Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಡವಾಳ ಮಾರುಕಟ್ಟೆಯಿಂದ ಕಂಪನಿಗಳು ಪಡೆದ ಫಂಡಿಂಗ್ 10 ವರ್ಷದಲ್ಲಿ 10 ಪಟ್ಟು ಹೆಚ್ಚಳ: ವರದಿ

Funding from capital market: ಭಾರತೀಯ ಬಂಡವಾಳ ಮಾರುಕಟ್ಟೆಯು ಕಾರ್ಪೊರೇಟ್ ಕಂಪನಿಗಳ ಪಾಲಿಗೆ ಪ್ರಮುಖ ಫಂಡಿಂಗ್ ರಹದಾರಿಗಳಲ್ಲಿ ಒಂದೆನಿಸಿದೆ. ಇಲ್ಲಿಂದ ಕಂಪನಿಗಳು ಪಡೆಯುವ ಫಂಡಿಂಗ್ ಕಳೆದ 10 ವರ್ಷದಲ್ಲಿ ಹತ್ತು ಪಟ್ಟು ಹೆಚ್ಚಾಗಿದೆ. ಷೇರು ಮತ್ತು ಡಿಬೆಂಚರ್​ಗಳಲ್ಲಿ ಜನರ ಹೂಡಿಕೆಯೂ ಹೆಚ್ಚುತ್ತಿದೆ. ಷೇರು ಮಾರುಕಟ್ಟೆಯಲ್ಲಿ ಒಟ್ಟಾರೆ ಮಾರ್ಕೆಟ್ ಕ್ಯಾಪ್ ಹತ್ತು ವರ್ಷದಲ್ಲಿ ಆರು ಪಟ್ಟು ಹೆಚ್ಚಾಗಿದೆ.

ಬಂಡವಾಳ ಮಾರುಕಟ್ಟೆಯಿಂದ ಕಂಪನಿಗಳು ಪಡೆದ ಫಂಡಿಂಗ್ 10 ವರ್ಷದಲ್ಲಿ 10 ಪಟ್ಟು ಹೆಚ್ಚಳ: ವರದಿ
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 24, 2024 | 3:17 PM

ನವದೆಹಲಿ, ಡಿಸೆಂಬರ್ 24: ಭಾರತೀಯ ಕಾರ್ಪೊರೇಟ್ ಕಂಪನಿಗಳಿಗೆ ಈಗ ಅಗತ್ಯ ಬಂಡವಾಳ ಹೆಚ್ಚು ಸುಲಭವಾಗಿ ಸಿಗುತ್ತಿದೆ. ಕಳೆದ 10 ವರ್ಷದಲ್ಲಿ ಭಾರತೀಯ ಕಂಪನಿಗಳು ಬಂಡವಾಳ ಮಾರುಕಟ್ಟೆಯಿಂದ ಗಳಿಸಿದ ಫಂಡಿಂಗ್ 10 ಪಟ್ಟು ಹೆಚ್ಚಾಗಿದೆ ಎಂದು ಎಸ್​ಬಿಐನ ವರದಿಯೊಂದರಲ್ಲಿ ತಿಳಿಸಲಾಗಿದೆ. ಬಂಡವಾಳ ಮಾರುಕಟ್ಟೆಯಲ್ಲಿ 2014ರಲ್ಲಿ ಕಂಪನಿಗಳು ಪಡೆದ ಫಂಡಿಂಗ್ 12,068 ಕೋಟಿ ರೂ ಇತ್ತು. ಈ ಹಣಕಾಸು ವರ್ಷದಲ್ಲಿ (2024-25) ಮೊದಲ ಏಳು ತಿಂಗಳಲ್ಲೇ ಗಳಿಸಿದ ಬಂಡವಾಳ ಬರೋಬ್ಬರಿ 1.21 ಲಕ್ಷ ಕೋಟಿ ರೂ. ಈ ಅಂಶವು ಭಾರತದ ಗರಿಗೆದರಿದ ಆರ್ಥಿಕತೆಗೆ ದ್ಯೋತಕವಾಗಿದೆ ಎಂಬುದನ್ನು ಈ ವರದಿ ಎತ್ತಿ ತೋರಿಸಿದೆ.

ಷೇರು ಮಾರುಕಟ್ಟೆಯ ಮಾರುಕಟ್ಟೆ ಬಂಡವಾಳ ಪ್ರಮಾಣದಲ್ಲಿ ಒಂದು ಪ್ರತಿಶತದಷ್ಟು ಹೆಚ್ಚಳವಾದರೆ ದೇಶದ ಜಿಡಿಪಿ ಬೆಳವಣಿಗೆಯ ವೇಗದಲ್ಲಿ ಶೇ. 0.06ರಷ್ಟು ಹೆಚ್ಚಳ ಆಗುತ್ತದೆ. ಅಧಿಕ ಮಾರುಕಟ್ಟೆ ಬಂಡವಾಳವು ಆರ್ಥಿಕತೆಯ ಶಕ್ತಿಯನ್ನು ತೋರಿಸುತ್ತದೆ. ಹೂಡಿಕೆದಾರರ ವಿಶ್ವಾಸ ಹೆಚ್ಚಿನ ಮಟ್ಟದಲ್ಲಿರುವುದೂ ವ್ಯಕ್ತವಾಗುತ್ತದೆ. ಇದರಿಂದ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಉತ್ತೇಜಕ ಅಂಶವಾಗಿದೆ ಎಂದು ಎಸ್​ಬಿಐನ ರಿಪೋರ್ಟ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಇಎಲ್​ಐ ಸ್ಕೀಮ್: ಯುಎಎನ್ ಸಕ್ರಿಯಗೊಳಿಸಲು, ಬ್ಯಾಂಕ್ ಖಾತೆ ಆಧಾರ್​ಗೆ ಲಿಂಕ್ ಮಾಡಲು ಡೆಡ್​ಲೈನ್ ವಿಸ್ತರಣೆ

ಭಾರತದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಷೇರು ಮತ್ತು ಡಿಬಂಚರ್​ಗಳಲ್ಲಿ ಹೂಡಿಕೆ ಹೆಚ್ಚುತ್ತಿದೆ. 2013-14ರ ಹಣಕಾಸು ವರ್ಷದಲ್ಲಿ ಷೇರು ಮತ್ತು ಡಿಬೆಂಚರ್​ಗಳಲ್ಲಿ ಮಾಡಲಾಗಿದ್ದ ಉಳಿತಾಯವು ಜಿಡಿಪಿಯ ಶೇ. 0.2ರಷ್ಟಿತ್ತು. 2023-24ರಲ್ಲಿ ಇದು ಶೇ. 1ಕ್ಕೆ ಏರಿದೆ ಎಂಬುದನ್ನು ಈ ವರದಿಯಲ್ಲಿ ತಿಳಿಸಲಾಗಿದೆ.

ಷೇರು, ಡಿಬೆಂಚರ್​ಗಳಲ್ಲಿ ಹೂಡಿಕೆ ಹೆಚ್ಚಳ

ಮತ್ತೊಂದು ಕುತೂಹಲಕಾರಿ ಸಂಗತಿ ಎಂದರೆ, ಈ ರೀತಿಯ ಷೇರು ಮತ್ತು ಡಿಬೆಂಚರ್​ಗಳಲ್ಲಿನ ಉಳಿತಾಯವು ಒಟ್ಟಾರೆ ವೈಯಕ್ತಿಕ ಹಣಕಾಸು ಉಳಿತಾಯದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ.

ಉದಾಹರಣೆಗೆ, 2013-14ರಲ್ಲಿ ಇಂತಹ ಷೇರು ಮತ್ತು ಡಿಬೆಂಚರ್​ಗಳಲ್ಲಿ ಮಾಡಲಾಗುತ್ತಿದ್ದ ಉಳಿತಾಯದ ಹಣವು ಒಟ್ಟಾರೆ ಉಳಿತಾಯದ ಶೇ. 1ರಷ್ಟಿತ್ತು. 2023-24ರಲ್ಲಿ ಇದು ಶೇ. 5ಕ್ಕೆ ಹೆಚ್ಚಾಗಿದೆ. ಜನರಿಂದ ಹಣವು ಬಂಡವಾಳ ಮಾರುಕಟ್ಟೆಗೆ ಹೆಚ್ಚೆಚ್ಚು ಹರಿದುಹೋಗತೊಡಗಿದೆ.

ಇದನ್ನೂ ಓದಿ: ಕೃಷಿ ಕ್ಷೇತ್ರದಲ್ಲಿ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ; ರಾಷ್ಟ್ರೀಯ ರೈತ ಸಹಾಯವಾಣಿ ಸ್ಥಾಪನೆ ಸಾಧ್ಯತೆ

ಹತ್ತು ವರ್ಷದ ಹಿಂದಕ್ಕೆ ಹೋಲಿಸಿದರೆ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಲಿಸ್ಟೆಡ್ ಷೇರುಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳ ಆರು ಪಟ್ಟು ಹೆಚ್ಚಾಗಿದೆ. ಇವತ್ತು ಎನ್​ಎಸ್​ಇನಲ್ಲಿನ ಒಟ್ಟಾರೆ ಮಾರ್ಕೆಟ್ ಕ್ಯಾಪ್ 441 ಲಕ್ಷ ಕೋಟಿ ರೂಗೆ ಬೆಳೆದಿದೆ. ಎನ್​​ಎಸ್​ಇನ ಈಕ್ವಿಟಿ ಕ್ಯಾಷ್ ಸೆಗ್ಮೆಂಟ್​ನಲ್ಲಿ 2013-14ರಲ್ಲಿ ಸರಾಸರಿ ಟ್ರೇಡ್ ಗಾತ್ರ 19,460 ರೂ ಇತ್ತು. ಇವತ್ತು ಅದು 30,742 ರೂಗೆ ಏರಿದೆ ಎನ್ನುವ ಸಂಗತಿಯನ್ನು ಎಸ್​ಬಿಐ ರಿಪೋರ್ಟ್​ನಲ್ಲಿ ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ