Indian Economy: 2014 ಮತ್ತು 2023- ಜಿಡಿಪಿ ಆಗ ಎಷ್ಟಿತ್ತು, ಈಗ ಎಷ್ಟಿದೆ?: ಇಲ್ಲಿದೆ ಹೋಲಿಕೆ

|

Updated on: Jun 13, 2023 | 10:49 AM

Finance Minister Nirmala Sitharaman: 2014ರಿಂದ ಈಚೆಗೆ ಭಾರತ ಸಾಧಿಸಿದ ಆರ್ಥಿಕ ಬೆಳವಣಿಗೆಯ ಬಗ್ಗೆ ಸರಣಿ ಟ್ವೀಟ್​ಗಳ ಮೂಲಕ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಂದಿನ ಪರಿಸ್ಥಿತಿ ಮತ್ತು ಇಂದಿನ ಪರಿಸ್ಥಿತಿ ಬಗ್ಗೆ ಹೋಲಿಕೆ ಮಾಡಿದ್ದಾರೆ.

Indian Economy: 2014 ಮತ್ತು 2023- ಜಿಡಿಪಿ ಆಗ ಎಷ್ಟಿತ್ತು, ಈಗ ಎಷ್ಟಿದೆ?: ಇಲ್ಲಿದೆ ಹೋಲಿಕೆ
ಭಾರತದ ಆರ್ಥಿಕತೆ
Follow us on

ಬೆಂಗಳೂರು: ಜಾಗತಿಕ ಆರ್ಥಿಕತೆಯಲ್ಲಿ (Global Economy) ಭಾರತ ಒಂದು ಬೆಳ್ಳಿ ಚುಕ್ಕೆಯಾಗಿದೆ (Bright Spot) ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Minister Nirmala Sitharaman) ಹೇಳಿದ್ದಾರೆ. 2014ರಿಂದ ಈಚೆಗೆ ಭಾರತ ಸಾಧಿಸಿದ ಆರ್ಥಿಕ ಬೆಳವಣಿಗೆಯ ಬಗ್ಗೆ ಸರಣಿ ಟ್ವೀಟ್​ಗಳ ಮೂಲಕ ಮಾಹಿತಿ ನೀಡಿದ ಅವರು, ಅಂದಿನ ಪರಿಸ್ಥಿತಿ ಮತ್ತು ಇಂದಿನ ಪರಿಸ್ಥಿತಿ ಬಗ್ಗೆ ಹೋಲಿಕೆ ಮಾಡಿದ್ದಾರೆ. 2014ರಲ್ಲಿ ಜಾಗತಿಕವಾಗಿ 10ನೇ ಅತಿದೊಡ್ಡ ಆರ್ಥಕ ದೇಶವಾಗಿದ್ದ ಭಾರತ 2023ರಲ್ಲಿ ಐದನೇ ಸ್ಥಾನಕ್ಕೆ ಏರಿರುವ ಸಂಗತಿಯನ್ನು ಅವರು ತಿಳಿಸಿದ್ದಾರೆ. ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿ ಬಿಟ್ಟರೆ ಭಾರತದ ಜಿಡಿಪಿ ಅತಿದೊಡ್ಡದು. ಇತ್ತೀಚೆಗಷ್ಟೇ ಬ್ರಿಟನ್ ಜಿಡಿಪಿಯನ್ನು ಭಾರತ ಹಿಂದಿಕ್ಕಿದೆ.

ಜಿಡಿಪಿ 2014ರಲ್ಲಿ ಎಷ್ಟಿತ್ತು, 2023ರಲ್ಲಿ ಎಷ್ಟಿದೆ?

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿರುವ ಟ್ವೀಟ್ ಪ್ರಕಾರ, 2014ರಲ್ಲಿ ಭಾರತದ ಜಿಡಿಪಿ 2 ಟ್ರಿಲಿಯನ್ ಡಾಲರ್ ಇತ್ತು. ಅಂದರೆ ಸುಮಾರು 160 ಲಕ್ಷಕೋಟಿ ರುಪಾಯಿ ಇತ್ತು. ಈಗ 2023ರಲ್ಲಿ ಭಾರತದ ಜಿಡಿಪಿ 3.75 ಟ್ರಿಲಿಯನ್ ಡಾಲರ್​ಗೆ (ಸುಮಾರು 300 ಲಕ್ಷಕೋಟಿ ರೂ) ಬೆಳೆದಿದೆ. ಅಂದರೆ 9 ವರ್ಷದಲ್ಲಿ ಆರ್ಥಿಕತೆ ಹೆಚ್ಚೂಕಡಿಮೆ ಎರಡು ಪಟ್ಟು ಬೆಳೆದಿರುವುದನ್ನು ಗಮನಿಸಬಹುದುಆದರೆ, ನಿರ್ಮಲಾ ಸೀತಾರಾಮನ್ ಅವರ ಈ ಟ್ವೀಟ್ ಸದ್ಯ ಅಲಭ್ಯವಾಗಿದೆ.

ಕೆಲ ವರದಿಗಳಲ್ಲಿ ನೀಡಲಾಗಿರುವ ಅಂಕಿ ಸಂಖ್ಯೆ ಪ್ರಕಾರ 2014ರಲ್ಲಿ ಭಾರತದ ಜಿಡಿಪಿ 119 ಲಕ್ಷ ಕೋಟಿ ರೂ ಇತ್ತು. ಇದು ಮೂರು ಪಟ್ಟು ಹೆಚ್ಚು ಬೆಳವಣಿಗೆ ಎಂಬುದು ಗಮನಾರ್ಹ

ಇದನ್ನೂ ಓದಿInflation Down: ಮೇ ತಿಂಗಳ ಹಣದುಬ್ಬರ ಶೇ. 4.25; ಇನ್ನಷ್ಟು ಕಡಿಮೆ ಆಯಿತು ಬೆಲೆ ಏರಿಕೆ ಮಟ್ಟ

ಭಾರತದ ಜಿಡಿಪಿ ಬೆಳವಣಿಗೆ ದರ ಕೂಡ ಸದ್ಯ ವಿಶ್ವದಲ್ಲೇ ಅತಿಹೆಚ್ಚಿನ ಮಟ್ಟದಲ್ಲಿದೆ. 2022-23ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.2ರಷ್ಟು ಬೆಳವಣಿಗೆ ಹೊಂದಿದೆ ಎಂಬ ಸಂಗತಿ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿದ ವರದಿಯಿಂದ ಬೆಳಕಿಗೆ ಬಂದಿದೆ. ಈ ಹಣಕಾಸು ವರ್ಷ (2023-24) ಭಾರತದ ಜಿಡಿಪಿ ಶೇ. 6.5ರಷ್ಟು ವೃದ್ಧಿಸುವ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಅಂದಾಜು ಮಾಡಿತ್ತು. ದೇಶೀಯವಾಗಿ ಬೇಡಿಕೆ ಹೆಚ್ಚಿರುವುದು, ಗೃಹ ವೆಚ್ಚಗಳು, ಹೂಡಿಕೆಗಳು ಇವೆಲ್ಲವೂ ಭಾರತದ ಈ ವರ್ಷದ ಆರ್ಥಿಕ ಬೆಳವಣಿಗೆಗೆ ಪುಷ್ಟಿಕೊಡಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿRBI: ಈ ಹಣಕಾಸು ವರ್ಷ ಹಣದುಬ್ಬರ ಶೇ. 5.1, ಜಿಡಿಪಿ ಶೇ. 6.5; ಆರ್​ಬಿಐ ಅಂದಾಜು

ಭಾರತದಲ್ಲಿ ಹಣದುಬ್ಬರವೂ ಇಳಿಮುಖವಾಗುತ್ತಿರುವುದು ಪಾಸಿಟಿವ್ ಸೂಚನೆ ಆಗಿದೆ. ಕಳೆದ ಮೂರು ತಿಂಗಳಿಂದ ಸತತವಾಗಿ ಇಳಿಯುತ್ತಿರುವ ಹಣದುಬ್ಬರ ಮೇ ತಿಂಗಳಲ್ಲಿ ಶೇ. 4.25ಕ್ಕೆ ಇಳಿದಿದೆ. ಇದು ಮುಂದಿನ ಆರ್ಥಿಕ ಬೆಳವಣಿಗೆಯ ವೇಗಕ್ಕೆ ಇನ್ನಷ್ಟು ಶಕ್ತಿ ತುಂಬಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ