AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಟೆಂಟ್, ಟ್ರೇಡ್​ಮಾರ್ಕ್, ಇಂಡಸ್ಟ್ರಿಯಲ್ ಡಿಸೈನ್​ನಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿರುವ ಭಾರತ

Global Innovation and Intellectual Property rankings: ವಿಶ್ವ ಬೌದ್ಧಿ ಆಸ್ತಿ ಸಂಸ್ಥೆ ಪ್ರಕಟಿಸಿದ 2024ರ ವಿಶ್ವ ಬೌದ್ಧಿಕ ಆಸ್ತಿ ಸೂಚಕಗಳು ಭಾರತದ ಗಮನಾರ್ಹ ಸಾಧನೆಯನ್ನು ಗುರುತಿಸಿವೆ. ಜಾಗತಿಕ ನಾವೀನ್ಯತೆ ಮತ್ತು ಬೌದ್ಧಿ ಆಸ್ತಿ ವಿಚಾರದಲ್ಲಿ ಭಾರತದ ಶ್ರೇಯಾಂಕ ಹೆಚ್ಚಿದೆ. ವಿಶ್ವದ ಟಾಪ್-6 ದೇಶಗಳಲ್ಲಿ ಭಾರತವೂ ಇದೆ.

ಪೇಟೆಂಟ್, ಟ್ರೇಡ್​ಮಾರ್ಕ್, ಇಂಡಸ್ಟ್ರಿಯಲ್ ಡಿಸೈನ್​ನಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿರುವ ಭಾರತ
India has rised ranks in Global Innovation and Intellectual Property applications, read in Kannada
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 01, 2024 | 11:39 AM

Share

ನವದೆಹಲಿ, ಡಿಸೆಂಬರ್ 1: ನಾವೀನ್ಯತೆ ಮತ್ತು ಬೌದ್ಧಿಕ ಸಂಪತ್ತಿನ ವಿಚಾರದಲ್ಲಿ ಭಾರತ ಗಮನಾರ್ಹ ಬೆಳವಣಿಗೆ ಹೊಂದುತ್ತಿದೆ. ಈ ವರ್ಷದ (2024) ವಿಶ್ವ ಬೌದ್ಧಿಕ ಆಸ್ತಿ ಸೂಚಕಗಳೂ (WIPI- World Intellectual Property Index) ಕೂಡ ಇದನ್ನು ಎತ್ತಿ ತೋರಿಸುತ್ತಿವೆ. ವಿಶ್ವ ಬೌದ್ಧಿಕ ಆಸ್ತಿ ಸಂಘಟನೆಯ (World Intellectual Propert Organization) ಈ ವರದಿಯಲ್ಲಿ ಜಾಗತಿಕ ನಾವೀನ್ಯತೆ ಮತ್ತು ಬೌದ್ಧಿಕ ಆಸ್ತಿ ಚೌಕಟ್ಟಿನಲ್ಲಿ (Global Innovation and Intellectual Property landscape) ಭಾರತದ ಪಾತ್ರ ಹೆಚ್ಚುತ್ತಿರುವ ಸಂಗತಿಯನ್ನು ತೋರಿಸಲಾಗಿದೆ. ಪೇಟೆಂಟ್, ಟ್ರೇಡ್​ಮಾರ್ಕ್, ಇಂಡಸ್ಟ್ರಿಯಲ್ ಡಿಸೈನ್ ಇತ್ಯಾದಿ ಬೌದ್ಧಿಕ ಆಸ್ತಿ ವಿಭಾಗಗಳಲ್ಲಿ ಭಾರತದ ಶ್ರೇಯಾಂಕ ಹೆಚ್ಚಿರುವುದನ್ನು ಈ ವರದಿ ಗುರುತಿಸಿದೆ.

ಪೇಟೆಂಟ್ ಸಲ್ಲಿಕೆಯಲ್ಲಿ ವಿಶ್ವದ ಆರು ರಾಷ್ಟ್ರಗಳ ಸಾಲಿನಲ್ಲಿ ಭಾರತ

2023ರಲ್ಲಿ ಭಾರತದಿಂದ 64,480 ಪೇಟೆಂಟ್​ಗಳು ಸಲ್ಲಿಕೆ ಆಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 15.7ರಷ್ಟು ಹೆಚ್ಚು ಪೇಟೆಂಟ್ ಸಲ್ಲಿಕೆ ಆಗಿದೆ. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಪೇಟೆಂಟ್ ಅರ್ಜಿ ಸಲ್ಲಿಸಿದ ರಾಷ್ಟ್ರಗಳ ಸಾಲಿನಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. ಚೀನಾ, ಅಮೆರಿಕ, ಜಪಾನ್, ಸೌತ್ ಕೊರಿಯಾ ಮೊದಲಾದ ಪ್ರಬಲ ದೇಶಗಳ ಸಾಲಿಗೆ ಭಾರತ ಸೇರಿದೆ.

ಇದನ್ನೂ ಓದಿ: ಉದ್ಯೋಗ ಸೃಷ್ಟಿಗೆ ಹಲವು ಮಸೂದೆಗಳನ್ನು ಮಂಡಿಸಿದ ಕೇಂದ್ರ ಸರ್ಕಾರ

ಭಾರತದಿಂದ ಇಂಡಸ್ಟ್ರಿಯಲ್ ಡಿಸೈನ್ ಅಥವಾ ಔದ್ಯಮಿಕ ವಿನ್ಯಾಸಗಳ ಸಂಖ್ಯೆಯೂ ಶೇ. 36.4ರಷ್ಟು ಹೆಚ್ಚಿದೆ ಎಂಬುದನ್ನು ಡಬ್ಲ್ಯುಐಪಿಐ 2024 ವರದಿಯಲ್ಲಿ ಎತ್ತಿತೋರಿಸಲಾಗಿದೆ. ಆರೋಗ್ಯ, ಕೃಷಿ, ಜವಳಿ ಮೊದಲಾದ ಪ್ರಮುಖ ಸೆಕ್ಟರ್​ಗಳಲ್ಲಿ ಭಾರತೀಯ ನಿವಾಸಿಗಳೇ ಇದರಲ್ಲಿ ಹೆಚ್ಚು ಪೇಟೆಂಟ್ ಸಲ್ಲಿಸಿರುವುದು ಗೊತ್ತಾಗಿದೆ. ಪ್ರಾಡಕ್ಟ್ ಡಿಸೈನಿಂಗ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಬೆಳವಣಿಗೆ ಹೆಚ್ಚುತ್ತಿರುವುದರ ಸಂಕೇತ ಇದಾಗಿದೆ. ಭಾರತದ ಟ್ರೇಡ್​ಮಾರ್ಕ್ ಕಛೇರಿಯು 32 ಲಕ್ಷ ಟ್ರೇಡ್​ಮಾರ್ಕ್​ಗಳನ್ನು ಹೊಂದಿದೆ. ಇಂಡಸ್ಟ್ರಿಯನ್ ಡಿಸೈನಿಂಗ್​ನಲ್ಲಿ ಜಾಗತಿಕವಾಗಿ ಎರಡನೇ ಅತಿಹೆಚ್ಚು ಟ್ರೇಡ್​ಮಾರ್ಕ್​ಗಳನ್ನು ಹೊಂದಿರುವ ದಾಖಲೆ ಭಾರತದ ಈ ಟ್ರೇಡ್​ಮಾರ್ಕ್ ಆಫೀಸ್​ನದ್ದಾಗಿದೆ.

2018ರಿಂದ 2023ರವರೆಗೂ ಭಾರತದ ಪೇಟೆಂಟ್, ಟ್ರೇಡ್​ಮಾರ್ಕ್ ಮತ್ತು ಇಂಡಸ್ಟ್ರಿಯಲ್ ಡಿಸೈನ್ ಅಪ್ಲಿಕೇಶನ್​ಗಳು ಸಾಕಷ್ಟು ಏರಿಕೆ ಆಗಿವೆ. ಈ ಐದಾರು ವರ್ಷದ ಅವಧಿಯಲ್ಲಿ ಪೇಟೆಂಟ್ ಫೈಲಿಂಗ್ಸ್ ಎರಡಕ್ಕೂ ಹೆಚ್ಚು ಪಟ್ಟು ಹೆಚ್ಚಳವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಂಥ ಅಭಿಮಾನಿಗಳಿಗೆ ಸ್ಟಾರ್ ನಟರು ಬುದ್ಧಿ ಹೇಳಬೇಕು: ರಾಕ್​ಲೈನ್ ವೆಂಕಟೇಶ್
ಅಂಥ ಅಭಿಮಾನಿಗಳಿಗೆ ಸ್ಟಾರ್ ನಟರು ಬುದ್ಧಿ ಹೇಳಬೇಕು: ರಾಕ್​ಲೈನ್ ವೆಂಕಟೇಶ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ