India GDP: ಜಿಡಿಪಿ ಬೆಳವಣಿಗೆಯ ಸಾಮರ್ಥ್ಯ ಹೆಚ್ಚಿಸಲು ಭಾರತ ಇದನ್ನು ಮಾಡಬೇಕು ಎಂದ ಐಎಂಎಫ್
ಭಾರತದ ಜಿಡಿಪಿ ಬೆಳವಣಿಗೆ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಭಾರತ ಹೀಗೆ ಮಾಡಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.
ಭಾರತದ ಬ್ಯಾಂಕಿಂಗ್ ವಲಯದ ಮೇಲಿನ ಬಿಕ್ಕಟ್ಟಿನ ನೆರಳು ಮತ್ತು ಕೊವಿಡ್- 19 ಸಾಂಕ್ರಾಮಿಕ ಇವೆರಡು ಸೇರಿ ದೇಶದ ಐದು ವರ್ಷಗಳ ಜಿಡಿಪಿ (GDP) ಬೆಳವಣಿಗೆಯ ಸಾಮರ್ಥ್ಯವನ್ನು ಶೇಕಡಾ 7 ರಿಂದ 6.2ಕ್ಕೆ ಕೆಳಮುಖವಾಗಿ ಪರಿಷ್ಕರಿಸಲು ಕೊಡುಗೆ ನೀಡಿವೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ ದೇಶದ ಮುಖ್ಯಸ್ಥ ನಡಾ ಚೌಯೆರಿ ಈಚೆಗೆ ಬ್ಲೂಮ್‌ಬರ್ಗ್‌ಗೆ ತಿಳಿಸಿದ್ದಾರೆ. ‘ಮತ್ತೆ ಬಲವಾಗಿ ಸಾಲ ಪಡೆಯಲು ಹಣಕಾಸು ವಲಯದಲ್ಲಿ ಸುಧಾರಣೆಗಳಾದಲ್ಲಿ ಮತ್ತು ಹೆಚ್ಚಿನ ಕಾರ್ಮಿಕ ಬಲದ ಭಾಗವಹಿಸುವಿಕೆ ಹಾಗೂ ಉದ್ಯೋಗವನ್ನು ಬೆಂಬಲಿಸಲು ಕಾರ್ಮಿಕ ಮಾರುಕಟ್ಟೆ ಸುಧಾರಣೆಗಳಾದಲ್ಲಿ’ ಶೀಘ್ರ ಬೆಳವಣಿಗೆ ಸಾಧ್ಯ ಎಂದು ಚೌಯೆರಿ ಅಭಿಪ್ರಾಯ ಪಟ್ಟಿದ್ದಾರೆ. ಈ ಎರಡೂ ‘ಪ್ರಮುಖ ಒಳಹರಿವು’ ಎಂದು ಚೌಯೆರಿ ತಿಳಿಸಿದ್ದಾರೆ. ಮೂಲಭೂತವಾಗಿ ಕೊವಿಡ್‌ನಿಂದ ಪ್ರಭಾವಿತವಾಗಿರುವ ಬೆಳವಣಿಗೆ ಸಾಮರ್ಥ್ಯವನ್ನು ಆರ್ಥಿಕತೆ ಸಾಧಿಸುವುದಕ್ಕೆ ಸಹಾಯ ಮಾಡಲು ಭಾರತವು ಹೆಚ್ಚಿನ ಉದ್ಯೋಗಗಳು ಮತ್ತು ಸಾಲವನ್ನು ಸೃಷ್ಟಿಸಬೇಕು ಹಾಗೂ ತೊಡರುತ್ತಿರುವ ಆರ್ಥಿಕ ವಲಯವನ್ನೂ ಸರಿ ಮಾಡಬೇಕು.
ಈ ವಾರದ ಆರಂಭದಲ್ಲಿ ಐಎಂಎಫ್ ತನ್ನ ಹಣಕಾಸು ವರ್ಷ 2023ರ ಬೆಳವಣಿಗೆಯ ಮುನ್ಸೂಚನೆಯನ್ನು ಭಾರತಕ್ಕೆ ಶೇ 8.2ಕ್ಕೆ ಇಳಿಸಿತು; 0.8 ಪರ್ಸೆಂಟೇಜ್ ಪಾಯಿಂಟ್ ಕಡಿತವು ಬೆಲೆಗಳಲ್ಲಿನ ತೀವ್ರ ಏರಿಕೆ ಮತ್ತು ಪೂರೈಕೆ ಸರಪಳಿ ಅಡೆತಡೆಗಳಿಂದ ಬೇಡಿಕೆ ಅಪಾಯಗಳನ್ನು ಪ್ರತಿಬಿಂಬಿಸುತ್ತದೆ. ಹೆಚ್ಚು ಆತಂಕಕಾರಿಯಾಗುವಂತೆ ಬಹುಶಃ ಮುಂದಿನ ವರ್ಷ ವೇಗವು ಶೇ 6.9ಕ್ಕೆ ನಿಧಾನವಾಗುವುದನ್ನು ನೋಡುತ್ತದೆ. ಇದು ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆಗಳು – ತರಕಾರಿಗಳು, ಇಂಧನ ಮತ್ತು ಅಡುಗೆ ಅನಿಲ – ಗಗನಕ್ಕೆ ಏರಿವೆ. ಕಳೆದ ವಾರದ ಅಂಕಿ-ಅಂಶಗಳ ಪ್ರಕಾರ, ರೀಟೇಲ್ ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡಾ 6.07ರಲ್ಲಿ ಇದ್ದದ್ದು ಮಾರ್ಚ್‌ನಲ್ಲಿ ಶೇಕಡಾ 6.95ಕ್ಕೆ ಏರಿದೆ.
ಇದು ರಷ್ಯಾದ ಉಕ್ರೇನ್ ಆಕ್ರಮಣದ ಪರಿಣಾಮಗಳ ಹಿನ್ನೆಲೆಯಲ್ಲಿ ಬರುತ್ತದೆ, ಇದನ್ನು ಐಎಂಎಫ್ನ ಹಣಕಾಸಿನ ವ್ಯವಹಾರಗಳ ವಿಭಾಗದ ಉಪ ನಿರ್ದೇಶಕ ಪಾವೊಲೊ ಮೌರೊ ಅವರು ‘ಸಾಕಷ್ಟು ತೀವ್ರ’ ಎಂದು ಕರೆದಿದ್ದಾರೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗಿನ ಸಭೆಯಲ್ಲಿ ಐಎಂಎಫ್ ಮುಖ್ಯಸ್ಥ ಜಾರ್ಜಿವಾ ಅವರು ಭಾರತವನ್ನು ಶ್ಲಾಘಿಸಿದ್ದಾರೆ. ಪರಿಷ್ಕರಣೆಯೊಂದಿಗೆ ಹೆಚ್ಚಿನ ಬೆಳವಣಿಗೆಯು ದೇಶ ಮತ್ತು ಜಗತ್ತಿಗೆ ಒಳ್ಳೆಯದು ಎಂದು ಗಮನಿಸಿದ್ದಾರೆ. ಜಾಗತಿಕ ಅಂದಾಜು 2022ರಲ್ಲಿ ಶೇಕಡಾ 3.6ರಷ್ಟಿದ್ದು, 2021ರಲ್ಲಿ ಶೇಕಡಾ 6.1ರಿಂದ ಕಡಿಮೆಯಾಗಿದೆ. ಪರಿಷ್ಕರಣೆಗಳ ಹೊರತಾಗಿಯೂ ಭಾರತಕ್ಕೆ ಇನ್ನೂ ಆಶಾವಾದಕ್ಕೆ ಕಾರಣವಿದೆ.
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ‘ನಾವು ಎರಡು ವರ್ಷಗಳ ಬೆಳವಣಿಗೆಯನ್ನು ಕಳೆದುಕೊಂಡಿದ್ದೇವೆ’ ಎಂದು ಚೌಯೆರಿ ಶುಕ್ರವಾರ ಬ್ಲೂಮ್‌ಬರ್ಗ್ ಟೆಲಿವಿಷನ್‌ನ ಕ್ಯಾಥ್ಲೀನ್ ಹೇಸ್‌ಗೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ ಹೇಳಿದ್ದಾರೆ. “ಭಾರತದಲ್ಲಿ ಇನ್ನೂ ಬೆಳವಣಿಗೆ ನಡೆಯುತ್ತಿದೆ.” ಏರುತ್ತಿರುವ ಹಣದುಬ್ಬರ ಹಿಂದಕ್ಕೆ ಎಳೆಯಬಹುದು ಎಂದು ಹೇಳಿದ್ದಾರೆ. 2022ರಲ್ಲಿ ಗ್ರಾಹಕರ ಬೆಲೆಯು ಸರಾಸರಿ ಶೇ 6.1 ಹೆಚ್ಚಳವನ್ನು ಐಎಂಎಫ್ ನೋಡುತ್ತದೆ; ರಿಸರ್ವ್ ಬ್ಯಾಂಕಿನ ಅಂದಾಜು ಶೇಕಡಾ 5.7 ಆಗಿದೆ. ಜಾಗತಿಕ ಪೂರೈಕೆಯ ಸ್ಥಗಿತ ಮತ್ತು ಇಂಧನ ವೆಚ್ಚಗಳ ಏರಿಕೆಯಿಂದ ಆಗಿರುವ ಬೆಲೆ ಒತ್ತಡಗಳು ಭಾರತದ ಜಿಡಿಪಿಯ ಸುಮಾರು ಶೇ 60ರಷ್ಟು ಭಾಗವನ್ನು ಹೊಂದಿರುವ ಬಳಕೆಯನ್ನು ಘಾಸಿಗೊಳಿಸುತ್ತಿವೆ. ಮತ್ತು ಯುದ್ಧದಿಂದ ಉದ್ಭವಿಸಿರುವ ಪೂರೈಕೆ ಆಘಾತದಿಂದ ಹಣದುಬ್ಬರವು ಬೆಲೆಗಳ ಮೇಲೆ ಎರಡನೇ ಸುತ್ತಿನ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಚೌಯೆರಿ ಬ್ಲೂಮ್‌ಬರ್ಗ್‌ಗೆ ತಿಳಿಸಿದ್ದಾರೆ.
ಆದರೆ, ಆರ್‌ಬಿಐ ಏಪ್ರಿಲ್ ಹಣಕಾಸು ನೀತಿ ಘೋಷಣೆಯಲ್ಲಿ ಕಡಿಮೆ ಅಕಾಮಡೆಟಿವ್ ನಿಲುವನ್ನು ಅಳವಡಿಸಿಕೊಳ್ಳುವ ಮೂಲಕ ಅಪಾಯಗಳನ್ನು ಗುರುತಿಸಿದ್ದು, ಪೂರೈಕೆ ಆಘಾತಗಳಿಂದ ಬೆಲೆಗಳ ಮೇಲೆ ಮೊದಲ ಸುತ್ತಿನ ಪರಿಣಾಮವನ್ನು ಎದುರಿಸಲು ವಿತ್ತೀಯ ನೀತಿಗಳ ಮೇಲೆ ಹಣಕಾಸಿನ ನೀತಿಗಳನ್ನು ಪ್ರತಿಪಾದಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: India GDP: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ 9.2ಕ್ಕೆ ರೂ. 147.5 ಲಕ್ಷ ಕೋಟಿಗೆ ಬೆಳವಣಿಗೆ ನಿರೀಕ್ಷೆ