Income Tax: ಖಾಲಿ ನಿವೇಶನಕ್ಕೆ ತೆರಿಗೆ, ಬಜೆಟ್​​ನಲ್ಲಿ ಗೊಂದಲ ಬಗೆಹರಿಯುವ ನಿರೀಕ್ಷೆ

ಕೆಲವೊಮ್ಮೆ ನಿವೇಶನ ಬಾಡಿಗೆಗೆ ಇಲ್ಲದೆ ಖಾಲಿ ಉಳಿಯುವುದುಂಟು. ಇಂಥ ನಿವೇಶನ ಅಥವಾ ಆಸ್ತಿಗಳಿಗೂ ತೆರಿಗೆ ವಿಧಿಸಲಾಗುತ್ತದೆ. ಇದು ಜನರನ್ನು ಗೊಂದಲಕ್ಕೆ ಕೆಡವಿದೆ ಎಂಬ ಮಾತು ತಜ್ಞರಿಂದ ಕೇಳಿಬರುತ್ತಿದೆ. ಮುಂಬರುವ ಕೇಂದ್ರ ಬಜೆಟ್ ನಲ್ಲಿ ಈ ಬಗ್ಗೆ ಗೊಂದಲವನ್ನು ಬಗೆಹರಿಸುವತ್ತ ಸರ್ಕಾರ ಗಮನ ಕೊಡಬೇಕು ಎಂದು ಐಸಿಎಐ ಒತ್ತಾಯಿಸಿದೆ.

Income Tax: ಖಾಲಿ ನಿವೇಶನಕ್ಕೆ ತೆರಿಗೆ, ಬಜೆಟ್​​ನಲ್ಲಿ ಗೊಂದಲ ಬಗೆಹರಿಯುವ ನಿರೀಕ್ಷೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Jan 04, 2023 | 12:32 PM

ಹಣ ಹೂಡಿಕೆಗೆ (Investment Option) ಅತ್ಯಂತ ಆಕರ್ಷಕ ಮಾರ್ಗಗಳಲ್ಲಿ ರಿಯಲ್ ಎಸ್ಟೇಟ್ (Real Estate) ಪ್ರಮುಖವಾದುದು. ಸ್ವಂತ ನೆಲೆ, ಮನೆಯ ಜೊತೆಗೆ ಹೂಡಿಕೆಗಾಗೂ ಜನರು ನಿವೇಶನಗಳನ್ನು ಕೊಳ್ಳಲು ಮುಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ಬಹಳ ಮಂದಿ ಒಂದಕ್ಕಿಂತ ಹೆಚ್ಚು ನಿವೇಶನಗಳನ್ನು ಹೊಂದಿರುತ್ತಾರೆ. ಒಂದನ್ನು ಸ್ವಂತ ವಾಸಕ್ಕೆ ಇಟ್ಟುಕೊಂಡು, ಉಳಿದಿದ್ದನ್ನು ಬಾಡಿಗೆಗೆ ಕೊಡುತ್ತಾರೆ. ಈ ಬಾಡಿಗೆ ಹಣಕ್ಕೆ ತೆರಿಗೆ (Income Tax on Rent) ವಿಧಿಸಲಾಗುತ್ತದೆ. ಕೆಲವೊಮ್ಮೆ ನಿವೇಶನ ಬಾಡಿಗೆಗೆ ಇಲ್ಲದೆ ಖಾಲಿ ಉಳಿಯುವುದುಂಟು. ಇಂಥ ನಿವೇಶನ ಅಥವಾ ಆಸ್ತಿಗಳಿಗೂ ತೆರಿಗೆ ವಿಧಿಸಲಾಗುತ್ತದೆ. ಇದು ಜನರನ್ನು ಗೊಂದಲಕ್ಕೆ ಕೆಡವಿದೆ ಎಂಬ ಮಾತು ತಜ್ಞರಿಂದ ಕೇಳಿಬರುತ್ತಿದೆ. ಮುಂಬರುವ ದ್ರ ಬಜೆಟ್​ ನಲ್ಲಿ ಈ ಬಗ್ಗೆ ಗೊಂದಲವನ್ನು ಬಗೆಹರಿಸುವತ್ತ ಸರ್ಕಾರ ಗಮನ ಕೊಡಬೇಕು ಎಂದು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ICAI- Institute of Chartered Acountants of India) ಒತ್ತಾಯಿಸಿದೆ.

ಫೆಬ್ರವರಿ 1ರಂದು ಬಜೆಟ್ ಮಂಡನೆಯಾಗಲಿದ್ದು, ವಿವಿಧ ಕ್ಷೇತ್ರಗಳವರೊಂದಿಗೆ ಸರ್ಕಾರ ಸಲಹೆ, ಸಮಾಲೋಚನೆ ನಡೆಸುತ್ತದೆ. ಇದು ವಾಡಿಕೆ. ಐಸಿಎಐ ಕೂಡ ಬಜೆಟ್ ಪೂರ್ವಭಾವಿಯಾಗಿ ಕೇಂದ್ರ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದು, ಅದರಲ್ಲಿ ಖಾಲಿ ನಿವೇಶನಕ್ಕೆ ವಿಧಿಸಲಾಗುತ್ತಿರುವ ತೆರಿಗೆ ವಿಚಾರವನ್ನು ಪ್ರಸ್ತಾಪಿಸಿದೆ. ಬಾಡಿಗೆಗೆ ಕೊಡದ ಆಸ್ತಿಗಳ ಮೇಲೆ ವಿಧಿಸಲಾಗುತ್ತಿರುವ ತೆರಿಗೆಯನ್ನು ಕೈಬಿಡುವುದು ಉತ್ತಮ ಎಂಬಂತಹ ಸಲಹೆಯನ್ನು ಐಸಿಎಐ ನೀಡಿದೆ ಎಂದು ‘ಫೈನಾನ್ಷಿಯಲ್ ಎಕ್ಸ್​​ಪ್ರೆಸ್’ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.

ಖಾಲಿ ನಿವೇಶನಕ್ಕೆ ತೆರಿಗೆ; ಐಸಿಎಐ ಹೇಳಿದ್ದೇನು?

“ಹಿಂದಿನ ವರ್ಷದಲ್ಲಿ ಬಾಡಿಗೆಗೆ ಕೊಡಲಾಗಿದ್ದ ನಿವೇಶನ ಈಗ ಖಾಲಿಯಾಗಿದ್ದರೂ, ಆ ಆಸ್ತಿಯಿಂದ ಬಾಡಿಗೆ ಬರುತ್ತಿರುವಂತೆ ಪರಿಗಣಿಸಿ ತೆರಿಗೆ ಹಾಕಲಾಗುತ್ತದೆ. ಒಬ್ಬ ವ್ಯಕ್ತಿ ಸ್ವಬಳಕೆಗೆ ಎರಡು ಆಸ್ತಿಗಳನ್ನು ಕೊಳ್ಳಲು ಅನುಮತಿಸಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತೇಜನ ಕೊಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸ್ವ ಬಳಕೆಯ ಆಸ್ತಿ ಹೊಂದುವುದನ್ನು ಎರಡಕ್ಕೆ ಮಿತಿಗೊಳಿಸುವ ನಿರ್ಧಾರದ ಬಗ್ಗೆ ಮರುಪರಿಶೀಲಿಸುವುದು ಉತ್ತಮ,” ಎಂದು ಪ್ರೀ-ಬಜೆಟ್ ಮೆಮೋರಾಂಡಂನಲ್ಲಿ ಐಸಿಎಐ ತಿಳಿಸಿದೆ.

“ಯಾವ ಜಾಣ ವ್ಯವಹಾರಸ್ಥ ಕೂಡ ಒಂದು ಆಸ್ತಿಯ ಮೇಲೆ ಹೂಡಿಕೆ ಮಾಡಿ ಅದರಿಂದ ನಷ್ಟವನ್ನು ಅಪೇಕ್ಷಿಸುವುದಿಲ್ಲ. ಎಷ್ಟು ಆಸ್ತಿ ಹೊಂದಬೇಕೆಂಬುದನ್ನು ತೆರಿಗೆ ಪಾವತಿಸುವ ವ್ಯಕ್ತಿಯ ನಿರ್ಧಾರಕ್ಕೆ ಬಿಡಬೇಕು” ಎಂದು ಐಸಿಎಐ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: GPF: ಜನವರಿ – ಮಾರ್ಚ್ ತ್ರೈಮಾಸಿಕ ಅವಧಿಗೆ ಜಿಪಿಎಫ್, ಸಿಪಿಎಫ್ ಬಡ್ಡಿ ದರ ಪ್ರಕಟಿಸಿದ ಕೇಂದ್ರ, ಇಲ್ಲಿದೆ ವಿವರ

ಒಂದು ನಿವೇಶನ ಖಾಲಿ ಇದ್ದರೂ ಅದರಿಂದ ಬಾಡಿಗೆ ಆದಾಯ ಬರುತ್ತದೆಂದು ಪರಿಗಣಿಸಿ ಸೆಕ್ಷನ್ 23 (1) (ಸಿ) ಅಡಿಯಲ್ಲಿ ತೆರಿಗೆ ಹಾಕಲಾಗುತ್ತದೆ. ಇದರಿಂದ ಅನಗತ್ಯ ಕಾನೂನಾತ್ಮಕ ವ್ಯಾಜ್ಯಗಳು ಉಂಟಾಗುತ್ತಿವೆ. ಈ ಗೊಂಲವನ್ನು ತಪ್ಪಿಸಲು ಈ ಸೆಕ್ಷನ್ ನಲ್ಲಿ ಮಾಪರ್ಾಡು ಅಥವಾ ಸ್ಪಷ್ಟೀಕರಣ ಮಾಡಬೇಕೆಂಬುದು ಐಸಿಎಐನ ಸಲಹೆ.

ಬಿಲ್ಡರ್​ಗಳು ನಿರ್ಮಿಸಿದ ನಿವೇಶನ ಅಥವಾ ಆಸ್ತಿಗಳು ಮಾರಾಟವಾಗದೇ ಉಳಿದಿದ್ದರೆ ಅದಕ್ಕೂ ಬಾಡಿಗೆ ಆದಾಯದ ತೆರಿಗೆ ವಿಧಿಸಲಾಗುತ್ತಿದೆ. ಈ ಕಾನೂನಿನಲ್ಲೂ ಮಾರ್ಪಾಡು ಮಾಡಬೇಕೆಂದು ಐಸಿಎಐ ಒತ್ತಾಯಿಸಿದೆ. ಈಗಾಗಲೇ ಬಹಳಷ್ಟು ಕಡೆ ಫ್ಲ್ಯಾಟ್​ಗಳು, ಲೇಔಟ್ ಗಳು ಮಾರಾಟವಾಗದೇ ಉಳಿದಿದ್ದು, ಬಿಲ್ಡರ್ ಗಳು, ಡೆವಲಪರ್ ಗಳು ಬಹಳ ದೊಡ್ಡ ಬಂಡವಾಳ ಹಾಕಿ ಕೈಸುಟ್ಟುಕೊಂಡ ಸ್ಥಿತಿಯಲ್ಲಿದ್ದಾರೆ. ಜೊತೆಗೆ ಈ ಆಸ್ತಿಗಳಿಗೆ ತೆರಿಗೆಯನ್ನೂ ಪಾವತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಐಸಿಎಐ ನೀಡುವ ಈ ಸಲಹೆ ಕಾರ್ಯಗತವಾದರೆ ರಿಯಲ್ ಎಸ್ಟೇಟ್ ಉದ್ಯಮಿಗಳು ನಿಟ್ಟುಸಿರು ಬಿಡುವಂತಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ