ಸಿಇಒ ಆಗಿ ಮಿಕವನ್ನು ತಂದು ಕೂರಿಸಿದ ಹೆಂಡದ ಕಂಪನಿ; ಈ ಮಿಕಾ ಅಂತಿಂಥದ್ದಲ್ಲ, ಕೃತಕ ಬುದ್ಧಿಮತ್ತೆಯ ಶಕ್ತಿ ಇರುವ ರೋಬೋ ಹೆಣ್ಣು
Humanoid Robot Becomes CEO: ಪೋಲ್ಯಾಂಡ್ ದೇಶದ ಹೆಂಡದ ಕಂಪನಿಯೊಂದು 2022ರ ಆಗಸ್ಟ್ನಲ್ಲಿ ಮಿಕಾವನ್ನು ಪ್ರಾಯೋಗಿಕವಾಗಿ ಸಿಇಒ ಸ್ಥಾನಕ್ಕೆ ಕೂರಿಸಿತ್ತು. ಬಳಲಿಕೆ ಇಲ್ಲದೇ ಕೆಲಸ ಮಾಡುವ ಮತ್ತು ಅಗಾಧ ಜ್ಞಾನ ಸಂಪತ್ತುಗಳನ್ನು ಹೊಂದಿರುವ ಮಿಕಾದ ಕಾರ್ಯಕ್ಷಮತೆಯನ್ನು ಕಂಡು ಸಿಇಒ ಆಗಿ ಅದನ್ನು ಮುಂದುವರಿಸಲು ಕಂಪನಿ ನಿರ್ಧರಿಸಿದೆ. ಕಂಪನಿಗೆ ಸಂಭಾವ್ಯ ಗ್ರಾಹಕರನ್ನು ಗುರುತಿಸುವುದರಿಂದ ಹಿಡಿದು, ರಮ್ ಬಾಟಲ್ಗಳನ್ನು ಡಿಸೈನ್ ಮಾಡಲು ಆರ್ಟಿಸ್ಟ್ಗಳನ್ನು ನೇಮಿಸುವವರೆಗೂ ವಿವಿಧ ಕಾರ್ಯಗಳನ್ನು ತಾನೇ ಖುದ್ದಾಗಿ ಮಾಡಬಲ್ಲುದು.
ನವದೆಹಲಿ, ಸೆಪ್ಟೆಂಬರ್ 29: ಪೋಲ್ಯಾಂಡ್ ದೇಶದ ಕಂಪನಿಯೊಂದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೊಂದಿರುವ ರೋಬೊವೊಂದನ್ನು (Robot) ತನ್ನ ಸಿಇಒ ಆಗಿ ಆಯ್ಕೆ ಮಾಡಿದೆ. ಮಿಕಾ ಹೆಸರಿನ ರೋಬೋ ಈಗ ಡಿಕ್ಟಾಡೋರ್ (Dictador) ಕಂಪನಿಯ ಉನ್ನತ ಹುದ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಅಲಂಕರಿಸಿದ್ದು, ಅವಿರತವಾಗಿ ಕಂಪನಿಗಾಗಿ ದುಡಿಯುತ್ತಿದೆ. ಕುತೂಹಲ ಎಂದರೆ ಒಂದು ವರ್ಷದ ಹಿಂದೆಯೇ, 2022ರ ಆಗಸ್ಟ್ನಲ್ಲಿ ಮಿಕಾವನ್ನು (Mika) ಪ್ರಾಯೋಗಿಕವಾಗಿ ಸಿಇಒ ಸ್ಥಾನಕ್ಕೆ ಕೂರಿಸಿಲಾಗಿತ್ತು. ಬಳಲಿಕೆ ಇಲ್ಲದೇ ಕೆಲಸ ಮಾಡುವ ಮತ್ತು ಅಗಾಧ ಜ್ಞಾನ ಸಂಪತ್ತುಗಳನ್ನು ಹೊಂದಿರುವ ಮಿಕಾದ ಕಾರ್ಯಕ್ಷಮತೆಯನ್ನು ಕಂಡು ಸಿಇಒ ಆಗಿ ಅದನ್ನು ಮುಂದುವರಿಸಲು ಕಂಪನಿ ನಿರ್ಧರಿಸಿದೆ.
ಮಿಕಾ ರೋಬೋದ ಶಕ್ತಿಗಳೇನು?
- ಮಿಕಾ ನಿರಂತರವಾಗಿ ಕೆಲಸ ಮಾಡುತ್ತದೆ. ದಿನದ 24 ಗಂಟೆಯೂ ಕಾರ್ಯನಿರತವಾಗಿರುತ್ತದೆ. ಇದಕ್ಕೆ ವೀಕೆಂಡ್ ಎಂಬುದೇ ಇರೊಲ್ಲ.
- ಕಂಪನಿಗೆ ಸಂಭಾವ್ಯ ಗ್ರಾಹಕರನ್ನು ಗುರುತಿಸುವುದರಿಂದ ಹಿಡಿದು, ರಮ್ ಬಾಟಲ್ಗಳನ್ನು ಡಿಸೈನ್ ಮಾಡಲು ಆರ್ಟಿಸ್ಟ್ಗಳನ್ನು ನೇಮಿಸುವವರೆಗೂ ವಿವಿಧ ಕಾರ್ಯಗಳನ್ನು ತಾನೇ ಖುದ್ದಾಗಿ ಮಾಡಬಲ್ಲುದು.
- ಮನುಷ್ಯರಂತೆ ವೈಯಕ್ತಿಕ ಸ್ವಾರ್ಥ, ಈರ್ಷ್ಯೆ ಈ ರೋಬೋಗೆ ಇರುವುದಿಲ್ಲ.
- ಮಿಕಾ ನಿರ್ಧಾರದ ಹಿಂದೆ ಸಂಸ್ಥೆಯ ಹಿತವೇ ಮುಖ್ಯವಾಗಿರುತ್ತದೆ.
- ಕಂಪನಿಯಲ್ಲಿರುವ ವ್ಯಕ್ತಿಗತ ಉದ್ಯೋಗಿಗಳು ಮತ್ತು ಎಕ್ಸಿಕ್ಯೂಟಿವ್ಗಳ ಕೆಲಸವನ್ನು ಸುಗಮಗೊಳಿಸುತ್ತದೆ.
- ಕಂಪನಿಯ ಆರ್ಟ್ಹೌಸ್ ಸ್ಪಿರಿಟ್ಸ್ನ ಡಿಎಒ ಪ್ರಾಜೆಕ್ಟ್ ಅನ್ನು ಮುನ್ನಡೆಸುತ್ತದೆ. ಡಿಎಒ ಸಮುದಾಯದೊಂದಿಗೆ ಸಕ್ರಿಯವಾಗಿ ಸಂವಾದ ನಡೆಸುತ್ತದೆ.
ಇದನ್ನೂ ಓದಿ: ಆಟೋ ಚಾಲಕನ ಖಾತೆಗೆ 9,000 ಕೋಟಿ ರೂ ಹಾಕಿದ್ದಕ್ಕೆ ತಮಿಳುನಾಡು ಬ್ಯಾಂಕಿನ ಸಿಇಒ ರಾಜೀನಾಮೆ ಕೊಟ್ಟರಾ?
ಇಲ್ಲಿ ಒಂದು ವಿಚಾರ ಗಮನಿಸಬೇಕು. ಮಿಕಾ ಸಿಇಒ ಆದರೂ ಸಿಇಒ ಹುದ್ದೆಗೆ ಇರುವಷ್ಟು ಪೂರ್ಣ ಸ್ವಾತಂತ್ರ್ಯ ಇದಕ್ಕಿರುವುದಿಲ್ಲ. ಸಾಂಕೇತಿಕವಾಗಿ ಇದಕ್ಕೆ ಸಿಇಒ ಸ್ಥಾನ ನೀಡಲಾಗಿದೆ. ಇದು ನಿರ್ಧಾರವನ್ನು ಸೂಚಿಸಬಹುದೇ ಹೊರತು ಅದನ್ನು ಕಾರ್ಯಗತಗೊಳಿಸಲು ಆಗುವುದಿಲ್ಲ. ನಿರ್ಧಾರದ ಆದೇಶ ಎಲ್ಲವನ್ನೂ ಮನುಷ್ಯರೇ ಮಾಡುತ್ತಾರೆ.
ಸೋಫಿಯಾ ತಂಗಿ ಮೀಕಾ..?
ಹ್ಯೂಮನಾಯ್ಡ್ ಎಂದರೆ ಬಹಳ ಮಂದಿಗೆ ಸೋಫಿಯಾ ನೆನಪಿಗೆ ಬರಬಹುದು. ಹ್ಯಾನ್ಸನ್ ರೋಬೋಟಿಕ್ಸ್ ಎಂಬ ಸಂಸ್ಥೆ ಸೋಫೀಯಾ ರೋಬೋವನ್ನು ನಿರ್ಮಿಸಿತ್ತು. ಅದೇ ಕಂಪನಿ ಈಗ ಅಡ್ವಾನ್ಸ್ಡ್ ಎಐ ಹ್ಯೂಮನಾಯ್ಡ್ ಆದ ಮೀಕಾಳನ್ನು ನಿರ್ಮಿಸಿದೆ. ಸೋಫಿಯಾಗಿಂತಲೂ ಮೀಕಾ ಹೆಚ್ಚು ಕ್ಷಮತೆ ಹೊಂದಿದೆ. ನಾಯಕತ್ವಕ್ಕೆ ಬೇಕಾದ ಕೃತಕ ಬುದ್ಧಿಮತ್ತೆ ಶಕ್ತಿಯನ್ನು ಮೀಕಾಗೆ ತುಂಬಲಾಗಿದೆ.
ರೋಬೋ ಸಿಇಒ ಆಗಿದ್ದು ಇದೇ ಮೊದಲಲ್ಲ
- ಕಳೆದ ವರ್ಷ 2022ರಲ್ಲಿ ಫುಜಿಯಾನ್ ನೆಟ್ಡ್ರ್ಯಾಗನ್ ವೆಬ್ಸಾಫ್ಟ್ ಎಂಬ ಚೀನೀ ಗೇಮಿಂಗ್ ಕಂಪನಿಯೊಂದು ಟ್ಯಾಂಗ್ ಯು ರೋಬೋವನ್ನು ಸಿಇಒ ಆಗಿ ನೇಮಿಸಿತು.
- ಆಕ್ಟ್ಟೋರಿಸ್ (Arctoris) ಎಂಬ ಬಯೋಟೆಕ್ ಪ್ಲಾಟ್ಫಾರ್ಮ್ ಕಂಪನಿ ಕೂಡ ಒಂದು ರೋಬೋವನ್ನು ಸಿಇಒ ಆಗಿ ನೇಮಿಸಿಕೊಂಡಿದೆ.
- ಸೆರ್ಗೆ ಮಾಸಿಕೊಟ್ಟೆ ಎಂಬ ರೋಬೋ ಇವಾಡೊ ಲ್ಯಾಬ್ಸ್ ಎಂಬ ಕಂಪನಿಗೆ ಸಿಇಒ ಆಗಿದ್ದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ