AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fighter Jet: ಐದನೇ ತಲೆಮಾರಿನ ಫೈಟರ್ ಜೆಟ್ ನಿರ್ಮಿಸಲು ಎಎಂಸಿಎ ಯೋಜನೆಗೆ ಸರ್ಕಾರ ಚಾಲನೆ

India to build indigenous 5th generation fighter jet: ವಿಶ್ವದ ಅತ್ಯಂತ ಬಲಿಷ್ಠ ಮತ್ತು ಅತ್ಯಾಧುನಿಕ ಯುದ್ಧವಿಮಾನ ತಯಾರಿಸಲು ಭಾರತ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್​​ಕ್ರಾಫ್ಟ್ ಪ್ರೋಗ್ರಾಮ್​​ಗೆ ಸರ್ಕಾರ ಚಾಲನೆ ನೀಡಿದೆ. ಎಡಿಎ ಮತ್ತು ಡಿಆರ್​​ಡಿಒ ಈ ಯೋಜನೆಯನ್ನು ಜಾರಿಗೊಳಿಸಲಿವೆ. ಭಾರತದ ರಕ್ಷಣಾ ಕ್ಷೇತ್ರದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಈ ಯೋಜನೆಗೆ ಕೈಜೋಡಿಸಲಿವೆ.

Fighter Jet: ಐದನೇ ತಲೆಮಾರಿನ ಫೈಟರ್ ಜೆಟ್ ನಿರ್ಮಿಸಲು ಎಎಂಸಿಎ ಯೋಜನೆಗೆ ಸರ್ಕಾರ ಚಾಲನೆ
ಎಎಂಸಿಎ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 27, 2025 | 1:02 PM

Share

ನವದೆಹಲಿ, ಮೇ 27: ರಫೇಲ್​​ನಂತಹ ನಾಲ್ಕನೇ ತಲೆಮಾರಿನ ಫೈಟರ್ ಜೆಟ್ ಹೊಂದಿರುವ ಭಾರತ ಈಗ ಇನ್ನೂ ಬಲಿಷ್ಠವಾದ ಯುದ್ಧವಿಮಾನಗಳನ್ನು ಸ್ವಂತವಾಗಿ ತಯಾರಿಸಲು ಹೆಜ್ಜೆ ಇಟ್ಟಿದೆ. ಮುಂದಿನ ವರ್ಷಗಳಲ್ಲಿ ಭಾರತವು ಐದನೇ ತಲೆಮಾರಿನ ಫೈಟರ್ ಜೆಟ್ (5th generation fighter jet) ಅಭಿವೃದ್ಧಿಪಡಿಸಲಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಎಂಸಿಎ ಪ್ರೋಗ್ರಾಮ್ ಎಕ್ಸಿಕ್ಯೂಶನ್ ಮಾಡಲ್​​ಗೆ ಇಂದು ಮಂಗಳವಾರ ಅನುಮೋದನೆ ನೀಡಿದ್ದಾರೆ. ಈ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್​​ಕ್ರಾಫ್ಟ್ (Advanced Medium Combat Aircraft) ಯೋಜನೆ ಅಡಿಯಲ್ಲಿ ಭಾರತವು ಅತ್ಯಾಧುನಿಕ ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ.

ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ಈ ಎಎಂಸಿಎ ಯೋಜನೆಯನ್ನು ನಡೆಸಲಿದ್ದು, ವಿವಿಧ ಕಂಪನಿಗಳ ನೆರವನ್ನು ಬಳಸಿಕೊಳ್ಳಲಿದೆ. ಎಎಂಸಿಎ ಯೋಜನೆಯ ಅಭಿವೃದ್ಧಿ ಹಂತವನ್ನು ಕಾರ್ಯಗತಗೊಳಿಸಲು ಉದ್ಯಮ ವಲಯಕ್ಕೆ ಆಹ್ವಾನ (ಇಒಐ) ನೀಡಿದೆ. ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಕಂಪನಿಗಳಿಗೆ ಸಮಾನ ಅವಕಾಶ ನೀಡಲಾಗುತ್ತಿದೆ.

ಯಾವುದೇ ಕಂಪನಿಗಳು ಏಕಾಂಗಿಯಾಗಿ, ಅಥವಾ ಜಂಟಿಯಾಗಿ, ಅಥವಾ ಸಮೂಹವಾಗಿ ಈ ಯೋಜನೆಗೆ ಬಿಡ್ ಸಲ್ಲಿಸಬಹುದು. ಆದರೆ, ಎಲ್ಲಾ ಕಂಪನಿಗಳೂ ಕೂಡ ಭಾರತದವೇ ಆಗಿರಬೇಕು. ದೇಶದ ಕಾನೂನು ಮತ್ತು ನಿಯಮಗಳಿಗೆ ಬದ್ಧವಾಗಿರಬೇಕು ಎಂಬುದು ಪ್ರಮುಖ ಷರತ್ತು.

ಇದನ್ನೂ ಓದಿ
Image
ಭಾರತದ ಬಿಎಫ್​​​ಎಸ್: ವಿಶ್ವದ ನಿಖರ ವೆದರ್ ಫೋರ್​​ಕ್ಯಾಸ್ಟಿಂಗ್ ಮಾಡಲ್
Image
ಫೀನಿಕ್ಸ್​​ನಂತೆ ಮರಳಿಬರುತ್ತಿರುವ ಅನಿಲ್ ಅಂಬಾನಿ
Image
ಭಾರತದ ಮುಂದಿನ ಜಿಗಿತವು ತಲಾದಾಯದ್ದಾಗಿರಬೇಕು: ಆನಂದ್ ಮಹೀಂದ್ರ
Image
ಭಾರತೀಯ ವಿಜ್ಞಾನಿಗಳಿಂದ ಸೂಪರ್​ಫಾಸ್ಟ್ ಸೋಡಿಯಂ ಬ್ಯಾಟರಿ

ಇದನ್ನೂ ಓದಿ: ಭಾರತದಿಂದ ಬಿಎಫ್​​ಎಸ್; ಇದು ವಿಶ್ವದಲ್ಲೇ ಅತ್ಯಂತ ಕರಾರುವಾಕ್ ಹವಾಮಾನ ಮುನ್ಸೂಚನೆ ವ್ಯವಸ್ಥೆ

ರಾಡಾರ್ ಕಣ್ಣಿಗೆ ಗೋಚರವಾಗದಂತೆ ಚಲಿಸುವ (ಸ್ಟೀಲ್ತ್), ಬಹಳ ವೇಗವಾಗಿ ಸಾಗಬಲ್ಲ, ಪ್ರಬಲ ಸೆನ್ಸಾರ್ ಫ್ಯೂಶನ್ ಇರುವ, ಸುಧಾರಿತ ಏವಿಯಾನಿಕ್ಸ್ ಹೊಂದಿರುವ ಹಾಗೂ ಇನ್ನೂ ಹಲವು ಸಾಮರ್ಥ್ಯಗಳನ್ನು ಹೊಂದಿರುವ ಮಲ್ಟಿರೋಲ್ ಫೈಟರ್ ಜೆಟ್​​ಗಳನ್ನು ತಯಾರಿಸುವುದು ಎಎಂಸಿಎ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇನ್ನು ಹತ್ತು ವರ್ಷದಲ್ಲಿ, ಅಂದರೆ 2035ರೊಳಗೆ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್​ಕ್ರಾಫ್ಟ್ ಯೋಜನೆ ಕಾರ್ಯಗತವಾಗುವ ನಿರೀಕ್ಷೆ ಇದೆ.

ಫಿಫ್ತ್ ಜನರೇಶನ್ ಫೈಟರ್ ಜೆಟ್ ಎಂದರೇನು?

ಇದು ಸುಧಾರಿತ ಮಿಲಿಟರಿ ಸಾಮರ್ಥ್ಯ ಹೊಂದಿರುವ ಯುದ್ಧವಿಮಾನ. ಇದಕ್ಕೆ ನಿರ್ದಿಷ್ಟ ಮಾನದಂಡ ಇಲ್ಲ. ರಾಡಾರ್​​ನಿಂದ ತಪ್ಪಿಸಿಕೊಳ್ಳಬಲ್ಲ ಸಾಮರ್ಥ್ಯ ಇರಬೇಕು. ಶತ್ರುವಿನ ಕ್ಷಿಪಣಿ ಅಥವಾ ಜೆಟ್ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವಂತೆ ತೀಕ್ಷ್ಣವಾಗಿ ತಿರುಗುವ ಸಾಮರ್ಥ್ಯ ಇರಬೇಕು. ಸೂಪರ್ ಸಾನಿಕ್ ಸ್ಪೀಡ್​​ನಲ್ಲಿ ಹೋಗಬೇಕು. ವಿವಿಧ ವಿಭಾಗಗಳ ನಡುವೆ ಡಾಟಾ ಫ್ಯೂಶನ್ ಮಾಡಿ ಸಮರ್ಥವಾಗಿ ದಾಳಿ ಮಾಡಬಲ್ಲಂತಿರಬೇಕು. ಕಮ್ಯಾಂಡ್, ಕಂಟ್ರೋಲ್, ಕಮ್ಯೂನಿಕೇಶನ್ ಇತ್ಯಾದಿ ಮಲ್ಟಿರೋಲ್ ಕೇಪಬಿಲಿಟಿ ಇರಬೇಕು ಎಂದು ಭಾವಿಸಲಾಗಿದೆ.

ಇದನ್ನೂ ಓದಿ: ಸೂಪರ್ ಫಾಸ್ಟ್ ಆಗಿ ಚಾರ್ಚ್ ಆಗುವ ಸೋಡಿಯಂ ಬ್ಯಾಟರಿ ತಯಾರಿಸಿದ ಬೆಂಗಳೂರಿನ ವಿಜ್ಞಾನಿಗಳು; ಸ್ವಾವಲಂಬನೆಯ ಹಾದಿ ಸುಗಮ

ಸದ್ಯ ಯಾವ್ಯಾವು ಫಿಫ್ತ್ ಜನರೇಶನ್ ಫೈಟರ್ ಜೆಟ್?

ಅಮೆರಿಕದ ಎಫ್-22 ರಾಪ್ಟರ್, ಎಫ್-35 ಲೈಟನಿಂಗ್, ಚೀನಾದ ಜೆ-20, ರಷ್ಯಾದ ಸುಖೋಯ್ ಎಸ್​​ಯು-57 ಅನ್ನು ಐದನೇ ತಲೆಮಾರಿನ ಫೈಟರ್ ಜೆಟ್ ಎಂದು ಪರಿಗಣಿಸಲಾಗಿದೆ. ಭಾರತ ಬಳಸುತ್ತಿರುವ ಫ್ರೆಂಚ್ ಆಮದಿತ ರಫೇಲ್ ಯುದ್ಧವಿಮಾನವು ನಾಲ್ಕನೇ ತಲೆಮಾರಿಗಿಂತ ತುಸು ಉಚ್ಚವಾಗಿರಬಹುದು (4.5 ಜನರೇಶನ್) ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ