ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್ ಪರವಾನಗಿ ನವೀಕರಿಸಬಹುದು; ಇಲ್ಲಿದೆ ವಿವರ
ವಾಹನ ಚಾಲನಾ ಪರವಾನಗಿ ನವೀಕರಕ್ಕಾಗಿ ಜನರು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (ಆರ್‌ಟಿಒ) ಭೇಟಿ ನೀಡಬೇಕಾಗಿಲ್ಲ. ಆನ್‌ಲೈನ್ ಮೂಲಕ ಮನೆಯಲ್ಲಿಯೇ ಕುಳಿತು ನವೀಕರಿಸಿಕೊಳ್ಳಬಹುದು.
ವಾಹನವನ್ನು ಚಲಾಯಿಸುವ ಪ್ರತಿಯೊಬ್ಬ ನಾಗರಿಕರಿಗೂ ಡ್ರೈವಿಂಗ್ ಲೈಸೆನ್ಸ್ ಅಗತ್ಯ. ದೇಶದ ಯಾವುದೇ ಭಾಗದಲ್ಲಿ ಮುಕ್ತವಾಗಿ ವಾಹನ ಚಲಾಯಿಸಲು ವಾಹನ ಸವಾರನಿಗೆ ಹಕ್ಕನ್ನು ಒದಗಿಸುವುದು ಡ್ರೈವಿಂಗ್ ಲೈಸೆನ್ಸ್. ಚಾಲನಾ ಪರವಾನಗಿ ನವೀಕರಿಸಲು ಮೊದಲಿಗೆ (ಡ್ರೈವಿಂಗ್ ಲೈಸೆನ್ಸ್ ರಿನ್ಯುವಲ್) 20 ವರ್ಷಗಳ ಅವಧಿಯಿರುತ್ತದೆ. ಅಥವಾ ವಾಹನ ಸವಾರನಿಗೆ 50 ವರ್ಷ ತುಂಬುವವರೆಗೆ ಡ್ರೈವಿಂಗ್ ಲೈಸೆನ್ಸ್ ಕಾಲಾವಧಿ ಇರುತ್ತದೆ. ಆದ್ದರಿಂದ ಅವಧಿ ಮುಗಿಯುವ ಒಂದು ವರ್ಷದ ಮೊದಲು ಪರವಾನಗಿಯನ್ನು ಹೇಗೆ ನವೀಕರಿಸುವುದು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಹಾಗೂ ಕಾಲಾವಧಿ ಮುಗಿದ ನಂತರವೂ ಒಂದು ವರ್ಷದವರೆಗೆ ವಾಹನ ಚಾಲನಾ ಪರವಾನಗಿ ನವೀಕರಿಸಲು ಅವಕಾಶವಿರುತ್ತದೆ.
ವಾಹನ ಚಾಲನಾ ಪರವಾನಗಿ ನವೀಕರಣಕ್ಕಾಗಿ ಜನರು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (ಆರ್‌ಟಿಒ) ಭೇಟಿ ನೀಡಬೇಕಾಗಿಲ್ಲ. ಆನ್‌ಲೈನ್ ಮೂಲಕ ಮನೆಯಲ್ಲಿಯೇ ಕುಳಿತು ನವೀಕರಿಸಿಕೊಳ್ಳಬಹುದು ಎಂದು ಕಳೆದ ತಿಂಗಳು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH) ಸೂಚನೆ ಹೊರಡಿಸಿದೆ.
ಆನ್‌ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್ ನವೀಕರಣ ಹೇಗೆ? ಹಂತ 1: ವಾಹನ ಚಾಲನೆ ಪರವಾನಗಿ ಹೊಂದಿರುವವರು ಪರಿವಾಹನ್ ಸೇವಾ ಅವರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. https://parivahan.gov.in/ ಲಿಂಕ್ಅನ್ನು ಕ್ಲಿಕ್ ಮಾಡಿ.
ಹಂತ 2: ಮುಖಪುಟದಲ್ಲಿ ಆನ್‌ಲೈನ್ ಸೇವೆಗಳ ಮೇಲೆ ಕ್ಲಿಕ್ ಮಾಡಬೇಕು. ನಂತರ ವಾಹನ ಚಾಲನೆ ಪರವಾನಗಿ ಸಂಬಂಧಿತ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 3: ವಾಹನ ಚಾಲನೆ ಪರವಾನಗಿ ಸಂಬಂಧಿತ ಹೊಸ ಪುಟ ತೆರದಾಗ ನಿಮ್ಮ ರಾಜ್ಯದ ಹೆಸರನ್ನು ಆಯ್ಕೆ ಮಾಡಬೇಕು.
ಹಂತ 4: ನಿಮ್ಮ ರಾಜ್ಯದ ಆಯ್ಕೆಯ ಆಧಾರದ ಮೇಲೆ ಹೊಸ ಪುಟ ತೆರೆಯುತ್ತದೆ. ಪುಟವು ಸಾಕಷ್ಟು ಆಯ್ಕೆಗಳನ್ನು ಹೊಂದಿರುತ್ತದೆ. ಅದರಲ್ಲಿ ಡಿಎಲ್ ನವೀಕರಣಕ್ಕೆ ಅನ್ವಯವಾಗುವ ಆಯ್ಕೆಯನ್ನು ಆರಿಸಿಕೊಳ್ಳಿರಿ. ಇದೀಗ ನೀವು ಡ್ರೈವಿಂಗ್ ಲೈಸೆನ್ಸ್ ರಿನ್ಯುವಲ್ ಮಾಡಿಸುವ ಪುಟವನ್ನು ನೋಡುತ್ತೀರಿ.
ಹಂತ 6: ತೆರೆದ ಹೊಸ ಪುಟದಲ್ಲಿ ತೋರಿಸುವಂತೆ ಅರ್ಜಿದಾರರ ವಿವರವನ್ನು ಭರ್ತಿ ಮಾಡಬೇಕು.
ಹಂತ 7: ನೀವು ಅಗತ್ಯವಾದ ದಾಖಲೆಗಳನ್ನು ನಮೂದಿಸುವ ಆಯ್ಕೆಗಳಿದ್ದರೆ ಅಪ್‌ಲೋಡ್ ಮಾಡಬೇಕಾಗುತ್ತದೆ.
ಹಂತ 8: ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಲು ಸಹ ಆಯ್ಕೆ ಕೇಳಬಹುದು. ಈ ಹಂತವು ಕೆಲವು ರಾಜ್ಯಗಳಲ್ಲಿ ಮಾತ್ರ ಅನ್ವಯಿಸುತ್ತದೆ.
ಹಂತ 9: ನಿಗದಿ ಪಡಿಸಿದ ಶುಲ್ಕವನ್ನು ಪಾವತಿಸಬೇಕು.
ಹಂತ 10: ನೀವು ಪೇ ಮಾಡಿದ ಶುಲ್ಕದ ವಿವರ ನಿಮಗೆ ಸಿಗುತ್ತದೆ. ಮುಂದಿನ ದಿನಗಳಲ್ಲಿ ರಶೀದಿಯ ಪುಟ ಬೇಕಾದರೆ ಮುದ್ರಿಸಿಕೊಳ್ಳಬಹುದು.
ಇದನ್ನೂ ಓದಿ: Driving Test ಇಲ್ಲದೇ ಲೈಸೆನ್ಸ್! ಕೇಂದ್ರ ಸರ್ಕಾರದಿಂದ ಮಹತ್ವದ ಪ್ರಸ್ತಾವನೆ; ಆದರೆ ಅದು ಅಪಾಯಕಾರಿ ಅಲ್ಲವೇ?