ ಸಾಲ ಪಡೆಯುವುದು ಸಲೀಸಾಗಲಿದೆ. 300 ರಿಂದ 900 ರವರೆಗಿನ ಸ್ಕೋರ್ ನೀಡಲಾಗುತ್ತದೆ. ಇದು ವ್ಯಕ್ತಿಯ ಸಾಲಪಡೆಯಬಹುದಾದ ಅರ್ಹತೆಯನ್ನೂ ನಿರ್ಧರಿಸುತ್ತದೆ. 700 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಶಿಸ್ತುಬದ್ಧ ಮರುಪಾವತಿಯತ್ತ ಗಮನ ಹರಿಸಬೇಕು:

ಸಾಲದ ಮರುಪಾವತಿಯನ್ನು ಹೆಚ್ಚು ಶಿಸ್ತುಬದ್ಧವಾಗಿಸುವ ಮೂಲಕ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವಂತೆ ನೋಡಿಕೊಳ್ಳಬಹುದು. ನಿಗದಿತ ಸಮಯದ ಒಳಗೆ ಪೂರ್ಣ ಮೊತ್ತವನ್ನು ಮರು ಪಾವತಿಸಿದರೆ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳಲಿದೆ. ಹೀಗಾಗಿ ಸಾಲದ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಬೇಕು. ನಿಗದಿತ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡುವ ಬಗ್ಗೆ ಅನುಮಾನವಿದ್ದಲ್ಲಿ ಸಾಲ ಪಡೆಯುವಿಕೆಯನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.

ಸಾಲಗಳನ್ನು ಪಡೆಯುವಾಗ ಎಚ್ಚರವಿರಲಿ:

ಸಾಲಗಳನ್ನು ಪಡೆಯುವಾಗ ಎಚ್ಚರ ವಹಿಸಿಕೊಳ್ಳಬೇಕು. ಒಂದೇ ರೀತಿಯ ಹಲವು ಸಾಲಗಳನ್ನು ಪಡೆಯುವುದು ಒಳ್ಳೆಯದಲ್ಲ. ವೈಯಕ್ತಿಕ ಸಾಲಗಳನ್ನು ಪಡೆಯುವ ಬದಲು ಕ್ರೆಡಿಟ್ ಕಾರ್ಡ್​ಗಳನ್ನು ಹೊಂದುವುದು ಉತ್ತಮ. ಕೈಯಲ್ಲಿ ದುಡ್ಡಿದೆ ಎಂದು ಪೂರ್ತಿ ಮೊತ್ತವನ್ನು ಪಾವತಿ ಮಾಡುವ ಬದಲು ವಾಹನ ಸಾಲ ಅಥವಾ ಅಡಮಾನ ಸಾಲಗಳನ್ನು ಪಡೆಯುವುದು ಉತ್ತಮ. ಹೀಗೆ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಕಂತುಗಳನ್ನು ಪಾವತಿಸಿದರೆ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತದೆ. ಅದೇ ರೀತಿ ನಮ್ಮ ಬಳಿ ಇರುವ ಹಣವನ್ನು ಸ್ಮಾರ್ಟ್ ಹೂಡಿಕೆಗಳಲ್ಲಿ ಬಳಸುವ ಮೂಲಕ ಹೆಚ್ಚಿನ ರಿಟರ್ನ್ಸ್ ಪಡೆಯಬಹುದು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Digital Banking Units: ಡಿಜಿಟಲ್ ಬ್ಯಾಂಕಿಂಗ್ ಘಟಕದಲ್ಲಿ ನೀವು ಏನೇನು ವ್ಯವಹಾರ ಮಾಡಬಹುದು?

ಹೊಸ ಕ್ರೆಡಿಟ್ ಕಾರ್ಡ್​​ಗೆ ಅರ್ಜಿ ಸಲ್ಲಿಸುವ ಮುನ್ನ ಎಚ್ಚರ:

ಹೊಸ ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವ ಮತ್ತು ಕೆಟ್ಟ ಸಾಲಗಾರ ಎಂದು ಬಿಂಬಿಸಿಕೊಳ್ಳುವ ಬದಲು ಅಸ್ತಿತ್ವದಲ್ಲಿರುವ ಕಾರ್ಡ್‌ಗಳನ್ನು ಬಳಸುವುದು ಹಾಗೂ ಮುಂದುವರಿಸುವುದು ಉತ್ತಮ ಎನ್ನುತ್ತಾರೆ ಹಣಕಾಸು ತಜ್ಞರು. ಸದಸ್ಯತ್ವದ ಹೂಡಿಕೆಯ ಮೇಲಿನ ಪ್ರತಿಫಲ (ಆರ್​ಒಐ) ಬಹಳ ಚೆನ್ನಾಗಿದ್ದರಷ್ಟೇ ಹೊಸ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಇಲ್ಲವಾದಲ್ಲಿ ಹಳೆಯ ಕಾರ್ಡ್​ ಅನ್ನೇ ಮುಂದುವರಿಸುವುದು ಉತ್ತಮ. ಇದರಿಂದ ಉತ್ತಮ ಕ್ರೆಡಿಟ್ ಇತಿಹಾಸ ಹೊಂದಿರಬಹುದಲ್ಲದೆ ಕ್ರೆಡಿಟ್ ಸ್ಕೋರ್ ಸಹ ಚೆನ್ನಾಗಿರಲಿದೆ ಎನ್ನುತ್ತಾರೆ ಅವರು.

ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುತ್ತಿರುವುದರಿಂದ ತೊಂದರೆ ಇಲ್ಲ:

ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವುದರಿಂದ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ ಎಂಬ ಅಪನಂಬಿಕೆ ಹೆಚ್ಚಿನವರಲ್ಲಿದೆ. ಆದರೆ ಇದು ಪೂರ್ತಿ ನಿಜವಲ್ಲ. ಹಣಕಾಸು ಸಂಸ್ಥೆಯೊಂದು ನಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಿದರೆ ನಾವು ಸಾಲ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಭಾವಿಸಿ ಸಿಬಿಲ್ ಅಥವಾ ಸಿಆರ್​ಐಎಫ್ ಪ್ರತಿ ಬಾರಿ ಕೆಲವು ಅಂಕಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಇದರಿಂದ ಕ್ರೆಡಿಟ್ ಸ್ಕೋರ್ ತುಸು ಕಡಿಮೆಯಾಗಬಹುದು. ಆದರೆ, ನಮ್ಮದೇ ಕ್ರೆಡಿಟ್ ಸ್ಕೋರ್​ ಅನ್ನು ನಾವು ಪರಿಶೀಲಿಸುವುದರಿಂದ ಕ್ರೆಡಿಟ್ ಸ್ಕೋರ್​ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದಿದ್ದಾರೆ ತಜ್ಞರು. ನಾವು ಅದನ್ನು ಪರಿಶೀಲಿಸುತ್ತಿದ್ದರೆ ಕ್ರೆಡಿಟ್ ಸ್ಕೋರ್ ಮೇಲೆ ಹೆಚ್ಚಿನ ಗಮನ ಇಟ್ಟುಕೊಂಡು, ಅದನ್ನು ಸುಧಾರಿಸಲು ಅನುಕೂಲವಾಗಲಿದೆ. ಜತೆಗೆ, ವಂಚನೆಗಳನ್ನು ತಡೆಗಟ್ಟಲೂ ಸಾಧ್ಯವಿದೆ ಎನ್ನುತ್ತಾರವರು.

ಉತ್ತಮ ಸಾಲವನ್ನು ವಿಸ್ತರಿಸಿ:

ಸಾಲವನ್ನು ತ್ವರಿತವಾಗಿ ಪೂರ್ಣವಾಗಿ ಪಾವತಿಸಲು ಅಥವಾ ಸಾಲವಿಲ್ಲದೆಯೇ ದೊಡ್ಡ ಖರೀದಿಯನ್ನು ಮಾಡಲು ನಾವು ಸಮರ್ಥರಿರಬಹುದು. ಆದರೆ, ಇದರಿಂದ ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಏನೂ ಪ್ರಯೋಜನವಾಗದು. ಸಾಲವನ್ನು ಅವಧಿಗೆ ಮುಂಚಿತವಾಗಿ ಮರುಪಾವತಿ ಮಾಡುವುದರಿಂದ ನಮ್ಮ ಕ್ರೆಡಿಟ್ ಪೋರ್ಟ್​ಫೊಲಿಯೊ ಮತ್ತು ಸ್ಕೋರ್ ಕಡಿಮೆಯಾಗಬಹುದು. ಹೀಗಾಗಿ ಕೈಗೆಟಕುವ ಬಡ್ಡಿ ದರದ ಸಾಲಗಳನ್ನು ಅವಧಿಗೆ ಮುನ್ನ ಮರುಪಾವತಿಸದೆ ಹಂತಹಂತವಾಗಿ ಪಾವತಿಸಿ ಮುಗಿಸುವುದು ಒಳ್ಳೆಯದು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ