3ಜಿ, 4ಜಿಯಲ್ಲಿ ಹಿಂದುಳಿದಿದ್ದ ಭಾರತ ಈಗ 6ಜಿಯಲ್ಲಿ ಸೂಪರ್​ಫಾಸ್ಟ್; ಜಾಗತಿಕ ದೈತ್ಯ ದೇಶಗಳಿಗೆ ಭಾರತದಿಂದ ಪೈಪೋಟಿ

India's 6G story: 3ಜಿ, 4ಜಿ ಅಳವಡಿಕೆಯಲ್ಲಿ ನಿಧಾನವಾಗಿದ್ದ ಭಾರತ ಈಗ 6ಜಿ ಟೆಕ್ನಾಲಜಿ ಅಳವಡಿಕೆಗೆ ವೇಗವಾಗಿ ನುಗ್ಗುತ್ತಿದೆ. ಜಾಗತಿಕವಾಗಿ ಅತಿಹೆಚ್ಚು ಪೇಟೆಂಟ್ ಸಲ್ಲಿಕೆ ಮಾಡಿರುವ ದೇಶಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. 5ಜಿ ತಂತ್ರಜ್ಞಾನ ಅಳವಡಿಕೆಯನ್ನು ಭಾರತ ಅತಿ ಕ್ಷಿಪ್ರವಾಗಿ ಮಾಡಿ, ತನ್ನ ಸಾಮರ್ಥ್ಯವನ್ನು ನಿರೂಪಿಸಿದೆ.

3ಜಿ, 4ಜಿಯಲ್ಲಿ ಹಿಂದುಳಿದಿದ್ದ ಭಾರತ ಈಗ 6ಜಿಯಲ್ಲಿ ಸೂಪರ್​ಫಾಸ್ಟ್; ಜಾಗತಿಕ ದೈತ್ಯ ದೇಶಗಳಿಗೆ ಭಾರತದಿಂದ ಪೈಪೋಟಿ
6ಜಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 14, 2024 | 3:24 PM

ನವದೆಹಲಿ, ಅಕ್ಟೋಬರ್ 14: ಭಾರತ ತಂತ್ರಜ್ಞಾನ ಅಳವಡಿಕೆಯಲ್ಲಿ ಈಗ ಬಹಳಷ್ಟು ಚುರುಕುತನ ಕಾಣುತ್ತಿದೆ. 2ಜಿ, 3ಜಿ, 4ಜಿ ಅಳವಡಿಕೆಯಲ್ಲಿ ತುಸು ಹಿಂದೆ ಬಿದ್ದಿದ್ದ ಭಾರತ 5ಜಿ ತಂತ್ರಜ್ಞಾನವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಅಳವಡಿಸಿದೆ. ಮುಂದಿನ ತಲೆಮಾರಿನ 6ಜಿ ತಂತ್ರಜ್ಞಾನ ಅಳವಡಿಕೆ ನಿಟ್ಟಿನಲ್ಲಿ ಭಾರತ ಹೆಜ್ಜೆ ಹಾಕುತ್ತಿದೆ. 6ಜಿ ಟಕ್ನಾಲಜಿಗೆ ಸಂಬಂಧಿಸಿದಂತೆ ಸಲ್ಲಿಕೆ ಆಗುತ್ತಿರುವ ಪೇಟೆಂಟ್​ಗಳಲ್ಲಿ ಭಾರತದ ಪಾಲು ಗಣನೀಯವಾಗಿ ಹೆಚ್ಚುತ್ತಿರುವುದು ಗಮನಾರ್ಹ ಎನಿಸಿದೆ. ಜಾಗತಿಕವಾಗಿ ಅತಿಹೆಚ್ಚು 6ಜಿ ಪೇಟೆಂಟ್​ಗಳನ್ನು ಸಲ್ಲಿರುವ ದೇಶಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದೆ.

ಮುಂದಿನ ಮೂರು ವರ್ಷದಲ್ಲಿ ಜಾಗತಿಕವಾಗಿ ಸಲ್ಲಿಕೆಯಾಗುವ 6ಜಿ ಪೇಟೆಂಟ್​ಗಳಲ್ಲಿ ಭಾರತ ಶೇ. 10ರಷ್ಟು ಪಾಲು ಹೊಂದುವ ಸಾಧ್ಯತೆ ಕಾಣುತ್ತಇದೆ. ಜಾಗತಿಕ ಗುಣಮಟ್ಟ ಪ್ರಮಾಣಗಳಿಗೆ ಭಾರತದ ಕೊಡುಗೆ ಆರನೇ ಒಂದು ಭಾಗದಷ್ಟಾಗಬಹುದು ಎಂದು ಸರ್ಕಾರದ ಆಯೋಗವೊಂದು ಅಂದಾಜಿಸಿದೆ.

ಇದನ್ನೂ ಓದಿ: ಭಾರತದಿಂದ ಹೊಸ ಮೈಲಿಗಲ್ಲು; 200 ಗಿಗಾವ್ಯಾಟ್ ಗಡಿದಾಟಿದ ಮರುಬಳಕೆ ಇಂಧನ ಸಾಮರ್ಥ್ಯ

2030ರೊಳಗೆ 6ಜಿ ತಂತ್ರಜ್ಞಾನದ ವಿನ್ಯಾಸ, ಅಭಿವೃದ್ಧಿ ಮತ್ತು ಅಳವಡಿಕೆಯಲ್ಲಿ ಭಾರತ ಮುಂಚೂಣಿಯಲ್ಲಿರಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಹಾಕಿರುವ ಗುರಿಯಾಗಿದೆ. ‘ಭಾರತ್ 6ಜಿ ವಿಶನ್’ ಅನ್ನು ಸರ್ಕಾರ ರೂಪಿಸಿದೆ. 6ಜಿ ಇಕೋಸಿಸ್ಟಂ ಸಂಶೋಧನೆಯ ಮೇಲೆ ಸಲ್ಲಿಕೆಯಾಗಿರುವ 470 ಪ್ರಸ್ತಾವಗಳನ್ನು ಸರ್ಕಾರ ಅವಲೋಕಿಸುತ್ತಿದೆ. 6ಜಿ ಸಂಶೋಧನೆಯನ್ನು ತೀವ್ರಗೊಳಿಸಲು ಎರಡು ಸುಧಾರಿತ ಪ್ರಯೋಗಕೇಂದ್ರಗಳಿಗೆ (Next-gen testbeds) ದೂರಸಂಪರ್ಕ ಇಲಾಖೆಯಿಂದ ಧನಸಹಾಯ ನೀಡಲಾಗಿದೆ.

ಭಾರತ್ 6ಜಿ ವಿಶನ್, ಭಾರತ್ 6ಜಿ ಮೈತ್ರಿ ಇತ್ಯಾದಿ ವಿವಿಧ ಕಾರ್ಯಕ್ರಮಗಳನ್ನೂ ಸರ್ಕಾರ ಆರಂಭಿಸಿದೆ. ಡೀಪ್ ಟೆಕ್ ಕ್ಷೇತ್ರದಲ್ಲಿ ಪ್ರಬಲ ಆಟಗಾರನಾಗಲು ಭಾರತ ವೇಗವಾಗಿ ಹೆಜ್ಜೆ ಹಾಕುತ್ತಿದೆ. ಈ ಉದ್ಯಮದ ತಜ್ಞರ ಪ್ರಕಾರ, ಭಾರತವು ಡೀಪ್ ಟೆಕ್ ಅಥವಾ ತೀವ್ರ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಗೆ ಬರಬೇಕಾದರೆ, ಸಮರ್ಪಕ ಕನೆಕ್ಟಿವಿಟಿ ಇರುವಂತಹ ತಂತು ಮತ್ತು ನಿಸ್ತಂತು ಬ್ರಾಡ್​ಬ್ಯಾಂಡ್ ನೆಟ್ವರ್ಕ್ ಪ್ರಬಲವಾಗಿರಬೇಕು ಎನ್ನುತ್ತಾರೆ.

ಇದನ್ನೂ ಓದಿ: ಗ್ರಾಮೀಣ ಕುಟುಂಬಗಳ ಆದಾಯ ಮತ್ತು ಉಳಿತಾಯ ಐದು ವರ್ಷದಲ್ಲಿ ಎಷ್ಟು ಬದಲಾಗಿದೆ? ಇಲ್ಲಿದೆ ನಬಾರ್ಡ್ ಸಮೀಕ್ಷೆ ವಿವರ

ಬೆಂಗಳೂರು ಮೊದಲಾದೆಡೆ ಡಬ್ಲ್ಯುಟಿಎಸ್​ಎ ಅಧಿವೇಶನ

ಭಾರತದಲ್ಲಿ ವರ್ಲ್ಡ್ ಟೆಲಿಕಾಂ ಸ್ಟಾಂಡರ್ಡೈಸೇಶನ್ ಅಸೆಂಬ್ಲಿ (ಡಬ್ಲ್ಯುಟಿಎಸ್​ಎ 2024) ಸಮಾವೇಶ ಇವತ್ತಿನಿಂದ 10 ದಿನಗಳ ಕಾಲ ನಡೆಯಲಿದೆ. ಅಕ್ಟೋಬರ್ 14ರಿಂದ 24ರವರೆಗೆ ದೆಹಲಿಯಲ್ಲಿ ಈ ಅಸೆಂಬ್ಲಿ ನಡೆಯಲಿದ್ದು, ಬೆಂಗಳೂರು ಮತ್ತು ಹೈದರಾಬಾದ್​ಗಳಲ್ಲೂ ಪೂರಕ ಅಧಿವೇಶನಗಳು ಆಯೋಜನೆಯಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ